ಕ್ರೇಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ವತಿಯಿಂದ ಜಿಲ್ಲಾಸ್ಪತ್ರೆಯ ಕೋವಿಡ್ ಕೇರ್ ಸೆಂಟರಗಳಿಗೆ ಬೆಡ್ ಸೈಡ್ ಬಾಕ್ಸ್ ವಿತರಣೆ

0
87

ಧಾರವಾಡ : ಕ್ರೇಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ವತಿಯಿಂದ ಜಿಲ್ಲಾಸ್ಪತ್ರೆಯ ಕೋವಿಡ್ ಕೇರ್ ಸೆಂಟರಗೆ ಉಪಯೋಗಿಸುವುದಕ್ಕೆ ಮೇ.27 ರಂದು 50 ಬೆಡ್ ಸೈಡ್ ಬಾಕ್ಸ್ (ಟಿಪಾಯಿ) ಗಳನ್ನು ಜಿಲ್ಲಾದಿಕಾರಿಗಳಾದ ನಿತೇಶ ಪಾಟೀಲ್ ಹಾಗೂ ಕಂಪನಿಯ ಉತ್ತರ ವಲಯ ವ್ಯವಸ್ಥಾಪಕರಾದ ವೆಂಕಟನಾಯ್ಕ್, ಧಾರವಾಡ ಏರಿಯಾ ಮ್ಯಾನೇಜರಾದ ಮಂಜಪ್ಪ ನಡುವಿನಮನಿ, ಅವರು ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ಡಾ. ಶಿವಕುಮಾರ ಮಾನಕರ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಶಾಖೆಗಳ ಶಾಖಾವ್ಯವಸ್ಥಾಪಕರಾದ ಹಾಲಪ್ಪ ಬಿ.ಜೆ, ಹರಿಫ್.ಪಿ.ಟಿ, ದೇವಪ್ಪ ಜಮನಾಳ, ಬಾಪುಗೌಡ ಪಾಟೀಲ, ಸಲೀಮ ನಧಾಫ್, ನಾಗರಾಜ ಚಂದರಗಿ, ರಾಚಯ್ಯ.ಪ.ನಂಜುಂಡೇಶ್ವರಮಠ, ಭೀಮಪ್ಪ ದೇವಲಾಪುರ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here