ಜಿಂದಾಲ್‍ಗೆ 10 ದಿನಗಳ ಗಡುವು ವಿಧಿಸಿದ ಶಾಸಕ ಸೋಮಶೇಖರರೆಡ್ಡಿ ಜಿಂದಾಲ್‍ನಿಂದ 1 ಸಾವಿರ ಬೇಡ್ ಕೋವಿಡ್ ಕೇರ್ ಸೆಂಟರ್;ಆಗದಿದ್ದಲ್ಲಿ ಪಾದಯಾತ್ರೆ

0
128

ಬಳ್ಳಾರಿ,ಆ.08: ಬಳ್ಳಾರಿ ಜಿಲ್ಲೆಯ ಭೂಮಿ,ಜಲ,ಸಂಪನ್ಮೂಲ ಸೇರಿದಂತೆ ಸಕಲವನ್ನು ಉಪಯೋಗಿಸಿಕೊಂಡು ಲಾಭಗಳಿಸುತ್ತಿರುವ ಜಿಂದಾಲ್ ಈ ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ನೆರವಿಗೆ ಪರಿಣಾಮಕಾರಿಯಾಗಿ ಧಾವಿಸಬೇಕಿತ್ತು;ಇದುವರೆಗೆ ಕೈಜೋಡಿಸದಿರುವುದು ವಿಷಾದಕರ. ಜಿಂದಾಲ್ ಕೂಡಲೇ 10 ದಿನದೊಳಗೆ 1 ಸಾವಿರ ಬೆಡ್‍ಗಳ ವ್ಯವಸ್ಥೆಯ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಬೇಕು;ಇಲ್ಲದಿದ್ದಲ್ಲಿ ಬಳ್ಳಾರಿಯಿಂದ ಜಿಂದಾಲ್‍ವರೆಗೆ ಪಾದಯಾತ್ರೆ ನಡೆಸಿ ಕಾರಖಾನೆ ಎದುರು ಪ್ರತಿಭಟನೆಗೆ ಕುಳಿತುಕೊಳ್ಳುವೆ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಎಚ್ಚರಿಕೆ ನೀಡಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್ ಸೊಂಕಿತರ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತಿದ್ದು,ಬೆಡ್‍ಗಳ ಕೊರತೆ ಕಾಣುತ್ತಿದೆ. ಇದನ್ನು ನೀಗಿಸಲು ಜಿಂದಾಲ್ ಸಂಸ್ಥೆಯವರು ಸಾವಿರ ಬೆಡ್‍ಗಳ ತಾತ್ಕಾಲಿಕ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಬೇಕು ಮತ್ತು ಅಗತ್ಯ ಸಹಾಯ-ಸಹಕಾರ ಕಲ್ಪಿಸಬೇಕು.ಇದಕ್ಕೆ 10 ದಿನದೊಳಗೆ ಗಡುವು ನೀಡಲಾಗುವುದು. ಅಷ್ಟರೊಳಗೆ ಸ್ಪಂದಿಸದಿದ್ದಲ್ಲಿ ಜಿಂದಾಲ್ ಸಂಸ್ಥೆ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಜಿಲ್ಲೆಯಲ್ಲಿರುವ ಗಣಿ ಮಾಲೀಕರು ಸಹ ಮುಂದೆ ಬಂದು ಎಲ್ಲರೊಡಗೂಡಿ 2 ಸಾವಿರ ಬೆಡ್‍ಗಳ ಕೋವಿಡ್ ಕೇರ್ ಸೆಂಟರ್‍ಗಳ ವ್ಯವಸ್ಥೆ ಮಾಡಿಕೊಡಬೇಕು. ಖಾಸಗಿ ಆಸ್ಪತ್ರೆಗಳು ಕೂಡಲೇ ಶೇ.50ರಷ್ಟು ಬೆಡ್‍ಗಳನ್ನು ನೀಡುವುದಕ್ಕೆ ಮುಂದಾಗಬೇಕು ಎಂದರು.

2 ವಾರ ಲಾಕ್‍ಡೌನ್ ಮಾಡಿ:-

ಜಿಲ್ಲೆಯಲ್ಲಿ ಕೊರೊನಾ ದಿನೇದಿನೇ ಅತ್ಯಂತ ವೇಗದಲ್ಲಿ ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಜಿಲ್ಲಾಡಳಿತ ಸಂಪೂರ್ಣವಾಗಿ ಎರಡು ವಾರಗಳ ಕಾಲ ಲಾಕ್‍ಡೌನ್ ಮಾಡುವುದಕ್ಕೆ ಮುಂದಾಗಬೇಕು ಎಂದು ಶಾಸಕ ಸೋಮಶೇಖರರೆಡ್ಡಿ ಹೇಳಿದರು.
ಲಾಕ್‍ಡೌನ್ ಮಾಡುವುದಕ್ಕಿಂತ ಮುಂಚೆಯೇ ಜನರು ಪಡಿತರ ಮತ್ತು ತರಕಾರಿಗಳ ಖರೀದಿಸುವುದಕ್ಕೆ ವ್ಯವಸ್ಥೆ ಮಾಡಬೇಕು. ಒಟ್ಟಿನಲ್ಲಿ ಸಂಪೂರ್ಣ ಲಾಕ್‍ಡೌನ್ ಆದಾಗ ಈ ವೇಗಕ್ಕೆ ಕಡಿವಾಣ ಬಿಳಬಹುದು ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಬಳ್ಳಾರಿ ನಗರಕ್ಕೆ 2 ವೆಂಟಲೇಟರ್ ಅಂಬ್ಯುಲೆನ್ಸ್‍ಗಳನ್ನು ನೀಡುವುದಕ್ಕೆ ಕೆಕೆಆರ್‍ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಹಾಗೂ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಒಪ್ಪಿಕೊಂಡಿದ್ದು,ಎರಡು ವಾರಗಳಲ್ಲಿ ಬಳ್ಳಾರಿಗೆ ಬರಲಿವೆ ಎಂದರು.
ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಗೆ 12ರಿಂದ 15ಕೋಟಿ ರೂ. ಖರ್ಚು ಮಾಡಿದಲ್ಲಿ ಬಳಕೆಗೆ ಸಿದ್ಧವಾಗಲಿದೆ; ಜಿಲ್ಲಾ ಖನಿಜ ನಿಧಿ ಅಡಿ ಖರ್ಚು ಮಾಡಿ ಕೊರೊನಾ ಸೊಂಕಿತರ ಚಿಕಿತ್ಸೆಗೆ ಬಳಕೆ ಮಾಡಲು ಮುಂದಾಗಬೇಕು ಎಂದರು.ಪೇಶಂಟ್ಸ್‍ಗಳನ್ನು ಅತ್ಯಂತ ಪೇಶನ್ಸ್‍ನಿಂದ ವೈದ್ಯರು ನೋಡಬೇಕು; ಕೋವಿಡ್ ಸೊಂಕಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಕರೆ ಮಾಡಿದಾಗಲೊಮ್ಮೆ ಅವರು ವಿಡಿಯೋ ಕಾನ್ಪರೆನ್ಸ್‍ನಲ್ಲಿದ್ದೇವೆ ಎಂಬ ಉತ್ತರವನ್ನು ಹೇಳುತ್ತಾರೆ;ಅದನ್ನು ಹೇಳುವುದನ್ನು ಬಿಡಿ ಎಂದು ಸಲಹೆ ನೀಡಿದ ಶಾಸಕ ರೆಡ್ಡಿ ಅವರು ಜಿಲ್ಲೆಯ ಜನರು ದಯವಿಟ್ಟು ಸಾಮಾಜಿಕ ಅಂತರ,ಕಡ್ಡಾಯ ಮಾಸ್ಕ್ ಧರಿಸುವಿಕೆ ಮತ್ತು ಆಗಾಗ್ಗೆ ಸ್ಯಾನಿಟೈಸರ್ ಮಾಡುವುದನ್ನು ಮರೆಯಬೇಡಿ ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಮುಖಂಡರಾದ ವೀರಶೇಖರ್,ಶ್ರೀನಿವಾಸ್ ಮೋತ್ಕರ್ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here