ಕೇಂದ್ರ ಸರ್ಕಾರದ ಬೆಂಬಲ ಯೋಜನೆಯಡಿ ಹೆಸರುಕಾಳು ಮತ್ತು ಉದ್ದಿನಕಾಳು ಉತ್ಪನ್ನ ಖರೀದಿಗೆ ಜಿಲ್ಲಾಧಿಕಾರಿ ಆದೇಶ

0
117

ಧಾರವಾಡ : 26: 2020-21ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್‍ಎಕ್ಯೂ ಗುಣಮಟ್ಟದ ಹೆಸರುಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಾಲ್‍ಗೆ ರೂ.7,275/- ಹಾಗೂ ಉದ್ದಿನಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಾಲ್‍ಗೆ ರೂ.6,300/- ರಂತೆ ಧಾರವಾಡ ಜಿಲ್ಲೆಯ ರೈತರಿಂದ ಮಾತ್ರ ಜಿಲ್ಲೆಯಲ್ಲಿ ಖರೀದಿಸಲು ಸರ್ಕಾರದಿಂದ ಅನುಮತಿ ನೀಡಲಾಗಿದ್ದು, ಜಿಲ್ಲೆಯ 13 ಕೇಂದ್ರಗಳಲ್ಲಿ ಹೆಸರುಕಾಳು ಮತ್ತು 4 ಕೇಂದ್ರಗಳಲ್ಲಿ ಉದ್ದಿನಕಾಳು ಖರೀದಿಗೆ ಕ್ರಮ ಕೈಗೊಳ್ಳಲು ಜಿಲ್ಲಾ ಟಾಸ್ಕ್‍ಪೋರ್ಸ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಫ್‍ಎಕ್ಯೂ ಗುಣಮಟ್ಟದ ಹೆಸರುಕಾಳು ಮತ್ತು ಉದ್ದಿನಕಾಳು ಉತ್ಪನ್ನಗಳನ್ನು ಖರೀದಿಸಲು ಕ್ರಮ ಕೈಗೊಂಡಿದ್ದು, ಆಸಕ್ತ ರೈತರು ತಮ್ಮ ಆಧಾರ ಗುರುತಿನ ಚೀಟಿಯ ಮೂಲಪ್ರತಿ ಹಾಗೂ ಅದರ ನಕಲು ಪ್ರತಿ, ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಯ ಪಾಸ್‍ಬುಕ್ ನಕಲು ಪ್ರತಿಯೊಂದಿಗೆ ಆಗಸ್ಟ್ 26 ರಿಂದ 45 ದಿನಗಳೊಳಗಾಗಿ ಖರೀದಿ ಕೇಂದ್ರಗಳಲ್ಲಿ ನೊಂದಣಿ ಮಾಡಿಕೊಳ್ಳಬೇಕು. ಮತ್ತು ನವೆಂಬರ್ 24 ರ ವರೆಗೆ ಖರೀದಿ ಪ್ರಕ್ರಿಯೆಯು ನಡೆಯುತ್ತದೆ ಎಂದು ಅವರು ತಿಳಿಸಿದ್ದಾರೆ.

ಹೆಸರುಕಾಳು ಖರೀದಿ ಕೇಂದ್ರ ಹಾಗೂ ಖರೀದಿದಾರರ ವಿವರ : ಧಾರವಾಡ ಎಪಿಎಂಸಿಯ ಮುಖ್ಯ ಮಾರುಕಟ್ಟೆ ಪ್ರಾಂಗಣ, ಟಿಎಪಿಸಿಎಂಎಸ್ ಧಾರವಾಡ-9916259625, ಉಪ್ಪಿನಬೆಟಗೇರಿ, ಪಿಕೆಪಿಎಸ್ ಉಪ್ಪಿನಬೆಟಗೇರಿ–9620048221, ಹೆಬ್ಬಳ್ಳಿ (ಖಾದಿ ಭಂಡಾರದ ಗೋದಾಮು), ಪಿಕೆಪಿಎಸ್ ಹಳೇಹುಬ್ಬಳ್ಳಿ-9448424876, ಹುಬ್ಬಳ್ಳಿ ಎಪಿಎಂಸಿಯ ಮುಖ್ಯ ಮಾರುಕಟ್ಟೆ ಪ್ರಾಂಗಣ (ಅಮರಗೋಳ)-ಟಿಎಪಿಸಿಎಂಎಸ್ ಹುಬ್ಬಳ್ಳಿ–9008362073, ಹೆಬಸೂರು-ಪಿಕೆಪಿಎಸ್ ಹೆಬಸೂರು–9686717509, ಕೋಳಿವಾಡ, ಪಿಕೆಪಿಎಸ್,ಕೋಳಿವಾಡ-9945846878, ಅಣ್ಣಿಗೇರಿ ಎಪಿಎಂಸಿಯ ಮುಖ್ಯ ಮಾರುಕಟ್ಟೆ ಪ್ರಾಂಗಣ, ಪಿಎಸಿಎಸ್ ಅಣ್ಣಿಗೇರಿ-9986744565, ನವಲಗುಂದ ಎಪಿಎಂಸಿಯ ಮುಖ್ಯ ಮಾರುಕಟ್ಟೆ ಪ್ರಾಂಗಣ, ಟಿಎಪಿಸಿಎಮ್‍ಎಸ್ ಅಣ್ಣಿಗೇರಿ-8861008191, ನವಲಗುಂದ (ಕನಕ ಭವನ)-ಪಿಎಸಿಎಸ್ ನವಲಗುಂದ–9886491644, ಅರೇ ಕುರಹಟ್ಟಿ-ಪಿಕೆಪಿಎಸ್, ಅರೇ ಕುರಹಟ್ಟಿ-9845822903, ಮೊರಬ, ಉಪಮಾರುಕಟ್ಟೆ ಪ್ರಾಂಗಣ–ಎಫ್‍ಪಿಓ, ಮೊರಬ-9620107330, ಕುಂದಗೋಳ ಎಪಿಎಂಸಿಯ ಮುಖ್ಯ ಮಾರುಕಟ್ಟೆ ಪ್ರಾಂಗಣ, ಪಿಕೆಪಿಎಸ್, ಯರಗುಪ್ಪಿ-9845169206, ಯರಗುಪ್ಪಿ, ವ್ಹಿಎಸ್‍ಎಸ್, ಯರಗುಪ್ಪಿ-9845169206.

ಉದ್ದಿನಕಾಳು ಖರೀದಿ ಕೇಂದ್ರ ಹಾಗೂ ಖರೀದಿದಾರರ ವಿವರ: ಧಾರವಾಡ ಎಪಿಎಂಸಿಯ ಮುಖ್ಯ ಮಾರುಕಟ್ಟೆ ಪ್ರಾಂಗಣ, ಟಿಎಪಿಸಿಎಮ್‍ಎಸ್ ಧಾರವಾಡ–9916259625, ಉಪ್ಪಿನ ಬೆಟಗೇರಿ, ಪಿಕೆಪಿಎಸ್, ಉಪ್ಪಿನ ಬೆಟಗೇರಿ-9620048221, ಹುಬ್ಬಳ್ಳಿ ಎಪಿಎಂಸಿಯ ಮುಖ್ಯ ಮಾರುಕಟ್ಟೆ ಪ್ರಾಂಗಣ, ಟಿಎಪಿಸಿಎಂಎಸ್, ಹುಬ್ಬಳ್ಳಿ-9008362073, ಕುಂದಗೋಳ, ಪಿಕೆಪಿಎಸ್, ಯರಗುಪ್ಪಿ-9845169206

ಎಫ್‍ಎಕ್ಯೂ ಗುಣಮಟ್ಟದ ಹೆಸರುಕಾಳು ಮತ್ತು ಉದ್ದಿನಕಾಳು ಖರೀದಿ ಕ್ರಮ: ಹೆಸರುಕಾಳು ಮತ್ತು ಉದ್ದಿನಕಾಳು ಎಫ್‍ಎಕ್ಯೂ ಗುಣಮಟ್ಟ ಎಂದರೆ ಚೆನ್ನಾಗಿ ಒಣಗಿರಬೇಕು. ತೇವಾಂಶ ಶೇ.12 ಕ್ಕಿಂತ ಕಡಿಮೆ ಇರಬೇಕು, ಹೆಸರುಕಾಳು ಮತ್ತು ಉದ್ದಿನಕಾಳು ಉತ್ಪನ್ನಗಳು ಗುಣಮಟ್ಟದ ಗಾತ್ರ, ಬಣ್ಣ, ಆಕಾರ ಹೊಂದಿರಬೇಕು. ಗಟ್ಟಿಯಾಗಿರಬೇಕು ಮತ್ತು ಸ್ವಚ್ಛವಾಗಿರಬೇಕು. ಉತ್ಪನ್ನಗಳು ಕ್ರೀಮಿಕೀಟಗಳಿಂದ ಮುಕ್ತವಾಗಿದ್ದು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದವರು ರೈತರಿಗೆ ನೀಡುವ ಗೋಣಿಚೀಲದಲ್ಲಿ 50 ಕೆ.ಜಿ. ಪ್ರಮಾಣದಲ್ಲಿ ತುಂಬಿರಬೇಕು.

ಎಫ್‍ಎಕ್ಯೂ ಗುಣಮಟ್ಟದ ಹೆಸರುಕಾಳು ಉತ್ಪನ್ನವನ್ನು ಪ್ರತಿ ಎಕರೆಗೆ 4 ಕ್ವಿಂಟಲ್‍ನಂತೆ ಪ್ರತಿ ರೈತರಿಂದ ಗರಿಷ್ಠ 6 ಕ್ವಿಂಟಾಲ್ ಮತ್ತು ಉದ್ದಿನಕಾಳು ಉತ್ಪನ್ನವನ್ನು ಪ್ರತಿ ಎಕರೆಗೆ 3 ಕ್ವಿಂಟಲ್‍ನಂತೆ ಪ್ರತಿ ರೈತರಿಂದ ಗರಿಷ್ಟ 6 ಕ್ವಿಂಟಲ್ ಖರೀದಿಸಲಾಗುವುದು.

ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 9 ರಿಂದ ಸಾಯಂಕಾಲ 6 ಗಂಟೆಯವರೆಗೆ ಮಾತ್ರ ಹೆಸರುಕಾಳು ಮತ್ತು ಉದ್ದಿನಕಾಳು ಉತ್ಪನ್ನಗಳನ್ನು ಖರೀದಿಸಲಾಗುವುದು. ಯಾವುದೇ ಸಂದರ್ಭದಲ್ಲಿ ರೈತರು ಮಧ್ಯವರ್ತಿಗಳ ಮೊರೆ ಹೋಗಬಾರದು. ಬೆಂಬಲ ಯೋಜನೆಯ ಉಪಯೋಗವನ್ನು ರೈತರೇ ನೇರವಾಗಿ ಪಡೆಯಬೇಕು. ಸಮಸ್ಯೆಗಳಿದ್ದಲ್ಲಿ ಧಾರವಾಡ, ಹುಬ್ಬಳ್ಳಿ, ಕುಂದಗೋಳ ಮತ್ತು ಅಣ್ಣಿಗೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳನ್ನು ಮತ್ತು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಹುಬ್ಬಳ್ಳಿ ಶಾಖೆಯ ಶಾಖಾ ವ್ಯವಸ್ಥಾಪಕ (0836-2374837) ರನ್ನು ಸಂಪರ್ಕಿಸಬೇಕು. ಧಾರವಾಡ ಜಿಲ್ಲೆಯ ರೈತರು ಬೆಂಬಲ ಯೋಜನೆಯ ಸದುಪಯೋಗಪಡಿಸಿಕೊಂಡು ಯೋಜನೆಯ ಯಶಸ್ಸಿಗೆ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here