ರಾಯಲ್ ವೃತ್ತದಲ್ಲಿ ಮಾಸ್ಕ್ ಅಭಿಯಾನಕ್ಕೆ ಚಾಲನೆ,ಸಾರ್ವಜನಿಕರು ಕಡ್ಡಾಯವಾಗಿ ಎಸ್‍ಎಂಎಸ್ ಪಾಲಿಸಿ : ಸೈದುಲ್ಲಾ ಅಡಾವತ್

0
76

ಬಳ್ಳಾರಿ,ಅ.13 ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ಲಾ ಅಡಾವತ್ ಅವರು ದ್ವಿ-ಚಕ್ರ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಮಾಸ್ಕ್ ನೀಡುವುದರ ಮೂಲಕ ಮಾಸ್ಕ್ ಅಭಿಯಾನಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಕರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಕರೋನಾ ವೈರಸ್‍ಗೆ ಯಾವುದೇ ಸೂಕ್ತ ಚಿಕಿತ್ಸೆ ಇಲ್ಲದಿರುವುದರಿಂದ ಎಸ್.ಎಂ.ಎಸ್ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಎಸ್.ಎಂ.ಎಸ್ ಅಂದರೆ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಜರ್‍ನಿಂದ ಆಗಾಗ್ಗೆ ಕೈ ಸ್ವಚ್ಛಗೊಳಿಸಿಕೊಳ್ಳುವುದು ಎಂದು ಹೇಳಿದ ಅವರು ಸಾರ್ವಜನಿಕರು ಅನಾವಶ್ಯಕವಾಗಿ ಮನೆಯಿಂದ ಹೊರಬರಬಾರದು. ಕೋವಿಡ್ -19 ಕುರಿತು ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆಯು ತುಂಬಾ ಶ್ರಮವಹಿಸುತ್ತಿದ್ದು,ಜಿಲ್ಲೆಯ ಪ್ರತಿಯೊಂದು ಹಳ್ಳಿಗಳಲ್ಲಿಯೂ ಕೊವೀಡ್-19 ಜಾಗೃತಿ ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಹೇಳಿದ ಅವರು ಕಾರುಗಳಲ್ಲಿ ಸೀಟ್‍ಬೆಲ್ಟ್ ಧರಿಸಬೇಕು ಹಾಗೂ ಪ್ರಯಾಣದ ಸಮಯದಲ್ಲಿ ಮೊಬೈಲ್ ಬಳಕೆ ಮಾಡಬಾರದು ಸಲಹೆ ನೀಡಿದರು
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಅವರು ಕರೋನಾ ವೈರಸ್ ಕುರಿತು ಜಾಗೃತಿ ಮೂಡಿಸಲು ಭಿತ್ತಿಪತ್ರ ಮತ್ತು ಫಲಕಗಳ ಪ್ರದರ್ಶನ ಮಾಡಿದರು. ಕರಡಿ ವೇಷÀಧÀರಿಸಿ ಅಣುಕು ಪ್ರದರ್ಶನದ ಹಾಗೂ ಕರೋನಾ ವೈರಸ್ ಕುರಿತು ಹಾಡು ಹಾಡುವುದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮಾಡಿಸಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಇದ್ದರು

LEAVE A REPLY

Please enter your comment!
Please enter your name here