ಪೋಸ್ಟ್ ಮ್ಯಾನ್ ಪಂಪಜ್ಜ ಮತ್ತು ನೈಟ್ ಟ್ಯೂಷನ್

0
62

ಉಲವತ್ತಿ ಪಂಪಣ್ಣ ಎಂದರೆ ಅಲ್ಲಿ ಶಿಸ್ತು…
ಹೀರೋ ಸೈಕಲ್ ಅವರ signature
ನಗು ಕಡಿಮೆ ಸದಾ ಗಾಂಭೀರ್ಯದ ಮುಖದಲ್ಲಿ ನಿತ್ಯ ಕೂಲಿಂಗ್ ಗ್ಲಾಸ್
ಪಕ್ಕ ಲೆಕ್ಕಾಚಾರ… ‌
ಇಂಗ್ಲೀಷ್ ಜ್ಙಾನದ ಹೆಮ್ಮೆಯ ಶಿಖರ…!!
ಸದಾ ಸಮಯಕ್ಕೆ ಮಹತ್ವ
ಇದರಾಚೆ ಸಮಾಜಕ್ಕೆ ಏನಾದರೂ ಮಾಡಬೇಕೆಂಬ ತುಡಿತದ ವ್ಯಕ್ತಿತ್ವವೇ ನಮ್ ಉಲವತ್ತಿ ಪೋಸ್ಟ್ ಮಾಸ್ಟರ್ ಪಂಪಜ್ಜ….

ಪಂಪಜ್ಜ ತಮ್ಮ ವೃತ್ತಿಯ ಬಹುತೇಕ ವರ್ಷ ಹಗರಿಬೊಮ್ಮನಹಳ್ಳಿಯ ರಾಮನಗರದ ಪೋಸ್ಟ್ ಆಫೀಸ್ ನಲ್ಲಿ ಕರ್ತವ್ಯ ನಿರ್ವಹಿಸಿದರು ಸಂಜೆ ಊರಿಗೆ ಮರಳಿದ ಬಿಡುವಿನಲ್ಲಿ ರಾತ್ರಿ ಶಾಲೆ…
ಈಗಿನ ಕಾಲದ ಟ್ಯೂಷನ್ ದಾಟಿದ ಟುಟರಿಯಲ್ ನಂತದಲ್ಲ ಮತ್ತೆ…

ಅಲ್ಲಿ ಹಗಲು ದಾಟಿ ರಾತ್ರಿ ಆಗಿರುತಿತ್ತು ಅಷ್ಟೇ…
ಶಾಲೆ ಮಾತ್ರ ಬೆಳಗಿನ ಸರ್ಕಾರಿ ಶಾಲೆಗಿಂತಲೂ ಸ್ಟ್ರಿಕ್ಟ್…
ಸರಿ ಸುಮಾರು ಆರವತ್ತಕ್ಕೂ ಹೆಚ್ಚು ಹುಡುಗರ ದೊಡ್ಡ ವಿಧ್ಯಾರ್ಥಿ ಸಮೂಹ….
ಪಂಪಜ್ಜನ ಟ್ಯೂಷನ್ ನಲ್ಲಿ ಕನ್ನಡದ ಜೊತೆ ಜೊತೆಗೆ ಗಣಿತ ಮತ್ತು ಇಂಗ್ಲೀಷ್ ಕಲಿಕೆಗೆ ಬಹುದೊಡ್ಡ ಪ್ರಾಮುಖ್ಯತೆ….
ಅವರ ಅಭಿಲಾಷೆ ಒಂದೇ ಪಟ್ಟಣದ ಹುಡುಗರಿಗೆ ಹಳ್ಳಿ ಹುಡುಗರು ಇಂಗ್ಲೀಷ್ ಜ್ಞಾನದಲ್ಲಿ ದಾಟಿ ಬೆಳೆಯಬೇಕು ಎಂಬ ಬಹುದೊಡ್ಡ ಹಂಬಲ….!!
ಇದನ್ನು ಒಂದು ಬಹುದೊಡ್ಡ ಯಜ್ಙದಂತೆ ಪಾಲಿಸಿಕೊಂಡು ಬಂದರವರು…
ಅವರ ಕಲಿಸಿದ ಶ್ರಮದ ಫಲವೇ ಇಂದು ನಮಗೆ ಧಕ್ಕಿದ ಇಂಗ್ಲೀಷ್ ಜ್ಙಾನ….

ಟ್ಯೂಷನ್ ಪ್ರಾರಂಭಕ್ಕೆ ಸಮಯ ಸಂಜೆ ಆರು ಘಂಟೆ….
ಅದು ಕೊನೆಗೊಳ್ಳುವ ಸಮಯ ಮಾತ್ರ ಎಂದು ನಿಗದಿ ಇರಲಿಲ್ಲ…
ರಾತ್ರಿ ಹನ್ನೊಂದು ಘಂಟೆವರೆಗೂ ನಡೆಯುತಿತ್ತು…
ಅವರ ರಾತ್ರಿಶಾಲೆಯ ವಿಧ್ಯಾರ್ಥಿಗಳಾದ ನಮಗೆ ರಾತ್ರಿ ಊಟ ಹನ್ನೊಂದರ ನಂತರವೇ….
ಈಗಿನ ಹಾಗೆ ಮಕ್ಕಳ ಕಲಿಕೆಯಲ್ಲಿ ತಾವೇ ಕುಸ್ತಿಗೆ ಬಿದ್ದವರಂತೆ ಜನ ಆಡುತ್ತಿರಲಿಲ್ಲ…

ಮಗ ಬಂದು ಊಟ ಮಾಡಿ ಮಲಗುತ್ತಾನೆ ಯಾಕೇ ಚಿಂತೆ…
ಎಂದು ತಮ್ಮ ಪಾಡಿಗೆ ತಾವು ಊಟ ಮಾಡಿ ಮಲಗಿಬಿಡುತ್ತಿದ್ದರು ನಮ್ಮ ಪೋಷಕರು..
ಮನೆ ಮುಂದಿನ ನಲುವಿನಲ್ಲಿ ಮುದ್ದೆಯೋ ಅನ್ನವೋ ಇಟ್ಟು ಅದನ್ನು ತಗೆದುಕೊಂಡು ನಮಗೆ ಸಾಧ್ಯವಾದಷ್ಟು ತಿಂದು ಮತ್ತೆ ನಲುವಿನಲ್ಲಿ ಇಟ್ಟು ಮಲಗುತಿದ್ದೆವು…
ಮತ್ತೆ ಮುಂಜಾನೆ ಐದಕ್ಕೆ ಕಲಿಕೆ ತಯಾರಿ….
ಶಾಲೆಯ ಹೋಮಾರ್ಕ್ ದಾಟಿ ರಾತ್ರಿ ಶಾಲೆಯ ಹೋಮಾರ್ಕ್ ಬಾಯ್ ಪಟದ ಬಹುದೊಡ್ಡ ಜವಾಬ್ದಾರಿ ನಮಗೆ…

ಪೋಸ್ಟ್ ಪಂಪಜ್ಜ ತಾವು ನಿಗದಿ ಮಾಡಿದ್ದ ಸಮಯಕ್ಕೆ ಸರಿಯಾಗಿ ಕಲಿತು ಒಪ್ಪಿಸದಿದ್ದರೆ….
ನಮ್ಮೂರ ಪ್ರಮುಖ ಬೀದಿಗಳಲ್ಲಿ ನಾವು ಬಹುದೊಡ್ಡ ಸ್ತಬ್ಧ ಚಿತ್ರಗಳು…
ತಲೆ ಮೇಲೆ ಕಲ್ಲು ಹೋರಿಸಿ ನಿಲ್ಲಿಸಿ ಬಿಡುತಿದ್ದರು…
ಇಲ್ಲ ಕಿವಿ ಬಗ್ಗಿಸಿ ನಿಲ್ಲಿಸುತ್ತಿದ್ದರು….
ಇದರ ಹಿಂದಿನ ಉದ್ದೇಶವಿಷ್ಟೇ…
ಕಲಿಯಬೇಕು ಕಲಿಯಲೇಬೇಕು ಎಂಬ ಬಹುದೊಡ್ಡ ಬಯಕೆ….
ಆಗಿನ ಪೋಷಕರ ಆಸೆಯೂ ಅದೇ ಆಗಿತ್ತು ಮಕ್ಕಳು ಕಲಿತರೆ ಸಾಕು ಎನ್ನುತ್ತಿದ್ದರು
ತಮ್ಮ ಮಕ್ಕಳು ಕಲಿಯವರೆಗೂ ಬಿಡಬೇಡಿ ಸರ್ ಎನ್ನುತ್ತಿದ್ದರೆ ವಿನಹ ನಮ್ಮ ಮಕ್ಕಳಿಗೆ ಯಾಕೆ ಹೊಡಿದಿರಿ ಅವಮಾನಿಸಿದಿರಿ ಎಂದು ಈಗಿನ ಪೋಷಕರ ರೀತಿ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ನ್ಯೂಸ್ ಚಾನಲ್ಗೆ ಕೊಟ್ಟು ಮಾನನಷ್ಟ ಮೊಕದ್ದಮೆ ಹೂಡುತ್ತಿರಲಿಲ್ಲ…😆😆

ಇಂತಹ ಕಠಿಣ ಕಲಿಕೆಯ ಫಲವೇ ನಮಗೆ this, is, see, here, there, was, the, are, today, to, too, name, father, mother, ಐದನೇ ತರಗತಿ ಆರನೇ ತರಗತಿಯಲ್ಲಿಯೇ ಮನಸ್ಸಿನಲ್ಲಿ ಮೆದುಳಿನಲ್ಲಿ ಅಚ್ಚಳಿಯದೆ ಉಳಿದು ಬಿಟ್ಟಿದ್ದವು…
7 ನೇ ತರಗತಿಗಾಗಲೇ ಸಂಪೂರ್ಣ ಅ ವಯಸ್ಸಿನಲ್ಲಿ ಕಲಿಯಬಹುದಾದ ಸಂಪೂರ್ಣ ಇಂಗ್ಲೀಷ್ ಜ್ಙಾನ ತುಂಬಿದ್ದರು ಶ್ರೀಯುತ ಪೋಸ್ಟ್ ಮ್ಯಾನ್ ಪಂಪಜ್ಜ ನವರು….

ಅವರ ಇಂಗ್ಲೀಷ್ ಪಾಂಡಿತ್ಯಕ್ಕೆ ಅವರೇ ಸಾಟಿ…
ಈಗಿನ ತಲೆಮಾರಿಗೆ ಹೋಲೈಕೆ ಮಾಡಿದರೆ ಇಂಗ್ಲೀಷ್ ನಲ್ಲಿ ಪಿಹೆಚ್‌ಡಿ ಮಾಡಿದವರಷ್ಟು ಅದಕ್ಕೂ ಅಧಿಕ ಇಂಗ್ಲೀಷ್ ಪರಿಣಿತರಾಗಿದ್ದರು…

ಪೋಸ್ಟ್ ಪಂಪಜ್ಜರಂತ ಶ್ರೇಷ್ಠರು ನಮಗೆ ಗುರುಗಳಾಗಿ ಸಿಕ್ಕ ನಾವೇ ಧನ್ಯ….
ಮಕ್ಕಳು ಟಿವಿ ನೋಡುವುದು ಅವರ ಬಹುದೊಡ್ಡ ವೈರಿ ಆಗಿತ್ತು…
ಈಗಿನಂತೆ ಮೊಬೈಲ್ ಹಿಡಿದಿದ್ದರೆ ನಮ್ಮ ಗತಿ ಅಷ್ಟೇ ಆಗಿತ್ತೇನೋ….
ಪುಸ್ತಕದ ಜೊತೆ ಮಕ್ಕಳಿರಬೇಕು ಎಂಬುದೇ ಅವರ ಧೈಯ…

ಇಂತಹ ಶ್ರೇಷ್ಠ ಇಂಗ್ಲೀಷ್ ಜ್ಙಾನದ ಗುರುಗಳು ದಿನಾಂಕ 06-03-2022ರ ಭಾನುವಾರ ವಯೋಮಾನದ ಸಹಜ ಕಾಯಿಲೆಗಳಿಂದ ಅಸುನೀಗಿದರು…..

ನೀವು ಕಲಿಸಿದ ಅಕ್ಷರಗಳ ಮುಖಾಂತರ ಸದಾಕಾಲವೂ ಚಿರಾಯುವಾಗಿ ಉಳಿದಿದ್ದೀರಿ ಉಲವತ್ತಿಯ ನಮ್ಮಂತ ವಿದ್ಯಾರ್ಥಿಗಳ ಮನದಲ್ಲಿ ಪಂಪಜ್ಜ….

ಹೋಗಿ ಬನ್ನಿ ಪಂಪಜ್ಜ….🙏
ಭಗವಂತ ನಿಮಗೆ ಚಿರಶಾಂತಿ ದಯಪಾಲಿಸಲಿ…..

ಇಂತಿ ನಿಮ್ಮ
ರಾತ್ರಿ ಶಾಲೆ ಶಿಷ್ಯ ಬಳಗ
ಉಲವತ್ತಿ

LEAVE A REPLY

Please enter your comment!
Please enter your name here