“ಕನ್ನಡ ರಾಜ್ಯೋತ್ಸವ ಕರ್ನಾಟಕದ ಜನತೆಗೆ ಹೆಮ್ಮೆಯ ದಿನ: ಕರವೇ ಅಧ್ಯಕ್ಷ ಎಂ.ಶ್ರೀನಿವಾಸ್”

0
224

ಕೊಟ್ಟೂರು: 1,ನವಂಬರ್ 67 ನೇ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಪಟ್ಟಣದ ಉಜಿನಿ ಸರ್ಕಲ್ ನಲ್ಲಿ ಇರುವ ಕರವೇ ಕಚೇರಿಯ ಮುಂಭಾಗದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣವನ್ನು ಕೊಟ್ಟೂರು ಕರುವೇ ತಾಲೂಕು ಅಧ್ಯಕ್ಷರು ಎಂ ಶ್ರೀನಿವಾಸ್ ಅವರು ಮಾಡಿದರು.

ನಂತರ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕರವೇ ಅಧ್ಯಕ್ಷರು ಎಂ ಶ್ರೀನಿವಾಸ್ ಮಾತನಾಡಿ ಕನ್ನಡಕ್ಕೆ ಅದರದ್ದೇ ಆದ ಇತಿಹಾಸವಿದೆ ಕೇವಲ ಆಚರಣೆಗೆ ಸೀಮಿತಗೊಳಿಸದೇ ಪ್ರತಿದಿನ ಕನ್ನಡ ರಾಜ್ಯೋತ್ಸವವನ್ನು ಆಚರಿಸಬೇಕು, ಕರ್ನಾಟಕದ ಜನತೆಗೆ ಇದು ಹೆಮ್ಮೆಯ ದಿನವಾಗಿದೆ, ಕನ್ನಡ ನಾಡು ಎಂಬುದೇ ಒಂದು ಧೀಮಂತ ಶಕ್ತಿಯಾಗಿದೆ ಇಂತಹ ನಾಡಿನಲ್ಲಿ ಜನ್ಮಪಡೆದ ನಾವು ಭಾಗ್ಯವಂತರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಚಿರಬಿ ಕೊಟ್ರೇಶ್. ಶಿವರಾಜ್ ಕನ್ನಡಿಗ. ಶಿವು ಕುಶನ್. ವೀರೇಶ್ ಗೌಡ್ರು. ಎಂ ಎಂ ಜೆ ವಾಗೀಶ್. ದ್ವಾರಕೇಶ್. ಕೂಡ್ಲಿಗಿ ಬೊಮ್ಮಪ್ಪ. ಬೋವಿ ಬೊಮ್ಮಪ್ಪ. ಹನುಮಂತ. ರಾಂಪುರ್ ಕೊಟ್ರೇಶ್. ವೆಂಕಟೇಶ್. ಬಸವರಾಜ್. ಗಂಗಮ್ಮನಹಳ್ಳಿ ವೆಂಕಟೇಶಣ್ಣ. ಭೋವಿ ನಾಗೇಂದ್ರಪ್ಪ. ಕೂಡ್ಲಿಗಿ ಆರ್ ಹನುಮಂತ. ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here