Warning: Cannot modify header information - headers already sent by (output started at /home1/a360dlo1/public_html/haisandur.com/index.php:1) in /home1/a360dlo1/public_html/haisandur.com/wp-includes/feed-rss2.php on line 8
ರಾಜಕೀಯ ಸುದ್ದಿ Archives - Hai Sandur kannada fortnightly news paper https://haisandur.com/category/ರಾಜಕೀಯ/ Hai Sandur News.Karnataka India Sun, 12 Sep 2021 01:17:17 +0000 en-US hourly 1 https://wordpress.org/?v=6.5.3 https://haisandur.com/wp-content/uploads/2022/01/cropped-IMG_20211107_051359-32x32.jpg ರಾಜಕೀಯ ಸುದ್ದಿ Archives - Hai Sandur kannada fortnightly news paper https://haisandur.com/category/ರಾಜಕೀಯ/ 32 32 ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ‘ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿಕೆಯಾಗ್ಬೇಕಾ…?’ ಎಂಬ ಪ್ರಶ್ನೆ ಕೇಳಿದ್ದು ಯಾರಿಗೆ ಗೊತ್ತಾ..!! https://haisandur.com/2021/09/12/%e0%b2%95%e0%b3%86%e0%b2%aa%e0%b2%bf%e0%b2%b8%e0%b2%bf%e0%b2%b8%e0%b2%bf-%e0%b2%85%e0%b2%a7%e0%b3%8d%e0%b2%af%e0%b2%95%e0%b3%8d%e0%b2%b7-%e0%b2%a1%e0%b2%bf%e0%b2%95%e0%b3%86-%e0%b2%b6%e0%b2%bf/ https://haisandur.com/2021/09/12/%e0%b2%95%e0%b3%86%e0%b2%aa%e0%b2%bf%e0%b2%b8%e0%b2%bf%e0%b2%b8%e0%b2%bf-%e0%b2%85%e0%b2%a7%e0%b3%8d%e0%b2%af%e0%b2%95%e0%b3%8d%e0%b2%b7-%e0%b2%a1%e0%b2%bf%e0%b2%95%e0%b3%86-%e0%b2%b6%e0%b2%bf/#respond Sun, 12 Sep 2021 01:15:45 +0000 http://haisandur.com/?p=20127 ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಅಡುಗೆ ಮನೆಯಲ್ಲಿ ಚಾ ಹೀರುತ್ತಾ, ‘ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿಕೆಯಾಗ್ಬೇಕಾ…?’ ಎಂಬ ಪ್ರಶ್ನೆ ಕೇಳಿದ್ದಾರೆ. ಸದಾಶಿವನಗರದಲ್ಲಿರುವ ತಮ್ಮ ಮನೆಯ ಅಡುಗೆ ಮನೆಯಲ್ಲಿ ಈ ವಿಡಿಯೊ ಮಾಡಿರುವ ಅವರು ಅದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಮೂಲಕ, ಅಡುಗೆ ಅನಿಲ ಬೆಲೆ ಹೆಚ್ಚಳದ ವಿರುದ್ಧ ಜನಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ‘ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿಕೆಯಾಗ್ಬೇಕಾ…?’ ಎಂಬ ಪ್ರಶ್ನೆ ಮುಂದಿಟ್ಟು ವಿಡಿಯೊ ಬಿಡುಗಡೆ ಮಾಡಿದ್ದಾರೆ. ಆ ವಿಡಿಯೋದಲ್ಲಿ ಏನಿದೆ?ಡಿ.ಕೆ. […]

The post ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ‘ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿಕೆಯಾಗ್ಬೇಕಾ…?’ ಎಂಬ ಪ್ರಶ್ನೆ ಕೇಳಿದ್ದು ಯಾರಿಗೆ ಗೊತ್ತಾ..!! appeared first on Hai Sandur kannada fortnightly news paper.

]]>

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಅಡುಗೆ ಮನೆಯಲ್ಲಿ ಚಾ ಹೀರುತ್ತಾ, ‘ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿಕೆಯಾಗ್ಬೇಕಾ…?’ ಎಂಬ ಪ್ರಶ್ನೆ ಕೇಳಿದ್ದಾರೆ.

ಸದಾಶಿವನಗರದಲ್ಲಿರುವ ತಮ್ಮ ಮನೆಯ ಅಡುಗೆ ಮನೆಯಲ್ಲಿ ಈ ವಿಡಿಯೊ ಮಾಡಿರುವ ಅವರು ಅದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಮೂಲಕ, ಅಡುಗೆ ಅನಿಲ ಬೆಲೆ ಹೆಚ್ಚಳದ ವಿರುದ್ಧ ಜನಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

‘ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿಕೆಯಾಗ್ಬೇಕಾ…?’ ಎಂಬ ಪ್ರಶ್ನೆ ಮುಂದಿಟ್ಟು ವಿಡಿಯೊ ಬಿಡುಗಡೆ ಮಾಡಿದ್ದಾರೆ.

ಆ ವಿಡಿಯೋದಲ್ಲಿ ಏನಿದೆ?
ಡಿ.ಕೆ. ಶಿವಕುಮಾರ್‌ ವಿಡಿಯೊದಲ್ಲಿ ಹೀಗೆ ಮಾತನಾಡಿದ್ದಾರೆ….

‘ನಮಸ್ಕಾರ ಸ್ನೇಹಿತರೇ… ನಾನು ಯಾಕೆ ಅಡುಗೆ ಮನೆಯಲ್ಲಿದ್ದೀನಿ’ ಅಂತ ನಿಮಗೆ ಆಶ್ಚರ್ಯವಾಗಬಹುದು. ನಾನು ಮಾತನಾಡುತ್ತಿರುವ ವಿಷಯ ಅಡುಗೆ ಮನೆಗೆ ಸಂಬಂಧಿಸಿದ್ದು. ಈ ವಾರ ನಾನು ಕೇಳುವ ಪ್ರಶ್ನೆ, ಎಲ್‌ಪಿಜಿ ಗ್ಯಾಸ್‌ ಬೆಲೆ ಏರಿಕೆ ಆಗಿರುವುದು ಇಳಿಸಬೇಕಾ? ಬೇಡವಾ? ಎಂದು…

‘ಎಲ್‌ಪಿಜಿ ಸಿಲಿಂಡರ್ ಬೆಲೆ 888 ರೂಪಾಯಿಯಿಂದ ಸದ್ಯದಲ್ಲೇ 900ರಿಂದ 1000 ರೂಪಾಯಿವರೆಗೆ ಕೂಡಾ ತಲುಪಬಹುದು. ರಾಜ್ಯದ ಜನತೆಗೆ ಎಂಥ ಸಂಕಷ್ಟ ನೋಡಿ… ಕೋವಿಡ್‌ನಿಂದಾಗಿ ಜನ ಸಾಯುತ್ತಿದ್ದಾರೆ. ಕೆಲಸ ಕಳ್ಕೊಳ್ಳುತ್ತಿದ್ದಾರೆ. ಆದರೆ, ಬೆಲೆ ಮಾತ್ರ ಕಡಿಮೆಯಾಗುತ್ತಿಲ್ಲ.

‘ರಾಜ್ಯದ ನಾನಾ ಭಾಗಗಳಲ್ಲಿ ನಾನು ತಿರುಗಾಡಿ ಬಂದಿದ್ದೇನೆ. ಬಡವರು, ಮಧ್ಯಮ ವರ್ಗದವರು, ಶ್ರೀಮಂತರನ್ನು ಎಲ್ಲರನ್ನೂ ನಾನು ಭೇಟಿಯಾಗಿ ಬಂದಿದ್ದೇನೆ. ಎಲ್ಲರೂ ಬೆಲೆ ಏರಿಕೆಯಿಂದ ಬೆಂದು ಹೋಗಿದ್ದಾರೆ’

‘ಬಡ ಕುಟುಂಬದವರ ಮುಂದೆ ಸದ್ಯಕ್ಕೆ ಇರುವ ಆಯ್ಕೆ ಎರಡೇ. ಒಂದೋ ಮಕ್ಕಳ ಶಾಲೆಯಫೀಸ್ ಕಟ್ಟಬೇಕಾ ಅಥವಾ ಗ್ಯಾಸ್ ಸಿಲಿಂಡರ್ ಖರೀದಿಸಬೇಕಾ… ಪೋಷಕರು ಉದ್ಯೋಗ ಕಳೆದುಕೊಂಡ ಹಿನ್ನೆಲೆ ಮಕ್ಕಳನ್ನು ಶಾಲೆಯಿಂದ ಬಿಡಿಸುತ್ತಿದ್ದಾರೆ. ನಿರುದ್ಯೋಗದಿಂದ ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂಥ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡುವುದು ನ್ಯಾಯನಾ ಇಲ್ಲವಾ ಅನ್ನೋದನ್ನು ತಾವೇ ತೀರ್ಮಾನ ಮಾಡಬೇಕು…

‘ಗ್ಯಾಸ್ ಸಿಲಿಂಡರ್‌ಗೆ ಹಣ ಇಲ್ಲದೆ ಎಷ್ಟೋ ಕುಟುಂಬಗಳು ಸೌದೆ ಒಲೆ ಮೊರೆ ಹೋಗುತ್ತಿದ್ದಾರೆ. ಹಾಗಾಗಿ ನನ್ನ ಬೇಡಿಕೆ ಒಂದೇ ಒಂದು… ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನು ಕನಿಷ್ಠ 150 ರೂಪಾಯಿಯಾದರು ಕೂಡಾ ಇಳಿಕೆ ಆಗಬೇಕಲ್ಲವೇ. ನಿಮ್ಮ ಅಭಿಪ್ರಾಯವನ್ನು ಫೇಸ್‌ಬುಕ್‌, ಟ್ವಿಟರ್‌, ಇನ್ಟಾಗ್ರಾಂ ಮೂಲಕ ಮೂಲಕ ತಿಳಿಸಿ. ನಾನು ನಿಮ್ಮ ಉತ್ತರವನ್ನು ನಿರೀಕ್ಷೆ ಮಾಡುತ್ತೇನೆ’

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಅಡುಗೆ ಮನೆಯಲ್ಲಿ ಚಾ ಹೀರುತ್ತಾ, ‘ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿಕೆಯಾಗ್ಬೇಕಾ…?’ ಎಂಬ ಪ್ರಶ್ನೆ ಕೇಳಿದ್ದಾರೆ.

ಸದಾಶಿವನಗರದಲ್ಲಿರುವ ತಮ್ಮ ಮನೆಯ ಅಡುಗೆ ಮನೆಯಲ್ಲಿ ಈ ವಿಡಿಯೊ ಮಾಡಿರುವ ಅವರು ಅದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಮೂಲಕ, ಅಡುಗೆ ಅನಿಲ ಬೆಲೆ ಹೆಚ್ಚಳದ ವಿರುದ್ಧ ಜನಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

‘ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿಕೆಯಾಗ್ಬೇಕಾ…?’ ಎಂಬ ಪ್ರಶ್ನೆ ಮುಂದಿಟ್ಟು ವಿಡಿಯೊ ಬಿಡುಗಡೆ ಮಾಡಿದ್ದಾರೆ.

ಆ ವಿಡಿಯೋದಲ್ಲಿ ಏನಿದೆ?
ಡಿ.ಕೆ. ಶಿವಕುಮಾರ್‌ ವಿಡಿಯೊದಲ್ಲಿ ಹೀಗೆ ಮಾತನಾಡಿದ್ದಾರೆ….

‘ನಮಸ್ಕಾರ ಸ್ನೇಹಿತರೇ… ನಾನು ಯಾಕೆ ಅಡುಗೆ ಮನೆಯಲ್ಲಿದ್ದೀನಿ’ ಅಂತ ನಿಮಗೆ ಆಶ್ಚರ್ಯವಾಗಬಹುದು. ನಾನು ಮಾತನಾಡುತ್ತಿರುವ ವಿಷಯ ಅಡುಗೆ ಮನೆಗೆ ಸಂಬಂಧಿಸಿದ್ದು. ಈ ವಾರ ನಾನು ಕೇಳುವ ಪ್ರಶ್ನೆ, ಎಲ್‌ಪಿಜಿ ಗ್ಯಾಸ್‌ ಬೆಲೆ ಏರಿಕೆ ಆಗಿರುವುದು ಇಳಿಸಬೇಕಾ? ಬೇಡವಾ? ಎಂದು…

‘ಎಲ್‌ಪಿಜಿ ಸಿಲಿಂಡರ್ ಬೆಲೆ 888 ರೂಪಾಯಿಯಿಂದ ಸದ್ಯದಲ್ಲೇ 900ರಿಂದ 1000 ರೂಪಾಯಿವರೆಗೆ ಕೂಡಾ ತಲುಪಬಹುದು. ರಾಜ್ಯದ ಜನತೆಗೆ ಎಂಥ ಸಂಕಷ್ಟ ನೋಡಿ… ಕೋವಿಡ್‌ನಿಂದಾಗಿ ಜನ ಸಾಯುತ್ತಿದ್ದಾರೆ. ಕೆಲಸ ಕಳ್ಕೊಳ್ಳುತ್ತಿದ್ದಾರೆ. ಆದರೆ, ಬೆಲೆ ಮಾತ್ರ ಕಡಿಮೆಯಾಗುತ್ತಿಲ್ಲ.

‘ರಾಜ್ಯದ ನಾನಾ ಭಾಗಗಳಲ್ಲಿ ನಾನು ತಿರುಗಾಡಿ ಬಂದಿದ್ದೇನೆ. ಬಡವರು, ಮಧ್ಯಮ ವರ್ಗದವರು, ಶ್ರೀಮಂತರನ್ನು ಎಲ್ಲರನ್ನೂ ನಾನು ಭೇಟಿಯಾಗಿ ಬಂದಿದ್ದೇನೆ. ಎಲ್ಲರೂ ಬೆಲೆ ಏರಿಕೆಯಿಂದ ಬೆಂದು ಹೋಗಿದ್ದಾರೆ’

‘ಬಡ ಕುಟುಂಬದವರ ಮುಂದೆ ಸದ್ಯಕ್ಕೆ ಇರುವ ಆಯ್ಕೆ ಎರಡೇ. ಒಂದೋ ಮಕ್ಕಳ ಶಾಲೆಯಫೀಸ್ ಕಟ್ಟಬೇಕಾ ಅಥವಾ ಗ್ಯಾಸ್ ಸಿಲಿಂಡರ್ ಖರೀದಿಸಬೇಕಾ…ಪೋಷಕರು ಉದ್ಯೋಗ ಕಳೆದುಕೊಂಡ ಹಿನ್ನೆಲೆ ಮಕ್ಕಳನ್ನು ಶಾಲೆಯಿಂದ ಬಿಡಿಸುತ್ತಿದ್ದಾರೆ. ನಿರುದ್ಯೋಗದಿಂದ ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂಥ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡುವುದು ನ್ಯಾಯನಾ ಇಲ್ಲವಾ ಅನ್ನೋದನ್ನು ತಾವೇ ತೀರ್ಮಾನ ಮಾಡಬೇಕು…

‘ಗ್ಯಾಸ್ ಸಿಲಿಂಡರ್‌ಗೆ ಹಣ ಇಲ್ಲದೆ ಎಷ್ಟೋ ಕುಟುಂಬಗಳು ಸೌದೆ ಒಲೆ ಮೊರೆ ಹೋಗುತ್ತಿದ್ದಾರೆ. ಹಾಗಾಗಿ ನನ್ನ ಬೇಡಿಕೆ ಒಂದೇ ಒಂದು… ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನು ಕನಿಷ್ಠ 150 ರೂಪಾಯಿಯಾದರು ಕೂಡಾ ಇಳಿಕೆ ಆಗಬೇಕಲ್ಲವೇ. ನಿಮ್ಮ ಅಭಿಪ್ರಾಯವನ್ನು ಫೇಸ್‌ಬುಕ್‌, ಟ್ವಿಟರ್‌, ಇನ್ಟಾಗ್ರಾಂ ಮೂಲಕ ಮೂಲಕ ತಿಳಿಸಿ. ನಾನು ನಿಮ್ಮ ಉತ್ತರವನ್ನು ನಿರೀಕ್ಷೆ ಮಾಡುತ್ತೇನೆ’

The post ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ‘ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿಕೆಯಾಗ್ಬೇಕಾ…?’ ಎಂಬ ಪ್ರಶ್ನೆ ಕೇಳಿದ್ದು ಯಾರಿಗೆ ಗೊತ್ತಾ..!! appeared first on Hai Sandur kannada fortnightly news paper.

]]>
https://haisandur.com/2021/09/12/%e0%b2%95%e0%b3%86%e0%b2%aa%e0%b2%bf%e0%b2%b8%e0%b2%bf%e0%b2%b8%e0%b2%bf-%e0%b2%85%e0%b2%a7%e0%b3%8d%e0%b2%af%e0%b2%95%e0%b3%8d%e0%b2%b7-%e0%b2%a1%e0%b2%bf%e0%b2%95%e0%b3%86-%e0%b2%b6%e0%b2%bf/feed/ 0
ಖಾತೆಯ ಹಂಚಿಕೆ ವಿಚಾರದಲ್ಲಿ ಅಸಮಧಾನ ವ್ಯಕ್ತ ಪಡಿಸಿದ ನೂತನ ಸಚಿವ ಆನಂದ್ ಸಿಂಗ್ https://haisandur.com/2021/08/07/new-minister-anand-singh-expressed-displeasure-over-account-sharing/ https://haisandur.com/2021/08/07/new-minister-anand-singh-expressed-displeasure-over-account-sharing/#respond Sat, 07 Aug 2021 12:40:15 +0000 http://haisandur.com/?p=18668 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸಚಿವರಿಗೆ ಖಾತೆ ಹಂಚಿದ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದೆ. ಕೇಳಿದ ಖಾತೆ ನೀಡದಿರುವುದು ನನಗೆ ಅಸಮಾಧಾನ ಉಂಟುಮಾಡಿದೆ. ಕೇಳಿದ ಖಾತೆ ಏಕೆ ನೀಡಲಿಲ್ಲ ಅನ್ನೋದು ನನಗೆ ತಿಳಿಸಬೇಕು. ಸಿಎಂ ಬೊಮ್ಮಾಯಿರನ್ನು ಭೇಟಿಯಾಗಿ ಮನವಿ ಮಾಡುವೆ. ನನಗೆ ಅರ್ಹತೆ ಇಲ್ವಾ?, ನಾನು ಭ್ರಷ್ಟಾಚಾರ ಮಾಡಿದ್ದೀನಾ? ನನಗೆ ಸಾಮರ್ಥ್ಯ ಇಲ್ವಾ? ನಾನೇನು ಅನ್‌ ಫಿಟ್ ಇದೀನಾ? ಎಂದು ಕೇಳುವೆ. ಅವರು ನೀನು ನಾಲಾಯಕ್ ಅಂತ ಅನ್ನೋದನ್ನಾದ್ರೂ ಹೇಳಲಿ. ಸರ್ಕಾರ ಬರಲಿಕ್ಕೆ ಕಾರಣವಾದವರಲ್ಲಿ ನಾನೂ ಮೊದಲಿಗ. ಮೊದಲಿಗೆ […]

The post ಖಾತೆಯ ಹಂಚಿಕೆ ವಿಚಾರದಲ್ಲಿ ಅಸಮಧಾನ ವ್ಯಕ್ತ ಪಡಿಸಿದ ನೂತನ ಸಚಿವ ಆನಂದ್ ಸಿಂಗ್ appeared first on Hai Sandur kannada fortnightly news paper.

]]>
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸಚಿವರಿಗೆ ಖಾತೆ ಹಂಚಿದ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದೆ. ಕೇಳಿದ ಖಾತೆ ನೀಡದಿರುವುದು ನನಗೆ ಅಸಮಾಧಾನ ಉಂಟುಮಾಡಿದೆ. ಕೇಳಿದ ಖಾತೆ ಏಕೆ ನೀಡಲಿಲ್ಲ ಅನ್ನೋದು ನನಗೆ ತಿಳಿಸಬೇಕು. ಸಿಎಂ ಬೊಮ್ಮಾಯಿರನ್ನು ಭೇಟಿಯಾಗಿ ಮನವಿ ಮಾಡುವೆ. ನನಗೆ ಅರ್ಹತೆ ಇಲ್ವಾ?, ನಾನು ಭ್ರಷ್ಟಾಚಾರ ಮಾಡಿದ್ದೀನಾ? ನನಗೆ ಸಾಮರ್ಥ್ಯ ಇಲ್ವಾ? ನಾನೇನು ಅನ್‌ ಫಿಟ್ ಇದೀನಾ? ಎಂದು ಕೇಳುವೆ. ಅವರು ನೀನು ನಾಲಾಯಕ್ ಅಂತ ಅನ್ನೋದನ್ನಾದ್ರೂ ಹೇಳಲಿ. ಸರ್ಕಾರ ಬರಲಿಕ್ಕೆ ಕಾರಣವಾದವರಲ್ಲಿ ನಾನೂ ಮೊದಲಿಗ. ಮೊದಲಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ನಾನೇ. ನಾನು ರಾಜೀನಾಮೆ ನೀಡಿದಾಗ ಯಾರೂ ಕೊಟ್ಟಿರಲಿಲ್ಲ. ನಾನು ಕೇಳಿದ ಖಾತೆ ನನಗೆ ಮತ್ತು ಸಿಎಂಗೆ ಮಾತ್ರ ಗೊತ್ತು. ಕೇಳಿದ ಖಾತೆ ಸಿಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಅವರು ಬಳ್ಳಾರಿ ನಗರದಲ್ಲಿ ಎಚ್ಚರಿಕೆ ನೀಡಿದರು.

ಸಚಿವ ಆನಂದ್ ಸಿಂಗ್ ಅಸಮಧಾನದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,  ‘ಎಲ್ಲರಿಗೂ ಕೇಳಿದ ಖಾತೆ ನೀಡಲು ಆಗಲ್ಲ. ನಾಳೆ ಸಚಿವ ಆನಂದ್ ಸಿಂಗ್ ಜತೆ ಚರ್ಚೆ ಮಾಡುತ್ತೇನೆ. ಸಂಪುಟ ರಚನೆಯಾದಾಗ ಅಸಮಾಧಾನ ಸಹಜ’ ಎಂದು ತಿಳಿಸಿದರು.

The post ಖಾತೆಯ ಹಂಚಿಕೆ ವಿಚಾರದಲ್ಲಿ ಅಸಮಧಾನ ವ್ಯಕ್ತ ಪಡಿಸಿದ ನೂತನ ಸಚಿವ ಆನಂದ್ ಸಿಂಗ್ appeared first on Hai Sandur kannada fortnightly news paper.

]]>
https://haisandur.com/2021/08/07/new-minister-anand-singh-expressed-displeasure-over-account-sharing/feed/ 0
ಸಿದ್ಧವಾಯ್ತು ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿ: ಯಾವ ಖಾತೆ ಯಾರಿಗೆ ಹಂಚಲಾಗಿದೆ : ಇಲ್ಲಿದೆ ವಿವರ https://haisandur.com/2021/08/07/new-ministers-account-distribution-list-which-account-shared/ https://haisandur.com/2021/08/07/new-ministers-account-distribution-list-which-account-shared/#respond Sat, 07 Aug 2021 07:16:49 +0000 http://haisandur.com/?p=18651 ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರದ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಯಡಿಯೂರಪ್ಪ ಅವರ ಅವಧಿಯಲ್ಲಿ ಸಚಿವರಾಗಿದ್ದ ಅನೇಕರಿಗೆ ಬೊಮ್ಮಾಯಿ ಸರಕಾರದಲ್ಲಿಯೂ ಅದೇ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಮೊದಲ ಬಾರಿಗೆ ರಾಜ್ಯ ಸಂಪುಟದಲ್ಲಿ ಸ್ಥಾನ ಪಡೆದಿರುವ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ ನೀಡಲಾಗಿದೆ. ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರಿಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ […]

The post ಸಿದ್ಧವಾಯ್ತು ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿ: ಯಾವ ಖಾತೆ ಯಾರಿಗೆ ಹಂಚಲಾಗಿದೆ : ಇಲ್ಲಿದೆ ವಿವರ appeared first on Hai Sandur kannada fortnightly news paper.

]]>
ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರದ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಯಡಿಯೂರಪ್ಪ ಅವರ ಅವಧಿಯಲ್ಲಿ ಸಚಿವರಾಗಿದ್ದ ಅನೇಕರಿಗೆ ಬೊಮ್ಮಾಯಿ ಸರಕಾರದಲ್ಲಿಯೂ ಅದೇ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.

ಆದರೆ ಮೊದಲ ಬಾರಿಗೆ ರಾಜ್ಯ ಸಂಪುಟದಲ್ಲಿ ಸ್ಥಾನ ಪಡೆದಿರುವ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ ನೀಡಲಾಗಿದೆ. ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರಿಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ನೀಡಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಣಕಾಸು, ಡಿಪಿಎಆರ್, ಗೃಹ ಖಾತೆಯ ಗುಪ್ತಚರ, ಸಂಪುಟ ವ್ಯವಹಾರ, ಬೆಂಗಳೂರು ಅಭಿವೃದ್ಧಿ ಮತ್ತು ಹಂಚಿಕೆಯಾಗದ ಇತರೆ ಎಲ್ಲ ಖಾತೆಗಳನ್ನು ತಮ್ಮಲ್ಲಿ ಉಳಿಸಿಕೊಂಡಿದ್ದಾರೆ.

ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿ ಹೀಗಿದೆ:

ಕೆ.ಎಸ್.ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್
ಆರ್.ಅಶೋಕ್ – ಕಂದಾಯ
ಬಿ.ಶ್ರೀರಾಮುಲು – ಸಾರಿಗೆ, ಪರಿಶಿಷ್ಠ ಪಂಗಡ ಅಭಿವೃದ್ದಿ
ವಿ.ಸೋಮಣ್ಣ – ವಸತಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ದಿ
ಬಿ.ಸಿ.ಪಾಟೀಲ್ – ಕೃಷಿ
ಎಸ್.ಟಿ.ಸೋಮಶೇಖರ್ – ಸಹಕಾರ
ಡಾ. ಕೆ.ಸುಧಾಕರ್ – ಆರೋಗ್ಯ, ವೈದ್ಯಕೀಯ ಶಿಕ್ಷಣ
ಕೆ.ಗೋಪಾಲಯ್ಯ – ಅಬಕಾರಿ
ಶಶಿಕಲಾ ಜೊಲ್ಲೆ – ಮುಜರಾಯಿ, ಹಜ್
ಎಂಟಿಬಿ ನಾಗರಾಜ್ – ಪೌರಾಡಳಿತ, ಸಣ್ಣ ಕೈಗಾರಿಕೆ
ಬಿ.ಸಿ.ನಾಗೇಶ್ – ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
ವಿ.ಸುನಿಲ್​ಕುಮಾರ್ – ಇಂಧನ
ಉಮೇಶ್ ಕತ್ತಿ – ಅರಣ್ಯ, ಆಹಾರ ಮತ್ತು ನಾಗರೀಕ ಸರಬರಾಜು
ಜೆ.ಸಿ. ಮಾಧುಸ್ವಾಮಿ – ಸಣ್ಣ ನೀರಾವರಿ
ಆರಗ ಜ್ಞಾನೇಂದ್ರ – ಗೃಹಖಾತೆ
ಡಾ.ಸಿ.ಎನ್.ಅಶ್ವತ್ಥ್ ನಾರಾಯಣ – ಉನ್ನತ ಶಿಕ್ಷಣ, ಐಟಿ-ಬಿಟಿ
ಆನಂದ್ ಸಿಂಗ್ – ಪರಿಸರ, ಪ್ರವಾಸೋದ್ಯಮ
ಪ್ರಭು ಚೌಹಾಣ್ – ಪಶುಸಂಗೋಪಣೆ
ಮುರುಗೇಶ್ ನಿರಾಣಿ – ಬೃಹತ್, ಮಧ್ಯಮ ಕೈಗಾರಿಕೆ
ಶಿವರಾಮ್ ಹೆಬ್ಬಾರ್ – ಕಾರ್ಮಿಕ
ಎಸ್.ಅಂಗಾರ – ಮೀನುಗಾರಿಕೆ, ಬಂದರು
ಗೋವಿಂದ ಕಾರಜೋಳ – ಜಲಸಂಪನ್ಮೂಲ, ಭಾರೀ ಮತ್ತು ಮಧ್ಯಮ ನೀರಾವರಿ
ಕೋಟ ಶ್ರೀನಿವಾಸ ಪೂಜಾರಿ – ಸಮಾಜ ಕಲ್ಯಾಣ
ಕೆ.ಸಿ.ನಾರಾಯಣಗೌಡ – ಕ್ರೀಡೆ
ಮುನಿರತ್ನ – ತೋಟಗಾರಿಕೆ
ಭೈರತಿ ಬಸವರಾಜ್ – ನಗರಾಭಿವೃದ್ಧಿ
ಹಾಲಪ್ಪ ಆಚಾರ್ – ಗಣಿ ಮತ್ತು ಭೂವಿಜ್ಞಾನ
ಸಿ.ಸಿ.ಪಾಟೀಲ್ – ಲೋಕೋಪಯೋಗಿ

The post ಸಿದ್ಧವಾಯ್ತು ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿ: ಯಾವ ಖಾತೆ ಯಾರಿಗೆ ಹಂಚಲಾಗಿದೆ : ಇಲ್ಲಿದೆ ವಿವರ appeared first on Hai Sandur kannada fortnightly news paper.

]]>
https://haisandur.com/2021/08/07/new-ministers-account-distribution-list-which-account-shared/feed/ 0
ಜಮೀರ್​ ಮನೆ ಮೇಲೆ ED ದಾಳಿ ಹಿಂದೆ ಇದೆಯಾ ಡಿಕೆಶಿ ಕೈವಾಡ? https://haisandur.com/2021/08/06/is-there-an-ed-attack-on-jameers-house/ https://haisandur.com/2021/08/06/is-there-an-ed-attack-on-jameers-house/#respond Fri, 06 Aug 2021 06:33:34 +0000 http://haisandur.com/?p=18568 ಜುಲೈ 5ರಂದು ಇ.ಡಿ(ED) ಅಧಿಕಾರಿಗಳು ಏಕಕಾಲಕ್ಕೆ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್‌ ಖಾನ್ಗೆ ಸಂಬಂಧಿಸಿದ ಆರು ಕಡೆ ದಾಳಿ ನಡೆಸಿದ್ರು. ಜಮೀರ್‌ಗೆ ಸೇರಿದ ಮೂರು ಮನೆ, ಯುಬಿ ಸಿಟಿಯಲ್ಲಿರೋ ಫ್ಲ್ಯಾಟ್, ನ್ಯಾಷನಲ್‌ ಟ್ರಾವೆಲ್ಸ್ ಕಚೇರಿ, ಕಂಟೋನ್ಮೆಂಟ್ ಬಳಿಯ ಬಂಗಲೆ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ. ಸತತ 23 ಗಂಟೆಗಳ ಕಾಲ ಇಡಿ ಶೋಧ ಕಾರ್ಯ ನಡೆಸಿ SBI, ಜನತಾ ಕೋ-ಆಪರೇಟಿವ್ ಬ್ಯಾಂಕ್ನ ವಹಿವಾಟು ಸ್ಟೇಟ್ಮೆಂಟ್, ಬ್ಯಾಂಕ್‌ ದಾಖಲೆಗಳನ್ನ ಕೊಂಡೊಯ್ದಿದ್ದಾರೆ. ಹಾಗೂ ಇಡಿ ಅಧಿಕಾರಿಗಳು 2004ರಲ್ಲಿ […]

The post ಜಮೀರ್​ ಮನೆ ಮೇಲೆ ED ದಾಳಿ ಹಿಂದೆ ಇದೆಯಾ ಡಿಕೆಶಿ ಕೈವಾಡ? appeared first on Hai Sandur kannada fortnightly news paper.

]]>
ಜುಲೈ 5ರಂದು ಇ.ಡಿ(ED) ಅಧಿಕಾರಿಗಳು ಏಕಕಾಲಕ್ಕೆ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್‌ ಖಾನ್ಗೆ ಸಂಬಂಧಿಸಿದ ಆರು ಕಡೆ ದಾಳಿ ನಡೆಸಿದ್ರು. ಜಮೀರ್‌ಗೆ ಸೇರಿದ ಮೂರು ಮನೆ, ಯುಬಿ ಸಿಟಿಯಲ್ಲಿರೋ ಫ್ಲ್ಯಾಟ್, ನ್ಯಾಷನಲ್‌ ಟ್ರಾವೆಲ್ಸ್ ಕಚೇರಿ, ಕಂಟೋನ್ಮೆಂಟ್ ಬಳಿಯ ಬಂಗಲೆ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ. ಸತತ 23 ಗಂಟೆಗಳ ಕಾಲ ಇಡಿ ಶೋಧ ಕಾರ್ಯ ನಡೆಸಿ SBI, ಜನತಾ ಕೋ-ಆಪರೇಟಿವ್ ಬ್ಯಾಂಕ್ನ ವಹಿವಾಟು ಸ್ಟೇಟ್ಮೆಂಟ್, ಬ್ಯಾಂಕ್‌ ದಾಖಲೆಗಳನ್ನ ಕೊಂಡೊಯ್ದಿದ್ದಾರೆ. ಹಾಗೂ ಇಡಿ ಅಧಿಕಾರಿಗಳು 2004ರಲ್ಲಿ ಇದ್ದ ಬಂಬೂ ಬಜಾರ್‌ ಬಳಿಯ ಜಾಗದ ಸ್ಟ್ಯಾಂಡರ್ಡ್‌ ರೇಟ್‌ ಲೆಕ್ಕ ಹಾಕಿದ್ದಾರೆ. ಮನೆ ನಿರ್ಮಾಣದ ಸಮಯದಲ್ಲಿ ಹಣ ಪಾವತಿ ಮಾಹಿತಿ, ಆದಾಯ ಮೂಲದ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ. ಹಾಗೂ ಭವ್ಯ ಬಂಗಲೆ, ಜಮೀನಿನ ಹಿಂದಿನ ವೆಚ್ಚದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನು ಇ.ಡಿ ತೆಗೆದುಕೊಂಡು ಹೋದ ದಾಖಲೆಗಳ ಪರಿಶೀಲನೆ ಮಾಡಿ ಮತ್ತೆ ಜಮೀರ್ರನ್ನ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಇಡಿಯಿಂದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ.

ಜಮೀರ್ ನಿವಾಸಕ್ಕೆ ಮಾಜಿ ಪೊಲೀಸ್ ಅಧಿಕಾರಿ ಜಿ.ಎ ಬಾವ ಆಗಮಿಸಿದ್ದು ಜಮೀರ್ ನಿದ್ದೆಯಲ್ಲಿರುವ ಕಾರಣ ಭೇಟಿಗೆ ನಿರಾಕರಿಸಿದ್ದಾರೆ. ಹೀಗಾಗಿ ವಾಪಸ್ ತೆರಳಿದ್ದಾರೆ.

ಜಮೀರ್​ ಮನೆ ಮೇಲೆ ED ದಾಳಿ ಹಿಂದೆ ಡಿಕೆಶಿ ಕೈವಾಡ:
ಜಮೀರ್ ಮನೆ ಮೇಲೆ ದಾಳಿ ಕೇಸ್​ ಸಂಬಂಧ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಇ.ಡಿ ದಾಳಿಕೆ ಡಿಕೆ ಶಿವಕುಮಾರ್ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಪದೇಪದೆ ಸಿದ್ದರಾಮಯ್ಯ ಮುಂದಿನ ಸಿಎಂ ಎನ್ನುತ್ತಿದ್ದರು. ಇದು ಡಿ.ಕೆ.ಶಿವಕುಮಾರ್‌ಗೆ ಅಜೀರ್ಣವಾಗಿರಬೇಕು. ಡಿ.ಕೆ.ಶಿವಕುಮಾರ್‌ಗೆ ಐಟಿ, ಇಡಿ ಲಿಂಕ್ ಜಾಸ್ತಿ ಬೆಳೆದಿದೆ. ಹೀಗಾಗಿ ಅವರೇ ಏಕೆ ED ದಾಳಿ ಮಾಡಿಸಿರಬಾರದು? ಐಟಿ, ಇಡಿ ಅಧಿಕಾರಿಗಳು ಅವರ ಕೆಲಸ ಅವರು ಮಾಡ್ತಾರೆ. ವ್ಯವಹಾರಗಳು ಸರಿ ಇದ್ದಾಗ ಹೆದರುವ ಅಗತ್ಯವೇ ಇರಲ್ಲ. ಐಟಿ, ಇಡಿಯವರು ಕೇಳಿದ ದಾಖಲೆಗಳನ್ನು ಕೊಟ್ಟರೆ ಸಾಕು. ಇದನ್ನ ನೋಡಿದರೆ ಏನೋ ವ್ಯವಹಾರ ಸರಿ ಇಲ್ಲ ಅನಿಸ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಜಮೀರ್‌ಗೆ ಕಂಟಕವಾಗಿದ್ದೇ 90 ಕೋಟಿಯ ಅವ್ಯವಹಾರ
ಕೋಟಿ ಕೋಟಿ ಬೆಲೆ ಬಾಳುವ ಆಸ್ತಿ ವಿಚಾರವಾಗಿ ಡೀಲ್ ಮಾಡಿದ್ದ ಜಮೀರ್, ರಿಚ್‌ಮಂಡ್‌ ಟೌನ್ ಬಳಿಯ ಆಸ್ತಿಯನ್ನ ಬರೋಬ್ಬರಿ 90 ಕೋಟಿ ರೂಪಾಯಿಗೆ ಮಾರಿದ್ರಂತೆ. ಆದ್ರೆ, 90 ಕೋಟಿಗೆ ಸೇಲ್ ಆಗಿದ್ದ ಆಸ್ತಿಯನ್ನ ಕೇವಲ 9.38 ಕೋಟಿ ರೂಪಾಯಿಗೆ ಮಾರಿದ್ದಾಗೆ ಜಮೀರ್ ಮಾಹಿತಿ ನೀಡಿದ್ರು ಎನ್ನಲಾಗಿದೆ. ಈ ಡೀಲ್‌ನಲ್ಲಿ 80 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಅಂತಾ ಆರೋಪಿಸಿ ಬಿಜೆಪಿ ಮುಖಂಡ ಎನ್‌.ಆರ್ ರಮೇಶ್ ಇಡಿಗೆ ದೂರು ಕೊಟ್ಟಿದ್ರು. ಇದೇ 90 ಕೋಟಿ ರೂಪಾಯಿ ಮೇಲೆ ಕಣ್ಣಿಟ್ಟಿದ್ದ ಇ.ಡಿ ದಾಳಿ ನಡೆಸಿದೆ ಎನ್ನಲಾಗಿದೆ.

ಕೋಟಿ ಕೋಟಿ ಬೆಲೆ ಬಾಳುವ ಭವ್ಯ ಬಂಗಲೆ
ಇನ್ನು ಜಮೀರ್‌ ಕಣ್ಣು ಕುಕ್ಕೋ ಬಂಗಲೆಯನ್ನು ಕಟ್ಟಿದ್ದಾರೆ. ಅರಮನೆಯನ್ನೂ ಮೀರಿಸೋ ಭವ್ಯ ಬಂಗಲೆಯನ್ನ ಕೋಟಿ ಕೋಟಿ ವೆಚ್ಚದಲ್ಲಿ ಜಮೀರ್ ನಿರ್ಮಿಸಿದ್ರು. ಆದ್ರೀಗ ಕೋಟಿ ಕೋಟೆಯನ್ನು ಇಂಚಿಂಚೂ ಅಳತೆ ಮಾಡಿರೋ ಇ.ಡಿ, ಬಂಗಲೆಗೆ ಸಂಬಂಧಿಸಿದ ದಾಖಲೆ ಪರಿಶೀಲಿಸಿದೆ. ಇದೇ ಬಂಗಲೆಗೆ ಸುರಿದ ದುಡ್ಡಿನ ಮೂಲವೇ ಈಗ ಜಮೀರ್‌ಗೆ ಉರುಳಾಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ.

ಅಂದಹಾಗೆ ಮೂರು ಮನೆಯ ಜತೆಗೆ ಯುಬಿ ಸಿಟಿಯಲ್ಲಿ ಫ್ಲ್ಯಾಟ್ ಹೊಂದಿರುವ ಜಮೀರ್, ಕಂಟೋನ್ಮೆಂಟ್ ಬಳಿ ಕೋಟ್ಯಂತರ ಭವ್ಯ ಬಂಗಲೆಯನ್ನ ನಿರ್ಮಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಬ್ಯುಸಿನೆಸ್ ಮನ್ ಆಗಿರೋ ಜಮೀರ್, ನ್ಯಾಷನಲ್ ಟ್ರಾವೆಲ್ಸ್ ನಡೆಸ್ತಿದ್ದು ಕೋಟ್ಯಂತರ ರೂಪಾಯಿ ವ್ಯವಹಾರ ಮಾಡಿರೋ ಆರೋಪವಿದೆ. ಹಾಗೆಯೇ ರಿಚ್‌ಮಂಡ್ ಟೌನ್‌ ಬಳಿ ₹7 ಕೋಟಿ ರೂಪಾಯಿ ಒಡೆತನದ ಸ್ಥಿರಾಸ್ತಿ, ಶಿವಾಜಿನಗರದ ಸ್ಟೇಷನ್ ರಸ್ತೆ ಬಳಿಯೂ ₹30 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅಲ್ಲದೇ, ಸದಾಶಿವನಗರದಲ್ಲಿ ₹2.34 ಕೋಟಿ ಆಸ್ತಿ ಹೊಂದಿರುವ ಜಮೀರ್, ಶ್ರೀಲಂಕಾದಲ್ಲಿ ಕ್ಯಾಸಿನೋ ನಡೆಸ್ತಿರುವ ಅನುಮಾನವೂ ಇಡಿ ಅಧಿಕಾರಿಗಳಿಗೆ ಇದೆ.

The post ಜಮೀರ್​ ಮನೆ ಮೇಲೆ ED ದಾಳಿ ಹಿಂದೆ ಇದೆಯಾ ಡಿಕೆಶಿ ಕೈವಾಡ? appeared first on Hai Sandur kannada fortnightly news paper.

]]>
https://haisandur.com/2021/08/06/is-there-an-ed-attack-on-jameers-house/feed/ 0
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬ್ರಿಟಿಷ್ ಹೈ ಕಮಿಷನರ್ https://haisandur.com/2021/08/05/british-high-commissioner-who-met-chief-minister-basavaraja-bommai/ https://haisandur.com/2021/08/05/british-high-commissioner-who-met-chief-minister-basavaraja-bommai/#respond Thu, 05 Aug 2021 13:02:46 +0000 http://haisandur.com/?p=18564 ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರನ್ನು ಭೇಟಿಯಾಗಿ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಬಲಪಡಿಸುವ ಕುರಿತು ಮಹತ್ವದ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯದ ಹೂಡಿಕೆದಾರ ಸ್ನೇಹಿ ವಾತಾವರಣದ ಸದುಪಯೋಗ ಪಡೆಯುವಂತೆ ಮುಖ್ಯಮಂತ್ರಿಗಳು ಬ್ರಿಟಿಷ್ ಹೈ ಕಮಿಷನರ್ ಅವರಿಗೆ ಸಲಹೆ ಮಾಡಿದರು. ಕರ್ನಾಟಕ ಅತ್ಯಂತ ಪ್ರಗತಿ ಪರ ರಾಜ್ಯವಾಗಿದ್ದು, ಹೂಡಿಕೆಗೆ ಅತ್ಯುತ್ತಮ ಪೂರಕ ವಾತಾವರಣ ಹೊಂದಿದೆ. ಕೈಗಾರಿಕೋದ್ಯಮಗಳ ಸ್ಥಾಪನೆಗೆ ತ್ವರಿತ ಅನುಮೋದನೆ ನೀಡುವ ವ್ಯವಸ್ಥೆ ಜಾರಿಯಲ್ಲಿದೆ. ತಂತ್ರಜ್ಞಾನ, […]

The post ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬ್ರಿಟಿಷ್ ಹೈ ಕಮಿಷನರ್ appeared first on Hai Sandur kannada fortnightly news paper.

]]>
ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರನ್ನು ಭೇಟಿಯಾಗಿ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಬಲಪಡಿಸುವ ಕುರಿತು ಮಹತ್ವದ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ರಾಜ್ಯದ ಹೂಡಿಕೆದಾರ ಸ್ನೇಹಿ ವಾತಾವರಣದ ಸದುಪಯೋಗ ಪಡೆಯುವಂತೆ ಮುಖ್ಯಮಂತ್ರಿಗಳು ಬ್ರಿಟಿಷ್ ಹೈ ಕಮಿಷನರ್ ಅವರಿಗೆ ಸಲಹೆ ಮಾಡಿದರು.

ಕರ್ನಾಟಕ ಅತ್ಯಂತ ಪ್ರಗತಿ ಪರ ರಾಜ್ಯವಾಗಿದ್ದು, ಹೂಡಿಕೆಗೆ ಅತ್ಯುತ್ತಮ ಪೂರಕ ವಾತಾವರಣ ಹೊಂದಿದೆ. ಕೈಗಾರಿಕೋದ್ಯಮಗಳ ಸ್ಥಾಪನೆಗೆ ತ್ವರಿತ ಅನುಮೋದನೆ ನೀಡುವ ವ್ಯವಸ್ಥೆ ಜಾರಿಯಲ್ಲಿದೆ. ತಂತ್ರಜ್ಞಾನ, ಶಿಕ್ಷಣದಲ್ಲಿ ಮುನ್ನಡೆ ಸಾಧಿಸಿರುವ ರಾಜ್ಯವಾಗಿದ್ದು, ಅತ್ಯುತ್ತಮ ಕುಶಲ ಮಾನವ ಸಂಪನ್ಮೂಲವನ್ನೂ ಹೊಂದಿದೆ. ಯು.ಕೆ. ಮೂಲದ ಹಲವು ಪ್ರತಿಷ್ಠಿತ ಕಂಪೆನಿಗಳಿಗೆ ನೆಲೆಯಾಗಿದ್ದು, ಯು.ಕೆ. ಮೂಲದ ಕಂಪೆನಿಗಳು ಗಣನೀಯವಾಗಿ ಹೂಡಿಕೆ ಮಾಡಿವೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಆರೋಗ್ಯ, ಸಂಸ್ಕೃತಿ, ಭಾಷಾ ವಿಷಯಗಳು ಹೀಗೆ ವಿವಿಧ ಕ್ಷೇತ್ರಗಳಿಗೆ ಪ್ರತ್ಯೇಕ ವಿಶ್ವವಿದ್ಯಾಲಯಗಳನ್ನು ಹೊಂದಿರುವ ಕರ್ನಾಟಕದಲ್ಲಿ ಅತಿ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ವಿವಿಧ ಬಹುರಾಷ್ಟ್ರೀಯ ಕಂಪೆನಿಗಳ 80ಕ್ಕೂ ಹೆಚ್ಚು ಹೈ-ಟೆಕ್ ಸಂಶೋಧನಾ ಸಂಸ್ಥೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಪೂರ್ವದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತವಾಗಿರುವ ಬೆಂಗಳೂರು ನಗರ ದೇಶ, ವಿದೇಶಗಳ ಜನರಿಗೆ ನೆಲೆಯಾಗಿದೆ ಎಂದು ತಿಳಿಸಿದರು.

ಇದರೊಂದಿಗೆ ಆರೋಗ್ಯ, ಶಿಕ್ಷಣ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಪರಸ್ಪರ ಸಹಯೋಗದೊಂದಿಗೆ ಕಾರ್ಯನಿರ್ವಹಿಸುವ ಕುರಿತು ಚರ್ಚಿಸಲಾಯಿತು.

ಬೆಂಗಳೂರು ಸಂಚಾರ ನಿರ್ವಹಣೆಯ ಕುರಿತಂತೆ ಯು.ಕೆ. ಸಹಯೋಗದ ಕುರಿತೂ ಸಭೆಯಲ್ಲಿ ಚರ್ಚಿಸಲಾಯಿತು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವ ಸಂದರ್ಭದಲ್ಲಿ ಪಠ್ಯಕ್ರಮ ರೂಪಿಸುವ ನಿಟ್ಟಿನಲ್ಲಿಯೂ ಯು.ಕೆ. ಸಹಯೋಗ ಪಡೆಯಲು ಇರುವ ಅವಕಾಶಗಳ ಕುರಿತು ಚರ್ಚಿಸಲಾಯಿತು.

ಕರ್ನಾಟಕ ಯು.ಕೆ. ಯೊಂದಿಗೆ ಹೂಡಿಕೆ ಒಪ್ಪಂದಗಳ ಜೊತೆಗೆ ಶಿಕ್ಷಣ, ಆರೋಗ್ಯ ಮತ್ತು ಹವಾಮಾನ ಬದಲಾವಣೆ ಮೊದಲಾದ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡುವ ಕುರಿತು ಉಭಯ ನಾಯಕರು ಸಹಮತ ವ್ಯಕ್ತಪಡಿಸಿದರು.

ಬೆಂಗಳೂರಿನ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಜೆರೆಮಿ ಬೆಡ್ ಫೋರ್ಡ್, ಸಚಿವರಾದ ಆರ್. ಅಶೋಕ್, ಡಾ. ಸಿ.ಎನ್. ಅಶ್ವತ್ಥನಾರಾಯಣ, ಮುಖ್ಯಮಂತ್ರಿಗಳ ಕಾರ್ಯದರ್ಶಿ ವಿ. ಪೊನ್ನುರಾಜ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಹಾಜರಿದ್ದರು.

The post ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬ್ರಿಟಿಷ್ ಹೈ ಕಮಿಷನರ್ appeared first on Hai Sandur kannada fortnightly news paper.

]]>
https://haisandur.com/2021/08/05/british-high-commissioner-who-met-chief-minister-basavaraja-bommai/feed/ 0
ಬಸವರಾಜ ಬೊಮ್ಮಾಯಿ ಸರ್ಕಾರದ ನೂತನ ಸಂಪುಟ ರಚನೆ: ಯಾರಿಗೆ ಸಿಗಲಿದೆ ಸಚಿವ ಸ್ಥಾನ? ಯಾರಿಗೆ ಕೈತಪ್ಪಲಿದೆ .? https://haisandur.com/2021/08/02/basavaraja-bommayi-government-new-volume-structure/ https://haisandur.com/2021/08/02/basavaraja-bommayi-government-new-volume-structure/#respond Mon, 02 Aug 2021 04:55:34 +0000 http://haisandur.com/?p=18476  ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದಲ್ಲಿ ಯಾರಿದ್ದಾರೆ ಎಂಬ ಕುತೂಹಲ ಇದೀಗ ಕೆರಳಿಸಿದೆ. ಸಂಪುಟಕ್ಕೆ ಸೇರ್ಪಡೆಯಾಗಲು ಅಂತಿಮ ಹಂತದ ಕಸರತ್ತನ್ನು ಆಕಾಂಕ್ಷಿಗಳು ನಡೆಸುತ್ತಿದ್ದಾರೆ. ಇನ್ನು ಯಡಿಯೂರಪ್ಪ ಸಂಪುಟದಲ್ಲಿ ಇದ್ದ ಹಲವರಿಗೆ ಹೊಸ ಸಂಪುಟದಲ್ಲಿ ನಾವು ಇರುತ್ತೇವೋ ಇಲ್ಲವೋ ಎಂಬ ಆತಂಕ ಶುರುವಾಗಿದೆ. ಇದೀಗ ಅಂತಿಮ ಹಂತದ ಲಾಬಿ ಮುಂದುವರಿದಿದೆ. ಹೈಕಮಾಂಡ್‌ ಬುಲಾವಿನ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿದ್ದಾರೆ. ಸಂಪುಟ ವಿಸ್ತರಣೆ ವಿಚಾರವಾಗಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಜೊತೆ ಮಾತುಕತೆ […]

The post ಬಸವರಾಜ ಬೊಮ್ಮಾಯಿ ಸರ್ಕಾರದ ನೂತನ ಸಂಪುಟ ರಚನೆ: ಯಾರಿಗೆ ಸಿಗಲಿದೆ ಸಚಿವ ಸ್ಥಾನ? ಯಾರಿಗೆ ಕೈತಪ್ಪಲಿದೆ .? appeared first on Hai Sandur kannada fortnightly news paper.

]]>
 ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದಲ್ಲಿ ಯಾರಿದ್ದಾರೆ ಎಂಬ ಕುತೂಹಲ ಇದೀಗ ಕೆರಳಿಸಿದೆ. ಸಂಪುಟಕ್ಕೆ ಸೇರ್ಪಡೆಯಾಗಲು ಅಂತಿಮ ಹಂತದ ಕಸರತ್ತನ್ನು ಆಕಾಂಕ್ಷಿಗಳು ನಡೆಸುತ್ತಿದ್ದಾರೆ. ಇನ್ನು ಯಡಿಯೂರಪ್ಪ ಸಂಪುಟದಲ್ಲಿ ಇದ್ದ ಹಲವರಿಗೆ ಹೊಸ ಸಂಪುಟದಲ್ಲಿ ನಾವು ಇರುತ್ತೇವೋ ಇಲ್ಲವೋ ಎಂಬ ಆತಂಕ ಶುರುವಾಗಿದೆ. ಇದೀಗ ಅಂತಿಮ ಹಂತದ ಲಾಬಿ ಮುಂದುವರಿದಿದೆ.

ಹೈಕಮಾಂಡ್‌ ಬುಲಾವಿನ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿದ್ದಾರೆ. ಸಂಪುಟ ವಿಸ್ತರಣೆ ವಿಚಾರವಾಗಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ. ಹೈಕಮಾಂಡ್ ಜೊತೆಗಿನ ಮಾತುಕತೆ ಬಳಿಕ ಹೊಸ ಸಂಪುಟದಲ್ಲಿ ಯಾರು ಇರಲಿದ್ದಾರೆ ಎಂಬುವುದು ಅಂತಿಮಗೊಳ್ಳಲಿದೆ.

ಸದ್ಯ ಎಂ ಚಂದ್ರಪ್ಪ, ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ್,ಎಂಪಿ ಕುಮಾರಸ್ವಾಮಿ ಸೇರಿದಂತೆ ಹಲವರು ಸಚಿವಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಪ್ರಬಲ ಆಕಾಂಕ್ಷಿಯಾಗಿರುವ ಎಂಪಿ ಕುಮಾರಸ್ವಾಮಿ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಇನ್ನು ತೆರೆಮರೆಯಲ್ಲಿ ಹಲವು ಶಾಸಕರು ಕಸರತ್ತು ನಡೆಸುತ್ತಿದ್ದಾರೆ. ನೆಹರೂ ಓಲೆಕಾರ್ ಅವರ ಬೆಂಬಲಿಗರು ಬಿಎಸ್‌ವೈ ನಿವಾಸದ ಮುಂದೆ ಘೋಷಣೆ ಕೂಗಿದ್ದಾರೆ. ನೆಹರೂ ಓಲೆಕಾರ್ ಅವರು ಮಂತ್ರಿಗಿರಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯಮಟ್ಟದಲ್ಲಿ ಒಂದಿಷ್ಟು ಜನರು ಲಾಬಿ ನಡೆಸುತ್ತಿದ್ದರೆ ಬಿಎಸ್‌ವೈ ಸರ್ಕಾರದಲ್ಲಿ ಸಚಿವರಾಗಿದ್ದ ಕೆಲವರು ದೆಹಲಿ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ. ಸಿಎಂ ದೆಹಲಿಯಲ್ಲಿ ಇರುವುದರಿಂದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಮಾಜಿ ಸಚಿವ ಸಿ.ಸಿ ಪಾಟೀಲ್ ಅವರು ದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ.

ಬಹುತೇಕ ವರಿಷ್ಠರು ಸೋಮವಾರವೇ ನೂತನ ಸಂಪುಟ ರಚನೆಗೆ ಅನುಮತಿ ನೀಡುವ ಸಾಧ್ಯತೆ ಇದೆ. ವರಿಷ್ಠರ ಅನುಮತಿ ಸಿಕ್ಕ ಬಳಿಕ ಅಂತಿಮ ಘೋಷಣೆ ಆಗಲಿದೆ. ಒಟ್ಟಿನಲ್ಲಿ ಯಾರಿಗೆ ಮಂತ್ರಿಗಿರಿ ಸಿಗುತ್ತೆ ಯಾರಿಗೆ ಕೈತಪ್ಪುತ್ತದೆ ಎಂಬುವುದಕ್ಕೆ ಶೀಘ್ರದಲ್ಲೇ ಉತ್ತರ ಸಿಗಲಿದೆ.

The post ಬಸವರಾಜ ಬೊಮ್ಮಾಯಿ ಸರ್ಕಾರದ ನೂತನ ಸಂಪುಟ ರಚನೆ: ಯಾರಿಗೆ ಸಿಗಲಿದೆ ಸಚಿವ ಸ್ಥಾನ? ಯಾರಿಗೆ ಕೈತಪ್ಪಲಿದೆ .? appeared first on Hai Sandur kannada fortnightly news paper.

]]>
https://haisandur.com/2021/08/02/basavaraja-bommayi-government-new-volume-structure/feed/ 0
ಸಚಿವ ಸಂಪುಟದಲ್ಲಿ ಬಳ್ಳಾರಿ, ವಿಜಯನಗರದಿಂದ ಯಾರಿಗೆ ಸಿಗಲಿದೆ ಸಚಿವ ಸ್ಥಾನ.? https://haisandur.com/2021/07/31/who-will-get-the-seat-of-bellary-and-vijayanagar-in-the-cabinet/ https://haisandur.com/2021/07/31/who-will-get-the-seat-of-bellary-and-vijayanagar-in-the-cabinet/#respond Sat, 31 Jul 2021 07:21:46 +0000 http://haisandur.com/?p=18397 ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಸೇರುವ ಶಾಸಕರು ಯಾರು? ಎಂಬುದು ಎಲ್ಲರ ಕುತೂಹಲವಾಗಿದೆ. ಸಚಿವರಾಗಲು ಗಣಿ ನಗರಿಯ ಬಿಜೆಪಿ ಶಾಸಕರು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. 2008ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಅಖಂಡವಾಗಿದ್ದ ಬಳ್ಳಾರಿಯಲ್ಲಿ ಮೂವರು ಸಚಿವರಿದ್ದರು. ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಬಿಜೆಪಿ ಶಾಸಕರು ಸಚಿವ ಸ್ಥಾನ ಹಾಗೂ ಉಸ್ತುವಾರಿಯನ್ನು ಪಡೆಯಲು ಲಾಬಿ ನಡೆಸುತ್ತಿದ್ದಾರೆ. ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದ ಹಾಗೆ ಗಣಿ ನಗರಿಯಲ್ಲಿ ಎಲ್ಲಿಲ್ಲದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಸವರಾಜ ಬೊಮ್ಮಾಯಿ ಸಂಪುಟವನ್ನು […]

The post ಸಚಿವ ಸಂಪುಟದಲ್ಲಿ ಬಳ್ಳಾರಿ, ವಿಜಯನಗರದಿಂದ ಯಾರಿಗೆ ಸಿಗಲಿದೆ ಸಚಿವ ಸ್ಥಾನ.? appeared first on Hai Sandur kannada fortnightly news paper.

]]>
ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಸೇರುವ ಶಾಸಕರು ಯಾರು? ಎಂಬುದು ಎಲ್ಲರ ಕುತೂಹಲವಾಗಿದೆ. ಸಚಿವರಾಗಲು ಗಣಿ ನಗರಿಯ ಬಿಜೆಪಿ ಶಾಸಕರು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. 2008ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಅಖಂಡವಾಗಿದ್ದ ಬಳ್ಳಾರಿಯಲ್ಲಿ ಮೂವರು ಸಚಿವರಿದ್ದರು.

ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಬಿಜೆಪಿ ಶಾಸಕರು ಸಚಿವ ಸ್ಥಾನ ಹಾಗೂ ಉಸ್ತುವಾರಿಯನ್ನು ಪಡೆಯಲು ಲಾಬಿ ನಡೆಸುತ್ತಿದ್ದಾರೆ. ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದ ಹಾಗೆ ಗಣಿ ನಗರಿಯಲ್ಲಿ ಎಲ್ಲಿಲ್ಲದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಬಸವರಾಜ ಬೊಮ್ಮಾಯಿ ಸಂಪುಟವನ್ನು ಬಿ. ಶ್ರೀರಾಮುಲು ಸೇರುವುದು ಖಚಿತವಾಗಿದೆ. ಅವರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಶಾಸಕರು. ಆದರೆ ಅವಳಿ ಜಿಲ್ಲೆಯ ರಾಜಕೀಯದಲ್ಲಿ ಸಾಕಷ್ಟು ಪ್ರಭಾವವನ್ನು ಹೊಂದಿದ್ದಾರೆ. ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಜೊತೆಗೆ ಅವರಿಗೆ ಯಾವ ಖಾತೆ ಸಿಗಲಿದೆ? ಎಂಬ ಲೆಕ್ಕಾಚಾರ ಜೋರಾಗಿದೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೇ ಶ್ರೀರಾಮುಲು ಉಪ ಮುಖ್ಯಯಾಗಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಮೊದಲು ಆರೋಗ್ಯ ಖಾತೆ ನೀಡಲಾಗಿತ್ತು. ಬಳಿಕ ಸಮಾಜ ಕಲ್ಯಾಣ ಖಾತೆ ನೀಡಲಾಯಿತು. ಈ ಬಾರಿ ಡಿಸಿಎಂ ಪಟ್ಟ ಒಲಿದು ಬಂದಿದೆ.

ಯಾವ-ಯಾವ ಶಾಸಕರು? ಅವಳಿ ಜಿಲ್ಲೆಗಳಾದ ವಿಜಯನಗರ ಮತ್ತು ಬಳ್ಳಾರಿಯಲ್ಲಿ ಬಿಜೆಪಿ ಶಾಸಕರು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲೆಯ ಶಾಸಕರ ಚಿತ್ತ ಸದ್ಯ ಸಚಿವ ಸಂಪುಟ ವಿಸ್ತರಣೆಯ ಮೇಲೆ ಇದೆ. ಸಚಿವ ಸ್ಥಾನ ಪಡೆಯಲು ಶಾಸಕರ ನಡುವೆ ತೀವ್ರ ಪೈಪೋಟಿ ಸಹ ಇದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಕ್ಷೇತ್ರದಿಂದ ಎಂ. ಎಸ್. ಸೋಮಲಿಂಗಪ್ಪ, ಬಳ್ಳಾರಿ ನಗರ ಕ್ಷೇತ್ರದಿಂದ ಜಿ. ಸೋಮಶೇಖರ ರೆಡ್ಡಿ ಬಿಜೆಪಿ ಶಾಸಕರಾಗಿದ್ದಾರೆ. ಕಂಪ್ಲಿ, ಸಂಡೂರು, ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ವಿಜಯನಗರ ಕ್ಷೇತ್ರ (ಆನಂದ್ ಸಿಂಗ್), ಕೂಡ್ಲಿಗಿ ಕ್ಷೇತ್ರ (ಎನ್. ವೈ. ಗೋಪಾಲಕೃಷ್ಣ), ಹರಪನಹಳ್ಳಿ ಕ್ಷೇತ್ರ (ಜಿ. ಕರುಣಾಕರ ರೆಡ್ಡಿ) ಬಿಜೆಪಿ ಶಾಸಕರಾಗಿದ್ದಾರೆ. ಜಿಲ್ಲೆಯ ಇನ್ನುಳಿದ ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಯಡಿಯೂರಪ್ಪ ಸಂಪುಟದಲ್ಲಿ ಆನಂದ್ ಸಿಂಗ್ ಸಚಿವರಾಗಿದ್ದರು.

ಬಳ್ಳಾರಿ ಕ್ಷೇತ್ರದ ಶಾಸಕ ಜಿ. ಸೋಮಶೇಖರ ರೆಡ್ಡಿ ಹಾಗೂ ಸಿರುಗುಪ್ಪ ಶಾಸಕ ಎಂ. ಎಸ್. ಸೋಮಲಿಂಗಪ್ಪ ಸಚಿವ ಸ್ಥಾನ ಪಡೆಯುವುದಕ್ಕೆ ತೆರೆಮರೆಯ ಕಸರತ್ತು ನಡೆಸಿದ್ದಾರೆ. ಸಚಿವ ಸ್ಥಾನದ ನಿರೀಕ್ಷೆ ಇದೆ ಎಂದು ಸೋಮಶೇಖರ ರೆಡ್ಡಿ ಬಹಿರಂಗ ಹೇಳಿಕೆಯನ್ನು ಸಹ ನೀಡಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ ಆನಂದ್ ಸಿಂಗ್ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಅವರಿಗೆ ಸಚಿವ ಸ್ಥಾನ ಲಭಿಸುವ ಸಾಧ್ಯತೆ ಹೆಚ್ಚಾಗಿದೆ. ಮತ್ತೊಂದೆಡೆ ಹರಪನಹಳ್ಳಿ ಶಾಸಕ ಜಿ. ಕರುಣಾಕರ ರೆಡ್ಡಿ ಮತ್ತು ಕೂಡ್ಲಿಗಿ ಕ್ಷೇತ್ರದ ಶಾಸಕ ಎನ್. ವೈ ಗೋಪಾಲಕೃಷ್ಣ 6 ಬಾರಿ ಶಾಸಕರಾಗಿದ್ದಾರೆ. ಆದ್ದರಿಂದ ಅವರು ಸಹ ಸಚಿವ ಸ್ಥಾನದ ಆಕಾಂಕ್ಷಿಗಳು.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರದ ಅಧಿಯಲ್ಲಿ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ‌ ಶಾಸಕ ದಿ. ಎಂ. ಪಿ. ಪ್ರಕಾಶ ಉಪ ಮುಖ್ಯಮಂತ್ರಿಯಾಗಿದ್ದರು. ಒಂದೂವರೆ ದಶಕದ ನಂತರ ರಾಜ್ಯದ ಬಿಜೆಪಿ ಸರಕಾರದ ಅವಧಿಯಲ್ಲಿ ಬಿ. ಶ್ರೀರಾಮುಲುಗೆ ಉಪ ಮುಖ್ಯ ಮಂತ್ರಿ ಸ್ಥಾನ ಒಲಿದರೆ ಜಿಲ್ಲೆಗೆ ಎರಡನೇ ಬಾರಿಗೆ ಉಪ ಮುಖ್ಯಮಂತ್ರಿ‌ಸ್ಥಾನ ದೊರಕಿದಂತಾಗುತ್ತದೆ. ಸಚಿವ ಸ್ಥಾನದ ವಿಚಾರದಲ್ಲಿ ವಿಜಯನಗರಕ್ಕೆ ಪ್ರತೇಕ ಸಚಿವ ಸ್ಥಾನ ನೀಡಬೇಕು ಎಂಬ ಮಾತು ಕೇಳಿ ಬರುತ್ತಿದೆ. ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗೆ ಆನಂದ್ ಸಿಂಗ್ ಉಸ್ತುವಾರಿಯಾಗಿದ್ದರು. ಈಗ ವಿಜಯನಗರ ಉಸ್ತುವಾರಿ ಆನಂದ್ ಸಿಂಗ್ ಪಾಲಾದರೆ ಬಿ.ಶ್ರೀರಾಮುಲುಗೆ ಚಿತ್ರದುರ್ಗದ ಜೊತೆ ಬಳ್ಳಾರಿ ಉಸ್ತುವಾರಿಯೂ ಸಿಗುವ ನಿರೀಕ್ಷೆ ಇದೆ.

ಬಳ್ಳಾರಿ ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಈ ಕುರಿತು ಮಾತನಾಡಿದ್ದಾರೆ. “ಅವಳಿ ಜಿಲ್ಲೆಗಳಾದ ವಿಜಯನಗರ ಮತ್ತು ಬಳ್ಳಾರಿಯ ಎಲ್ಲಾ‌ ಶಾಸಕರು ಸಚಿವ ಸ್ಥಾನ ಹಾಗೂ ಉಸ್ತುವಾರಿಯನ್ನು ಕೇಳಿದ್ದಾರೆ. ಈ ಕುರಿತು ನಮ್ಮ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ಅದಕ್ಕೆ ನಮ್ಮ ಪಕ್ಷದ ಶಾಸಕರು ತಲೆಬಾಗುತ್ತಾರೆ. ಇದರಲ್ಲಿ ಯಾವುದೇ ರೀತಿಯಲ್ಲಿ ಭಿನ್ನಭಿಪ್ರಾಯಗಳಿಲ್ಲ, ಎಲ್ಲರೂ ಒಂದಾಗಿರುತ್ತಾರೆ” ಎಂದು ಹೇಳಿದ್ದಾರೆ.

The post ಸಚಿವ ಸಂಪುಟದಲ್ಲಿ ಬಳ್ಳಾರಿ, ವಿಜಯನಗರದಿಂದ ಯಾರಿಗೆ ಸಿಗಲಿದೆ ಸಚಿವ ಸ್ಥಾನ.? appeared first on Hai Sandur kannada fortnightly news paper.

]]>
https://haisandur.com/2021/07/31/who-will-get-the-seat-of-bellary-and-vijayanagar-in-the-cabinet/feed/ 0
ರಾಜಕೀಯಕ್ಕೆ ಬರುವ ಸೂಚನೆ ಕೊಟ್ಟ ಅಂಬರೀಶ್ ಪುತ್ರ ಅಭಿಷೇಕ್ https://haisandur.com/2021/07/30/abhishek-son-o-ambarish-who-gave-notice-of-entering-politics/ https://haisandur.com/2021/07/30/abhishek-son-o-ambarish-who-gave-notice-of-entering-politics/#respond Fri, 30 Jul 2021 08:41:35 +0000 http://haisandur.com/?p=18374 ರೆಬೆಲ್ ಸ್ಟಾರ್ ಅಂಬರೀಶ್ ನಟ ಮಾತ್ರ ಅಲ್ಲ.. ಜನಪ್ರಿಯ ರಾಜಕಾರಣಿ ಕೂಡ ಹೌದು. ‘ಮಂಡ್ಯದ ಗಂಡು’ ಎಂದೇ ಖ್ಯಾತಿ ಪಡೆದಿದ್ದ ಅಂಬರೀಶ್ ಮಂಡ್ಯದಿಂದಲೇ ಮೂರು ಬಾರಿ ಸಂಸದರಾಗಿ ಆಯ್ಕೆ ಆಗಿದ್ದರು. ಅಂಬರೀಶ್ ನಿಧನದ ಬಳಿಕ ಪತ್ನಿ ಸುಮಲತಾ ಅಂಬರೀಶ್ ರಾಜಕೀಯ ಪ್ರವೇಶ ಮಾಡಿದರು. ಸ್ವಾಭಿಮಾನಿಯಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ ಸುಮಲತಾ ಅಂಬರೀಶ್ ಇದೀಗ ಮಂಡ್ಯದ ಸಂಸದೆಯಾಗಿದ್ದಾರೆ. ಈಗ ಅಂಬರೀಶ್ ಪುತ್ರ ನಟ ಅಭಿಷೇಕ್ ಕೂಡ ರಾಜಕೀಯಕ್ಕೆ ಧುಮುಕುವ ಇಂಗಿತ ವ್ಯಕ್ತಪಡಿಸಿದ್ದಾರೆ. ”ಜನ ಬಯಸಿದರೆ ಎಲೆಕ್ಷನ್‌ಗೆ ನಿಲ್ತೀನಿ. […]

The post ರಾಜಕೀಯಕ್ಕೆ ಬರುವ ಸೂಚನೆ ಕೊಟ್ಟ ಅಂಬರೀಶ್ ಪುತ್ರ ಅಭಿಷೇಕ್ appeared first on Hai Sandur kannada fortnightly news paper.

]]>
ರೆಬೆಲ್ ಸ್ಟಾರ್ ಅಂಬರೀಶ್ ನಟ ಮಾತ್ರ ಅಲ್ಲ.. ಜನಪ್ರಿಯ ರಾಜಕಾರಣಿ ಕೂಡ ಹೌದು. ‘ಮಂಡ್ಯದ ಗಂಡು’ ಎಂದೇ ಖ್ಯಾತಿ ಪಡೆದಿದ್ದ ಅಂಬರೀಶ್ ಮಂಡ್ಯದಿಂದಲೇ ಮೂರು ಬಾರಿ ಸಂಸದರಾಗಿ ಆಯ್ಕೆ ಆಗಿದ್ದರು. ಅಂಬರೀಶ್ ನಿಧನದ ಬಳಿಕ ಪತ್ನಿ ಸುಮಲತಾ ಅಂಬರೀಶ್ ರಾಜಕೀಯ ಪ್ರವೇಶ ಮಾಡಿದರು. ಸ್ವಾಭಿಮಾನಿಯಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ ಸುಮಲತಾ ಅಂಬರೀಶ್ ಇದೀಗ ಮಂಡ್ಯದ ಸಂಸದೆಯಾಗಿದ್ದಾರೆ.

ಈಗ ಅಂಬರೀಶ್ ಪುತ್ರ ನಟ ಅಭಿಷೇಕ್ ಕೂಡ ರಾಜಕೀಯಕ್ಕೆ ಧುಮುಕುವ ಇಂಗಿತ ವ್ಯಕ್ತಪಡಿಸಿದ್ದಾರೆ. ”ಜನ ಬಯಸಿದರೆ ಎಲೆಕ್ಷನ್‌ಗೆ ನಿಲ್ತೀನಿ. ಜನ ಬಯಸಿದರೆ ರಾಜಕೀಯಕ್ಕೆ ಬರ್ತೀನಿ” ಅಂತ ಹೇಳುವ ಮೂಲಕ ಭವಿಷ್ಯದಲ್ಲಿ ರಾಜಕಾರಣಕ್ಕೆ ಪದಾರ್ಪಣೆ ಮಾಡುವ ಸೂಚನೆಯನ್ನು ಅಭಿಷೇಕ್ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಳುಗನಹಳ್ಳಿಗೆ ತೆರಳಿದ್ದ ಅಭಿಷೇಕ್, ”ಭವಿಷ್ಯದಲ್ಲಿ ಏನೇನು ಬದಲಾವಣೆ ಆಗುತ್ತದೋ ಯಾರಿಗೆ ಗೊತ್ತು? ಜನ ಬಯಸಿದ್ದೇ ಆದರೆ ನಾನು ರಾಜಕೀಯಕ್ಕೆ ಬರ್ತೀನಿ. ಮಂಡ್ಯ ಜಿಲ್ಲೆಯ ಏಳೂ ಕ್ಷೇತ್ರಗಳಿಗೂ ಉತ್ತಮ ಶಾಸಕರು ಸಿಗಬೇಕು. ಒಳ್ಳೆಯ ಜನಪ್ರತಿನಿಧಿಗಳು ಸಿಗಬೇಕು” ಎಂದು ಮಾಧ್ಯಮಗಳ ಮುಂದೆ ಹೇಳಿದರು.

ತಂದೆ ಅಂಬರೀಶ್ ನಿಧನದ ಬಳಿಕ ತಾಯಿ ಸುಮಲತಾ ಅಂಬರೀಶ್ ಚುನಾವಣೆಗೆ ಸ್ಪರ್ಧಿಸಿದಾಗ, ಅಭಿಷೇಕ್ ಕೂಡ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಚಲನಚಿತ್ರ ನಟರ ಜೊತೆ ಮುಂದೆ ನಿಂತು ತಾಯಿಯ ಗೆಲುವಿಗಾಗಿ ಶ್ರಮಿಸಿದ್ದರು.

ಅಂದ್ಹಾಗೆ, ‘ಅಮರ್’ ಚಿತ್ರದ ಬಳಿಕ ಅಭಿಷೇಕ್ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದಲ್ಲಿ ಅಭಿಷೇಕ್ ಜೊತೆಗೆ ರಚಿತಾ ರಾಮ್ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ದುನಿಯಾ ಸೂರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

The post ರಾಜಕೀಯಕ್ಕೆ ಬರುವ ಸೂಚನೆ ಕೊಟ್ಟ ಅಂಬರೀಶ್ ಪುತ್ರ ಅಭಿಷೇಕ್ appeared first on Hai Sandur kannada fortnightly news paper.

]]>
https://haisandur.com/2021/07/30/abhishek-son-o-ambarish-who-gave-notice-of-entering-politics/feed/ 0
ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ https://haisandur.com/2021/07/30/mla-mahesh-barrage-against-rohini-sindhuri/ https://haisandur.com/2021/07/30/mla-mahesh-barrage-against-rohini-sindhuri/#respond Fri, 30 Jul 2021 07:10:14 +0000 http://haisandur.com/?p=18371 ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಿಂಗಂ ಅಲ್ಲ. ಮೈಸೂರು ಜನರನ್ನ ಮಂಗಂ ಮಾಡಲು ಹೊರಟಿದ್ದ ಪ್ರಚಾರ ಪ್ರಿಯೆ. ಅರಮನೆಯ ಆಸ್ತಿ ವ್ಯಾಜ್ಯ ಸಂಬಂಧ ಸುಪ್ರೀಂ ಕೋರ್ಟ್‌ವರೆಗೂ ಹೋದವರು ಮೂರನೇ ದಿನದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಪ್ರಮೋದಾ ದೇವಿ ಅವರ ಜೊತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಜಗತ್ತಿನ ಎಲ್ಲಿಯಾದರೂ ಹೀಗೆ ನಡೆಯುತ್ತದಾ? ಎಂದು ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಬ್ಬರ ಫೋಟೋ ತೋರಿಸಿ ವಾಗ್ದಾಳಿ ನಡೆಸಿದ್ದಾರೆ. ಸರ್ವೇ ನಂ. […]

The post ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ appeared first on Hai Sandur kannada fortnightly news paper.

]]>
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಿಂಗಂ ಅಲ್ಲ. ಮೈಸೂರು ಜನರನ್ನ ಮಂಗಂ ಮಾಡಲು ಹೊರಟಿದ್ದ ಪ್ರಚಾರ ಪ್ರಿಯೆ. ಅರಮನೆಯ ಆಸ್ತಿ ವ್ಯಾಜ್ಯ ಸಂಬಂಧ ಸುಪ್ರೀಂ ಕೋರ್ಟ್‌ವರೆಗೂ ಹೋದವರು ಮೂರನೇ ದಿನದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಪ್ರಮೋದಾ ದೇವಿ ಅವರ ಜೊತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಜಗತ್ತಿನ ಎಲ್ಲಿಯಾದರೂ ಹೀಗೆ ನಡೆಯುತ್ತದಾ? ಎಂದು ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಬ್ಬರ ಫೋಟೋ ತೋರಿಸಿ ವಾಗ್ದಾಳಿ ನಡೆಸಿದ್ದಾರೆ.

ಸರ್ವೇ ನಂ. 4 ವ್ಯಾಜ್ಯದಲ್ಲಿ ಜಿಲ್ಲಾಧಿಕಾರಿ ವಾದಿ ಮತ್ತು ರಾಜವಂಶಸ್ಥರು ಪ್ರತಿವಾದಿ. ಆದರೆ ಆ ಕೇಸ್ ಸುಪ್ರೀಂ ಕೋರ್ಟ್‌ನಲ್ಲಿ ಅಡ್ಮಿಟ್ ಆಗಲಿಲ್ಲ.‌ ಕೇಸ್ ವಜಾಗೊಂಡ ಮೂರನೇ ದಿನದಲ್ಲಿ ವಾದಿ, ಪ್ರತಿವಾದಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈಗ ಫೋಟೋ ತೆಗೆಸಿಕೊಳ್ಳುವ ನಿಮಗೆ, ರಾಜವಂಶದವರ ಇತಿಹಾಸ ಗೊತ್ತಿರಲಿಲ್ಲವೇ ? ಒಂದು ಕೋಟಿ ರೂಪಾಯಿಗಳ ದುರ್ಬಳಕೆ ಮಾಡಿಕೊಂಡಿರುವ ಕಾರಣಕ್ಕಾಗಿ ನಿಮ್ಮ ಮೇಲೆ ಕ್ರಮ ಆಗಬೇಕು ಎಂದು ಶಾಸಕ ಸಾ.ರಾ.ಮಹೇಶ್ ಆಗ್ರಹಿಸಿದ್ದಾರೆ.

ರೋಹಿಣಿ ಸಿಂಧೂರಿ ವಿರುದ್ಧ ಇನ್ನೂ ವಾಗ್ದಾಳಿ ಮುಂದುವರಿಸಿದ ಸಾ.ರಾ.ಮಹೇಶ್ ಅವರು ಭೂ ಹಗರಣದಿಂದ ತಮ್ಮ ವರ್ಗಾವಣೆಯಾಯ್ತು ಎಂದು ಕತೆ ಕಟ್ಟಿದ್ದರು. ಆದರೆ ಅವರು ಯಾವುದೇ ಭೂಮಿಯನ್ನು ಉಳಿಸಲಿಲ್ಲ. ಶರತ್‌ರನ್ನು 28 ದಿನದಲ್ಲಿ ವರ್ಗಾವಣೆ ಮಾಡಿಸಿದ್ದರು. ದಸರಾ ಸಂದರ್ಭದಲ್ಲೂ ಶಿಷ್ಟಾಚಾರ ಉಲ್ಲಂಘಿಸಿದ್ದರು. ಕೊವಿಡ್ ಸಾವಿನ ಸಂಬಂಧ ತಪ್ಪು ಲೆಕ್ಕವನ್ನು ನೀಡಿದ್ದರು. ಸಾ.ರಾ. ಕಲ್ಯಾಣ ಮಂಟಪದ ಬಗ್ಗೆಯೂ ಆರೋಪಿಸಿದ್ದರು. ರಾಜಕಾಲುವೆ, ಗೋಮಾಳದಲ್ಲಿ ನಿರ್ಮಾಣವೆಂದು ಆರೋಪ ಮಾಡಿದ್ದರು. ಈಗ ನಿಯಮ ಉಲ್ಲಂಘಿಸಿಲ್ಲವೆಂದು ಜಿಲಾಧಿಕಾರಿಯಿಂದಲೇ ವರದಿ ಸಲ್ಲಿಕೆಯಾಗಿದೆ. ಲಿಂಗಾಂಬುದಿ ಕೆರೆಯ ಜಾಗವನ್ನು ಒತ್ತುವರಿ ಮಾಡಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಶಾಸಕ ಸಾ.ರಾ.ಮಹೇಶ್ ಸ್ಪಷ್ಟಪಡಿಸಿದರು.

ರೋಹಿಣಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಮನವಿ:
ರೋಹಿಣಿ ವರ್ಗಾವಣೆ ಬಳಿಕ ಹಲವು ಆರೋಪ ಮಾಡಿದ್ದರು. ಅವರು ಮಾಡಿದ್ದ ಎಲ್ಲ ಆರೋಪಗಳು ಸುಳ್ಳು. ರೋಹಿಣಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ. ಅವರ ಇಲಾಖೆಯ ಅಧಿಕಾರಿಗಳೇ ವರದಿಯನ್ನ ಕೊಟ್ಟಿದ್ದಾರೆ. ಹೀಗಾಗಿ ತಕ್ಷಣವೇ ರೋಹಿಣಿಯನ್ನ ಅಮಾನತು ಮಾಡಬೇಕು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಹಕ್ಕುಚ್ಯುತಿ ಮಂಡನೆಗೆ ಮನವಿ ಮಾಡಿದ್ದೇನೆ ಎಂದು ಸಾ.ರಾ.ಮಹೇಶ್ ತಿಳಿಸಿದರು.

ಜೆಡಿಎಸ್ ಒಂಥರಾ ಟ್ರೈನಿಂಗ್ ಸ್ಕೂಲ್.. ಈಗ ಮುಖ್ಯಮಂತ್ರಿ ಆಗಿರುವವರು ಜೆಡಿಎಸ್ ನವರೇ:
ಇನ್ನು, ಹುಬ್ಬಳ್ಳಿಯಲ್ಲಿ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಅವರು ಜೆಡಿಎಸ್ ಒಂಥರಾ ಟ್ರೈನಿಂಗ್ ಸ್ಕೂಲ್. ಬರ್ತಾರೆ ಕಲಿತಾರೆ ಹೋಗ್ತಾರೆ. ಈಗ ಮುಖ್ಯಮಂತ್ರಿ ಆಗಿರುವವರು ಜೆಡಿಎಸ್ ನವರೇ. ಇಲ್ಲಿಗೆ ಬಂದು ಕಲಿತುಕೊಂಡು ಬೇರೆ ಪಕ್ಷಕ್ಕೆ ಹೋಗುತ್ತಾರೆ ಎಂದು ವ್ಯಾಖ್ಯಾನಿಸಿದರು.

The post ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ appeared first on Hai Sandur kannada fortnightly news paper.

]]>
https://haisandur.com/2021/07/30/mla-mahesh-barrage-against-rohini-sindhuri/feed/ 0
ಮಹಾರಾಷ್ಟ್ರದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಿಹಿ ಸುದ್ದಿ: ಶಾಲಾ ಶುಲ್ಕದಲ್ಲಿ ಶೇ.15 ಕಡಿತ https://haisandur.com/2021/07/29/sweet-news-for-students-and-parents/ https://haisandur.com/2021/07/29/sweet-news-for-students-and-parents/#respond Thu, 29 Jul 2021 06:22:16 +0000 http://haisandur.com/?p=18315 ಈ ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಿಹಿ ಸುದ್ದಿಯನ್ನು ಮಹಾರಾಷ್ಟ್ರ ಸರ್ಕಾರ ನೀಡಿದೆ. ಕೋವಿಡ್ -19 ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಶುಲ್ಕವನ್ನು ಶೇಕಡ 15 ರಷ್ಟು ಕಡಿಮೆ ಮಾಡಲು ಎಲ್ಲಾ ಮಂಡಳಿಗಳಿಗೆ ಸಂಯೋಜಿತವಾಗಿರುವ ಎಲ್ಲಾ ಖಾಸಗಿ ಶಾಲೆಗಳಿಗೆ ನಿರ್ದೇಶನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮಹಾರಾಷ್ಟ್ರ ಶಾಲಾ ಶಿಕ್ಷಣ ಸಚಿವೆ ವರ್ಷಾ ಗಾಯಕವಾಡ್, ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿ, ”ಶಾಲಾ ಶುಲ್ಕವನ್ನು ಶೇಕಡ 15 ರಷ್ಟು ಕಡಿತಗೊಳಿಸುವ ಬಗ್ಗೆ […]

The post ಮಹಾರಾಷ್ಟ್ರದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಿಹಿ ಸುದ್ದಿ: ಶಾಲಾ ಶುಲ್ಕದಲ್ಲಿ ಶೇ.15 ಕಡಿತ appeared first on Hai Sandur kannada fortnightly news paper.

]]>
ಈ ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಿಹಿ ಸುದ್ದಿಯನ್ನು ಮಹಾರಾಷ್ಟ್ರ ಸರ್ಕಾರ ನೀಡಿದೆ. ಕೋವಿಡ್ -19 ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಶುಲ್ಕವನ್ನು ಶೇಕಡ 15 ರಷ್ಟು ಕಡಿಮೆ ಮಾಡಲು ಎಲ್ಲಾ ಮಂಡಳಿಗಳಿಗೆ ಸಂಯೋಜಿತವಾಗಿರುವ ಎಲ್ಲಾ ಖಾಸಗಿ ಶಾಲೆಗಳಿಗೆ ನಿರ್ದೇಶನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮಹಾರಾಷ್ಟ್ರ ಶಾಲಾ ಶಿಕ್ಷಣ ಸಚಿವೆ ವರ್ಷಾ ಗಾಯಕವಾಡ್, ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿ, ”ಶಾಲಾ ಶುಲ್ಕವನ್ನು ಶೇಕಡ 15 ರಷ್ಟು ಕಡಿತಗೊಳಿಸುವ ಬಗ್ಗೆ ಅಧಿಸೂಚನೆ ಹೊರಡಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಇದು ಎಲ್ಲಾ ಶಿಕ್ಷಣ ಮಂಡಳಿಗಳಿಗೆ ಅನ್ವಯವಾಗಲಿದೆ ಮತ್ತು ಅಧಿಸೂಚನೆ ಇರುತ್ತದೆ. ಮುಂದಿನ ಎರಡು ದಿನಗಳಲ್ಲಿ ಅಧಿಸೂಚನೆ ನೀಡಲಾಗುತ್ತದೆ,” ಎಂದು ತಿಳಿಸಿದ್ದಾರೆ.

ರಾಜಸ್ಥಾನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ (ಎಸ್‌ಸಿ) ಆದೇಶದ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಈ ವೇಳೆಯೇ ಸಚಿವೆ ಹೇಳಿದರು. ಮೇ ಮೊದಲ ವಾರದಲ್ಲಿ, ರಾಜಸ್ಥಾನದ ವಿಷಯದಲ್ಲಿ ತನ್ನ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶುಲ್ಕವನ್ನು ಶೇಕಡ 15 ರಷ್ಟು ಕಡಿಮೆ ಮಾಡುವಂತೆ ತಿಳಿಸಿದೆ. ಏಕೆಂದರೆ ಈ ಸಂಸ್ಥೆಗೆ ಈಗ ಖರ್ಚು ಕಡಿಮೆಯಾಗಿದೆ. ಕ್ಯಾಂಪಸ್‌ನಲ್ಲಿ ವಿವಿಧ ಸೌಲಭ್ಯಗಳನ್ನು ಮುಚ್ಚಲಾಗಿದೆ ಎಂದು ಸುಪ್ರೀಂ ಕೋರ್ಟ್ ಉಲ್ಲೇಖ ಮಾಡಿದೆ.

ಶುಲ್ಕ ಬಾಕಿ ಅಥವಾ ಪಾವತಿಸದ ಕಾರಣ ಯಾವುದೇ ವಿದ್ಯಾರ್ಥಿಗಳನ್ನು ಆನ್‌ಲೈನ್ ತರಗತಿಗಳು ಅಥವಾ ದೈಹಿಕ ತರಗತಿಗಳಿಗೆ ಹಾಜರಾಗುವುದನ್ನು ತಡೆಯದಿರಲು ನ್ಯಾಯಾಲಯ ಶಾಲೆಗಳಿಗೆ ನಿರ್ದೇಶನ ನೀಡಿದೆ. ಇನ್ನು ”ಶುಲ್ಕ ಪಾವತಿಸದ ಪೋಷಕರಿಗೆ ಪಾವತಿಸುವಾಗ ಶೇಕಡ 15 ರಷ್ಟು ರಿಯಾಯಿತಿ ಸಿಗುತ್ತದೆ. ಈಗಾಗಲೇ ಶುಲ್ಕವನ್ನು ಪಾವತಿಸಿದ ಪೋಷಕರ ಬಗ್ಗೆ ರಾಜ್ಯವು ಸ್ಪಷ್ಟೀಕರಣವನ್ನು ನೀಡಲಿದೆ,” ಎಂದು ಸಚಿವರು ಹೇಳಿದರು. ”ಶಾಲಾ ಶುಲ್ಕವನ್ನು ಹೆಚ್ಚಿಸದಂತೆ ಕಳೆದ ವರ್ಷ ಆದೇಶ ಹೊರಡಿಸಿದಂತೆ ಯಾವುದೇ ಶಾಲೆ ಶುಲ್ಕವನ್ನು ಶೇಕಡ 15 ರಷ್ಟು ಹೆಚ್ಚಿಸಲು ಪ್ರಯತ್ನಿಸುವುದಿಲ್ಲ ಎಂದು ಆಶಿಸಿದ್ದೇನೆ,” ಎಂದು ಕೂಡಾ ಹೇಳಿದ್ದಾರೆ.

”ಎಲ್ಲಾ ಶಾಲೆಗಳು ಮಹಾರಾಷ್ಟ್ರ ಸರ್ಕಾರ ನಿರ್ದೇಶನಗಳನ್ನು ಪಾಲಿಸುವುದು ಕಡ್ಡಾಯವಾಗಲಿದೆ. ಶಾಲೆಗಳು ಆದೇಶಗಳನ್ನು ಪಾಲಿಸದಿದ್ದಲ್ಲಿ ಶಾಲೆಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಎಚ್ಚರಿಕೆಯನ್ನು ಕೂಡಾ ಮಹಾರಾಷ್ಟ್ರ ಶಾಲಾ ಶಿಕ್ಷಣ ಸಚಿವೆ ವರ್ಷಾ ಗಾಯಕವಾಡ್‌ ನೀಡಿದ್ದಾರೆ. ಪಠ್ಯೇತರ ಚಟುವಟಿಕೆಗಳಾದ ಗ್ರಂಥಾಲಯಗಳು, ಕ್ರೀಡೆಗಳು ಮತ್ತು ಶಾಲಾ ಬಸ್ ಸೌಲಭ್ಯಗಳನ್ನು ಒದಗಿಸದೆ ಶಾಲೆಗಳ ಶುಲ್ಕವನ್ನು ವಿಧಿಸುವ ಶಾಲೆಗಳ ಬಗ್ಗೆ ಖಾಸಗಿ ಶಾಲೆಗಳು ಮತ್ತು ಪೋಷಕರ ನಡುವಿನ ಸಂಘರ್ಷ ನಡೆಯುತ್ತಿದೆ. ಈ ಬಗ್ಗೆ ಶಿಕ್ಷಣ ಇಲಾಖೆಗೆ ಸಾಕಷ್ಟು ದೂರುಗಳು ಬಂದವು. ಈ ನಡುವೆ ಒಂದು ಪ್ರಮುಖ ಸಮಿತಿ, ವಿಭಾಗೀಯ ಶುಲ್ಕ ನಿಯಂತ್ರಣ ಸಮಿತಿ (ಡಿಎಫ್‌ಆರ್‌ಸಿ) ಒಂದು ವರ್ಷದಿಂದ ಕಾರ್ಯರೂಪಕ್ಕೆ ಬಂದಿಲ್ಲ. ಸಾರ್ವಜನಿಕ ಪ್ರತಿನಿಧಿಗಳು, ಶಿಕ್ಷಣ ಅಧಿಕಾರಿಗಳು ಮತ್ತು ನ್ಯಾಯಾಂಗದ ಮುಂದೆ ಶುಲ್ಕದ ಬಗ್ಗೆ ಪೋಷಕರು ಮತ್ತು ಶಾಲೆಗಳು ಘರ್ಷಣೆ ನಡೆಸಿದೆ. ಶೇ.15 ಕಡಿಮೆ ಶುಲ್ಕವನ್ನು ಸಂಗ್ರಹಿಸಲು ರಾಜಸ್ಥಾನ ಶಾಲೆಗಳಿಗೆ ನೀಡಿದ ಮೇ ತೀರ್ಪನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಕಳೆದ ವಾರ ರಾಜ್ಯಕ್ಕೆ ನಿರ್ದೇಶನ ನೀಡುವ ಮೂಲಕ ಪೋಷಕರ ರಕ್ಷಣೆಗೆ ಬಂದಿತ್ತು.

The post ಮಹಾರಾಷ್ಟ್ರದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಿಹಿ ಸುದ್ದಿ: ಶಾಲಾ ಶುಲ್ಕದಲ್ಲಿ ಶೇ.15 ಕಡಿತ appeared first on Hai Sandur kannada fortnightly news paper.

]]>
https://haisandur.com/2021/07/29/sweet-news-for-students-and-parents/feed/ 0