ಚಪ್ಪರದಹಳ್ಳಿ: ಗ್ರಾಮದ ಜನರ ರೋಗಕ್ಕೆ ತುತ್ತಾಗಲು ಭ್ರಷ್ಟ ಅಧಿಕಾರಿಗಳೇ ಕಾರಣ..?

0
484

ಕೊಟ್ಟೂರು: ತಾಲೂಕಿನ ಕೆ ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಪ್ಪರದಹಳ್ಳಿ ಗ್ರಾಮದಲ್ಲಿ ಸ್ವಚ್ಛತೆ ಎಂಬುವುದೇ ಮಾಯವಾಗಿದೆ.

ಇದರಿಂದ ಸಾರ್ವಜನಿಕರು ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗಬಾರದು ಇಲ್ಲಿನ ಸದಸ್ಯರಾಗಲಿ ಅಧಿಕಾರಿಗಳಾಗಲಿ ಕಾಳಜಿ ವಹಿಸುತ್ತಿಲ್ಲ ಎಂದು ಗ್ರಾಮಸ್ಧರು ಆರೋಪಿಸಿದ್ದಾರೆ.

ಚಪ್ಪರದಹಳ್ಳಿ ಗ್ರಾಮದ ಹಲವಾರು ಕಡೆ ಚರಂಡಿ ನೀರು ರಸ್ತೆ ಹರಿಯುತ್ತಿದ್ದು ಚರಂಡಿ ಸ್ವಚ್ಛತೆ ಮಾಡಿಸಿ ಎಂದು ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಪತ್ರಿಕೆಯಲ್ಲಿ ಬಂದಿದ್ದರು ಸಹ ನಿರ್ಲಕ್ಷ ಮಾಡುತ್ತಿದ್ದಾರೆ.

ಕ್ರಮ ಜರುಗಿಸುತ್ತಿಲ್ಲ ಎಂದು ಗ್ರಾಮಸ್ಧರಾದ ಮಂಜುನಾಥ್ ಮಲ್ಲಿಕಾರ್ಜುನ್, ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಚಪ್ಪರದಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷದಿಂದ ಗ್ರಾಮದಲ್ಲಿ ಸ್ಚಚ್ಛತೆ ಎಂಬುವುದೇ ಕಾಣುತ್ತಿಲ್ಲ. ಎತ್ತ ನೋಡಿದರೂ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ ಕೋಳಚೆ ನೀರು ನಿಂತು ಸೊಳ್ಳೆಗಳಿಗೆ ಆಹ್ವಾನ ನೀಡುತ್ತಿದ್ದು ಇಲ್ಲಿನ ಜನ ರೋಗ ಹರಡುವ ಭೀತಿಯಲ್ಲಿ ಕಾಲ ಕಳೆಯುದ್ದಾರೆ ಎಂದು ಇಲ್ಲಿನ ಜನ ಅಳಲನ್ನು ತೊರಿಕೊಂಡಿದ್ದಾರೆ.

ಮಳೆ ಬಂದು ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿವೆ. ಇದರಿಂದ ರಸ್ತೆಗಳು ಹದಗೆಟ್ಟು ಹೋಗಿವೆ. ಸ್ವಚ್ಛಗೊಳಿಸುವಂತೆ ಗ್ರಾ, ಪಂ, ಅಧ್ಯಕ್ಷರಿಗೆ ವಿಷಯ ತಿಳಿದರೂ ತಲೆಕೆಡಿಸಿಕೊಳ್ಳುತ್ತಿಲ್ಲ ಸಂಬಂದಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ಮಾಡುವದಾಗಿ, ಮಂಜುನಾಥ್, ಮಲ್ಲಿಕಾರ್ಜುನ್ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಚರಂಡಿ ಸ್ವಚ್ಛತೆ ಕಾರ್ಯ ಕೈಗೊಳ್ಳುತ್ತೇವೆ ಕೆಲವು ದಿನಗಳ ಕಾಲ ಆಗುತ್ತೆ ಗ್ರಾಮದ ನಿವಾಸಿಗಳು ಸ್ವಲ್ಪ ಸಹಕರಿಸಬೇಕು ಕೆಲವು ದಿನಗಳಲ್ಲಿ ಸ್ವಚ್ಛತೆ ಸರಿಪಡಿಸುವೆ ಎಂದು ಕೆ ಅಯ್ಯನಹಳ್ಳಿ
ಗ್ರಾಪಂ, ಪಿಡಿಓ, ದೇವೇಶ್ ಹೇಳಿದರು.

■ಸ್ವಚ್ಚತೆಗೆಂದು ಸರ್ಕಾರ ಎಷ್ಟೇ ಹಣ ಖರ್ಚು ಮಾಡಿದರೂ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತಹ ಅಧಿಕಾರಿಗಳು ಇಲ್ಲದಿದ್ದಾಗ ಎಲ್ಲವೂ ವ್ಯರ್ಥ.

-ಮಂಜುನಾಥ್, ಗ್ರಾಮಸ್ಥರು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here