ಮೈಸೂರು ಜಿಲ್ಲೆಯಲ್ಲೇ ಕೋವಿಡ್ ಮುಕ್ತ ತಾಲ್ಲೂಕಾಗಲಿರುವ ಟಿ. ನರಸೀಪುರ.

0
61

ಟಿ.ನರಸೀಪುರ: ಕಳೆದ ೧೫ ದಿನಗಳಿಂದ ಟಿ. ನರಸೀಪುರ ತಾಲ್ಲೂಕಿನಲ್ಲಿ ಒಂದಂಕೆಯ ಸೋಂಕಿತರು ಮಾತ್ರ ಕಂಡು ಬರುತ್ತಿದ್ದು ಕೇವಲ ೭ ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ತಾಲ್ಲೂಕು ಕೋವಿಡ್ ಮುಕ್ತವಾಗಲಿದೆ ಎಂದು ತಾಲ್ಲೂಕು ವೈಧ್ಯಾಧಿಕಾರಿ ಡಾ.ರವಿಕುಮಾರ್ ತಿಳಿಸಿದರು.

ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಸೋಂಕಿತರನ್ನೊಳಗೊಂಡ ತಾಲ್ಲೂಕಾಗಿದ್ದ ಟಿ. ನರಸೀಪುರ ಸೋಂಕಿತರ ಮಟ್ಟ ೧೪%ಗೆ ಏರಿತ್ತು. ಕಠಿಣ ಬಿಗಿ ಭದ್ರತೆ, ಕೋವಿಡ್ ಪರೀಕ್ಷೆ, ಐಸೋಲೇಶನ್ ಮತ್ತು ತಾಲ್ಲೂಕಿನ ಜನತೆ ಸಹಕಾರದಿಂದ ಹಂತ ಹಂತವಾಗಿ ಸೋಂಕನ್ನು ಇಳಿಮುಖಗೊಳಿಸಲು ಕಾರಣವಾಯಿತು.

ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಸೋಂಕಿತರನ್ನೊಳಗೊಂಡ ತಾಲ್ಲೂಕೆಂದರೆ ಟಿ. ನರಸೀಪುರ. ಸೋಂಕಿತರ ಮಟ್ಟ ೧೪%ಗೆ ಏರಿತ್ತು. ಕಠಿಣ ಬಿಗಿ ಭದ್ರತೆ, ಕೋವಿಡ್ ಪರೀಕ್ಷೆ, ಐಸೋಲೇಶನ್ ಮತ್ತು ತಾಲ್ಲೂಕಿನ ಜನ ಸಂಖ್ಯೆ ಹಂತ ಹಂತವಾಗಿ ಸೋಂಕನ್ನು ಇಳಿಮುಖಗೊಳಿಸಲು ಕಾರಣವಾಯಿತು.

ಹೆಚ್ಚು ಪ್ರಕರಣ ಹೊಂದಿದ ತಾಲ್ಲೂಕುಗಳ ಪಟ್ಟಿಯಲ್ಲಿ ಟಿ. ನರಸೀಪುರ ಅಗ್ರ ಸ್ಥಾನದಲ್ಲಿತ್ತು. ಒಟ್ಟಾರೆ ೮,೪೪೦ ಸೋಂಕಿತರು ದಾಖಲಾಗಿ, ೮,೩೨೮ ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಆರೋಗ್ಯವಾಗಿ ಮನೆಗೆ ಹಿಂದಿರುಗಿದ್ದು, ಈ ವರೆಗೆ ಒಟ್ಟು ೧೦೫ ಮಂದಿ ಸೋಂಕಿತರು ಮೃತ ಪಟ್ಟಿದ್ದಾರೆ.

ತಾಲ್ಲೂಕಿನ್ನು ಸೋಂಕಿನ ಸಂಖ್ಯೆ ಭಾರೀ ಇಳಿಮುಖ ಕಂಡಿದ್ದು ಇದು ಅತ್ಯಂತ ಸಂತೋಷದ ವಿಷಯವಾಗಿದೆ. ಆಗಸ್ಟ್ ೧೧ ರಿಂದೀಚೆಗೆ ಕೇವಲ ೦೭ ಪ್ರಕರಣ ಪ್ರಚಲಿತದಲ್ಲಿದೆ. ತಾಲ್ಲೂಕಿನಲ್ಲಿ ಈವರೆಗೆ ೭೬% ಮಂದಿ ಮೊದಲ ಹಂತದ ವ್ಯಾಕ್ಸಿನ್ ಪಡೆದಿದ್ದು, ಅದರಲ್ಲಿ ೫೮%ನಷ್ಟು ಎರಡೂ ಡೋಸ್‌ಗಳ ಲಸಿಕೆಗಳನ್ನು ಪಡೆದಿದ್ದಾರೆಂದು ತಿಳಿಸಿದರು.

ವ್ಯಾಕ್ಸಿನೇಷನ್‌, ಯುಮ್ಯನಿಟಿ ಹಾಗೂ ಪ್ರಕೃತಿ ಈ ಕಾರಣಗಳಿಂದ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರಬಹುದು.ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ಮಾತ್ರ ಮರೆಯಬಾರದು.ಮಾಸ್ಕ್ ಯಾವಾಗಲೂ ಮೂಗಿನ ಮೇಲಿರಬೇಕು.ಕಾಟಾಚಾರಕ್ಕೆ ಧರಿಸಿದರೆ ತೊಂದರೆ ಅನುಭವಿಸುವವರು ನೀವೇ. ಅಂತರ ಕಾಪಾಡುವುದು ಜನರಿಗೆ ಅಸಾಧ್ಯದ ಕೆಲಸವೆಂದುಕೊಂಡಿದ್ದಾರೆ.ಮನಸ್ಸು ಮಾಡಬೇಕಷ್ಟೆ.ಇದನ್ನು ಪಾಲಿಸಿದರೆ ಖಂಡಿತವಾಗಿಯೂ ಸೋಂಕಿನಿಂದ ರಕ್ಷಣೆ ಪಡೆಯಬಹುದು.ಕುಟುಂಬ ಸದಸ್ಯರನ್ನು ಹೊರತುಪಡಿಸಿ ಅನ್ಯರೊಂದಿಗೆ ಐದು ನಿಮಿಷಕ್ಕಿಂತ ಹೆಚ್ಚು ಮಾತನಾಡುತ್ತಾ ಕಾಲಕಳೆಯಬಾರದು.ಅವಶ್ಯವಿರುವಾಗ ಅಂತರ ಕಾಪಾಡಿಕೊಂಡು ಮಾತನಾಡುವುದನ್ನು ಮರೆಯಬಾರದೆಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.

ಟಿ.ನರಸೀಪುರ:-ವೀರಾಂಜನೇಯ ಸ್ವಾಮಿ ಸಕಲರಿಗೂ ಸನ್ಮಂಗಳನ್ನುಂಟು ಮಾಡಲೆಂದು ವಸತಿ ಜಾಗೃತಿ ಸಮಿತಿ ಸದಸ್ಯ ಸುನಿಲ್ ಬೋಸ್ ತಿಳಿಸಿದರು.

ತಾಲ್ಲೂಕಿನ ತಲಕಾಡು ಗ್ರಾಮದ ಒಡೆಯಾಂದನಹಳ್ಳಿ ಎಂಟನೇ ವಾರ್ಡಿನ ಕನಕನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ವಸತಿ ಜಾಗೃತಿ ಸಮಿತಿ ಸದಸ್ಯ ದೇವಸ್ಥಾನದ ಅರ್ಚಕರಿಂದ ಆಶೀರ್ವಾದ ಪಡೆದರು.

ಅರ್ಚಕ ಸುಬ್ಬಶೆಟ್ಟಿ ರವರಿಂದ ಪೂಜಾ ವಿಧಿ,ವಿಧಾನಗಳಿಗೆ ಚಾಲನೆ ನೀಡಿ,ಬೆಳಗಿನ ಜಾವಾ 5-30 ರಿಂದ 6-30 ರ ಶುಭ ಘಳಿಗೆಯಲ್ಲಿ ದೇವರ ಪ್ರತಿಷ್ಟಾಪನೆ ಮಾಡಲಾಯಿತು ‌.

ಈ ಸಂದರ್ಭದಲ್ಲಿ ಯುವ ಮುಖಂಡ ಸುನಿಲ್ ಬೋಸ್,ಜಿ.ಪಂ.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಚ್.ಮಂಜುನಾಥ್, ಗ್ರಾ.ಪಂ.ಅಧ್ಯಕ್ಷ ಕೆಂಪಯ್ಯ,ಸದಸ್ಯರುಗಳಾದ ನಾಗರಾಜಮೂರ್ತಿ, ಚಿಕ್ಕಮಾದನಾಯಕ,ನರಸಿಂಹ ಮಾದನಾಯಕ ರವರುಗಳನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಂತರಾಜು, ರವೀಶ್, ಸುರೇಶ್, ಸುನಿಲ್, ರವಿ, ಸೋಮಣ್ಣ ರಂಗಸ್ವಾಮಿ ಸೇರಿದಂತೆ ಮತ್ತಿತರರಿದ್ದರು.

ಎಂ. ನಾಗೇಂದ್ರ ಕುಮಾರ್ ವರದಿಗಾರರು‌

LEAVE A REPLY

Please enter your comment!
Please enter your name here