ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಸದೃಢ ಬಾರತಕ್ಕಾಗಿ “ಫಿಟ್ ಇಂಡಿಯ ಫ್ರೀಡಂ ಓಟ” ಕಾರ್ಯಕ್ರಮ

0
65

ಸ್ನಾತಕೋತ್ತರ ಕೇಂದ್ರ ನಂದಿ ಹಳ್ಳಿಯಲ್ಲಿ. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿ ಯಲ್ಲಿ ಬುಧವಾರ ಸದೃಢ ಭಾರತಕ್ಕಾಗಿ ಸ್ವಾತಂತ್ರ್ಯ ಓಟ ಕಾರ್ಯಕ್ರಮ ಜರುಗಿತು. ರಾಷ್ಟ್ರೀಯ ಸೇವಾ ಯೋಜನೆ ಘಟಕ ಸಹಭಾಗಿತ್ವದಲ್ಲಿ ಆರಂಭಗೊಂಡ ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಅಧಿಕಾರಿ ಡಾ.ಚೌಡಪ್ಪ ಮಾತನಾಡಿ ಎಲ್ಲರಲ್ಲೂ ದೈಹಿಕ ಸದೃಢತೆ ಮೂಡಲು ಸರ್ಕಾರ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಒತ್ತಡ ಆತಂಕಗಳನ್ನು ಒಡೆದು ಹಾಕಲು ಜೊತೆಗೆ ಕೋವಿಡ್ ನೈಂಟೀನ್ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಗತ್ಯತೆ ಇರುವ ಕಾರಣ ಕಾರ್ಯಕ್ರಮ ಉಪಯುಕ್ತವಾಗಿದ್ದು, ವಯಸ್ಸಿನ ನಿರ್ಬಂಧವಿಲ್ಲದೆ ಓಟವನ್ನು ಎಲ್ಲಿಯಾದರೂ ಯಾವುದೇ ಸಮಯದಲ್ಲಿ ಸುರಕ್ಷಿತವಾಗಿ ನಡೆಸುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶ, ಪರಿಕಲ್ಪನೆಯಾಗಿದೆ ಎಂದು ತಿಳಿಸಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮೂರು ಕಿಲೋಮೀಟರುಗಳ ಓಟದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಡಾಕ್ಟರ್ ಪಿಸಿ ನಾಗನೂರ್, ಡಾ. ನಾಯಕರ ಹೊನ್ನೂರ್ ಸ್ವಾಮಿ, ಪ್ರೊ. ಎಂ ಡಿ ಕಣದಾಳಿ, ಡಾ.ಬಸವರಾಜ ಹಟ್ಟಿ ಪ್ರೊ.ಕೆಜಿ ಸುಮಾ, ಕ್ರೀಡಾ ವಿಭಾಗದ ಶಿವರಾಮ್ ರಾಗಿ, ಕೆ. ಪಾಪಯ್ಯ ಸೇರಿದಂತೆ ಇತರರು ಹಾಜರಿದ್ದರು. ಎನ್ಎಸ್ಎಸ್ ಅಧಿಕಾರಿ ಪ್ರೊ. ಬಸವರಾಜ್ ಇಳಗಾನೂರ್ ವಂದನಾರ್ಪಣೆ ಸಲ್ಲಿಸಿದರು.

ಫಿಟ್ ಇಂಡಿಯ ಫ್ರೀಡಂ ಓಟ ಸ್ನಾತಕೋತ್ತರ ಕೇಂದ್ರ ನಂದಿ ಹಳ್ಳಿಯಲ್ಲಿ. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿ ಯಲ್ಲಿ ಬುಧವಾರ ಸದೃಢ ಭಾರತಕ್ಕಾಗಿ ಸ್ವಾತಂತ್ರ್ಯ ಓಟ ಕಾರ್ಯಕ್ರಮ ಜರುಗಿತು. ರಾಷ್ಟ್ರೀಯ ಸೇವಾ ಯೋಜನೆ ಘಟಕ ಸಹಭಾಗಿತ್ವದಲ್ಲಿ ಆರಂಭಗೊಂಡ ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಅಧಿಕಾರಿ ಡಾ.ಚೌಡಪ್ಪ ಮಾತನಾಡಿ ಎಲ್ಲರಲ್ಲೂ ದೈಹಿಕ ಸದೃಢತೆ ಮೂಡಲು ಸರ್ಕಾರ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಒತ್ತಡ ಆತಂಕಗಳನ್ನು ಒಡೆದು ಹಾಕಲು ಜೊತೆಗೆ ಕೋವಿಡ್ ನೈಂಟೀನ್ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಗತ್ಯತೆ ಇರುವ ಕಾರಣ ಕಾರ್ಯಕ್ರಮ ಉಪಯುಕ್ತವಾಗಿದ್ದು, ವಯಸ್ಸಿನ ನಿರ್ಬಂಧವಿಲ್ಲದೆ ಓಟವನ್ನು ಎಲ್ಲಿಯಾದರೂ ಯಾವುದೇ ಸಮಯದಲ್ಲಿ ಸುರಕ್ಷಿತವಾಗಿ ನಡೆಸುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶ, ಪರಿಕಲ್ಪನೆಯಾಗಿದೆ ಎಂದು ತಿಳಿಸಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮೂರು ಕಿಲೋಮೀಟರುಗಳ ಓಟದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಡಾಕ್ಟರ್ ಪಿಸಿ ನಾಗನೂರ್, ಡಾ. ನಾಯಕರ ಹೊನ್ನೂರ್ ಸ್ವಾಮಿ, ಪ್ರೊ. ಎಂ ಡಿ ಕಣದಾಳಿ, ಡಾ.ಬಸವರಾಜ ಹಟ್ಟಿ ಪ್ರೊ.ಕೆಜಿ ಸುಮಾ, ಕ್ರೀಡಾ ವಿಭಾಗದ ಶಿವರಾಮ್ ರಾಗಿ, ಕೆ. ಪಾಪಯ್ಯ ಸೇರಿದಂತೆ ಇತರರು ಹಾಜರಿದ್ದರು. ಎನ್ಎಸ್ಎಸ್ ಅಧಿಕಾರಿ ಪ್ರೊ. ಬಸವರಾಜ್ ಇಳಗಾನೂರ್ ವಂದನಾರ್ಪಣೆ ಸಲ್ಲಿಸಿದರು.

LEAVE A REPLY

Please enter your comment!
Please enter your name here