ಹಣ್ಣು ಗಳನ್ನು ಕೃತಕವಾಗಿ ಹೇಗೆ ಹಣ್ಣಾಗಿಸುತ್ತಾರೆ:ಇಲ್ಲಿದೆ ವಿವರ

0
204

ಆರೋಗ್ಯಕರ ಮತ್ತು ಸಮತೋಲಿತ ಆಹಾರ ವಿಷಯಕ್ಕೆ ಬಂದಾಗ, ತಾಜಾ ಹಣ್ಣುಗಳು ಪ್ರಮುಖ ಪಾತ್ರವಹಿಸುತ್ತದೆ. ಹಣ್ಣುಗಳು ದೇಹದ ದೈನಂದಿನ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವಲ್ಲಿ ಸಹಕಾರಿಯಾಗಿದೆ. ಆದರೆ ಈ ಹಣ್ಣುಗಳು ನೈಸರ್ಗಿಕ ರೀತಿಯಲ್ಲಿ ಹಣ್ಣಾಗದಿದ್ದರೆ ಅಷ್ಟೇ ಮಾರಕವಾಗಬಹುದು ಎಂದು ನಿಮಗೆ ತಿಳಿದಿದೆಯೇ? ಮಾರುಕಟ್ಟೆಯಲ್ಲಿ ಹಣ್ಣುಗಳನ್ನು ನೈಸರ್ಗಿಕವಾಗಿ ಹಣ್ಣಾಗಲು ಬಿಡದೆ ಹಣ್ಣಾಗಲು ಹಾನಿಕಾರಕ ರಾಸಾಯನಿಕಗಳನ್ನು ಬಳಸುತ್ತಾರೆ. ಇದನ್ನು ಹಣ್ಣುಗಳ ಕೃತಕ ಪಕ್ವ ಗೊಳಿಸುವಿಕೆ ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಗೆ ಬಳಸುವ ಹಲವು ರಾಸಾಯನಿಕ ವಸ್ತುಗಳು ಆರೋಗ್ಯಕ್ಕೆ ಮಾರಕವಾಗಿದ್ದು ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತವೆ ಎಂದು ತಿಳಿದುಬಂದಿದೆ. ಆದ್ದರಿಂದ ಇದರ ಬಗ್ಗೆ ಹೆಚ್ಚಿನ ಮಾಹಿತಿ ನಿಮಗೆ ಬೇಕಾಗುತ್ತದೆ. ಈ ಲೇಖನದಲ್ಲಿ ಇದರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳೋಣ.

​ಹಣ್ಣುಗಳನ್ನು ಕೃತಕವಾಗಿ ಹಣ್ಣು ಮಾಡಿಸುವುದು ಹೇಗೆ?

ಈ ಪ್ರಕ್ರಿಯೆಗಾಗಿ ಎತಲಿನ್ ಮತ್ತು ಅಸಿಟಲಿನ್ ಎಂಬ ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡಲಾಗುತ್ತದೆ. ಇವುಗಳು ಬಹಳ ತೊಂದರೆ ನೀಡುವ ಹೈಡ್ರೋಕಾರ್ಬನ್ ಗಳಾಗಿವೆ. ಇವು ಹಣ್ಣುಗಳ ಹಣ್ಣಾಗುವಿಕೆಯಲ್ಲಿ ಸಹಾಯಮಾಡುತ್ತವೆ ಹಾಗೂ ಹಣ್ಣುಗಳ ಬಣ್ಣವನ್ನು ಕೂಡ ಬದಲಾಯಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಬಳಸುವ ಪ್ರಮುಖ ರಾಸಾಯನಿಕ ವಸ್ತುವೆಂದರೆ ಕ್ಯಾಲ್ಸಿಯಂ ಕಾರ್ಬೈಡ್. ಇದನ್ನು ಮಸಾಲಾ ಎಂದು ಕೂಡ ಕರೆಯಲಾಗುತ್ತದೆ.

ಕೃತಕವಾಗಿ ಹಣ್ಣು ಮಾಡಿದ ಹಣ್ಣುಗಳು ನೈಸರ್ಗಿಕವಾಗಿ ಹಣ್ಣಾಗಿರುವ ಹಣ್ಣುಗಳಂತೆಯೇ ಬಹಳ ಮೆತ್ತಗೆ ಹಾಗೂ ನೈಸರ್ಗಿಕವಾಗಿಯೇ ಹಣ್ಣಾಗಿದೆ ಎಂಬ ರೀತಿಯಲ್ಲಿ ಕಾಣಿಸುತ್ತದೆ. ಆದರೆ ನೈಸರ್ಗಿಕವಾಗಿ ಆದ ಹಣ್ಣುಗಳಿಗೂ ಕೃತಕವಾಗಿ ಹಣ್ಣು ಮಾಡಿದ ಹಣ್ಣುಗಳಿಗೂ ರುಚಿಯಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ. ಇದಕ್ಕೆ ಕಾರಣ, ಕೃತಕವಾಗಿ ಹಣ್ಣು ಮಾಡಲು ಬಳಸಿರುವ ರಾಸಾಯನಿಕ ವಸ್ತುಗಳು.

ಕೃತಕವಾಗಿ ಹಣ್ಣು ಮಾಡಿದ ಹಣ್ಣುಗಳ ರುಚಿ ಅಷ್ಟೇನೂ ಸೊಗಸಾಗಿ ಇರುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಕೃತಕವಾಗಿ ಹಣ್ಣು ಮಾಡಲು ಬಳಸುವ ರಾಸಾಯನಿಕ ವಸ್ತುಗಳು ಮೇಲ್ಭಾಗವನ್ನು ಮಾತ್ರ ಬದಲಾಯಿಸುತ್ತದೆ, ಆದರೆ ಹಣ್ಣಿನ ಒಳಗಿರುವ ಭಾಗವು ಇನ್ನೂ ಹಣ್ಣು ಆಗಿರುವುದಿಲ್ಲ, ಅದು ಕಾಯಿಯಾಗಿ ಉಳಿದಿರುತ್ತದೆ.

ಹಲವು ಅಧ್ಯಯನಗಳು ಹೇಳುವ ಪ್ರಕಾರ ಕಾರ್ಬೈಡ್ ಅತಿಯಾದ ಸೇವನೆ ಕ್ಯಾನ್ಸರ್ ಗೆ ಕಾರಣ ವಾಗಬಹುದು ಕಾರ್ಬೈಡ್ ನಲ್ಲಿ ಪಾಸ್ಪರಸ್ ಹೈಡ್ರೇಡ್ ಹಾಗೂ ಆರ್ಸೆನಿಕ್ ಅಂಶಗಳಿವೆ ಇದರಿಂದ ವಾಂತಿ ತಲೆಸುತ್ತು ಸುಸ್ತು ಎದೆಯಲ್ಲಿ ಹಾಗೂ ಹೊಟ್ಟೆಯಲ್ಲಿ ಉರಿದಂತೆ ಆಗುವುದು ಕಣ್ಣಿನಲ್ಲಿ ಉರಿದಂತಾಗುವುದು ಕಣ್ಣುಗಳ ದೃಷ್ಟಿಯನ್ನು ಕಳೆದುಕೊಳ್ಳುವುದು ಹಾಗೂ ಉಸಿರಾಟದ ಪ್ರಕ್ರಿಯೆಯ ತೊಂದರೆಯಾಗಬಹುದು.

ಕ್ಯಾಲ್ಸಿಯಂ ಕಾರ್ಬೈಡ್ ನಲ್ಲಿ ಆಲ್ಕಲೈನ್ ಅಂಶವು ಹೆಚ್ಚಾಗಿರುವುದರಿಂದ ಇದು ಹೊಟ್ಟೆಯೊಳಗಿರುವ ತೆಳುವಾದ ಪದರ ಕೂಡ ತೊಂದರೆ ಮಾಡಿ ಹೊಟ್ಟೆ ಹಾಗೂ ಕರುಳಿನ ಕೆಲಸಗಳಿಗೆ ಹಿಂಸೆ ನೀಡುತ್ತದೆ. ಅಸಿಟಲಿನ್ ಎಂಬ ಅಂಶವು ಇದರಲ್ಲಿ ಹೆಚ್ಚಾಗಿರುವುದರಿಂದ ಮೆದುಳಿನ ಕಾರ್ಯ ಚಟುವಟಿಕೆಗಳು ಕೂಡ ತೊಂದರೆ ಮಾಡಬಹುದು.

ಇತ್ತೀಚಿನ ದಿನಗಳಲ್ಲಿ ನಾವು ಬಳಸುವ ಎಷ್ಟ್ಟೋ ವಸ್ತುಗಳನ್ನು ನೈಸರ್ಗಿಕ ರೀತಿಯಲ್ಲಿ ಬಳಸುತ್ತಿಲ್ಲ. ಹಣ್ಣಿನ ವಿಷಯಕ್ಕೆ ಬಂದರೆ ನೈಸರ್ಗಿಕವಾಗಿ ಹಣ್ಣಾದ ಹಣ್ಣು ಹೆಚ್ಚಿನ ಪೋಷಕಾಂಶಗಳನ್ನು ಒಳಗೊಂಡಿದ್ದು ,ಯಾವುದೇ ರೀತಿಯ ಅಡ್ಡಪರಿಣಾಮಗಳನ್ನು ಬೀರುವುದಿಲ್ಲ.ಆದರೆ ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ವಸ್ತುಗಳನ್ನು ಬಳಸಿ ಅವುಗಳನ್ನು ಕೃತಕವಾಗಿ ಹಣ್ಣು ಮಾಡುವ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಆದರೆ ಆ ಹಣ್ಣುಗಳನ್ನು ಖರೀದಿಸಿ ನಾವು ಉತ್ತಮ ಹಣ್ಣುಗಳು ಎಂದು ಭಾವಿಸಿ ಸೇವಿಸುತ್ತೇವೆ. ಆದರೆ ಒಂದು ವಿಪರ್ಯಾಸದ ವಿಷಯವೇನೆಂದರೆ ಸಾಮಾನ್ಯವಾಗಿ ರೈತರು ತಾವು ಬೆಳೆದ ಯಾವುದೇ ಹಣ್ಣುಗಳಿಗೆ ಕೃತಕವಾಗಿ ಹಣ್ಣಾಗುವ ಪದಾರ್ಥಗಳನ್ನು ಬಳಸುವುದಿಲ್ಲ.

ಹಣ್ಣುಗಳನ್ನು ಕೃತಕವಾಗಿ ಹಣ್ಣಾಗುವಂತೆ ಮಾಡುವವರು ವರ್ತಕರು.ರೈತರಿಂದ ಅತಿ ಕಡಿಮೆ ಬೆಲೆಗೆ ಹಣ್ಣುಗಳನ್ನು ಖರೀದಿಸಿ ಅವುಗಳನ್ನು ನೈಸರ್ಗಿಕವಾಗಿ ಹಣ್ಣಾಗಲು ಬಿಡದೆ, ಅವುಗಳನ್ನು ರಾಸಾಯನಿಕಗಳನ್ನು ಬಳಸಿ ಹಣ್ಣು ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಈ ರೀತಿ ಕೃತಕವಾಗಿ ಹಣ್ಣಾದ ಹಣ್ಣುಗಳು ಆರಂಭದಲ್ಲಿ ಯಾವುದೇ ತೊಂದರೆಗಳನ್ನು ನೀಡದಿದ್ದರೂ ಅವುಗಳನ್ನು ದೀರ್ಘಾವಧಿಯಲ್ಲಿ ಸೇವಿಸಿದರೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಬರುತ್ತವೆ. ಆದರೆ ಕೃತಕವಾಗಿ ಮಾಡಿದ ಹಣ್ಣು ಮತ್ತು ನೈಸರ್ಗಿಕವಾಗಿ ಹಣ್ಣಾದ ಹಣ್ಣಿನ ನಡುವೆ ಇರುವ ವ್ಯತ್ಯಾಸಗಳನ್ನು ನಾವು ಮೊದಲು ತಿಳಿದುಕೊಳ್ಳಬೇಕು.

LEAVE A REPLY

Please enter your comment!
Please enter your name here