ಶಿಕ್ಷಣ ಸಮಾಜದ ಬೆಳವಣಿಗೆಗೆ ಉಪಯುಕ್ತವಾಗಿರಲಿ: ರುದ್ರೇಶ್

0
24

ಬಳ್ಳಾರಿ,ಫೆ.22:ನಾವು ಕಲಿಯುವ ಶಿಕ್ಷಣವು ನಮಗೆ ಮಾತ್ರ ಸೀಮಿತವಾಗದೇ, ಸಮಾಜದ ಬೆಳವಣಿಗೆಗೆ ಉಪಯುಕ್ತವಾಗಬೇಕು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಕುಲಸಚಿವ ರುದ್ರೇಶ್.ಎಸ್.ಎನ್ ಅವರು ಅಭಿಪ್ರಾಯ ಪಟ್ಟರು.

ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ರಸಾಯನಶಾಸ್ತ್ರ ವಿಭಾಗ ಹಾಗೂ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ (ಯು.ಕೆ) ಮತ್ತು ಆರ್‍ಎಸ್‍ಎಲ್ ಡೆಕ್ಕನ್ ಸ್ಥಳೀಯ ವಿಭಾಗ, ಭಾರತ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ “ಸ್ಪೆಕ್ಟ್ರೋಸ್ಕೋಪಿ ಮತ್ತು ಅನ್ವಯಿಕೆಯ ಇತ್ತೀಚಿನ ಪ್ರವೃತ್ತಿಗಳು” ಕುರಿತು ಒಂದು ದಿನದ ವಿಶೇಷ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಒಂದು ವಿಷಯದ ಸಂಶೋಧನೆಯಲ್ಲಿ ನಿರತವಾಗಿರದೇ, ಬಹುಶೀಸ್ತಿಯ ಸಂಶೋಧನೆಗೆಳಿಗೆ ಒತ್ತು ನೀಡಬೇಕು. ಇದರಿಂದ ಸಮಾಜ, ಜನಾಂಗ ಹಾಗೂ ದೇಶದ ಬೆಳವಣಿಗೆಗೆ ಸಂಶೋಧನೆಗಳು ಪೂರಕವಾಗುತ್ತದೆ ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ ಮಾಡುವಲ್ಲಿ ನಿಯಮಿತವಾಗಿ ಉಪಯುಕ್ತ ಕಾರ್ಯಕ್ರಮಗಳನ್ನು ರಸಾಯನಶಾಸ್ತ್ರ ವಿಭಾಗವು ಆಯೋಜಿಸುತ್ತಿದೆ ಎಂದು ವಿಭಾಗದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ವಿವಿಯ ವಿತ್ತಾಧಿಕಾರಿಗಳಾದ ಪ್ರೊ.ಸದ್ಯೋಜಾತಪ್ಪ ಮಾತನಾಡಿ, ದೇಶವು ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ವಿಶ್ವದ ಗಮನ ಸೆಳೆಯುತ್ತಿದೆ. ಶಾಲಾ ಹಂತದಿಂದ ಮೌಲ್ಯಾಧಾರಿತ ಶಿಕ್ಷಣವನ್ನು ಮಕ್ಕಳಿಗೆ ಒದಗಿಸಿದಲ್ಲಿ ಮಾತ್ರ ಮುಂದೆ ಅವರು ಉನ್ನತ ವ್ಯಾಸಂಗ ಮಾಡುವಾಗ ಹೊಸ ಆವಿಷ್ಕಾರಗಳ ಬಗ್ಗೆ ಯೋಚಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ರಾಯಲ್ ಸೊಸೈಟಿ ಆಫ್ ಕಮಿಸ್ಟ್ರಿ (ಯು.ಕೆ) ಮತ್ತು ಸ್ಥಳೀಯ ವಿಭಾಗ ಡೆಕ್ಕನ್‍ನ ಉಪಾಧ್ಯಕ್ಷ ಡಾ.ಸಿ.ವಿ ಯಳಮಗ್ಗದ ಅವರು ಸಂಪಸ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಪ್ರಸುತ್ತ ದಿನಗಳಲ್ಲಿ ಮಾಲಿನ್ಯ, ಜಾಗತಿಕ ತಾಪಮಾನ ಮುಂತಾದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯುವ ವಿಜ್ಞಾನಿಗಳು ಸ್ಪೆಕ್ಟ್ರೋಸ್ಕೋಪಿ ಹಾಗೂ ಇದರ ಅನ್ವಯಿಕ ಮಾರ್ಗಗಳನ್ನು ಬಳಕೆ ಮಾಡಬೇಕು ಎಂದು ತಿಳಿಸಿದರು.
ರಾಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಕೆ.ಎಸ್.ಲೋಕೇಶ್ ಅವರು ಮಾತನಾಡಿ, ಸ್ಪೆಕ್ಟ್ರೋಸ್ಕೋಪಿ ಮತ್ತು ಅದರ ಅನ್ವಯಿಕಗಳ ಪ್ರಾಮುಖ್ಯತೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ವಿಚಾರ ಸಂಕಿರಣದ ಸಂಚಾಲಕರಾದ ಡಾ. ಅರುಣ ಕುಮಾರ ಲಗಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥರಾದ ಪ್ರೊ.ಕೆ.ಎಸ್.ಲೋಕೇಶ್ ವಂದಿಸಿದರು.
ಈ ವೇಳೆ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ (ಯು.ಕೆ) ಮತ್ತು ಸ್ಥಳೀಯ ವಿಭಾಗ ಡೆಕ್ಕನ್‍ನ ಕಾರ್ಯಕಾರಿ ಸದಸ್ಯರು, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here