ಬಳ್ಳಾರಿ ಮಹಾನಗರ ಪಾಲಿಕೆಗೆ ರಾಜ್ಯ ಮಟ್ಟದ ಪ್ರಶಸ್ತಿ ಗರಿ

0
9

ಬಳ್ಳಾರಿ, ಮಾ.08: ಡೇ ನಲ್ಮ್ ಯೋಜನೆಯಡಿ ಪಿಎಂ ಸ್ವನಿಧಿ (ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಯೋಜನೆ) ಹಾಗೂ ನಿರಾಶ್ರಿತರಿಗೆ ಆಶ್ರಯ ಕೇಂದ್ರದ ಸೌಲಭ್ಯ (Night Shelter) ಈ ಎರಡು ಯೋಜನೆಯಲ್ಲಿ ಅತ್ಯುತ್ತಮ ಗುರಿ ಸಾಧನೆಗೆ ಬಳ್ಳಾರಿ ಮಹಾನಗರ ಪಾಲಿಕೆಗೆ 2 ರಾಜ್ಯ ಪ್ರಶಸ್ತಿಗಳು ಲಭಿಸಿವೆ.

ರಾಜ್ಯ ಸರ್ಕಾರದ ಕೌಶಲ್ಯಾಭಿವೃದ್ದಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಡೇ ನಲ್ಮ್ ಯೋಜನೆಯಡಿ ಪಿಎಂ ಸ್ವನಿಧಿ ಬೀದಿ ಬದಿ ವ್ಯಾಪಾರಿಗಳಿಗೆ ನೀಡಲಾಗುವ ಸಾಲ ಯೋಜನೆಯಡಿ ಸಮರ್ಪಕ ಅನುಷ್ಠಾನದಲ್ಲಿ ಪ್ರಥಮ ಸ್ಥಾನ ಪಡೆದ ಬಳ್ಳಾರಿ ಮಹಾನಗರ ಪಾಲಿಕೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅದೇರೀತಿಯಾಗಿ ಡೇ ನಲ್ಮ್ ಯೋಜನೆಯಡಿ ನಿರಾಶ್ರಿತರ ಕೇಂದ್ರದ ಉತ್ತಮ ನಿರ್ವಹಣೆಗಾಗಿ ಬಳ್ಳಾರಿ ಮಹಾನಗರ ಪಾಲಿಕೆಗೆ ಇನ್ನೊಂದು ಪ್ರಶಸ್ತಿಯನ್ನು ನೀಡಲಾಯಿತು.

ಎರಡು ಪ್ರಶಸ್ತಿಗಳನ್ನು ಕೌಶಲ್ಯಾಭಿವೃದ್ದಿ ಇಲಾಖೆಯ ಅಪರ ಕಾರ್ಯದರ್ಶಿಗಳಾದ ಉಮಾ ಮಹಾದೇವನ್ ಮತ್ತು ನಲ್ಮ್ ಅಭಿಯಾನ ನಿರ್ದೇಶಕರಾದ ಶ್ರೀವಿದ್ಯಾ ಅವರು ವಿತರಿಸಿದರು.
ಬಳ್ಳಾರಿ ಮಹಾನಗರ ಪಾಲಿಕೆಯ ಯೋಜನಾ ನಿರ್ದೇಶಕ ದೇವರಾಜ ಅವರು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕೌಶ್ಯಲಾಭಿವೃದ್ದಿ ಕಚೇರಿಯ ಅಭಿಯಾನ ವ್ಯವಸ್ಥಾಪಕರಾದ ಸೌಮ್ಯ, ಪಾಲಿಕೆಯ ಸಿಬ್ಬಂದಿಗಳಾದ ಪುಷ್ಪಲತಾ ಮತ್ತು ಮಾಬುನಿ ಇವರು ಹಾಜರಿದ್ದರು.

LEAVE A REPLY

Please enter your comment!
Please enter your name here