ವಸತಿ ಯೋಜನೆಗಳು ಕಾಲಮಿತಿಯೊಳಗೆ ಪೂರ್ಣಗೊಳ್ಳಬೇಕು: ವಿ. ಸೋಮಣ್ಣ

0
89

ಹಾಸನ.ಸೆ.11- ಹಲವು ವರ್ಷಗಳಿಂದ ಮುಂದುವರೆದಿರುವ ವಸತಿ ಯೋಜನೆಗಳು ಕಾಲಮಿತಿಯೊಳಗೆ ಮುಗಿಯಬೇಕು ಹಾಗೂ ಅನುಷ್ಠಾನದಲ್ಲಿ ಅಕ್ರಮ ಎಸಗುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ವಸತಿ ಸಚಿವರಾದ ವಿ. ಸೋಮಣ್ಣ ಅವರು ಸೂಚನೆ ನೀಡಿದ್ದಾರೆ.

ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿಂದು ವಸತಿ ಯೋಜನೆಗಳ ಅನುಷ್ಠಾನ ಕುರಿತಂತೆ ಅಧಿಕಾರಿಗಳ ಪ್ರತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ವಿವಿದ ವಸತಿ 9 ಲಕ್ಷ ಮನೆಗಳಿಗೆ ಅನುಮೋದನೆಯಾಗಿದ್ದು, ಜಿ.ಪಿ.ಎನ್. ಆಗಿರುವ ನಿವಾಸಗಳಿಗೆ ಪ್ರಗತಿಯನುಸಾರ ಕೂಡಲೇ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ವಸತಿ ಹೀನರು ಆಹಾರ ಗುರುತಿಸುವಿಕೆ ಹಾಗೂ ಫಲಾನುಭವಿಗಳ ಆಯ್ಕೆಯಲ್ಲಿ ಸ್ಥಳೀಯ ಶಾಸಕರ ನಿರ್ಧಾರವೇ ಅಂತಿಮವಾಗಿದೆ. ವಸತಿ ಯೋಜನೆಗಳಡಿ ಸಾಕಷ್ಟು ಬಾಕಿ ಇದೆ. ಹಳೇ ಯೋಜನೆಗಳು ಪೂರ್ಣಗೊಳ್ಳದೆ ಹೊಸ ಮಂಜೂರಾತಿ ನೀಡುತ್ತಿಲ್ಲ. ಈ ಬಗ್ಗೆ ಜನ ಪ್ರತಿನಿಧಿಗಳು ಇನ್ನಷ್ಟು ಕಾಳಜಿ ವಹಿಸಿ ಕೆಲಸಗಳು ಬೇಗ ಮುಗಿಯುವಂತೆ ನೋಡಿಕೊಳ್ಳಿ ಎಂದು ಸಚಿವರು ಹೇಳಿದರು.

ರಾಜೀವ್ ಗಾಂಧೀ ವಸತಿ ಯೋಜನೆಯಡಿಯಲ್ಲಿ ಹೊಸದಾಗಿ 65 ಸಾವಿರ ಮನೆಗಳ ನಿರ್ಮಾಣಕ್ಕೆ ಅವಕಾಶ ಇದ್ದು, ಎಲ್ಲೆಲ್ಲಿ ನೈಜ ಅವಶ್ಯಕತೆಗಳಿದೆಯೋ ಅಲ್ಲಿಗೆ ಮಂಜೂರಾತಿ ಮಾಡಲಾಗುವುದು. ಆದರೆ ಈವರೆಗೆ ಸೌಲಭ್ಯ ಪಡೆಯದ ಬಡವರಿಗೆ, ವಸತಿರಹಿತರಿಗೆ ಮಾತ್ರ ತಲುಪಿಸಬೇಕು ಎಂದು ಸಚಿವರು ಹೇಳಿದರು.ಅಲೆಮಾರಿ, ಅರೆಅಲೆಮಾರಿ ಜನಾಂಗದವರಿಗೆ ಪ್ರತಿ ವಿಧಾನ ಸಭಾ ಕ್ಷೇತ್ರ 250 ಮನೆಗಳ ಮಂಜೂರಾತಿ ನೀಡಲಾಗಿದೆ. ಹೊಸದಾಗಿ ರಾಜವ್‍ಗಾಂಧೀ ವಸತಿ ನಿಗಮದಿಂದ ಅನುವು ಮಾಡಿ ನೀಡುವ ಮನೆಗಳಿಗೆ ನಗರದ ಪ್ರದೇಶದಲ್ಲಿ ರೂ.3.50 ಲಕ್ಷ ಹಾಗೂ ಗ್ರಾಮೀಣ ಪ್ರದೇಶದಲ್ಲಿ ರೂ.2.7 ಲಕ್ಷಗಳನ್ನು ನೀಡಲಾಗುವುದು. ಇವುಗಳ ಕಾಮಗಾರಿ 11 ತಿಂಗಳಲ್ಲಿ ಮುಗಿಯಬೇಕು ಎಂದು ಸಚಿವರು ಹೇಳಿದರು.

ವಸತಿ ಯೋಜನೆಗಳ ದುರ್ಬಳಕೆ ಸಲ್ಲ, ಒಂದೇ ಮನೆಯ ಬಾಕಿ ಜಿ.ಪಿ.ಎಸ್. ಮಾಡಿ ಹಣ ಪಡೆಯುವುದು ಒಂದೇ ವ್ಯಕ್ತಿ ಹಲವು ಬಾರಿ ಸೌಲಭ್ಯ ಪಡೆಯುವುದು ಶಿಕ್ಷರ್ಹಾ ಹಣವಂತರು ಬಡವರ ಯೋಜನೆಯ ಫಲ ಪಡೆಯುವುದು ಅಪರಾಧ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ದ ಕ್ರಮ ವಹಿಸಿ ಎಂದು ಸಚಿವರು ಸೂಚನೆ ನೀಡಿದರು.

ಹಾಸನ ನಗರಕ್ಕೆ ಸದ್ಯಕ್ಕೆ ಸಾವಿರ ಮನೆಗಳನ್ನು ನಗರ ಆಶ್ರಯ ಯೋಜನೆಯಡಿ ಮಂಜುರಾತಿ ಮಾಡಲಾಗಿದೆ. ಸ್ಥಳ ಲಭ್ಯವಿದ್ದು ಬೇಡಿಕೆ ಇದ್ದಲ್ಲಿ ಇನ್ನಷ್ಟು ಒದಗಿಸಲಾಗುವುದು ಅದೇ ರೀತಿ ಇತರ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಿಗೂ ಹೊಸದಾಗಿ ನಗರ ಆಶ್ರಯ ಯೋಜನೆಯಡಿ 200 ಮನೆಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು ಎಂದು ಪ್ರಕಟಿಸಿದರು.

ಸಭೆಯಲ್ಲಿ ಶಾಸಕರುಗಳಾದ ಹೆಚ್.ಡಿ. ರೇವಣ್ಣ, ಹೆಚ್.ಕೆ. ಕುಮಾರಸ್ವಾಮಿ, ಕೆ.ಎಂ. ಶಿವಲಿಂಗೇಗೌಡ, ಎ.ಟಿ. ರಾಮಸ್ವಾಮಿ, ಸಿ.ಎನ್. ಬಾಲಕೃಷ್ಣ ಹಾಗೂ ಪ್ರೀತಂ ಜೆ ಗೌಡ, ಕೆ.ಎಂ. ಲಿಂಗೇಶ್ ಅವರು ಹಾಜರಿದ್ದು ತಮ್ಮ ಕ್ಷೇತ್ರದಲ್ಲಿ ಇವರೆಗೆ ಮಂಜೂರಾಗಿರುವ ವಸತಿ ಯೋಜನೆಗಳ ಹಾಗೂ ಈ ವರೆಗೆ ಪೂರ್ಣಗೊಂಡಿರುವ ವಿವರಗಳನ್ನು ಒದಗಿಸಿ ಆದಷ್ಟು ಬೇಗ ಹಣ ಬಿಡುಗಡೆ ಮಾಡುವಂತೆ ಕೋರಿದರು.
ಶಾಸಕರಾದ ಹೆಚ್.ಡಿ. ರೇವಣ್ಣ ಅವರು ಅಕ್ರಮ ಲೇಔಟ್‍ಗಳ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು, ಕೊಳಗೇರಿ ನಿವಾಸಗಳಿಗೆ ಪೂರಕ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದರು.
ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ ಅವರು ಸಕಲೇಶಪುರ, ಆಲೂರು, ಬೇಲೂರು ಹಾಗೂ ಅರಕಲಗೂಡುಗಳಲ್ಲಿ ಹೆಚ್ಚು ಮಳೆ ಬಿಳುವ ಪ್ರದೇಶಗಳಾಗಿದ್ದು ಅಲ್ಲಿ ಇತರ ಜಿಲ್ಲೆಗಳಲ್ಲಿ ಮಲೆನಾಡು ಭಾಗಕ್ಕೆ ನೀಡಿರುವ ರೀಯಾತಿಗಳನ್ನು ನೀಡಬೇಕು ಹಾಗೂ ಹೊಸದಾಗಿ ಮನೆಗಳ ಮಂಜುರಾತಿ ನೀಡಿ ನ್ಯೂತನ ಕೊಳಗೇರಿಗಳನ್ನು ಗುರುತಿಸಿ ಹೆಚ್ಚಿಸಿ ಸೌಲಭ್ಯ ನೀಡಬೇಕು ಎಂದರು.
ಶಾಸಕರಾದ ಎ.ಟಿ. ರಾಮಸ್ವಾಮಿ ಅವರು ಮಾತನಾಡಿ ಅರಕಲಗೂಡಿನಲ್ಲಿ 18 ಗುರುತಿಸಲ್ಪಟ್ಟ ಕೊಳಗೇರಿಯಿದ್ದು ಕೆವಲ 3 ಕೊಳಗೇರಿಗಳಿಗೆ 480 ಮನೆಗಳನ್ನು ಮಂಜೂರು ಮಾಡಲಾಗಿದೆ. ಅದನ್ನು ಇತರ ಕೊಳಗೇರಿಗಳಿಗೂ ವಿಸ್ತರಿಸಬೇಕು ಹಾಗೂ ಆನೇಕ ಕಡೆಗಳಲ್ಲಿ ಅನುಕೂಲ ಪಡೆದವರೆ ಮತ್ತೆ ಮತ್ತೆ ಸೌಲಭ್ಯ ಪಡೆದುಕೊಂಡಿದ್ದಾರೆ. ಒಂದೇ ಮನೆಗೆ ಹಿಂದೆ ಮುಂದೆ ಪ್ರತ್ಯೇಕ ಪೋಟೋ ತೆಗೆದು ಜಿ.ಪಿ.ಎಸ್ ಮಾಡಲಾಗಿದೆ. ಇಂತಹ ಆಕ್ರಮಗಳ ಬಗ್ಗೆ ಕ್ರಮವಹಿಸಬೇಕು ಎಂದರು.

ಶಾಸಕರಾದ ಕೆ.ಎಂ. ಶಿವಲಿಂಗೇಗೌಡರು ಅರಸೀಕೆರೆಯಲ್ಲಿ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ನಿರ್ಮಿಸಲಾಗುತ್ತಿರುವ 1,310 ಮನೆಗಳ ವಸತಿ, ಸಮುಚ್ಚಯ ಕಾಮಗಾರಿ ಕುಟುಂತ್ತಾ ಸಾಗಿದ್ದು ಬೇಗ ಮುಕ್ತಯವಾಗಬೇಕು. ಹಿಂದೆ ಮಂಜೂರಾಗಿದ್ದ ಹಲವು ವಸತಿ ಯೋಜನೆ ಕಾಮಗಾರಿಯೂ ಇನ್ನು ಪ್ರಾರಂಭವಾಗಿಲ್ಲ, ಈ ಮನೆಗಳನ್ನು ಹೊಸ ಯೋಜನೆಯ ವ್ಯಾಪ್ತಿಗೆ ಒಳಪಡಿಸಿ ಅಷ್ಟೇ ಅನುದಾನ ನೀಡಬೇಕು ಮತ್ತು ಷರತ್ತುಗಳ ಸರಳಿಕರಣ ಮಾಡಬೇಕು ಎಂದರು.
ಶಾಸಕರಾದ ಸಿ.,ಎನ್ ಬಾಲಕೃಷ್ಣ ಅವರು ಮಾತನಾಡಿ ಚನ್ನರಾಯಪಟ್ಟಣದಲ್ಲಿ ವಸತಿ ಯೋಜನೆಯಡಿ 6 ಕೋಟಿಗಳ ಅನುದಾನ ಬಾಕಿ ಇದ್ದು ಶೀಘ್ರ ಬಿಡುಗಡೆ ಮಾಡಿಕೋಡಬೇಕು ಹಾಗೂ ಹೊಸದಾಗಿ ಹೆಚ್ಚಿನ ಮನೆಗಳಿಗೆ ಮಂಜೂರಾತಿ ನೀಡಬೇಕು. ಕೊಳಚೆ ಪ್ರದೇಶಗಳನ್ನು ಗುರುತಿಸಿ ನೊಂದಣಿ ಮಾಡಬೇಕು ಎಂದರು.
ಶಾಸಕರಾದ ಕೆ.ಎಸ್. ಲಿಂಗೇಶ್ ಅವರು ಮಾತನಾಡಿ ಹಲವು ಮನೆಗಳು ಇನ್ನು ಪ್ರಾರಂಭದ ಹಂತದಲ್ಲಿ ಎಂದು ಬ್ಲಾಕ್ ಮಾಡಲಾಗಿದೆ. ಅವುಗಳ ಪುನರ್ ನಿರ್ಮಾಣಕ್ಕೆ ಆದೇಶ ನೀಡಿ ಅನುದಾನ ಒದಗಿಸಬೇಕು ಎಂದರು.

ಶಾಸಕರಾದ ಪ್ರೀತಂ ಜೆ ಗೌಡ ಅವರು ಮಾತನಾಡಿ ಹಾಸನ ನಗರಕ್ಕೆ 1000 ಮನೆಗಳನ್ನು ಮಂಜೂರು ಮಾಡಲಾಗಿದೆ. 6.20 ಎಕರೆ ಜಾಗದಲ್ಲಿ ಬಹು ಅಂತಸ್ಥಿನ 768 ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗುವುದು, ಈಗಾಗಲೇ ನಗರ ಸಭೆಯಲ್ಲಿ ವತಿಯಿಂದ ಅರ್ಜಿ ಆಹ್ವಾನಿಸಿ ಅರ್ಹರ ಪಟ್ಟಿ ಸಿದ್ದಪಡಿಸಲಾಗಿದೆ. ಇನ್ನೂ 2500 ಮನೆಗಳನ್ನು ನಗರ ವಸತಿ ಯೋಜನೆಯಡಿ ಒದಗಿಸಿದ್ದಲ್ಲಿ ನಗರ ಪ್ರದೇಶದ ಎಲ್ಲಾ ವಸತಿ ರಹಿತರಿಗೆ ಮನೆಗಳ ಸೌಲಭ್ಯ ಒದಗಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಆರ್ ಗಿರೀಶ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಅವರು ಮಾತನಾಡಿ ವಸತಿ ಯೋಜನೆಗಳು, ಹೊಸ ಅಕ್ರಮ ಬಡವಣೆಗಳ ನಿರ್ಮಾಣಕ್ಕೆ ಹಾಕಿರುವ ನಿಯಂತ್ರಣಗಳು ಮತ್ತು ಗ್ರಾಮೀಣ ವಸತಿಯೋಜನೆಗಳ ಬಗ್ಗೆ ಮಾಹಿತಿ ನೀಡಿ ನಕಲಿ ಫಲಾನುಭವಿಗಳ ಅಕ್ರಮ ಎಸಗಿದ ಅಧಿಕಾರಿ ಸಿಬ್ಬಂದಿಗಳ ವಿರುದ್ದ ಕ್ರಮ ಜರುಗಿಸಲಾಗುವುದು ಎಂದರು.ಉಪವಿಭಾಗಾಧಿಕಾರಿಗಳಾದ ಡಾ|| ನವೀನ್ ಭಟ್, ಗಿರೀಶ್ ನಂದನ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ನಾಗರಾಜ್, ಆಡಳಿತ ಉಪ ಕಾರ್ಯದರ್ಶಿ ಚಂದ್ರಶೇಖರ್, ಅಭಿವೃದ್ಧಿ ಉಪ ಕಾರ್ಯದರ್ಶಿ ಮಹೇಶ್ ಹಾಗೂ ಎಲ್ಲಾ ತಾಲ್ಲೂಕುಗಳ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here