Warning: Cannot modify header information - headers already sent by (output started at /home1/a360dlo1/public_html/haisandur.com/index.php:1) in /home1/a360dlo1/public_html/haisandur.com/wp-includes/feed-rss2.php on line 8
ಮೈಸೂರು Archives - Hai Sandur kannada fortnightly news paper https://haisandur.com/category/ಮೈಸೂರು/ Hai Sandur News.Karnataka India Tue, 29 Nov 2022 01:53:00 +0000 en-US hourly 1 https://haisandur.com/wp-content/uploads/2022/01/cropped-IMG_20211107_051359-32x32.jpg ಮೈಸೂರು Archives - Hai Sandur kannada fortnightly news paper https://haisandur.com/category/ಮೈಸೂರು/ 32 32 ಹನೂರು ತಾಲೂಕಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ಪತ್ರಕರ್ತರ ಸಂಘ https://haisandur.com/2022/11/29/%e0%b2%b9%e0%b2%a8%e0%b3%82%e0%b2%b0%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%a4%e0%b2%be%e0%b2%b2%e0%b3%82%e0%b2%95%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%a8/ https://haisandur.com/2022/11/29/%e0%b2%b9%e0%b2%a8%e0%b3%82%e0%b2%b0%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%a4%e0%b2%be%e0%b2%b2%e0%b3%82%e0%b2%95%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%a8/#respond Tue, 29 Nov 2022 01:51:15 +0000 https://haisandur.com/?p=30553 ವರದಿ:ಬಂಗಾರಪ್ಪ ಸಿ ಹನೂರು ಹನೂರು : ಇಂದಿನ ಪ್ರಪಂಚದಲ್ಲಿ ಡಿಜಿಟಲ್ ಮಾದ್ಯಮವು ಪ್ರಮುಖವಾತ್ರವಹಿಸುತ್ತದೆ ಅಲ್ಲದೆ ಸಮಾಜದ ಅಭಿವೃದ್ಧಿಯಲ್ಲಿ ಪತ್ರಿಕಾರಂಗ ಜನರಲ್ಲಿ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಇದು ಹೆಮ್ಮೆಯ ವಿಷಯ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ತಿಳಿಸಿದರು ಇದೇ ಭಾನುವಾರ 27.11.2022 ದಂದು ಹನೂರು ಪಟ್ಟಣದ ಬೆಟ್ಟಳ್ಳಿ ಮಾರಮ್ಮ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಬೆಳಗಾವಿ(ರಿ) ಹನೂರು ತಾಲ್ಲೂಕು ಘಟಕದ ಉದ್ಘಾಟನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಇದೇ ಸಮಯದಲ್ಲಿ ಮಾತನಾಡಿದ ಅವರು ಮಾಧ್ಯಮಗಳು ಸಮಾಜದಲ್ಲಿ […]

The post ಹನೂರು ತಾಲೂಕಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ಪತ್ರಕರ್ತರ ಸಂಘ appeared first on Hai Sandur kannada fortnightly news paper.

]]>
ವರದಿ:ಬಂಗಾರಪ್ಪ ಸಿ ಹನೂರು

ಹನೂರು : ಇಂದಿನ ಪ್ರಪಂಚದಲ್ಲಿ ಡಿಜಿಟಲ್ ಮಾದ್ಯಮವು ಪ್ರಮುಖವಾತ್ರವಹಿಸುತ್ತದೆ ಅಲ್ಲದೆ ಸಮಾಜದ ಅಭಿವೃದ್ಧಿಯಲ್ಲಿ ಪತ್ರಿಕಾರಂಗ ಜನರಲ್ಲಿ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಇದು ಹೆಮ್ಮೆಯ ವಿಷಯ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ತಿಳಿಸಿದರು

ಇದೇ ಭಾನುವಾರ 27.11.2022 ದಂದು ಹನೂರು ಪಟ್ಟಣದ ಬೆಟ್ಟಳ್ಳಿ ಮಾರಮ್ಮ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಬೆಳಗಾವಿ(ರಿ) ಹನೂರು ತಾಲ್ಲೂಕು ಘಟಕದ ಉದ್ಘಾಟನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಇದೇ ಸಮಯದಲ್ಲಿ ಮಾತನಾಡಿದ ಅವರು ಮಾಧ್ಯಮಗಳು ಸಮಾಜದಲ್ಲಿ ಜನರಿಗೆ ಮಾಹಿತಿ ನೀಡುವ ಮೂಲಕ ಅತ್ಯಂತ ಪ್ರಭಾವ ಶಾಲಿಯಾಗಿ ಜನರ ಮದ್ಯೆ ಇರುವುದರಿಂದ ಜನರ ಸಮಸ್ಯೆಗಳನ್ನು ನೇರವಾಗಿ ಬಗೆಹರಿಸಬಹುದು ಅಲ್ಲದೆ ಸಂವಿಧಾನದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜೊತೆ ಪತ್ರಿಕಾ ರಂಗವು ಸಹ ಮಹತ್ವವನ್ನು ಪಡೆದಿದೆ. ಇಲ್ಲಿನ ಕರ್ನಾಟಕ ಪತ್ರಕರ್ತರ ಸಂಘ ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ತಿಳಿಸಿದ್ದಾರೆ.

ಪತ್ರಕರ್ತರ ಸಂಘದ ಉದ್ಘಾಟನೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹದೇಶ್ವರಬೆಟ್ಟ ಶ್ರೀ ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಶ್ರೀಗಳು ಮಾತಾನಾಡಿ ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದತ್ತ ಪಾದರ್ಪಣೆ ಮಾಡಿರುವ ಕರ್ನಾಟಕ ಪತ್ರಕರ್ತರ ಸಂಘ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಪ್ರಪಥಮವಾಗಿ ಉದ್ಘಾಟನೆ ಆಗುತ್ತಿರುವುದು ನಮ್ಮೇಲರಿಗೂ ಸಂತಸಕರದ ವಿಷಯವಾಗಿದೆ ಸಂಘದ ದೇಯ್ಯೊದ್ದೇಶಗಳನ್ನು ಗಮನಿಸಿದರೆ ಈ ಸಂಘವು ಪ್ರತಿಕಾ ವಿತರಕರು
ಸೇರಿದಂತೆ ಪತ್ರಿಕಾ ವರಧಿಗಾರರಿಗೂ ವಿಮಾ ಸೌಲಭ್ಯ ಸೇರಿದಂತೆ ಇನ್ನಿತರ ಸವಲತ್ತುಗಳನ್ನು ಪ್ರತಿಯೊಬ್ಬ ಸದಸ್ಯನಿಗೂ ನೀಡಿ ಅವರ ಕುಟುಂಬಕ್ಕೆ ಸಾಕಷ್ಟು ಭದ್ರತೆ ಸೌಲಭ್ಯಗಳು ದೊರೆಯುತ್ತಿರುವುದು ಪತ್ರಿಕಾ ರಂಗದ ಬಳಗಕ್ಕೆ ಒಳ್ಳೆಯ ಬೆಳವಣಿಗೆ ಎಂದು ಆಭಿಪ್ರಾಯ ಪಟ್ಟರು.

ನಂತರ ಕಾರ್ಯಕ್ರಮವನ್ನದ್ದೇಶಿಸಿ ಮಾತನಾಡಿದ ಕರ್ನಾಟಕ ಪತ್ರಿಕೆ ಸಂಘದ ರಾಜ್ಯಾಧ್ಯಕ್ಷ ಶ್ರೀ ಮುರುಗೇಶ್ ಶಿವಪೂಜಿ ಅವರು ಕರ್ನಾಟಕ ಪತ್ರಕರ್ತರ ಸಂಘವು ದೆಹಲಿಯ ಇಂಡಿಯನ್ ಜನರ್ಲಿಸ್ಟ್ ಯೂನಿಯನ್ ಅಡಿಯಲ್ಲಿ ಸದಸ್ಯತ್ವವನ್ನು ಹೊಂದಿದ್ದು, ರಾಷ್ಟ್ರ ಮಟ್ಟದಲ್ಲಿ ಸಂಘ ಗುರುತಿಸಿಕೊಂಡಿದೆ ನಮ್ಮ ಸಂಘದಲ್ಲಿ ಸದಸ್ಯತ್ವವನ್ನು ತೆಗೆದುಕೊಂಡ ಸದಸ್ಯರುಗಳಿಗೆ ಅಂದರೆ ಪತ್ರಿಕ ವಿತರಕ ,ಪತ್ರಿಕ ಏಜೆಂಟ್ ,ಪತ್ರಿಕಾ ವರದಿಗಾರ ಹಾಗೂ ಪತ್ರಿಕ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೂ ಸಹ 4 ಲಕ್ಷ ರೂ ಅಪಘಾತ ವಿಮೆಯ ಸಮಾಜಿಕ ಭದ್ರತೆ ಸೌಲಭ್ಯವಿದೆ ಸುಮಾರು ಎಂಟು ಜನ ಟ್ರಸ್ಟಿಗಳು ಸೇರಿಕೊಂಡು ಒಂದು ನಿಧಿಯನ್ನು ಸ್ಥಾಪಿಸಿ ಸದಸ್ಯತ್ವ ಪಡೆದ ಸದಸ್ಯರುಗಳಿಗೆ ಆಕಸ್ಮಿಕ‌ ದುರಂತಗಳು ಸಂಭವಿಸಿದ್ದಲ್ಲಿ ನಿಧಿಯ ಹಣವನ್ನು ವಿನಿಯೋಗಿಸಲಾಗುತ್ತಿದೆ ಆಲ್ಲದೆ ಸಮಾಜದಲ್ಲಿ ಸಂಘಟನೆಗಳು ಎಷ್ಟು ಇದೆ ಎಂಬುದು ಮುಖ್ಯವಲ್ಲ ಸಂಘಟನೆಗಳಿಂದ ಸದಸ್ಯರಿಗೆ ಏನು ಭದ್ರತೆ ಸೌಲಭ್ಯ ದೊರೆಯುತ್ತದೆ ಎಂಬುದೇ ಮುಖ್ಯ ಎಂದು ತಿಳಿಸಿದರು

ಇದೆ ವೇಳೆ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರಾಜಕೀಯ‌ ಕ್ಷೇತ್ರದಲ್ಲಿ ಮರಗದಮಣಿ, ಸಮಾಜಸೇವೆ ಅಡಿಯಲ್ಲಿ ಕೃಷ್ಣೇಗೌಡ
ಪಿ ಎಚ್ ಡಿ ಪದವೀಧರ ಡಾ‌.ಚಂದ್ರಪ್ಪ ಪರಿಸರ ಪ್ರೇಮಿ ವಕೀಲ ವೆಂಕಟೇಶ್ , ನರ್ಗಿಸ್ ಆಲಿಖಾನ್ ಸೇರಿದಂತೆ ಸ್ವಸಹಾಯ ಸಂಘದ ಮಹಿಳೆಯರಿಗೆ ಸನ್ಮಾನಿಸಿದ ಗೌರವಿಸಲಾಯಿತು.

ಇತ್ತೀಚಿಗೆ ಜಿಲ್ಲಾ ಹಿರಿಯ ಪತ್ರಕರ್ತ ರಹಮಾನ್ ನಿಧನದ ಹಿನ್ನೆಲೆ ಒಂದು ನಿಮಿಷಗಳ ಕಾಲ ಮೌನಚರಣೆ ನಡೆಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಸಾಲೂರುಶ್ರೀಗಳು ಜೆಡಿಎಸ್ ರಾಜ್ಯ ಉಪಾದ್ಯಕ್ಷ ಮಂಜುನಾಥ್ ಕಚೇರಿ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಚಂದ್ರಮ್ಮ ಉಪಾಧ್ಯಕ್ಷ ಗಿರೀಶ್ ಸದಸ್ಯರಾದ ಹರೀಶ್,ಮಹೇಶ್ ,
ಮಹೇಶ್ ನಾಯ್ಕ್ ,ಮುಮ್ತಾಜ್ ಭಾನು, ಡಿವೈಎಸ್ಪಿ ಮಹಾನಂದ್ ಪೊಲೀಸ್ ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜಾವಾದ್ ಅಹಮದ್ , ಮುಖಂಡರಾದ ಕೊಪ್ಪಾಳಿಮಹದೇವ್, ಮಂಗಲ ಪುಟ್ಟರಾಜು ಪ್ರಜಾಕೀಯ ಮುಖಂಡ ನಾಗರಾಜ್ , ಪಕ್ಷೇತರ ಆಭ್ಯರ್ಥಿ ಮುಜಾಮೀಲ್ ಪಾಷಾ, ರೈತ ಸಂಘದ ಅಧ್ಯಕ್ಷರಾದ
ಗೌಡೇಗೌಡ, ಚಂಗಡಿ ಕರಿಯಪ್ಪ ಹಿರಿಯ ಪತ್ರಕರ್ತರಾದ ವೆಂಕಟೇಗೌಡ ರೂಪೇಶ್ ಕುಮಾರ್,ಪತ್ರಿಕಾ ಸಂಪಾದಕರಾದ
ನಾಗೇಶ್ ,ಆಂತಾರ್ಯ ಸಂಪಾದಕ ಮಹಾದೇವಯ್ಯ ವರದಿಗಾರರಾದ ರವಿ ಹಂಚ್ಯಾ, ಪತ್ರಿಕಾ ಸಂಪಾದಕ
ಹೆಚ್ಎಂ ಕೀರ್ತಿಕೇಶ್ವರ್ ,
ಆಮ್ ಆದ್ಮೀ ಪಕ್ಷದ ಮುಖಂಡ ನಾಗೇಂದ್ರ ,ಪ್ರಸನ್ನ ಕುಮಾರ್ ತೆಳ್ಳನ್ನೂರು, ಸೇರಿದಂತೆ ಇನ್ನಿತರರು ಹಾಜರಿದ್ದರು

The post ಹನೂರು ತಾಲೂಕಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ಪತ್ರಕರ್ತರ ಸಂಘ appeared first on Hai Sandur kannada fortnightly news paper.

]]>
https://haisandur.com/2022/11/29/%e0%b2%b9%e0%b2%a8%e0%b3%82%e0%b2%b0%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%a4%e0%b2%be%e0%b2%b2%e0%b3%82%e0%b2%95%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%a8/feed/ 0
ತಲಕಾಡು ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಶ್ರೀ ಪುಟ್ಟಸ್ವಾಮಿ ಇನ್ನಿಲ್ಲ..!! https://haisandur.com/2022/02/07/%e0%b2%a4%e0%b2%b2%e0%b2%95%e0%b2%be%e0%b2%a1%e0%b3%81-%e0%b2%ac%e0%b2%be%e0%b2%b2%e0%b2%95%e0%b2%bf%e0%b2%af%e0%b2%b0-%e0%b2%aa%e0%b3%8d%e0%b2%b0%e0%b3%8c%e0%b2%a2%e0%b2%b6%e0%b2%be%e0%b2%b2%e0%b3%86/ https://haisandur.com/2022/02/07/%e0%b2%a4%e0%b2%b2%e0%b2%95%e0%b2%be%e0%b2%a1%e0%b3%81-%e0%b2%ac%e0%b2%be%e0%b2%b2%e0%b2%95%e0%b2%bf%e0%b2%af%e0%b2%b0-%e0%b2%aa%e0%b3%8d%e0%b2%b0%e0%b3%8c%e0%b2%a2%e0%b2%b6%e0%b2%be%e0%b2%b2%e0%b3%86/#respond Mon, 07 Feb 2022 02:32:43 +0000 https://haisandur.com/?p=24717 ಮೈಸೂರು:ಪೆ:07:-ಶ್ರೀಯುತ ಪುಟ್ಟಸ್ವಾಮಿ ಗುರುಗಳು ಲೋಕವನ್ನು ತ್ಯಜಿಸಿದ್ದಾರೆ ಶ್ರೀಯುತರು ಮೈಸೂರು ಜಿಲ್ಲೆಯಟಿ.ನರಸೀಪುರ ತಾಲೂಕಿನ ತಲಕಾಡು ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಫೆಬ್ರವರಿ 6ರಂದು ಸಾವನ್ನಪ್ಪಿದ್ದಾರೆ ಇವರ ಸೇವೆ ಅವಿಸ್ಮರಣೀಯ ಬಾಲಕಿಯರ ಪ್ರೌಢಶಾಲೆಗೆ ಸ್ವಂತವಾಗಿ ಒಂದು ಕೊಠಡಿಯನ್ನು ಕಟ್ಟಿಸಿ ಕೊಟ್ಟಿದ್ದಾರೆ ಪ್ರತಿ ವರ್ಷ ಹೊಸದಾಗಿ ಸೇರುವ ಮಕ್ಕಳಿಗೆ ಎರಡು ಜೊತೆ ಶಾಲೆಯ ಸಮವಸ್ತ್ರವನ್ನು ತಮ್ಮ ಸ್ವಂತ ಹಣದಿಂದ ನೀಡುತ್ತಿದ್ದರು ಯಾವುದೇ ರಾಷ್ಟ್ರೀಯ ಹಬ್ಬಗಳು ಬಂದರೆ ತಮ್ಮ ಸ್ವಂತ ಖರ್ಚಿನಿಂದ ಲಾಡು-ಮೈಸೂರ್ ಪಾಕ್ ಮಕ್ಕಳಿಗೆ ಇಷ್ಟವಾದ […]

The post ತಲಕಾಡು ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಶ್ರೀ ಪುಟ್ಟಸ್ವಾಮಿ ಇನ್ನಿಲ್ಲ..!! appeared first on Hai Sandur kannada fortnightly news paper.

]]>
ಮೈಸೂರು:ಪೆ:07:-ಶ್ರೀಯುತ ಪುಟ್ಟಸ್ವಾಮಿ ಗುರುಗಳು ಲೋಕವನ್ನು ತ್ಯಜಿಸಿದ್ದಾರೆ ಶ್ರೀಯುತರು ಮೈಸೂರು ಜಿಲ್ಲೆಯ
ಟಿ.ನರಸೀಪುರ ತಾಲೂಕಿನ ತಲಕಾಡು ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದರು.

ಫೆಬ್ರವರಿ 6ರಂದು ಸಾವನ್ನಪ್ಪಿದ್ದಾರೆ ಇವರ ಸೇವೆ ಅವಿಸ್ಮರಣೀಯ ಬಾಲಕಿಯರ ಪ್ರೌಢಶಾಲೆಗೆ ಸ್ವಂತವಾಗಿ ಒಂದು ಕೊಠಡಿಯನ್ನು ಕಟ್ಟಿಸಿ ಕೊಟ್ಟಿದ್ದಾರೆ ಪ್ರತಿ ವರ್ಷ ಹೊಸದಾಗಿ ಸೇರುವ ಮಕ್ಕಳಿಗೆ ಎರಡು ಜೊತೆ ಶಾಲೆಯ ಸಮವಸ್ತ್ರವನ್ನು ತಮ್ಮ ಸ್ವಂತ ಹಣದಿಂದ ನೀಡುತ್ತಿದ್ದರು ಯಾವುದೇ ರಾಷ್ಟ್ರೀಯ ಹಬ್ಬಗಳು ಬಂದರೆ ತಮ್ಮ ಸ್ವಂತ ಖರ್ಚಿನಿಂದ ಲಾಡು-ಮೈಸೂರ್ ಪಾಕ್ ಮಕ್ಕಳಿಗೆ ಇಷ್ಟವಾದ ಅಡಿಗೆಯನ್ನು ಮಾಡಿಸಿ ಮಕ್ಕಳನ್ನು ದೇವರು ತರಹ ಕಾಣುತ್ತಿದ್ದರು

ಟಿ.ಎಸ್ ಸುಬ್ಬಣ್ಣ ಸಾರ್ವಜನಿಕ ಪ್ರೌಢಶಾಲೆಯಲ್ಲಿ ಎಲ್ಲಾ ಶಿಕ್ಷಕರನ್ನು ಗೌರವದಿಂದ ಕಾಣುತ್ತಿದ್ದರು ಸಂಸ್ಥೆಗೆ ತನ್ನದೇ ಆದಂತಹ ಕೊಡುಗೆಯನ್ನು ಕೊಟ್ಟಿದ್ದಾರೆ ಇಂಥ ಶಿಕ್ಷಕರನ್ನು ಕಳೆದುಕೊಂಡು ಮಕ್ಕಳ ಅ ರೋದನೆ ಮುಗಿಲಮುಟ್ಟಿತ್ತು ದೇವರು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಎಲ್ಲಾ ಶಿಕ್ಷಕರು ಸಾಂತ್ವನ ಹೇಳಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ಶಿಕ್ಷಣ ಕ್ಷೇತ್ರದಲ್ಲಿ ಇವರು ಧ್ರುವತಾರೆ ಇದ್ದಂತೆ

ವರದಿ:-
ನಂದೀಶ್ ನಾಯಕ
ಹಾಯ್ ಸಂಡೂರ್, ಪತ್ರಿಕೆ

The post ತಲಕಾಡು ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಶ್ರೀ ಪುಟ್ಟಸ್ವಾಮಿ ಇನ್ನಿಲ್ಲ..!! appeared first on Hai Sandur kannada fortnightly news paper.

]]>
https://haisandur.com/2022/02/07/%e0%b2%a4%e0%b2%b2%e0%b2%95%e0%b2%be%e0%b2%a1%e0%b3%81-%e0%b2%ac%e0%b2%be%e0%b2%b2%e0%b2%95%e0%b2%bf%e0%b2%af%e0%b2%b0-%e0%b2%aa%e0%b3%8d%e0%b2%b0%e0%b3%8c%e0%b2%a2%e0%b2%b6%e0%b2%be%e0%b2%b2%e0%b3%86/feed/ 0
ಎಸ್ ಎಸ್ ಎಲ್ ಸಿ 625 ಕ್ಕೆ 623 ಅಂಕ ಪಡೆದ ಸೇಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಶೃಂಗ https://haisandur.com/2021/08/14/%e0%b2%8e%e0%b2%b8%e0%b3%8d-%e0%b2%8e%e0%b2%b8%e0%b3%8d-%e0%b2%8e%e0%b2%b2%e0%b3%8d-%e0%b2%b8%e0%b2%bf-625-%e0%b2%95%e0%b3%8d%e0%b2%95%e0%b3%86-623-%e0%b2%85%e0%b2%82%e0%b2%95-%e0%b2%aa%e0%b2%a1/ https://haisandur.com/2021/08/14/%e0%b2%8e%e0%b2%b8%e0%b3%8d-%e0%b2%8e%e0%b2%b8%e0%b3%8d-%e0%b2%8e%e0%b2%b2%e0%b3%8d-%e0%b2%b8%e0%b2%bf-625-%e0%b2%95%e0%b3%8d%e0%b2%95%e0%b3%86-623-%e0%b2%85%e0%b2%82%e0%b2%95-%e0%b2%aa%e0%b2%a1/#respond Sat, 14 Aug 2021 09:28:03 +0000 https://haisandur.com/?p=18950 ಟಿ.ನರಸೀಪುರ: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಅಂಕಗಳಿಗೆ 623 ಅಂಕಗಳನ್ನು ಪಡೆದ ಶೃಂಗ ಎಂಬ ವಿದ್ಯಾರ್ಥಿನಿ ತಾಲ್ಲೂಕಿಗೆ ಕೀರ್ತಿ ತಂದಿದ್ದು ಮುಂದೆ ವೈದ್ಯೆಯಾಗಬೇಕೆಂಬ ಗುರಿ ಹೊಂದಿರುವುದಾಗಿ ತಿಳಿಸಿದ್ದಾಳೆ. ಪಟ್ಟಣದ ತ್ರಿವೇಣಿ ನಗರದಲ್ಲಿ ವಾಸವಾಗಿರುವ ಇವರ ತಂದೆ ಸೋಸಲೆ ನಾಗೇಶ್ ವೃತ್ತಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ತಮ್ಮ ಮಗಳ ಸಾಧನೆಗೆ ಆಕೆ ತಾಯಿಯ ಪಾತ್ರ ಮಹತ್ತರವಾಗಿದೆ ಎಂದಿದ್ದಾರೆ.ಸೇಂಟ್ ಮೇರಿಸ್ ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರೆತ ಕಾರಣ ಹಾಗೂ ಹೆಚ್ಚಿನ ಸಮಯವನ್ನು ಒದುವುದಕ್ಕೆ ಮೀಸಲಿಟ್ಟಿದ್ದರಿಂದ ಈ ಸಾಧನೆಗೈಯಲು ಸಾಧ್ಯವಾಗಿದೆ ಎಂದರು.ಮಗಳ ಇಚ್ಚೆಯಂತೆ […]

The post ಎಸ್ ಎಸ್ ಎಲ್ ಸಿ 625 ಕ್ಕೆ 623 ಅಂಕ ಪಡೆದ ಸೇಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಶೃಂಗ appeared first on Hai Sandur kannada fortnightly news paper.

]]>
ಟಿ.ನರಸೀಪುರ: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಅಂಕಗಳಿಗೆ 623 ಅಂಕಗಳನ್ನು ಪಡೆದ ಶೃಂಗ ಎಂಬ ವಿದ್ಯಾರ್ಥಿನಿ ತಾಲ್ಲೂಕಿಗೆ ಕೀರ್ತಿ ತಂದಿದ್ದು ಮುಂದೆ ವೈದ್ಯೆಯಾಗಬೇಕೆಂಬ ಗುರಿ ಹೊಂದಿರುವುದಾಗಿ ತಿಳಿಸಿದ್ದಾಳೆ.

ಪಟ್ಟಣದ ತ್ರಿವೇಣಿ ನಗರದಲ್ಲಿ ವಾಸವಾಗಿರುವ ಇವರ ತಂದೆ ಸೋಸಲೆ ನಾಗೇಶ್ ವೃತ್ತಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ತಮ್ಮ ಮಗಳ ಸಾಧನೆಗೆ ಆಕೆ ತಾಯಿಯ ಪಾತ್ರ ಮಹತ್ತರವಾಗಿದೆ ಎಂದಿದ್ದಾರೆ.ಸೇಂಟ್ ಮೇರಿಸ್ ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರೆತ ಕಾರಣ ಹಾಗೂ ಹೆಚ್ಚಿನ ಸಮಯವನ್ನು ಒದುವುದಕ್ಕೆ ಮೀಸಲಿಟ್ಟಿದ್ದರಿಂದ ಈ ಸಾಧನೆಗೈಯಲು ಸಾಧ್ಯವಾಗಿದೆ ಎಂದರು.ಮಗಳ ಇಚ್ಚೆಯಂತೆ ಪಿಸಿಎಂಬಿ ಸೇರಿಸುತ್ತಿದ್ದು ಮುಂದೆ ವೈದ್ಯಳಾಗುವ ಅವಳ ಬಯಕೆಗೆ ಪ್ರೋತ್ಸಾಹಿಸುವುದೊಂದೆ ನಮ್ಮ ಕೆಲಸ ಎಂದರು.

ಎಂ. ನಾಗೇಂದ್ರ ಕುಮಾರ್ ವರದಿಗಾರರು‌

The post ಎಸ್ ಎಸ್ ಎಲ್ ಸಿ 625 ಕ್ಕೆ 623 ಅಂಕ ಪಡೆದ ಸೇಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಶೃಂಗ appeared first on Hai Sandur kannada fortnightly news paper.

]]>
https://haisandur.com/2021/08/14/%e0%b2%8e%e0%b2%b8%e0%b3%8d-%e0%b2%8e%e0%b2%b8%e0%b3%8d-%e0%b2%8e%e0%b2%b2%e0%b3%8d-%e0%b2%b8%e0%b2%bf-625-%e0%b2%95%e0%b3%8d%e0%b2%95%e0%b3%86-623-%e0%b2%85%e0%b2%82%e0%b2%95-%e0%b2%aa%e0%b2%a1/feed/ 0
ಮೈಸೂರು ಜಿಲ್ಲೆಯಲ್ಲೇ ಕೋವಿಡ್ ಮುಕ್ತ ತಾಲ್ಲೂಕಾಗಲಿರುವ ಟಿ. ನರಸೀಪುರ. https://haisandur.com/2021/08/14/%e0%b2%ae%e0%b3%88%e0%b2%b8%e0%b3%82%e0%b2%b0%e0%b3%81-%e0%b2%9c%e0%b2%bf%e0%b2%b2%e0%b3%8d%e0%b2%b2%e0%b3%86%e0%b2%af%e0%b2%b2%e0%b3%8d%e0%b2%b2%e0%b3%87-%e0%b2%95%e0%b3%8b%e0%b2%b5%e0%b2%bf%e0%b2%a1/ https://haisandur.com/2021/08/14/%e0%b2%ae%e0%b3%88%e0%b2%b8%e0%b3%82%e0%b2%b0%e0%b3%81-%e0%b2%9c%e0%b2%bf%e0%b2%b2%e0%b3%8d%e0%b2%b2%e0%b3%86%e0%b2%af%e0%b2%b2%e0%b3%8d%e0%b2%b2%e0%b3%87-%e0%b2%95%e0%b3%8b%e0%b2%b5%e0%b2%bf%e0%b2%a1/#respond Sat, 14 Aug 2021 09:20:51 +0000 https://haisandur.com/?p=18944 ಟಿ.ನರಸೀಪುರ: ಕಳೆದ ೧೫ ದಿನಗಳಿಂದ ಟಿ. ನರಸೀಪುರ ತಾಲ್ಲೂಕಿನಲ್ಲಿ ಒಂದಂಕೆಯ ಸೋಂಕಿತರು ಮಾತ್ರ ಕಂಡು ಬರುತ್ತಿದ್ದು ಕೇವಲ ೭ ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ತಾಲ್ಲೂಕು ಕೋವಿಡ್ ಮುಕ್ತವಾಗಲಿದೆ ಎಂದು ತಾಲ್ಲೂಕು ವೈಧ್ಯಾಧಿಕಾರಿ ಡಾ.ರವಿಕುಮಾರ್ ತಿಳಿಸಿದರು. ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಸೋಂಕಿತರನ್ನೊಳಗೊಂಡ ತಾಲ್ಲೂಕಾಗಿದ್ದ ಟಿ. ನರಸೀಪುರ ಸೋಂಕಿತರ ಮಟ್ಟ ೧೪%ಗೆ ಏರಿತ್ತು. ಕಠಿಣ ಬಿಗಿ ಭದ್ರತೆ, ಕೋವಿಡ್ ಪರೀಕ್ಷೆ, ಐಸೋಲೇಶನ್ ಮತ್ತು ತಾಲ್ಲೂಕಿನ ಜನತೆ ಸಹಕಾರದಿಂದ ಹಂತ ಹಂತವಾಗಿ ಸೋಂಕನ್ನು ಇಳಿಮುಖಗೊಳಿಸಲು ಕಾರಣವಾಯಿತು. ಮೈಸೂರು […]

The post ಮೈಸೂರು ಜಿಲ್ಲೆಯಲ್ಲೇ ಕೋವಿಡ್ ಮುಕ್ತ ತಾಲ್ಲೂಕಾಗಲಿರುವ ಟಿ. ನರಸೀಪುರ. appeared first on Hai Sandur kannada fortnightly news paper.

]]>
ಟಿ.ನರಸೀಪುರ: ಕಳೆದ ೧೫ ದಿನಗಳಿಂದ ಟಿ. ನರಸೀಪುರ ತಾಲ್ಲೂಕಿನಲ್ಲಿ ಒಂದಂಕೆಯ ಸೋಂಕಿತರು ಮಾತ್ರ ಕಂಡು ಬರುತ್ತಿದ್ದು ಕೇವಲ ೭ ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ತಾಲ್ಲೂಕು ಕೋವಿಡ್ ಮುಕ್ತವಾಗಲಿದೆ ಎಂದು ತಾಲ್ಲೂಕು ವೈಧ್ಯಾಧಿಕಾರಿ ಡಾ.ರವಿಕುಮಾರ್ ತಿಳಿಸಿದರು.

ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಸೋಂಕಿತರನ್ನೊಳಗೊಂಡ ತಾಲ್ಲೂಕಾಗಿದ್ದ ಟಿ. ನರಸೀಪುರ ಸೋಂಕಿತರ ಮಟ್ಟ ೧೪%ಗೆ ಏರಿತ್ತು. ಕಠಿಣ ಬಿಗಿ ಭದ್ರತೆ, ಕೋವಿಡ್ ಪರೀಕ್ಷೆ, ಐಸೋಲೇಶನ್ ಮತ್ತು ತಾಲ್ಲೂಕಿನ ಜನತೆ ಸಹಕಾರದಿಂದ ಹಂತ ಹಂತವಾಗಿ ಸೋಂಕನ್ನು ಇಳಿಮುಖಗೊಳಿಸಲು ಕಾರಣವಾಯಿತು.

ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಸೋಂಕಿತರನ್ನೊಳಗೊಂಡ ತಾಲ್ಲೂಕೆಂದರೆ ಟಿ. ನರಸೀಪುರ. ಸೋಂಕಿತರ ಮಟ್ಟ ೧೪%ಗೆ ಏರಿತ್ತು. ಕಠಿಣ ಬಿಗಿ ಭದ್ರತೆ, ಕೋವಿಡ್ ಪರೀಕ್ಷೆ, ಐಸೋಲೇಶನ್ ಮತ್ತು ತಾಲ್ಲೂಕಿನ ಜನ ಸಂಖ್ಯೆ ಹಂತ ಹಂತವಾಗಿ ಸೋಂಕನ್ನು ಇಳಿಮುಖಗೊಳಿಸಲು ಕಾರಣವಾಯಿತು.

ಹೆಚ್ಚು ಪ್ರಕರಣ ಹೊಂದಿದ ತಾಲ್ಲೂಕುಗಳ ಪಟ್ಟಿಯಲ್ಲಿ ಟಿ. ನರಸೀಪುರ ಅಗ್ರ ಸ್ಥಾನದಲ್ಲಿತ್ತು. ಒಟ್ಟಾರೆ ೮,೪೪೦ ಸೋಂಕಿತರು ದಾಖಲಾಗಿ, ೮,೩೨೮ ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಆರೋಗ್ಯವಾಗಿ ಮನೆಗೆ ಹಿಂದಿರುಗಿದ್ದು, ಈ ವರೆಗೆ ಒಟ್ಟು ೧೦೫ ಮಂದಿ ಸೋಂಕಿತರು ಮೃತ ಪಟ್ಟಿದ್ದಾರೆ.

ತಾಲ್ಲೂಕಿನ್ನು ಸೋಂಕಿನ ಸಂಖ್ಯೆ ಭಾರೀ ಇಳಿಮುಖ ಕಂಡಿದ್ದು ಇದು ಅತ್ಯಂತ ಸಂತೋಷದ ವಿಷಯವಾಗಿದೆ. ಆಗಸ್ಟ್ ೧೧ ರಿಂದೀಚೆಗೆ ಕೇವಲ ೦೭ ಪ್ರಕರಣ ಪ್ರಚಲಿತದಲ್ಲಿದೆ. ತಾಲ್ಲೂಕಿನಲ್ಲಿ ಈವರೆಗೆ ೭೬% ಮಂದಿ ಮೊದಲ ಹಂತದ ವ್ಯಾಕ್ಸಿನ್ ಪಡೆದಿದ್ದು, ಅದರಲ್ಲಿ ೫೮%ನಷ್ಟು ಎರಡೂ ಡೋಸ್‌ಗಳ ಲಸಿಕೆಗಳನ್ನು ಪಡೆದಿದ್ದಾರೆಂದು ತಿಳಿಸಿದರು.

ವ್ಯಾಕ್ಸಿನೇಷನ್‌, ಯುಮ್ಯನಿಟಿ ಹಾಗೂ ಪ್ರಕೃತಿ ಈ ಕಾರಣಗಳಿಂದ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರಬಹುದು.ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ಮಾತ್ರ ಮರೆಯಬಾರದು.ಮಾಸ್ಕ್ ಯಾವಾಗಲೂ ಮೂಗಿನ ಮೇಲಿರಬೇಕು.ಕಾಟಾಚಾರಕ್ಕೆ ಧರಿಸಿದರೆ ತೊಂದರೆ ಅನುಭವಿಸುವವರು ನೀವೇ. ಅಂತರ ಕಾಪಾಡುವುದು ಜನರಿಗೆ ಅಸಾಧ್ಯದ ಕೆಲಸವೆಂದುಕೊಂಡಿದ್ದಾರೆ.ಮನಸ್ಸು ಮಾಡಬೇಕಷ್ಟೆ.ಇದನ್ನು ಪಾಲಿಸಿದರೆ ಖಂಡಿತವಾಗಿಯೂ ಸೋಂಕಿನಿಂದ ರಕ್ಷಣೆ ಪಡೆಯಬಹುದು.ಕುಟುಂಬ ಸದಸ್ಯರನ್ನು ಹೊರತುಪಡಿಸಿ ಅನ್ಯರೊಂದಿಗೆ ಐದು ನಿಮಿಷಕ್ಕಿಂತ ಹೆಚ್ಚು ಮಾತನಾಡುತ್ತಾ ಕಾಲಕಳೆಯಬಾರದು.ಅವಶ್ಯವಿರುವಾಗ ಅಂತರ ಕಾಪಾಡಿಕೊಂಡು ಮಾತನಾಡುವುದನ್ನು ಮರೆಯಬಾರದೆಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.

ಟಿ.ನರಸೀಪುರ:-ವೀರಾಂಜನೇಯ ಸ್ವಾಮಿ ಸಕಲರಿಗೂ ಸನ್ಮಂಗಳನ್ನುಂಟು ಮಾಡಲೆಂದು ವಸತಿ ಜಾಗೃತಿ ಸಮಿತಿ ಸದಸ್ಯ ಸುನಿಲ್ ಬೋಸ್ ತಿಳಿಸಿದರು.

ತಾಲ್ಲೂಕಿನ ತಲಕಾಡು ಗ್ರಾಮದ ಒಡೆಯಾಂದನಹಳ್ಳಿ ಎಂಟನೇ ವಾರ್ಡಿನ ಕನಕನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ವಸತಿ ಜಾಗೃತಿ ಸಮಿತಿ ಸದಸ್ಯ ದೇವಸ್ಥಾನದ ಅರ್ಚಕರಿಂದ ಆಶೀರ್ವಾದ ಪಡೆದರು.

ಅರ್ಚಕ ಸುಬ್ಬಶೆಟ್ಟಿ ರವರಿಂದ ಪೂಜಾ ವಿಧಿ,ವಿಧಾನಗಳಿಗೆ ಚಾಲನೆ ನೀಡಿ,ಬೆಳಗಿನ ಜಾವಾ 5-30 ರಿಂದ 6-30 ರ ಶುಭ ಘಳಿಗೆಯಲ್ಲಿ ದೇವರ ಪ್ರತಿಷ್ಟಾಪನೆ ಮಾಡಲಾಯಿತು ‌.

ಈ ಸಂದರ್ಭದಲ್ಲಿ ಯುವ ಮುಖಂಡ ಸುನಿಲ್ ಬೋಸ್,ಜಿ.ಪಂ.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಚ್.ಮಂಜುನಾಥ್, ಗ್ರಾ.ಪಂ.ಅಧ್ಯಕ್ಷ ಕೆಂಪಯ್ಯ,ಸದಸ್ಯರುಗಳಾದ ನಾಗರಾಜಮೂರ್ತಿ, ಚಿಕ್ಕಮಾದನಾಯಕ,ನರಸಿಂಹ ಮಾದನಾಯಕ ರವರುಗಳನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಂತರಾಜು, ರವೀಶ್, ಸುರೇಶ್, ಸುನಿಲ್, ರವಿ, ಸೋಮಣ್ಣ ರಂಗಸ್ವಾಮಿ ಸೇರಿದಂತೆ ಮತ್ತಿತರರಿದ್ದರು.

ಎಂ. ನಾಗೇಂದ್ರ ಕುಮಾರ್ ವರದಿಗಾರರು‌

The post ಮೈಸೂರು ಜಿಲ್ಲೆಯಲ್ಲೇ ಕೋವಿಡ್ ಮುಕ್ತ ತಾಲ್ಲೂಕಾಗಲಿರುವ ಟಿ. ನರಸೀಪುರ. appeared first on Hai Sandur kannada fortnightly news paper.

]]>
https://haisandur.com/2021/08/14/%e0%b2%ae%e0%b3%88%e0%b2%b8%e0%b3%82%e0%b2%b0%e0%b3%81-%e0%b2%9c%e0%b2%bf%e0%b2%b2%e0%b3%8d%e0%b2%b2%e0%b3%86%e0%b2%af%e0%b2%b2%e0%b3%8d%e0%b2%b2%e0%b3%87-%e0%b2%95%e0%b3%8b%e0%b2%b5%e0%b2%bf%e0%b2%a1/feed/ 0
ಗುರುಪುರದ ಟಿಬೆಟ್ ಕ್ಯಾಂಪಿನ ಜಮೀನಿನಲ್ಲಿ ಆನೆ ಕಾದಾಟದಲ್ಲಿ ಸಾವು,ಅರಣ್ಯ ಇಲಾಖೆಯಿಂದ ಅಂತ್ಯ ಸಂಸ್ಕಾರ..!! https://haisandur.com/2021/08/14/%e0%b2%97%e0%b3%81%e0%b2%b0%e0%b3%81%e0%b2%aa%e0%b3%81%e0%b2%b0%e0%b2%a6-%e0%b2%9f%e0%b2%bf%e0%b2%ac%e0%b3%86%e0%b2%9f%e0%b3%8d-%e0%b2%95%e0%b3%8d%e0%b2%af%e0%b2%be%e0%b2%82%e0%b2%aa%e0%b2%bf%e0%b2%a8/ https://haisandur.com/2021/08/14/%e0%b2%97%e0%b3%81%e0%b2%b0%e0%b3%81%e0%b2%aa%e0%b3%81%e0%b2%b0%e0%b2%a6-%e0%b2%9f%e0%b2%bf%e0%b2%ac%e0%b3%86%e0%b2%9f%e0%b3%8d-%e0%b2%95%e0%b3%8d%e0%b2%af%e0%b2%be%e0%b2%82%e0%b2%aa%e0%b2%bf%e0%b2%a8/#respond Sat, 14 Aug 2021 07:09:05 +0000 https://haisandur.com/?p=18940 ಹುಣಸೂರು:ಆಗಸ್ಟ್:13.ತಾಲೂಕಿನ ಗುರುಪುರದ ಟಿಬೆಟ್ ಕ್ಯಾಂಪಿನ ಜಮೀನಿನಲ್ಲಿ ಆನೆಯೊಂದು ಕಾದಾಟದಲ್ಲಿ ಸಾವನ್ನಪ್ಪಿದೆ. ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿ ವಲಯದ ನಾಗಾಪುರ ಪುನರ್ವಸತಿ ಕೇಂದ್ರದ ಬಳಿಯಿಂದ ಮೇವನ್ನರಸಿ ಹೊರ ದಾಟಿದ್ದ ಕಾಡಾನೆಗಳ ಹಿಂಡು ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಮಣ ,ಗಣೇಶ್‍ರಿಗೆ ಸೇರಿದ ಮರಗೆಣಸು ಮತ್ತು ಬಾಳೆ ಬೆಳೆಯನ್ನು ತಿಂದು ತುಳಿದು ನಾಶ ಪಡಿಸಿವೆ.ಈ ನಡುವೆ ಉದ್ಯಾನಕ್ಕೆ ವಾಪಸ್ ಹೋಗುವ ವೇಳೆ ಆನೆಗಳ ನಡುವೆ ಕಾದಾಟ ನಡೆದಿದೆ. ಸಾವನ್ನಪ್ಪಿರುವ ಸುಮಾರು 28-30 ವರ್ಷದ ಆನೆಯ ಹಿಂಬಾಗದ ತೊಡೆ ಬಳಿಯಲ್ಲಿ ತೀವ್ರಗಾಯವಾಗಿದ್ದು, ಟಿಬೇಟ್ […]

The post ಗುರುಪುರದ ಟಿಬೆಟ್ ಕ್ಯಾಂಪಿನ ಜಮೀನಿನಲ್ಲಿ ಆನೆ ಕಾದಾಟದಲ್ಲಿ ಸಾವು,ಅರಣ್ಯ ಇಲಾಖೆಯಿಂದ ಅಂತ್ಯ ಸಂಸ್ಕಾರ..!! appeared first on Hai Sandur kannada fortnightly news paper.

]]>
ಹುಣಸೂರು:ಆಗಸ್ಟ್:13.ತಾಲೂಕಿನ ಗುರುಪುರದ ಟಿಬೆಟ್ ಕ್ಯಾಂಪಿನ ಜಮೀನಿನಲ್ಲಿ ಆನೆಯೊಂದು ಕಾದಾಟದಲ್ಲಿ ಸಾವನ್ನಪ್ಪಿದೆ. ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿ ವಲಯದ ನಾಗಾಪುರ ಪುನರ್ವಸತಿ ಕೇಂದ್ರದ ಬಳಿಯಿಂದ ಮೇವನ್ನರಸಿ ಹೊರ ದಾಟಿದ್ದ ಕಾಡಾನೆಗಳ ಹಿಂಡು ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಮಣ ,ಗಣೇಶ್‍ರಿಗೆ ಸೇರಿದ ಮರಗೆಣಸು ಮತ್ತು ಬಾಳೆ ಬೆಳೆಯನ್ನು ತಿಂದು ತುಳಿದು ನಾಶ ಪಡಿಸಿವೆ.
ಈ ನಡುವೆ ಉದ್ಯಾನಕ್ಕೆ ವಾಪಸ್ ಹೋಗುವ ವೇಳೆ ಆನೆಗಳ ನಡುವೆ ಕಾದಾಟ ನಡೆದಿದೆ. ಸಾವನ್ನಪ್ಪಿರುವ ಸುಮಾರು 28-30 ವರ್ಷದ ಆನೆಯ ಹಿಂಬಾಗದ ತೊಡೆ ಬಳಿಯಲ್ಲಿ ತೀವ್ರಗಾಯವಾಗಿದ್ದು, ಟಿಬೇಟ್ ಕ್ಯಾಂಪಿನ ಎನ್.ವಿಲೇಜ್‍ನ ಹೊಂಡಾರಿಗೆ ಸೇರಿದ ಜಮೀನಿನ ಬೇಲಿ ಬಳಿ ಕುಸಿದು ಬಿದ್ದು ಸಾವನ್ನಪ್ಪಿದೆ.

ಶುಕ್ರವಾರ ಮುಂಜಾನೆ ಟಿಬೇಟ್‍ನ ಜಮೀನಿನಲ್ಲಿ ಆನೆ ಶವ ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಹುಣಸೂರು ಎಸಿಎಫ್ ಸತೀಶ್, ಆರ್.ಎಫ್.ಓ.ನಮನ್ ನಾರಾಯಣ್ ನಾಯಕ್, ಎಸ್‍ಟಿಪಿಎಫ್ ಹಾಗೂ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ನಾಗರಹೊಳೆ ಉದ್ಯಾನದ ಪಶುವೈದ್ಯ ಡಾ.ರಮೇಶ್ ಶವಪರೀಕ್ಷೆ ನಡೆಸಿದ ನಂತರ ಸ್ಥಳದಲ್ಲೇ ಅಂತ್ಯ ಸಂಸ್ಕಾರ ನಡೆಸಲಾಯಿತು.

ಜನಜಂಗುಳಿ: ಆನೆ ಸಾವನ್ನಪ್ಪಿರುವ ವಿಷಯ ಹರಡುತ್ತಿದ್ದಂತೆ ಸುತ್ತ ಮುತ್ತಲ ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಶವ ವೀಕ್ಷಿಸಿದರು. ಮಕ್ಕಳಂತೂ ಆನೆ ಶವವನ್ನು ಮುಟ್ಟಿ ಮರುಕ ವ್ಯಕ್ತಪಡಿಸುತ್ತಿದ್ದರು. ಈ ವೇಳೆ ಗ್ರಾಮಾಂತರ ಠಾಣೆ ಎಎಸ್‍ಐ ಸುರೇಶ್ ಹಾಗೂ ಸಿಬ್ಬಂದಿಗಳು ಜನರನ್ನು ನಿಯಂತ್ರಿಸಿದರು.

The post ಗುರುಪುರದ ಟಿಬೆಟ್ ಕ್ಯಾಂಪಿನ ಜಮೀನಿನಲ್ಲಿ ಆನೆ ಕಾದಾಟದಲ್ಲಿ ಸಾವು,ಅರಣ್ಯ ಇಲಾಖೆಯಿಂದ ಅಂತ್ಯ ಸಂಸ್ಕಾರ..!! appeared first on Hai Sandur kannada fortnightly news paper.

]]>
https://haisandur.com/2021/08/14/%e0%b2%97%e0%b3%81%e0%b2%b0%e0%b3%81%e0%b2%aa%e0%b3%81%e0%b2%b0%e0%b2%a6-%e0%b2%9f%e0%b2%bf%e0%b2%ac%e0%b3%86%e0%b2%9f%e0%b3%8d-%e0%b2%95%e0%b3%8d%e0%b2%af%e0%b2%be%e0%b2%82%e0%b2%aa%e0%b2%bf%e0%b2%a8/feed/ 0
ರಾಜ್ಯಾದ್ಯಂತ ಬಿರುಸುಗೊಂಡ ಮಳೆ, ಕೆಆರ್‌ಎಸ್ ಅಣೆಕಟ್ಟೆನಲ್ಲಿನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ವಿವರ https://haisandur.com/2021/07/15/water-level-in-krs-dam/ https://haisandur.com/2021/07/15/water-level-in-krs-dam/#respond Thu, 15 Jul 2021 07:17:02 +0000 https://haisandur.com/?p=17766 ರಾಜ್ಯಾದ್ಯಂತ ಮುಂಗಾರು ಮಳೆ ಜೋರಾಗಿಯೇ ಬೀಳುತ್ತಿದೆ. ಮಡಿಕೇರಿ ಭಾಗದಲ್ಲೂ ಮಳೆ ಉತ್ತಮವಾಗಿದೆ. ಈ ಮಧ್ಯೆ, ಕಬಿನಿ ಜಲಾನಯನ ಪ್ರದೇಶದಲ್ಲಿಯೂ ಮಳೆ ಬಿರುಸುಗೊಂಡಿದೆ. ಇದರಿಂದ ನಿಧಾನವಾಗಿ ತುಂಬತೊಡಗಿದ್ದ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಈಗ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಜುಲೈ ಅಂತ್ಯದ ವೇಳೆಗೆ ಕಾವೇರಿ ಜಲಾನಯ ಪ್ರದೇಶಗಳಲ್ಲಿ ಮುಂಗಾರಿ ಮಳೆ ಹೆಚ್ಚಾಗಿ ಆಗಸ್ಟ್​-ಸೆಪ್ಟೆಂಬರ್​ ವೇಳೆಗೆ ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗುವ ವಾಡಿಕೆಯಿದೆ. ಅದರಂತೆ ನಿನ್ನೆ ಮತ್ತು ಇಂದು ಕಬಿನಿ ಜಲಾಶಯ ಪ್ರದೇಶದಲ್ಲಿ ಮಳೆ ಬೀಳುತ್ತಿದ್ದು, ಕಬಿನಿ ಜಲಾಶಯದಲ್ಲಿ ನೀರಿನ ಒಳಹರಿವು ಪ್ರಮಾಣದಲ್ಲಿ […]

The post ರಾಜ್ಯಾದ್ಯಂತ ಬಿರುಸುಗೊಂಡ ಮಳೆ, ಕೆಆರ್‌ಎಸ್ ಅಣೆಕಟ್ಟೆನಲ್ಲಿನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ವಿವರ appeared first on Hai Sandur kannada fortnightly news paper.

]]>
ರಾಜ್ಯಾದ್ಯಂತ ಮುಂಗಾರು ಮಳೆ ಜೋರಾಗಿಯೇ ಬೀಳುತ್ತಿದೆ. ಮಡಿಕೇರಿ ಭಾಗದಲ್ಲೂ ಮಳೆ ಉತ್ತಮವಾಗಿದೆ. ಈ ಮಧ್ಯೆ, ಕಬಿನಿ ಜಲಾನಯನ ಪ್ರದೇಶದಲ್ಲಿಯೂ ಮಳೆ ಬಿರುಸುಗೊಂಡಿದೆ. ಇದರಿಂದ ನಿಧಾನವಾಗಿ ತುಂಬತೊಡಗಿದ್ದ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಈಗ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಜುಲೈ ಅಂತ್ಯದ ವೇಳೆಗೆ ಕಾವೇರಿ ಜಲಾನಯ ಪ್ರದೇಶಗಳಲ್ಲಿ ಮುಂಗಾರಿ ಮಳೆ ಹೆಚ್ಚಾಗಿ ಆಗಸ್ಟ್​-ಸೆಪ್ಟೆಂಬರ್​ ವೇಳೆಗೆ ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗುವ ವಾಡಿಕೆಯಿದೆ.

ಅದರಂತೆ ನಿನ್ನೆ ಮತ್ತು ಇಂದು ಕಬಿನಿ ಜಲಾಶಯ ಪ್ರದೇಶದಲ್ಲಿ ಮಳೆ ಬೀಳುತ್ತಿದ್ದು, ಕಬಿನಿ ಜಲಾಶಯದಲ್ಲಿ ನೀರಿನ ಒಳಹರಿವು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಜಲಾಶಯದ ಇಂದಿನ ಒಳ ಹರಿವು 11,628 ಕ್ಯೂಸೆಕ್ ಗೆ ಹೆಚ್ಚಳಗೊಂಡಿದೆ. ಜಲಾಶಯದ ಹೊರಹರಿವು 1,700 ಕ್ಯೂಸೆಕ್ ನಷ್ಟಾಗಿದೆ. ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯವು ಸಮುದ್ರ ಮಟ್ಟದಿಂದ 2284 ಅಡಿ ಸಾಮರ್ಥ್ಯ ಹೊಂದಿದೆ. ಜಲಾಶಯದ ಇಂದಿನ ನೀರಿನ ಮಟ್ಟ 2278.71 ಅಡಿಗೆ ಏರಿಕೆಯಾಗಿದೆ. ಜಲಾಶಯದಲ್ಲಿ ಒಟ್ಟು 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದೆ. ಜಲಾಶಯದಲ್ಲಿಂದು 16.31 ಟಿಎಂಸಿ ನೀರು ಸಂಗ್ರಹಗೊಂಡಿದೆ.

The post ರಾಜ್ಯಾದ್ಯಂತ ಬಿರುಸುಗೊಂಡ ಮಳೆ, ಕೆಆರ್‌ಎಸ್ ಅಣೆಕಟ್ಟೆನಲ್ಲಿನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ವಿವರ appeared first on Hai Sandur kannada fortnightly news paper.

]]>
https://haisandur.com/2021/07/15/water-level-in-krs-dam/feed/ 0
ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ :ಸಚಿವ ಸುರೇಶ್ ಕುಮಾರ್ ಹೇಳಿಕೆ https://haisandur.com/2021/07/06/sslc-exams-start/ https://haisandur.com/2021/07/06/sslc-exams-start/#respond Tue, 06 Jul 2021 08:43:32 +0000 https://haisandur.com/?p=17421 ಕೊರೊನಾ ಕಾರಣದಿಂದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿರುವ ರಾಜ್ಯ ಸರ್ಕಾರದ ಇದೀಗ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಅಗತ್ಯ ಸಿದ್ಧತೆ ನಡೆಸುತ್ತಿದೆ. ನಿಗದಿತ ದಿನಾಂಕದಂತೆ ಜುಲೈ 19 ರಿಂದ 22 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ. ಕಬಿನಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ 2021ರ ಮುಂಗಾರು ಹಂಗಾಮಿಗೆ ನೀರು ಒದಗಿಸುವ ಕುರಿತು ಮೈಸೂರಿನಲ್ಲಿ ಆಯೋಜಿಸಿದ್ದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿರುವ ಅವರು, ಪರೀಕ್ಷೆ ನಡೆಸಲು ಸರ್ಕಾರ ಈಗಾಗಲೇ ಕೋವಿಡ್-19  ಮಾರ್ಗಸೂಚಿಗಳನ್ನು […]

The post ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ :ಸಚಿವ ಸುರೇಶ್ ಕುಮಾರ್ ಹೇಳಿಕೆ appeared first on Hai Sandur kannada fortnightly news paper.

]]>
ಕೊರೊನಾ ಕಾರಣದಿಂದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿರುವ ರಾಜ್ಯ ಸರ್ಕಾರದ ಇದೀಗ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಅಗತ್ಯ ಸಿದ್ಧತೆ ನಡೆಸುತ್ತಿದೆ. ನಿಗದಿತ ದಿನಾಂಕದಂತೆ ಜುಲೈ 19 ರಿಂದ 22 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ಕಬಿನಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ 2021ರ ಮುಂಗಾರು ಹಂಗಾಮಿಗೆ ನೀರು ಒದಗಿಸುವ ಕುರಿತು ಮೈಸೂರಿನಲ್ಲಿ ಆಯೋಜಿಸಿದ್ದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿರುವ ಅವರು, ಪರೀಕ್ಷೆ ನಡೆಸಲು ಸರ್ಕಾರ ಈಗಾಗಲೇ ಕೋವಿಡ್-19  ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ರೂಪಿಸಲಾಗಿರುವ ಕೊರೊನಾ ಮಾರ್ಗಸೂಚಿಗಳನ್ನು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಕಡ್ಡಾಯವಾಗಿ ಜಾರಿಗೊಳಿಸಲಾಗುತ್ತದೆ. ಯಾವುದಾದರೂ ವಿದ್ಯಾರ್ಥಿಗಳಲ್ಲಿ ಕೋವಿಡ್-19 ರೋಗಲಕ್ಷಣಗಳು ಕಂಡುಬಂದಲ್ಲಿ ಅಂತಹವರಿಗೆ ಪ್ರತ್ಯೇಕ ಪರೀಕ್ಷಾ ಕೊಠಡಿ ವ್ಯವಸ್ಥೆ ಮಾಡಲಾಗುತ್ತದೆ. ಕೊರೊನಾ ಸೋಂಕಿತ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳಲು ಇಚ್ಛಿಸಿದ್ದಲ್ಲಿ ಹತ್ತಿರದ ಕೋವಿಡ್ ಕೇರ್ ಸೆಂಟರ್ ನಲ್ಲಿ ಅವರು ಪರೀಕ್ಷೆ ಬರೆಯಬಹುದು. ಈ ನಿರ್ಣಾಯಕ ಪರೀಕ್ಷೆಯನ್ನು ಏರ್ಪಡಿಸಲು ಸರ್ಕಾರ ಅಗತ್ಯ ಮುಂಜಾಗೃತಾ ಕ್ರಮಗಳೊಂದಿಗೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.

‘ಪರೀಕ್ಷೆಗಳನ್ನು ನಡೆಸುವುದು ವಿದ್ಯಾರ್ಥಿಗಳಿಗೆ ಶಿಕ್ಷೆಯಲ್ಲ, ಆದರೆ ಭವಿಷ್ಯದಲ್ಲಿ ಅವರು ವೃತ್ತಿಜೀವನ ರೂಪಿಸಿಕೊಳ್ಳಲು, ತಮಗಿಷ್ಟವಾದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಈ ನಿರ್ಣಾಯಕ ಪರೀಕ್ಷೆ ಸಹಕಾರಿಯಾಗಿದೆ. ಹೀಗಾಗಿ ಕೊರೊನಾ ಸಂಕಷ್ಟದ ನಡುವೆಯೂ ಪರೀಕ್ಷೆಗೆ ಸರ್ಕಾರ ಸಿದ್ಧತೆ ಮಾಡುತ್ತಿದೆ. ಕಳೆದ ವರ್ಷದ 9ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೆ ಎಸ್‌ಎಸ್‌ಎಲ್‌ಸಿಗೆ ಬಡ್ತಿ ಪಡೆದುಕೊಂಡಿದ್ದಾರೆ. ಹೀಗಾಗಿ ನಾವು ಈ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಬೇಕಾದ ಅನಿರ್ವಾಯತೆ ಎದುರಾಗಿದೆ. ಪರೀಕ್ಷೆಯಿಲ್ಲದೆ ಮುಂದಿನ ತರಗತಿಗಳಿಗೆ ಬಡ್ತಿ ನೀಡುವುದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಉತ್ತಮವಲ್ಲವೆಂದು ಹೇಳಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು 2 ಸೆಟ್ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತವೆ. ವಿದ್ಯಾರ್ಥಿಗಳಿಗೆ ಗೊತ್ತುಪಡಿಸಿದ ಪರೀಕ್ಷಾ ಕೇಂದ್ರಗಳಲ್ಲಿ ಒಎಂಆರ್ ಶೀಟ್ ಗಳನ್ನು ನೀಡಲಾಗುತ್ತದೆ. ಪರೀಕ್ಷೆಗೂ ಮುನ್ನ ನಾನು ವಿದ್ಯಾರ್ಥಿಗಳೊಂದಿಗೆ ನೇರ ಸಂವಾದಲ್ಲಿ ಪಾಲ್ಗೊಂಡು ಚರ್ಚೆ ನಡೆಸುತ್ತೇನೆ. ಪರೀಕ್ಷಾ ವಿಷಯವಾಗಿ ವಿದ್ಯಾರ್ಥಿಗಳಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಮತ್ತು ಯಾವುದೇ ರೀತಿಯ ಅನುಮಾನಗಳಿದ್ದಲ್ಲಿ ಅದನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದಲ್ಲದೆ ಪರೀಕ್ಷಾ ವಿಚಾರವಾಗಿ ಚರ್ಚಿಸಲು ಮುಂದಿನ 2 ದಿನ ಎಲ್ಲಾ ಸಾರ್ವಜನಿಕ ಶಿಕ್ಷಣ ನಿರ್ದೇಶಕರು ಮತ್ತು ಬ್ಲಾಕ್ ಶಿಕ್ಷಣ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಿದ್ದೇನೆಂದು ತಿಳಿಸಿದ್ದಾರೆ. 

ಅಗತ್ಯ ಮುಂಜಾಗೃತಾ ಕ್ರಮಗಳೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಆಯೋಜಿಸಲು ಸರ್ಕಾರ ತೀರ್ಮಾನಿಸಿದೆ. ಬರೋಬ್ಬರಿ 8.76 ಲಕ್ಷ ವಿದ್ಯಾರ್ಥಿಗಳು 73,066 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಕಳೆದ ವರ್ಷ 48,000 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಆಯೋಜಿಸಲಾಗಿತ್ತು. ಕೋವಿಡ್-19 ಕಾರಣ ಈ ಬಾರಿ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲಾಗಿದೆ. 

The post ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ :ಸಚಿವ ಸುರೇಶ್ ಕುಮಾರ್ ಹೇಳಿಕೆ appeared first on Hai Sandur kannada fortnightly news paper.

]]>
https://haisandur.com/2021/07/06/sslc-exams-start/feed/ 0
ವಚನಾಕಾರರು 800 ವರ್ಷಗಳ ನಂತರವೂ ಜೀವಂತವಿದ್ದಾರೆ: ಎನ್.ವಿ.ಫಣೀಶ್ https://haisandur.com/2021/03/19/%e0%b2%b5%e0%b2%9a%e0%b2%a8%e0%b2%be%e0%b2%95%e0%b2%be%e0%b2%b0%e0%b2%b0%e0%b3%81-800-%e0%b2%b5%e0%b2%b0%e0%b3%8d%e0%b2%b7%e0%b2%97%e0%b2%b3-%e0%b2%a8%e0%b2%82%e0%b2%a4%e0%b2%b0%e0%b2%b5%e0%b3%82/ https://haisandur.com/2021/03/19/%e0%b2%b5%e0%b2%9a%e0%b2%a8%e0%b2%be%e0%b2%95%e0%b2%be%e0%b2%b0%e0%b2%b0%e0%b3%81-800-%e0%b2%b5%e0%b2%b0%e0%b3%8d%e0%b2%b7%e0%b2%97%e0%b2%b3-%e0%b2%a8%e0%b2%82%e0%b2%a4%e0%b2%b0%e0%b2%b5%e0%b3%82/#respond Fri, 19 Mar 2021 14:10:46 +0000 https://haisandur.com/?p=14739 ಮೈಸೂರು,ಮಾರ್ಚ್.19-ತಮ್ಮ ಜೀವನಾನುಭವದ ವಿಚಾರಗಳನ್ನು ವಚನಗಳ ರೂಪದಲ್ಲಿ ನಮ್ಮ ಮುಂದೆ ಪ್ರಸ್ತುತಪಡಿಸಿರುವ ವಚನಾಕಾರರು 800 ವರ್ಷಗಳ ನಂತರವೂ ಜೀವಂತವಿದ್ದಾರೆ ಎಂದುಬಣ್ಣ ಮತ್ತು ಅರಗು ಕಾರ್ಖಾನೆಯ ಅಧ್ಯಕ್ಷ ಎನ್.ವಿ.ಫಣೀಶ್ ಅವರು ಅಭಿಪ್ರಾಯಪಟ್ಟರು.ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ಕಲಾಮಂದಿರದ ಆವರಣದಲ್ಲಿರುವ ಮನೆಯಂಗಳದಲ್ಲಿ ಏರ್ಪಡಿಸಿದ್ದ ಕಾಯಕ ಶರಣರಾದ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಸುಮಾರು 800 ವರ್ಷಗಳ ಹಿಂದೆ ರಚಿಸಿದ ವಚನಗಳು ಈವತ್ತಿಗೂ […]

The post ವಚನಾಕಾರರು 800 ವರ್ಷಗಳ ನಂತರವೂ ಜೀವಂತವಿದ್ದಾರೆ: ಎನ್.ವಿ.ಫಣೀಶ್ appeared first on Hai Sandur kannada fortnightly news paper.

]]>
ಮೈಸೂರು,ಮಾರ್ಚ್.19-ತಮ್ಮ ಜೀವನಾನುಭವದ ವಿಚಾರಗಳನ್ನು ವಚನಗಳ ರೂಪದಲ್ಲಿ ನಮ್ಮ ಮುಂದೆ ಪ್ರಸ್ತುತಪಡಿಸಿರುವ ವಚನಾಕಾರರು 800 ವರ್ಷಗಳ ನಂತರವೂ ಜೀವಂತವಿದ್ದಾರೆ ಎಂದುಬಣ್ಣ ಮತ್ತು ಅರಗು ಕಾರ್ಖಾನೆಯ ಅಧ್ಯಕ್ಷ ಎನ್.ವಿ.ಫಣೀಶ್ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ಕಲಾಮಂದಿರದ ಆವರಣದಲ್ಲಿರುವ ಮನೆಯಂಗಳದಲ್ಲಿ ಏರ್ಪಡಿಸಿದ್ದ ಕಾಯಕ ಶರಣರಾದ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುಮಾರು 800 ವರ್ಷಗಳ ಹಿಂದೆ ರಚಿಸಿದ ವಚನಗಳು ಈವತ್ತಿಗೂ ಮಹತ್ವ ಪಡೆದುಕೊಳ್ಳುವ ಮೂಲಕ ಆ ಎಲ್ಲಾ ಕಾಯಕ ಯೋಗಿಗಳು, ಶರಣರು ನಮ್ಮ ಮುಂದೆ ಜೀವಂತವಿದ್ದಾರೆ. ಅಂತಹ ಎಲ್ಲ ಮಹನೀಯರನ್ನು ಕಾಯಕ ದಿನ ಆವರಣೆಯ ಮುಖೇನ ಸ್ಮರಿಸುವ ಒಂದು ದೊಡ್ಡ ಶ್ರದ್ದಾ ಭಕ್ತಿಯ ಕೆಲಸ ಮಾಡುತ್ತಿರುವುದು ನಿಜಕ್ಕೂ ನಮಗೆ ಸಂತಸ ತಂದಿದೆ. ಶರಣರು ವಚನಗಳ ರೂಪದಲ್ಲಿ ನೀಡಿರುವ ಜೀವಾನನುಭವದ ವಿಚಾರಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.
ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಹೊಸ ಪರಿವರ್ತನೆಯ ಕ್ರಾಂತಿ ರೂಪಿಸಲು ಪ್ರವಾಹದ ವಿರುದ್ಧ ಈಜುವ ರೀತಿಯಲ್ಲಿ ಕಾಯಕ ಶುರು ಮಾಡಿದ್ದರು. ಸಮಾಜದ ಅಂಕು ಡೊಂಕುಗಳನ್ನು ತಿದ್ದಲು, ಕೊರತೆ ಹಾಗೂ ಲೋಪದೋಷಗಳನ್ನು ತಿದ್ದಲು ಬಸವಣ್ಣನವರು ಆರಂಭಿಸಿದ ಮಹಾಕಾಯಕದಲ್ಲಿ ಎಲ್ಲಾ ಪ್ರವೃತ್ತಿಯ ಜನರೂ ಪಾಲ್ಗೊಂಡದ್ದು ಅಂದಿನ ಕಾಲದ ವೈಶಿಷ್ಟ್ಯವಾಗಿತ್ತು ಎಂದರು.
ನುಡಿದಂತೆ ನಡೆಯುವುದನ್ನು ವಚನ ಎನ್ನುತ್ತಾರೆ. ತಮ್ಮ ಜೀವನದ ಅನುಭವವನ್ನು ವಚನಗಳ ಮೂಲಕ ವ್ಯಕ್ತಪಡಿಸಿರುವ ವಚನಕಾರರು ಸಮಾಜಕ್ಕೆ ತಮ್ಮ ಜೀವನಾನುಭವದ ಸಾರವನ್ನುಸಂದೇಶದ ರೀತಿ ನೀಡಿದ್ದಾರೆ. ಅನುಭವ ಮಂಟಪದಲ್ಲಿ ಭಾಗಿಯಾಗಿದ್ದ ಎಲ್ಲ ಶರಣರು ವಚನಗಳನ್ನು ಪ್ರಸ್ತುತಪಡಿಸಿದ್ದಾರೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಮ.ಗು. ಸದಾನಂದಯ್ಯ ಅವರು ಮಾತನಾಡಿ, ಕಾಯಕವೆಂಬುದಕ್ಕೆ ತಾಂತ್ರಿಕ ಪಾರಿಭಾಷಿಕ ಅರ್ಥ ನೀಡಿದವರು ಶರಣರು. ಯಾವುದೇ ವೃತ್ತಿಯೂ ಸಹ ಶ್ರೇಷ್ಠವಾದುದು. ಮಾದಾರ ಚೆನ್ನಯ್ಯನವರ ಮಗನಾಗಿ ಮುಂದೆ ಹುಟ್ಟಬೇಕೆಂದು ಅಭಿಲಾಷೆ ವ್ಯಕ್ತಪಡಿಸುವ ಮೂಲಕ ಬಸವಣ್ಣನವರು ಇಡೀ ಜಗತ್ತಿಗೆ ಕಾಯಕದ ಬಗ್ಗೆ ಮೌಲ್ಯಯುತ ಸಂದೇಶ ನೀಡಿದರು. ಎಲ್ಲಾ ವೃತ್ತಿಗಳನ್ನು ನಿಕೃಷ್ಟವಾಗಿ ಕಾಣುತ್ತಿದ್ದ ಕಾಲದಲ್ಲಿ ಎಲ್ಲಾ ವೃತ್ತಿಗೆ ಕಾಯಕ ಶ್ರೇಷ್ಠತೆ ನೀಡುವ ಮೂಲಕ ಎಲ್ಲರ ವೃತ್ತಿಯ ಘನತೆ ಹೆಚ್ಚು ಮಾಡಿದ್ದಾರೆ. ಹಾಗಾಗಿ ಅಂತಹ ಕಾಯಕ ಯೋಗಿಗಳನ್ನು ಮನಸ್ಸುಪೂರ್ವಕವಾಗಿ ಇಂದು ಸ್ಮರಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಮಲಿಯೂರು ಸೋಮಯ್ಯ, ಭಾನು ಪ್ರಕಾರ್, ವಿಠಲ್ ಮೂರ್ತಿ ಹಾಗೂ ಕನ್ನಡ ಮತ್ತ ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಹೆಚ್.ಚನ್ನಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

The post ವಚನಾಕಾರರು 800 ವರ್ಷಗಳ ನಂತರವೂ ಜೀವಂತವಿದ್ದಾರೆ: ಎನ್.ವಿ.ಫಣೀಶ್ appeared first on Hai Sandur kannada fortnightly news paper.

]]>
https://haisandur.com/2021/03/19/%e0%b2%b5%e0%b2%9a%e0%b2%a8%e0%b2%be%e0%b2%95%e0%b2%be%e0%b2%b0%e0%b2%b0%e0%b3%81-800-%e0%b2%b5%e0%b2%b0%e0%b3%8d%e0%b2%b7%e0%b2%97%e0%b2%b3-%e0%b2%a8%e0%b2%82%e0%b2%a4%e0%b2%b0%e0%b2%b5%e0%b3%82/feed/ 0
ಮನೆಯಿಂದಲೇ ಮಕ್ಕಳಲ್ಲಿ ಸಮಾನತೆಯ ಪಾಠ ಕಲಿಸಬೇಕು : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ https://haisandur.com/2021/03/17/%e0%b2%ae%e0%b2%a8%e0%b3%86%e0%b2%af%e0%b2%bf%e0%b2%82%e0%b2%a6%e0%b2%b2%e0%b3%87-%e0%b2%ae%e0%b2%95%e0%b3%8d%e0%b2%95%e0%b2%b3%e0%b2%b2%e0%b3%8d%e0%b2%b2%e0%b2%bf-%e0%b2%b8%e0%b2%ae%e0%b2%be%e0%b2%a8/ https://haisandur.com/2021/03/17/%e0%b2%ae%e0%b2%a8%e0%b3%86%e0%b2%af%e0%b2%bf%e0%b2%82%e0%b2%a6%e0%b2%b2%e0%b3%87-%e0%b2%ae%e0%b2%95%e0%b3%8d%e0%b2%95%e0%b2%b3%e0%b2%b2%e0%b3%8d%e0%b2%b2%e0%b2%bf-%e0%b2%b8%e0%b2%ae%e0%b2%be%e0%b2%a8/#respond Wed, 17 Mar 2021 02:23:24 +0000 https://haisandur.com/?p=14665 ಮೈಸೂರು:- ಮಹಿಳೆಯರು ಸವಾಲು ಸ್ವೀಕರಿಸಬೇಕು ಎಂಬುದು ಸರಿಯಲ್ಲ. ಹೆಣ್ಣಾಗಿ ಹುಟ್ಟಿ ಬದುಕುವುದೇ ಸವಾಲು ಎನ್ನುವಂತಿದೆ. ಹೆಣ್ಣು ಭ್ರೂಣ ಹತ್ಯೆ ತಪ್ಪು. ಈ ಕುರಿತು ಮಹಿಳೆಯರು ಎಚ್ಚರಿಕೆವಹಿಸಬೇಕು. ಮನೆಯಿಂದಲೇ ಮಕ್ಕಳಲ್ಲಿ ಸಮಾನತೆಯ ಪಾಠ ಕಲಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಹೇಳಿದರು.ಮಾನಸಗಂಗೋತ್ರಿಯ ವಿಜ್ಞಾನಭವನದಲ್ಲಿ ಮಂಗಳವಾರ ಮೈಸೂರು ವಿವಿ ಮಹಿಳಾ ಉದ್ಯೋಗಿಗಳ ಸಮುದಾಯ, ಮಹಿಳಾ ಅಧ್ಯಯನ ಕೇಂದ್ರ, ಮಹಿಳಾ ಸಮಸ್ಯೆಗಳನ್ನು ನಿಭಾಯಿಸುವ ವೇದಿಕೆ ಮತ್ತು ಮೈತ್ರಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 110ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು […]

The post ಮನೆಯಿಂದಲೇ ಮಕ್ಕಳಲ್ಲಿ ಸಮಾನತೆಯ ಪಾಠ ಕಲಿಸಬೇಕು : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ appeared first on Hai Sandur kannada fortnightly news paper.

]]>
ಮೈಸೂರು:- ಮಹಿಳೆಯರು ಸವಾಲು ಸ್ವೀಕರಿಸಬೇಕು ಎಂಬುದು ಸರಿಯಲ್ಲ. ಹೆಣ್ಣಾಗಿ ಹುಟ್ಟಿ ಬದುಕುವುದೇ ಸವಾಲು ಎನ್ನುವಂತಿದೆ. ಹೆಣ್ಣು ಭ್ರೂಣ ಹತ್ಯೆ ತಪ್ಪು. ಈ ಕುರಿತು ಮಹಿಳೆಯರು ಎಚ್ಚರಿಕೆವಹಿಸಬೇಕು. ಮನೆಯಿಂದಲೇ ಮಕ್ಕಳಲ್ಲಿ ಸಮಾನತೆಯ ಪಾಠ ಕಲಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಹೇಳಿದರು.
ಮಾನಸಗಂಗೋತ್ರಿಯ ವಿಜ್ಞಾನಭವನದಲ್ಲಿ ಮಂಗಳವಾರ ಮೈಸೂರು ವಿವಿ ಮಹಿಳಾ ಉದ್ಯೋಗಿಗಳ ಸಮುದಾಯ, ಮಹಿಳಾ ಅಧ್ಯಯನ ಕೇಂದ್ರ, ಮಹಿಳಾ ಸಮಸ್ಯೆಗಳನ್ನು ನಿಭಾಯಿಸುವ ವೇದಿಕೆ ಮತ್ತು ಮೈತ್ರಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 110ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತಿಹಾಸವನ್ನು ನೋಡಿದರೆ ಹಿಂದೆ ದೈಹಿಕ ಸಾಮಾಥ್ರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು. ಆದರೆ, ಪ್ರಸ್ತುತದಲ್ಲಿ ಬೌದ್ಧಿಕ ಸಾಮಾಥ್ರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹೀಗಾಗಿ, ಮಹಿಳೆಯರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಹಿಳೆಯರ ಅಭಿವೃದ್ಧಿಗೆ ಪೆÇೀಷಕರ ಸಹಕಾರ ಬಹಳ ಪ್ರಮುಖವಾಗಿದೆ. ಹಿಂದೆ ಹೆಣ್ಣು ಮಕ್ಕಳಿಗೆ ಚಿಕ್ಕವಯಸ್ಸಿಗೆ ಮದುವೆ ಮಾಡಲಾಗುತ್ತಿತ್ತು. ಅಡುಗೆ ಮನೆ, ಕುಟುಂಬ ನಿರ್ವಹಣೆಯμÉ್ಟೀ ಅವರ ಬದುಕು ಎನ್ನುವಂತಾಗಿತ್ತು. ಆದರೆ, ಕಾಲಾನಂತರದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದರಿಂದ ಬದಲಾವಣೆ ಸಾಧ್ಯವಾಗಿದೆ ಎಂದು ಹೇಳಿದರು.
ಮಹಿಳೆಯರು ತಮ್ಮ ಮನೆ ಸೇರಿದಂತೆ ಸುತ್ತಮುತ್ತಲಿನಲ್ಲಿರುವವರಿಗೆ ಬೆಂಬಲ, ಪೆÇ್ರೀತ್ಸಾಹ ನೀಡುವ ಕಾರ್ಯ ಮಾಡಬೇಕು. ಪ್ರಸ್ತುತ ಒತ್ತಡದ ಬದುಕಿನಲ್ಲಿ ವೃತ್ತಿ ಹಾಗೂ ಕುಟುಂಬದ ನಿರ್ವಹಣೆಯ ಜೊತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಮಹಿಳೆಯರು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪೆÇ್ರ.ಜಿ.ಹೇಮಂತ್ ಕುಮಾರ್, ಜಯದೇವ ಆಸ್ಪತ್ರೆ ಮಕ್ಕಳ ಹೃದ್ರೋಗ ಮುಖ್ಯಸ್ಥರಾದ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ, ಕುಲಸಚಿವ ಪೆÇ್ರ.ಆರ್.ಶಿವಪ್ಪ ಹಾಗೂ ಮೈಸೂರು ವಿ.ವಿ.ಯ ಉದ್ಯೋಗಿಗಳ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

The post ಮನೆಯಿಂದಲೇ ಮಕ್ಕಳಲ್ಲಿ ಸಮಾನತೆಯ ಪಾಠ ಕಲಿಸಬೇಕು : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ appeared first on Hai Sandur kannada fortnightly news paper.

]]>
https://haisandur.com/2021/03/17/%e0%b2%ae%e0%b2%a8%e0%b3%86%e0%b2%af%e0%b2%bf%e0%b2%82%e0%b2%a6%e0%b2%b2%e0%b3%87-%e0%b2%ae%e0%b2%95%e0%b3%8d%e0%b2%95%e0%b2%b3%e0%b2%b2%e0%b3%8d%e0%b2%b2%e0%b2%bf-%e0%b2%b8%e0%b2%ae%e0%b2%be%e0%b2%a8/feed/ 0