ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಬಿ.ಸದಾಶಿವ ಪ್ರಭು ಸೂಚನೆ.

0
42

ಕೊಟ್ಟೂರು: ಗ್ರಾಮೀಣ ಭಾಗದ ಜನರಿಗೆ ಕೆಲಸ ನೀಡುವ ಉದ್ದೇಶದಿಂದ ದೇಶದಲ್ಲಿ ನರೇಗಾ ಯೋಜನೆ ಜಾರಿಯಾಗಿದ್ದು, ಜನರ ಬೇಡಿಕೆಗೆ ಅನುಗುಣವಾಗಿ ಸರಿಯಾದ ಸಮಯಕ್ಕೆ ಕೂಲಿಕಾರರಿಗೆ ಕೆಲಸ ಕೊಡಿಸಲು ಕಾಯಕ ಬಂಧುಗಳು ಕ್ರಮವಹಿಸಬೇಕು ಎಂದು ಜಿಲಗಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಸದಾಶಿವ ಪ್ರಭು ಅವರು ಸೂಚಿಸಿದರು.
ಕೊಟ್ಟೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹೋಬಳಿ‌ಮಟ್ಟದ ಒಂದು ದಿನದ‌ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಗೂಗಲ್ ಮೀಟ್ ಮೂಲಕ‌ ಮಾತನಾಡಿದರು.

ನರೇಗಾ ಯೋಜನೆಯಡಿ ಕೂಲಿಕಾರರಿಗೆ ಸರಿಯಾದ ಸಮಯಕ್ಕೆ ಕೆಲಸ ಕಡಿಸುವ ವ್ಯವಸ್ಥೆ ಮಾಡಬೇಕು. ಅದರ ಜೊತೆಗೆ ತಮ್ಮ ಗುಂಪಿನಲ್ಲಿರುವ ಕೂಲಿಕಾರರಿಗೆ ಸರಿಯಾದ ಸಮಯಕ್ಕೆ ಕೂಲಿ ಪಾವತಿಯಾಗಿದೆಯಾ, ಇಲ್ಲವಾ ಎಂಬುದನ್ನು ಗಮನಿಸುತ್ತಿರಬೇಕು. ಸರಿಯಾದ ಅಳತೆಗೆ ತಕ್ಕಂತೆ ತಮ್ಮ ಗುಂಪಿನ ಸದಸ್ಯರು ಕೆಲಸ ನಿರ್ವಹಿಸುತ್ತಿದ್ದರೆ ಪೂರ್ತಿ ಪ್ರಮಾಣದ ಕೂಲಿ ಪಾವತಿಯಾಗುತ್ತದೆ. ಒಂದು ವೇಳೆ ನಿಗದಿತ ಅಳತೆಗಿಂತ ಕಡಿಮೆ ಅಳತೆ ಕೆಲಸ ಮಾಡಿದ್ದಲ್ಲಿ ಕಡಿಮೆ ಕೂಲಿ ಪಾವತಿಯಾಗುತ್ತದೆ. ಇದನ್ನು ಎಲ್ಲ ಕಾಯಕ ಬಂಧುಗಳು ಕೂಲಿಕಾರರಿಗೆ ಮನವರಿಕೆ ಮಾಡಬೇಕು ಎಂದು ತಿಳಿಸಿದರು.
ಕೆಲಸದ ಬೇಡಿಕೆ ಸಲ್ಲಿಸಿದರೂ ಕೆಲಸಗಾರರಿಗೆ ಕೆಲಸದ ಬೇಡಿಕೆಯನ್ನು ಕೂಲಿಕಾರರಿಂದ ಪಡೆಯದಿರುವುದು, ಅಳತೆಯಲ್ಲಿ ಹಾಗೂ ಹಾಜರಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂದು ಸೂಚಿಸಿದರು.

ಒಂದು ದಿನದ ತರಬೇತಿಗೆ ಚಾಲನೆ‌ನೀಡಿದ ಬಳಿಕ ತಾಪಂ ಸಹಾಯಕ ನಿರ್ದೇಶಕರಾದ ಶ್ರೀ ವಿಜಯಕುಮಾರ್ ಅವರು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸ್ವರೂಪ, ಉದ್ದೇಶಗಳು ಮತ್ತು ಸಾಮಾನ್ಯ ಮಾಹಿತಿ ಕುರಿತು ಮಾತನಾಡಿದರು. ಮೇಟಿಗಳಿಗೆ ಪ್ರೋತ್ಸಾಹ ಧನ ಸೇರಿದಂತೆ ಇತರೆ ವಿಷಯಗಳ ಕುರಿತು ಮೇಟಿಗಳ ಪ್ರಶ್ನೆಗೆ ಉತ್ತರಿಸಿದರು.

ಸಾಮಾಜಿಕ ಲೆಕ್ಕ ಪರಿಶೋಧನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಸಕ್ರಪ್ಪ ಧರ್ಮರ್ ಅವರು ನರೇಗಾ ಸಾಮಾಜಿಕ ಲೆಕ್ಕ ಪರಿಶೋಧನೆ, ತಾಲೂಕು ತಾಂತ್ರಿಕ ಸಂಯೋಜಕರಾದ ಶ್ರೀಕಾಂತ್ ಡಿ.ಎಂ ಅವರು ಕಾಯಕ ಬಂಧುಗಳ ಜವಾಬ್ದಾರಿ, ಟಿಎಂಐಎಸ್ ಕೆ.ನೇತ್ರಾವತಿ ಅವರು ಎನ್ ಎಂಎಂಎಸ್ ಹಾಜರಾತಿಯ ಸಮಸ್ಯೆಗಳು, ತಾಲೂಕು ಐಇಸಿ ಸಂಯೋಜಕರಾದ ಪ್ರಭುಕುಮಾರ್ ಉಪ್ಪಾರ್ ಅವರು
ಮಹಿಳಾ ಭಾಗವಹಿಸುವಿಕೆ, ಸಮಾಜಿಕ ಜಾಲತಾಣಗಳ ಹಿಂಬಾಲಿಸುವಿಕೆ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು.
ತಾಂತ್ರಿಕ ಸಹಾಯಕರಾದ ವೈ.ಶ್ರೀಧರ್, ಚಂದ್ರಶೇಖರ ಸಣ್ಣಕ್ಕಿ, ರಾಕೇಶ್, ಡಿಇಒ ಮೋಹನ್, ಆಡಳಿತ ಸಹಾಯಕ ರಾಮಮೂರ್ತಿ, ಬಿಎಫ್ ಟಿ, ಗ್ರಾಪಂಗಳ ಗ್ರಾಮ ಕಾಯಕ ಮಿತ್ರರು, ತಾಲೂಕು ಪಂಚಾಯಿತಿ ಸಿಬ್ಬಂದಿ ಇದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here