ತಾಯಿ ಮತ್ತು ಶಿಶುಗಳ ಆರೈಕೆ ಕುರಿತು ಸ್ಯಾಟ್ ಕಾಮ್ ತರಬೇತಿ,

0
521

ಸಂಡೂರು:ನ:30:-ತಾಲೂಕಿನ ಸಂಡೂರು ಪಟ್ಟಣದ ಸಾಮರ್ಥ್ಯ ಸೌಧ ಕೇಂದ್ರದಲ್ಲಿ ದಿನಾಂಕ 29.11.2022 ರಿಂದ 03.12.2022 ರ ವರೆಗೆ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಇಲಾಖೆಯ ಈ-ಸಂಜೀವಿನಿ, ಟೆಲಿಮಡೆಸಿನ್, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ನೊಂದಣಿ ಸೇರಿದಂತೆ ಹಲವಾರು ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕಾಗಿ ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವ ತಾಲೂಕಿನ ಐದು ಪ್ರಾಥಮಿಕ ಅರೋಗ್ಯ ಕೇಂದ್ರಗಳ ಒಟ್ಟು 225 ಆಶಾ ಕಾರ್ಯಕರ್ತೆಯರನ್ನು 45 ರಂತೆ ವಿಂಗಡಿಸಿ ನೇರ ಸ್ಯಾಟಲೈಟ್ ಮೂಲಕ ತರಬೇತಿಯನ್ನು ನೀಡಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕುಶಾಲ್ ರಾಜ್ ತಿಳಿಸಿದರು,

ಸ್ಯಾಟಲೈಟ್ ತರಬೇತಿಯು ರಾಜ್ಯಾದ್ಯಂತ ಏಕಕಾಲದಲ್ಲಿ ನಡೆಯಲಿದ್ದು ಸ್ಥಳೀಯ ಆರೋಗ್ಯ ವ್ಯವಸ್ಥೆಗಳ ಬಗ್ಗೆ ನೇರ ಪ್ರಶ್ನೆಗಳನ್ನು ಕೇಳವ ಅವಕಾಶ ತರಬೇತಿಯಲ್ಲಿ ಇರಲಿದೆ, ಪ್ರತಿಯೊಂದು ಆರೋಗ್ಯ ಸೌಲಭ್ಯ ಹಳ್ಳಿಯ ಮಟ್ಟಕ್ಕೆ ತಲಿಪಿಸುವ ಪ್ರಯತ್ನ ಇದಾಗಿದೆ, ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ತಾಲೂಕಿನ ಬಿ.ಪಿ.ಎಮ್ ವಿನೋದ್ ಕುಮಾರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ವಿಜಯಲಕ್ಷ್ಮಿ, ಆಶಾ ಮೆಂಟರ್ ನೀಲಮ್ಮ, ಆಶಾ ಪೆಸಿಲಿಟೇಟರ್ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು

LEAVE A REPLY

Please enter your comment!
Please enter your name here