ಸಂಡೂರು ತಾಲೂಕು ಕರಾಟೆ ಸಂಸ್ಥೆ ವತಿಯಿಂದ ಬೆಲ್ಟ್ ಪರೀಕ್ಷೆ

0
71

ಸಂಡೂರು:ಜೂನ್:08:-ಸಂಡೂರ್ ತಾಲೂಕು ಕರಾಟೆ ಸಂಸ್ಥೆ ವತಿಯಿಂದ ಬೆಲ್ಟ್ ಪರೀಕ್ಷೆಯನ್ನು ದಿನಾಂಕ:05:06:2022 ರಂದು 14 ನೇ ವಾರ್ಡ್ ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಬೆಲ್ಟ್ ಪರೀಕ್ಷೆಯು ಸೆನ್ಸ್ಯಿ ಶಿವಕುಮಾರ್ ನೇತೃತ್ವದಲ್ಲಿ,ಶಿಹಾನ್ ವಿನೋದ್. ಎಸ್. ಎಲ್. ಅವರ ಆಶೀರ್ವಾದದಿಂದ ಯಶಸ್ವಿಯಾಗಿ ಪೂರ್ಣ ಗೊಳಿಸಲಾಯಿತು.

ಸೆನ್ಸ್ಯಿ ಶಿವಕುಮಾರ್ ಅವರು ಮಾತನಾಡುತ್ತಾ, ಈ ಬೆಲ್ಟ್ ಪರೀಕ್ಷೆಯು ತುಂಬಾ ಅಚ್ಚುಕಟ್ಟಾಗಿ ಯಶಸ್ವಿಯಾಯಿತು. ಈ ಬೆಲ್ಟ್ ಪರೀಕ್ಷೆಯಲ್ಲಿ ಸುಮಾರು 85 ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಇದು ಒಂದು ಖುಷಿ ವಿಚಾರವಾಗಿದೆ ಎಂದು ಹೇಳುತ್ತಾ, ಬೆಲ್ಟ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣ ಗೊಳಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನ ತಿಳಿಸಿದರು.

LEAVE A REPLY

Please enter your comment!
Please enter your name here