ಎನ್‍ಸಿಸಿ ದಿನಾಚರಣೆ ಅಂಗವಾಗಿ 80 ವಿದ್ಯಾರ್ಥಿಗಳಿಂದ ರಕ್ತದಾನ

0
102

ಮಡಿಕೇರಿ ನ.25 :-ಭಾರತೀಯ ರೆಡ್‍ಕ್ರಾಸ್ ನ ಕೊಡಗು ಘಟಕದ ಸಹಯೋಗದೊಂದಿಗೆ 19 ನೇ ಬೆಟಾಲಿಯನ್ ಎನ್‍ಸಿಸಿಯ 19ನೇ ಬೆಟಾಲಿಯನ್ ವತಿಯಿಂದ ಎನ್‍ಸಿ.ಸಿ ದಿನಾಚರಣೆಯಂದು ರೆಡ್‍ಕ್ರಾಸ್ ಭವನದಲ್ಲಿ ರಕ್ತದಾನ ಶಿಬಿರ ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್, ದಾನಗಳಲ್ಲಿ ರಕ್ತದಾನವೇ ಮಹಾಶ್ರೇಷ್ಠ ದಾನವಾಗಿದೆ ಎಂದರಲ್ಲದೇ, ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಎನ್‍ಸಿಸಿಯ 19 ನೇ ಬೆಟಾಲಿಯನ್ ನ ಲೆಫ್ಟಿನೆಂಟ್ ಕರ್ನಲ್ ಚಾಕೋ ವಿ.ಡಿ. ಮಾತನಾಡಿ, ರೆಡ್ ಕ್ರಾಸ್ ಸೇವೆ ಅಮೂಲ್ಯವಾಗಿದ್ದು, ಮಾನವೀಯತೆಯ ನೆಲೆಯಲ್ಲಿ ರೆಡ್ ಕ್ರಾಸ್ ಕಾರ್ಯನಿರ್ವಹಿಸುತ್ತಿದೆ ಎಂದರಲ್ಲದೇ ಎಲ್ಲರೂ ರಕ್ತದಾನ ಮಾಡುವಂತೆ ಪ್ರೇರೇಪಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಬಿ.ಕೆ.ರವೀಂದ್ರ ರೈ ಮಾತನಾಡಿ, ವಿಜ್ಞಾನ ಎಷ್ಟೇ ಮುಂದುವರೆದರೂ ರಕ್ತಕ್ಕೆ ಪೂರಕವಾದ ವ್ಯವಸ್ಥೆ ಮತ್ತೊಂದಿಲ್ಲ. ಆದ್ದರಿಂದ ಒಂದು ವ್ಯಕ್ತಿಯು ಇನ್ನೋರ್ವ ವ್ಯಕ್ತಿಗೆ ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವ ಉಳಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ 80 ವಿದ್ಯಾರ್ಥಿಗಳು ಭಾಗವಹಿಸಿ 84 ಯೂನಿಟ್ ರಕ್ತವನ್ನು ಸಂಗ್ರಹಿಸಿದರು.
ಸಮಾರಂಭದಲ್ಲಿ ದಕ್ಷಿಣ ಕನ್ನಡ ರೆಡ್‍ಕ್ರಾಸ್ ಸಂಸ್ಥೆಯ ರಕ್ತ ನಿಧಿ ಸಂಚಾಲಕ ಪ್ರವೀಣ್ ಮತ್ತು ಸಿಬ್ಬಂದಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಮೇಜರ್ ರಾಘವ್, ಸುಬೇದಾರ್ ಬಿ.ಎನ್.ಪ್ರಸಾದ್ ಗುರಂಗ್, ಸಂತ ಜೊಸೇಫರ ಕಾಲೇಜಿನ ಅಭಿಲಾμï ಕೆ.ಎಂ, ಸಿ.ಎಚ್.ಎಂ.ತಂಗವೇಲು, ಉಪನ್ಯಾಸಕಿ ಕುರ್ಷಿದಾ ಭಾನು, ಅತಿಥಿ ಉಪನ್ಯಾಸಕ ಸಚಿನ್ ಕುಮಾರ್, ರೆಡ್‍ಕ್ರಾಸ್‍ನ ಮಿಲನ ರೈ, ಶಿಲ್ಪ ರವೀಂದ್ರರೈ ಪಾಲ್ಗೊಂಡಿದ್ದರು. ರೆಡ್‍ಕ್ರಾಸ್ ಕೊಡಗು ಘಟಕದ ಕಾರ್ಯದರ್ಶಿ ಎಚ್.ಆರ್. ಮುರಳೀಧರ್ ಸ್ವಾಗತಿಸಿದರು.

LEAVE A REPLY

Please enter your comment!
Please enter your name here