ಅನಾಮದೇಯ ವ್ಯಕ್ತಿಯ ಶವ ಪತ್ತೆ: ಪ್ರಕರಣ ದಾಖಲು.

0
117

ಬಳ್ಳಾರಿ/ಹೊಸಪೇಟೆ,ಆ.17 : ಆ.15ರ ಬೆಳಗಿನ ಜಾವ 04ರಂದು ಟಿ.ಬಿ.ಡ್ಯಾಂ ರಸ್ತೆಯ ಸರ್ವೀಸ್ ಟಾರ್ ರಸ್ತೆಯಲ್ಲಿ ಅಪಘಾತವಾಗಿ ಗಾಯಗೊಂಡ ಅಪರಿಚಿತ ವ್ಯಕ್ತಿಯು ಚಿಕಿತ್ಸೆ ಫಲಕಾರಿಯಾಗದೇ ಹೊಸಪೇಟೆಯ ಸರ್ಕಾರಿ ಆಸ್ಪರ್ತೆಯಲ್ಲಿ ಮೃತಪಟ್ಟ ಪ್ರಕರಣ ದಾಖಲಾಗಿದೆ ಎಂದು ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೃತಪಟ್ಟ ಅನಾಮದೇಯ ವ್ಯಕ್ತಿಯ ಚಹರೆ: ಸುಮಾರು 25 ವರ್ಷ ವಯಸ್ಸು, 5.2 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ ತೆಳ್ಳನೆಯ ಮೈಕಟ್ಟು, ತಲೆಯಲ್ಲಿ 2 ಇಂಚು ಉದ್ದದ ಕಪ್ಪು ಕೂದಲಿದ್ದು, ಎಡ ಸೊಂಟದ ಪಕ್ಕದಲ್ಲಿ ಗಾಯದ ಗುರುತು ಇದ್ದು, ಹಸಿರು ಮತ್ತು ಬಿಳಿ ಬಣ್ಣದ ತುಂಬುತೋಳಿನ ಟೀ-ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟನ್ನು ಧರಿಸಿರುತ್ತಾನೆ.
ಈ ಮೇಲ್ಕಂಡ ಚಹರೆ ವ್ಯಕ್ತಿಯ ಅಥವಾ ಸಂಬಂಧಿಕರ ಕುರಿತು ಮಾಹಿತಿ ದೊರೆತಲ್ಲಿ
ದೂರವಾಣಿ ಸಂಖ್ಯೆ ಪೊಲೀಸ್ ಕಂಟ್ರೋಲ್ ರೂಂ, ಬಳ್ಳಾರಿ:08394-258100 ಪೊಲೀಸ್ ವರೀಷ್ಠಾಧಿಕಾರಿಗಳು, ಬಳ್ಳಾರಿ: 08394-258400 ಉಪ ಪೊಲೀಸ್ ವರೀಷ್ಠಾಧಿಕಾರಿಗಳು, ಹೊಸಪೇಟೆ: 08394-224204 ಸಂಚಾರಿ ಪೊಲೀಸ್ ಠಾಣೆ, ಹೊಸಪೇಟೆ: 08394-230255ಗೆ ಸಂಪರ್ಕಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here