ಶಾಸಕ ಭೀಮನಾಯ್ಕ್ ವಿರುದ್ಧ ಮೂಲ ಕಾಂಗ್ರೆಸ್ ಕಾರ್ಯಕರ್ತರಿಂದ ಅಸಮಾಧಾನ

0
323

ಕೊಟ್ಟೂರು: ಈಗಿನ ಹಗರಿಬೊಮ್ಮನಹಳ್ಳಿ ಶಾಸಕರಾದ ಎಸ್ ಭೀಮನಾಯ್ಕ್ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವುದೇ ಸ್ಪಂದನೆಯನ್ನು ನೀಡುತ್ತಿಲ್ಲ ಮುಂಬರುವ ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ ಸಾಮಾಜಿಕ ನ್ಯಾಯದಡಿ ಟಿಕೇಟ್ ಹಂಚಿಕೆಯಾಗಬೇಕು ಎಂದು ಕಾಂಗ್ರೆಸ್ ಮುಖಂಡ ಪಿ.ಎಚ್.ದೊಡ್ಡರಾಮಣ್ಣ ಹೇಳಿದರು.

ಪಟ್ಟಣದ ಎಂ.ಎಂ.ಜೆ.ಹರ್ಷವರ್ಧನ್ ಇವರ ನಿವಾಸದಲ್ಲಿ ಶನಿವಾರ ನಡೆದ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮುಖಂಡರು ಸಭೆ ನಡೆಸಿ ಮುಂದಿನ ನಡೆ ಬಗ್ಗೆ ಚರ್ಚಿಸಿದ್ದೇವೆ. ಪಕ್ಷದ ವಿರುದ್ಧ ನಮ್ಮ ವಿರೋಧವಿಲ್ಲ ವ್ಯಕ್ತಿಯ ವಿರುದ್ಧ ಎಂದು ಹೇಳಿದರು. ಜಿಲ್ಲೆಯ ಹೂವಿನ ಹಡಗಲಿ ಹಾಗೂ ಹಗರಿಬೊಮ್ಮನಹಳ್ಳಿ ಕ್ಷೇತ್ರಗಳಲ್ಲಿ ಒಂದೇ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿರುವುದಕ್ಕೆ ನಮ್ಮ ವಿರೋಧವಿದೆ ಎಂದರು.

ಎಂ.ಎಂ.ಜೆ.ಹರ್ಷವರ್ಧನ್ ಮಾತನಾಡಿ ಒಂದು ವೇಳೆ ಪಕ್ಷವು ಸಾಮಾಜಿಕ ನ್ಯಾಯ ನೀಡದಿದ್ದಲ್ಲಿ ಪಕ್ಷದ ವಿರುದ್ಧ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ನಿಶ್ಚಿತ ಎಂದರು.

ಸಿ.ಬಸವರಾಜ್ ಮಾತನಾಡಿ ಕಳೆದ ಎರಡು ಅವಧಿಯಲ್ಲಿ ಕ್ಷೇತ್ರಕ್ಕೆ ಶಾಸಕ ಭೀಮನಾಯ್ಕ ಕೊಡುಗೆ ಶೂನ್ಯ ಎಂದರು, ಸೀಮಿತ ಗುತ್ತಿಗೆದಾರರಿಗೆ ಮಾತ್ರ ಗುತ್ತಿಗೆಯನ್ನು ನೀಡಿರುವುದು ಅವರ ಸಾಧನೆಯಾಗಿದೆ ಎಂದರು.

ಬುಡ್ಡಿ ಬಸವರಾಜ್ ಮಾತನಾಡಿ ಶಾಸಕರು ತಮಗೆ ಬೇಕಾದವರಿಗೆ ಸೂಕ್ತ ಸ್ಥಾನ ಕಲ್ಪಿಸಿಕೊಟ್ಟು ಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವುದು ಈ ವಿರೋಧಿ ಅಲೆಗೆ ಕಾರಣವಾಗಿದೆ ಎಂದರು. ಈ ವಿಷಯವನ್ನು ಈಗಾಗಲೇ ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ ಎಂದರು. ಅನ್ಯ ಪಕ್ಷದಿಂದ ಬಂದಿರುವ ಭೀಮನಾಯ್ಕ ನಮ್ಮ ಕ್ಷೇತ್ರದವರಲ್ಲ ಹಾಗಾಗಿ ಸ್ಥಳೀಯ ಮುಖಂಡರಿಗೆ ಟಿಕೇಟ್ ನೀಡಿದರೆ ಗೆಲುವು ಸಾಧ್ಯ, ಇಲ್ಲದಿದ್ದರೆ ಪಕ್ಷಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದರು.

ಈ ಸಂದರ್ಭದಲ್ಲಿ ಹೆಗ್ಡಾಳ್ ರಾಮಣ್ಣ, ಮುಟಗನಹಳ್ಳಿ ಕೊಟ್ರೇಶ, ಸುಧಾಕರಗೌಡ ಪಾಟೀಲ್, ಕನ್ನಳ್ಳಿ ಕೊಟ್ರೇಶ, ಸೋಮಲಿಂಗಪ್ಪ, ಮಹೇಶ್ ಹಾಗೂ ಹನಸಿ ಕೊಟ್ರೇಶ ಮುಂತಾದವರು ಮಾತನಾಡಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here