ಐಐಟಿ ಧಾರವಾಡದಲ್ಲಿ ನೂತನ ಕಟ್ಟಡ, ಸೌಲಭ್ಯಗಳನ್ನು ಉದ್ಘಾಟಿಸಿದ ಗೌರವಾನ್ವಿತ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್

0
18

ಧಾರವಾಡ:ಮಾ.01: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಧಾರವಾಡ (ಐಐಟಿ ಧಾರವಾಡ)ದ ಕ್ಯಾಂಪಸ್‍ನಲ್ಲಿ ನಿರ್ಮಾಣವಾದ ಹೊಸ ಕೇಂದ್ರೀಯ ಕಲಿಕಾ ರಂಗಮಂದಿರ (ಸೆಂಟ್ರಲ್ ಲನಿರ್ಂಗ್ ಥಿಯೇಟರ್-ಸಿಎಲ್‍ಟಿ), ಜ್ಞಾನ ಸಂಪನ್ಮೂಲ ಮತ್ತು ದತ್ತಾಂಶ ಕೇಂದ್ರ (ಕೆಆರ್‍ಡಿಸಿ) ಮತ್ತು ಎರಡು ಹೊಸ ಪ್ರವೇಶ ದ್ವಾರಗಳ ಉದ್ಘಾಟನೆಯನ್ನು ಶುಕ್ರವಾರ (ಮಾರ್ಚ್ 1, 2024)ದಂದು ಭಾರತದ ಗೌರವಾನ್ವಿತ ಉಪ ರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನಕರ್ ಉದ್ಘಾಟಿಸಿದರು. ನಂತರ ಅವರು ಅಲ್ಲಿ ನೆರೆದಿದ್ದ ಸಂಸ್ಥೆಯ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಯನ್ನುದ್ದೇಶಿಸಿ ಪ್ರಧಾನ ಭಾಷಣ ಮಾಡಿದರು.

ಉಪ ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ಐಐಟಿ ಧಾರವಾಡದ ಹಳೆಯ ವಿದ್ಯಾರ್ಥಿಗಳು ಸಂಸ್ಥೆಗೆ ಕೊಡುಗೆ ನೀಡಿ ಸಂಸ್ಥೆಯನ್ನು ಶ್ರೀಮಂತಗೊಳಿಸಬೇಕು ಎಂದು ಹೇಳಿದರು. ಸಂಸ್ಥೆಯ ಬೆಳವಣಿಗೆಗೆ ನೆರವು ನೀಡಲು ಭಾರತೀಯ ಕೌನ್ಸಿಲ್ ಆಫ್ ವಲ್ರ್ಡ್ ಅಫೇರ್ಸ್ ಮತ್ತು ಐಐಟಿ ಧಾರವಾಡ ನಡುವೆ ಎಂಓಯು ಸಾಧ್ಯವಾಗಿಸಲು ನಾವು ಅನುಕೂಲ ಮಾಡಿಕೊಡುತ್ತೇವೆ ಎಂದು ಅವರು ಹೇಳಿದರು. ಅದು ಅಪಾರ ಸಾಧ್ಯತೆಗಳನ್ನು ಉಂಟು ಮಾಡಲಿದೆ.

ಗೌರವಾನ್ವಿತ ಉಪರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಭಾರತವು ಮುಂದಿನ ಕೆಲವು ವರ್ಷಗಳಲ್ಲಿ ಜಾಗತಿಕವಾಗಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಸಜ್ಜಾಗಿದೆ ಎಂದು ಹೇಳಿದರು. ಮಾತು ಮುಂದುವರಿಸುತ್ತಾ ಅವರು. ಭಾರತವು ತನ್ನ ಗುರಿಗಳನ್ನು ಸಾಧಿಸಲು ಮತ್ತು 2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಶ್ರೇಣಿಗೆ ಸೇರುವಂತೆ ಮಾಡಲು ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸಿದರು.

ಉಪರಾಷ್ಟ್ರಪತಿಗಳು ವಿದ್ಯಾರ್ಥಿಗಳಿಗೆ ಅವರ ಪ್ರತಿಭೆ ಮತ್ತು ಸಾಮಥ್ರ್ಯವನ್ನು ಬಳಸಿಕೊಂಡು ಅವರ ಕನಸುಗಳನ್ನು ನನಸು ಮಾಡಲು ಮತ್ತು ಗುರಿಯನ್ನು ಮುಟ್ಟಲು ಪೆÇ್ರೀತ್ಸಾಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ, ಐಐಟಿ ಧಾರವಾಡದ ನಿರ್ದೇಶಕ ಪೆÇ್ರ.ವೆಂಕಪ್ಪಯ್ಯ ಆರ್ ದೇಸಾಯಿ ಅವರು ಮಾತನಾಡಿ, “ಭಾರತದ ಗೌರವಾನ್ವಿತ ಉಪ ರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನಕರ್ ಅವರು ನಮ್ಮ ಕ್ಯಾಂಪಸ್‍ನಲ್ಲಿ ಈ ಮಹತ್ವದ ಕಟ್ಟಡಗಳು ಮತ್ತು ಸೌಲಭ್ಯಗಳನ್ನು ಉದ್ಘಾಟಿಸಿದ್ದು ಐಐಟಿ ಧಾರವಾಡಕ್ಕೆ ಹೆಮ್ಮೆಯ ಕ್ಷಣವಾಗಿದೆ. ಐಐಟಿ ಧಾರವಾಡದಲ್ಲಿ ಸಂಪನ್ಮೂಲಗಳನ್ನು ಸೂಕ್ತವಾಗಿ ಬಳಸಿಕೊಳ್ಳುವ ಮೂಲಕ ಈ ಪ್ರದೇಶವನ್ನು ಸುಸ್ಥಿರ ಅಕ್ಷಯ ಕ್ಷೇತ್ರವನ್ನಾಗಿ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ” ಎಂದು ಹೇಳಿದರು.

ಸಿಎಲ್‍ಟಿಯು 19,135 ಚ.ಮೀ.ನಷ್ಟು ವಿಸ್ತೀರ್ಣ ಹೊಂದಿರುವ ಅಪ್ರತಿಮ ಕಟ್ಟಡವಾಗಿದ್ದು, 30 ರಿಂದ 600 ವಿದ್ಯಾರ್ಥಿಗಳು ಕುಳಿತುಕೊಳ್ಳಬಹುದಾದ ಬಹು ಉಪನ್ಯಾಸ ಹಾಲ್ ಗಳು ಮತ್ತು ಸಭಾಂಗಣಗಳನ್ನು ಒಳಗೊಂಡಿದೆ. ವಿಶೇಷವೆಂದರೆ ಈ ಕಟ್ಟಡವು ಎಲ್ಲಾ ಸಭಾಂಗಣಗಳಿಗೆ ಪ್ರವೇಶ ಒದಗಿಸುವ ವಿಶಿಷ್ಟವಾದ ರಾಂಪ್ ವಿನ್ಯಾಸವನ್ನು ಹೊಂದಿದೆ ಮತ್ತು 60 ಮೀ ಅಗಲದ ಅದ್ಭುತವಾದ ಮೆಂಬರೇನ್ ಫ್ಯಾಬ್ರಿಕ್ ಗುಮ್ಮಟವನ್ನು ಹೊಂದಿದೆ. ಇದೆಲ್ಲವೂ ಈ ಕಟ್ಟಡಕ್ಕೆ ಅಪೂರ್ವ ವಾಸ್ತುಶಿಲ್ಪ ರಚನೆ ಎಂಬ ಹೆಗ್ಗಳಿಕೆ ಒದಗಿಸಿದೆ.

ಕೆಆರ್‍ಡಿಸಿಯು 8540 ಚ.ಮೀ. ವಿಸ್ತೀರ್ಣ ಹೊಂದಿದ್ದು, ಕೇಂದ್ರ ಗ್ರಂಥಾಲಯ, ಓದುವ ಕೋಣೆಗಳು, ದತ್ತಾಂಶ ಕೇಂದ್ರ, ಮತ್ತು ಡಿಜಿಟಲ್ ಕಲಿಕಾ ಸೌಲಭ್ಯಗಳನ್ನು ಹೊಂದಿದೆ. ಈ ಕಟ್ಟಡವು ದೇವಾಲಯದಂತಹ ಗೋಪುರದ ರಚನೆಯನ್ನೂ ಒಳಗೊಂಡಿದೆ. ಇದರ ವೀಕ್ಷಣಾ ಗ್ಯಾಲರಿಯು 46 ಮೀ ಎತ್ತರ ಇದ್ದು, ಧಾರವಾಡ ನಗರದ ಚಂದವನ್ನು ಇದರ ಮೇಲೆ ನಿಂತು ಸವಿಯಬಹುದಾಗಿದೆ.

ತಮ್ಮ ಭಾಷಣದಲ್ಲಿ ಗೌರವಾನ್ವಿತ ಉಪ ರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ರಾಷ್ಟ್ರ ನಿರ್ಮಾಣದಲ್ಲಿ ಐಐಟಿಗಳಂತಹ ಶ್ರೇಷ್ಠ ಸಂಸ್ಥೆಗಳ ಪಾತ್ರದ ಬಗ್ಗೆ ಮಾತನಾಡಿದರು. “ದೇಶದ ಯುವಕರು ಪ್ರಜಾಪ್ರಭುತ್ವ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಧಾರವಾಡದ ಐಐಟಿಯಲ್ಲಿರುವ ಪ್ರತಿಭೆಗಳಿಂದಾಗಿ ಈ ಕಿರಿಯ ಐಐಟಿಯಲ್ಲಿನ ವಿದ್ಯಾರ್ಥಿಗಳು ಗಣನೀಯ ನೆರವು ಪಡೆಯುತ್ತಾರೆ. ಈ ಶ್ರೇಷ್ಠ ಕಲಿಕಾ ಕೇಂದ್ರವು ಬೆಳವಣಿಗೆ ಹೊಂದುವ ಮತ್ತು ಮುಂದಿನ ಹಂತಕ್ಕೆ ಹೋಗಲು ಬೇಕಾದ ಸಾಕಷ್ಟು ಸಾಮಥ್ರ್ಯವನ್ನು ಹೊಂದಿದೆ” ಎಂದು ಅವರು ಹೇಳಿದರು.

ಶ್ರೀ ಜಗದೀಪ್ ಧನಕರ್ ಅವರ ಭೇಟಿಯು ಐಐಟಿ ಧಾರವಾಡದ ಉತ್ಕøಷ್ಟತೆಯ ಪಯಣದಲ್ಲಿ ಐತಿಹಾಸಿಕ ಕ್ಷಣವಾಗಿದೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತದೆ.
ಸನ್ಮಾನ್ಯ ಸಚಿವರಾದ ಶ್ರೀ ಪ್ರಲ್ಹಾದ ಜೋಶಿಯವರು ತಮ್ಮ ಭಾಷಣದಲ್ಲಿ ಧಾರವಾಡ ಜಿಲ್ಲೆಯು ವಿವಿಧ ಕ್ಷೇತ್ರಗಳಿಗೆ ನೀಡಿದ ಕೊಡುಗೆಯ ಬಗ್ಗೆ ಮಾತನಾಡಿದರು. “ಧಾರವಾಡವು ಐಐಟಿ ಮತ್ತು ಐಐಐಟಿ ಉಪಸ್ಥಿತಿಯೊಂದಿಗೆ ಉನ್ನತ ಶಿಕ್ಷಣದ ಪ್ರಮುಖ ಕೇಂದ್ರವಾಗಿದೆ. ಇದು ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ಕರ್ನಾಟಕದ ಉದಯೋನ್ಮುಖ ತಂತ್ರಜ್ಞಾನ ಮತ್ತು ಆರ್ಥಿಕ ಶಕ್ತಿ ಕೇಂದ್ರಗಳಲ್ಲಿ ಸೇರಿಕೊಂಡಿವೆ” ಎಂದು ಅವರು ಹೇಳಿದರು.

ಸಂಸ್ಥೆಯು ಸಂಶೋಧನೆ ಮತ್ತು ನಾವೀನ್ಯತೆಗಳ ಪ್ರಮುಖ ಕೇಂದ್ರವಾಗಿ ವೇಗವಾಗಿ ಹೊರಹೊಮ್ಮುತ್ತಿದೆ. ರಾಷ್ಟ್ರ ಮತ್ತು ಪ್ರಪಂಚದ ಪ್ರಗತಿಗೆ ತಂತ್ರಜ್ಞಾನವನ್ನು ಬಳಸುತ್ತಿದೆ. 2023 ರ ಮಾರ್ಚ್ 12 ರಂದು ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಸ್ಥೆಯ ಶಾಶ್ವತ ಕ್ಯಾಂಪಸ್ ಅನ್ನು ಉದ್ಘಾಟಿಸಿದ ನಂತರ, ಗೌರವಾನ್ವಿತ ಉಪರಾಷ್ಟ್ರಪತಿಯವರ ಭೇಟಿಯು ಈ ಯುವ ಸಂಸ್ಥೆಯ ಪ್ರಯಾಣದಲ್ಲಿ ಮತ್ತೊಂದು ಮಹತ್ವದ ಸಂದರ್ಭವಾಗಿದೆ.

ಈ ಸಂದರ್ಭದಲ್ಲಿ ಭಾರತದ ದ್ವಿತೀಯ ಮಹಿಳೆ ಶ್ರೀಮತಿ ಡಾ ಸುದೇಶ್ ಧನಕರ್, ಗೌರವಾನ್ವಿತ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್‍ಚಂದ್ ಗೆಹ್ಲೋಟ್, ಭಾರತ ಸರ್ಕಾರದ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಇಲಾಖೆಯ ಗೌರವಾನ್ವಿತ ಕೇಂದ್ರ ಸಚಿವರು, ಧಾರವಾಡ ಕ್ಷೇತ್ರದ ಸಂಸದರಾದ ಶ್ರೀ ಪ್ರಲ್ಹಾದ ಜೋಶಿ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಸನ್ಮಾನ್ಯ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ ದಿವ್ಯ ಪ್ರಭು ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು, ಐಐಟಿ ಧಾರವಾಡದ ವಿವಿಧ ವಿಭಾಗದ ಪ್ರಾಧ್ಯಪಕರು, ವಿದ್ಯಾರ್ಥಿಗಳು, ಸಂಶೋಧಕರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಆಕಾಶವಾಣಿಯ ಹಿರಿಯ ಉದ್ಘೋಶಕಿ ಮಾಯಾ ರಾಮನ್, ಕುಮಾರಿ ಮೇಘನಾ ಭಟ್, ಮುಕ್ತಾ ವೇದಪಾಠಕ ಅವರು ನಿರೂಪಿಸಿ, ವಂದಿಸಿದರು.

ಐಐಟಿ ಧಾರವಾಡದ ಪರಿಚಯ : 2016ರಲ್ಲಿ ಸ್ಥಾಪನೆಯಾದ ಐಐಟಿ ಧಾರವಾಡ ದೇಶದ 23 ಐಐಟಿಗಳಲ್ಲಿ ಅತ್ಯಂತ ಕಿರಿಯದಾಗಿದೆ. ಕರ್ನಾಟಕದ ಧಾರವಾಡದ ಸಮೀಪವಿರುವ 470 ಎಕರೆ ಕ್ಯಾಂಪಸ್ ನಾವೀನ್ಯತೆ ಮತ್ತು ಸುಸ್ಥಿರತೆ ಸಾಧಿಸಿದೆ. ಸಂಪೂರ್ಣ ವಸತಿ ಕ್ಯಾಂಪಸ್ ನಲ್ಲಿ 12,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಸೂಕ್ತವಾಗುವಂತೆ ರೂಪಿಸಲಾಗಿದೆ. ಐಐಟಿ ಧಾರವಾಡ ಬಿಟೆಕ್, ಎಂಟೆಕ್, ಎಂಎಸ್ ಮತ್ತು ಪಿಎಚ್ ಡಿ ಪೆÇ್ರೀಗ್ರಾಮ್ ಗಳನ್ನು ನೀಡುತ್ತದೆ. ಪರಿಸರ ಸ್ನೇಹಿ ಕ್ಯಾಂಪಸ್ ತನ್ನ ಹಸಿರು ಮತ್ತು ಶಕ್ತಿ-ಸಮರ್ಥ ವಿನ್ಯಾಸಕ್ಕಾಗಿ ಹೆಚ್ಚು-ಪ್ರಶಸ್ತಿ ಪಡೆದಿದೆ. ಐಐಟಿ ಧಾರವಾಡ ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣದ ಕಾರಣಕ್ಕಾಗಿ ಸೇವೆ ಸಲ್ಲಿಸಲು ಬದ್ಧವಾಗಿದೆ. ಪ್ರಸ್ತುತ, ಸಂಸ್ಥೆಯು ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಎಂಜಿನಿಯರಿಂಗ್ ಭೌತಶಾಸ್ತ್ರ, ಸಿವಿಲ್ ಮತ್ತು ಇನ್ಫ್ರಾಸ್ಟ್ರಕ್ಚರ್ ಎಂಜಿನಿಯರಿಂಗ್, ಕೆಮಿಕಲ್ ಮತ್ತು ಬಯೋಕೆಮಿಕಲ್ ಎಂಜಿನಿಯರಿಂಗ್ ಮತ್ತು ಗಣಿತ ಮತ್ತು ಕಂಪ್ಯೂಟಿಂಗ್‍ನಲ್ಲಿ ನಾಲ್ಕು ವರ್ಷಗಳ ಬಿಟೆಕ್ ಕೋರ್ಸು ಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಇನ್ಸ್ಟಿಟ್ಯೂಟ್ ಅಂತರಶಿಕ್ಷಣ ಬಿಎಸ್-ಎಂಎಸ್ ಕಾರ್ಯಕ್ರಮವನ್ನು ಸಹ ನೀಡುತ್ತದೆ. ಅದರ ಚಿಂತನಶೀಲವಾಗಿ ರಚಿಸಲಾದ ಮೂಲಸೌಕರ್ಯ ಮತ್ತು ಸುಸ್ಥಿರತೆ, ಶಕ್ತಿ ದಕ್ಷತೆ ಮತ್ತು ಹಸಿರು ನಿರ್ಮಾಣ ಅಭ್ಯಾಸಗಳ ಮೇಲೆ ಒತ್ತು ನೀಡಿದೆ ಮತ್ತು ಜಿ ಆರ್ ಐ ಎಚ್ ಎ 5-ಸ್ಟಾರ್ ರೇಟಿಂಗ್ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಗೆದ್ದಿದೆ.

LEAVE A REPLY

Please enter your comment!
Please enter your name here