ಯರ್ರಯ್ಯನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಬದಲಾಯಿಸುವಂತೆ ತಾಲೂಕು ಪಂಚಾಯಿತಿ ಇಓ ಗೆ ಗ್ರಾಮಸ್ಥರಿಂದ ಮನವಿ.

0
2412

ಸಂಡೂರು ತಾಲೂಕಿನ ಚೋರನೂರು ಹೋಬಳಿ ವ್ಯಾಪ್ತಿಯ ಯರ್ರಯ್ಯನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪ್ರಸ್ತುತ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿರುವ ಬಿ.ಎಸ್.ಶರಣಪ್ಪ ಅವರ ಬದಲಿಗೆ ಬೇರೆ ಪಿಡಿಒ ರನ್ನು ನಿಯೋಜಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಸಂಡೂರು ತಾಲೂಕು ಪಂಚಾಯಿತಿ ಪ್ರಭಾರಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಪರ್ಣಿಕಾ ಪವನ್ ರಾಮ್ ಅವರಿಗೆ ದಿನಾಂಕ 21.06.2021 ರಂದು ಮನವಿಯನ್ನು ಸಲ್ಲಿಸಿದ್ದಾರೆ.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಉಮೇಶ್ ಅವರು ನಮ್ಮ ಹಾಯ್ ಸಂಡೂರ್ ಪತ್ರಿಕೆಯ ಪ್ರತಿನಿಧಿ ಮಾತನಾಡಿ, ಪಿಡಿಒ ಶರಣಪ್ಪ ಅವರು ದೀರ್ಘ ರಜೆ ಪಡೆದುದರಿಂದ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಕುಂಠಿತಗೊಂಡಿವೆ.

ಯರ್ರಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕೊರೊನಾ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ, ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲೂ ಸಹ ಹಳ್ಳಿಗಳಲ್ಲಿ ಸರಿಯಾಗಿ ಕೆಲಸಗಳು ನಡೆಯುತ್ತಿಲ್ಲ, ಜನರಿಗೆ ಕೆಲಸವಿಲ್ಲದೇ ಗ್ರಾಮ ಪಂಚಾಯಿತಿಗೆ ಅಲೆದಾಡುತ್ತಿದ್ದಾರೆ ಹಾಗೂ 14 ಮತ್ತು 15 ನೇ ಹಣಕಾಸು ಯೋಜನೆಯಡಿ ನಡೆದ ಕೆಲಸಗಳಿಗೆ ಇದುವರೆಗೂ ಬಿಲ್ ಗಳಾಗಿರುವುದಿಲ್ಲ.

ಸಾರ್ವಜನಿಕರು ಮತ್ತು ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಲು ಪಾರಂ ನಂ-09 ಮತ್ತು 11 ಅರ್ಜಿಗಳನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸಿದರು ನಿಯಮಾನುಸಾರ ಕೆಲಸಗಳನ್ನು ನೀಡದೇ ಕೂಲಿಕಾರರಿಗೆ ತುಂಬಾ ತೊಂದರೆಯಾಗಿದೆ,ನಿಯಮದಂತೆ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿ 15 ದಿನಗಳಾದರೂ ಕೆಲಸ ನೀಡದೇ ಹೋದರೆ ಅರ್ಜಿ ಸಲ್ಲಿಸಿದವರಿಗೆ “ನಿರೋದ್ಯೋಗ ಭತ್ಯೆ” ಯನ್ನು ನೀಡಬೇಕು ಎಂದಿದ್ದರು ಸಂಬಂದಪಟ್ಟ ಅಧಿಕಾರಿಗಳು ಪಿಡಿಒ ಸಾರ್ವಜನಿಕ ಕೆಲಸಗಳ ನಿರ್ಲಕ್ಷ್ಯ ಹಾಗೂ ಬೇಜಾವಾಬ್ದಾರಿ ಕಾರ್ಯ ವೈಖರಿ ಬಗ್ಗೆ ಯಾಕೆ ಕ್ರಮವನ್ನು ತೆಗೆದುಕೊಂಡಿಲ್ಲ ಎಂಬುದು ಸಾರ್ವಜನಿಕರ ಅನುಮಾನಕ್ಕೆ ಆಸ್ಪದ ಮಾಡಿಕೊಟ್ಟಂತಾಗಿದೆ.

ಹಾಗಾಗಿ ಪಿಡಿಒ ಅವರನ್ನು ಬದಲಾವಣೆ ಮಾಡಿ ಬೇರೆ ಪಿಡಿಒರನ್ನು ಯರ್ರಯ್ಯನಹಳ್ಳಿ ಗ್ರಾಮ ಪಂಚಾಯಿತಿಗೆ ನಿಯೋಜಿಸಿ ಸಾರ್ವಜನಿಕರ ಮತ್ತು ಗ್ರಾ ಪಂ ಕಾರ್ಯಾಲಯದ ದಿನನಿತ್ಯದ ಕೆಲಸಗಳು ಸುಗಮವಾಗಿ ನಡೆಯಲು ಅನುವು ಮಾಡಿಕೊಡಬೇಕೆಂದು ಮನವಿ ಪತ್ರವನ್ನು ಸಲ್ಲಿಸಿದ್ದು ಇದುವರೆಗೂ ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಮನವಿಗೆ ಯಾವುದೇ ರೀತಿಯಾದ ಸ್ಪಂದನೆ ಸಿಕ್ಕಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಸಂಬಂದಪಟ್ಟ ಅಧಿಕಾರಿಗಳ ಪಿಡಿಒ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತಾರ ಎಂಬುದನ್ನು ಕಾಯ್ದು ನೋಡೋಣ..!

LEAVE A REPLY

Please enter your comment!
Please enter your name here