ಮೂರನೇ ಅಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳಿಗೆ ಹೆಚ್ಚಾಗಿ ಸಾಮಾನ್ಯ ಲಕ್ಷಣಗಳು ಇವೆ: ಡಾ.ಬಸವರಾಜ್,

0
499

ಸಂಡೂರು:ಜ:೨೧:ತಾಲೂಕಿನ ವಡ್ಡು ಕ್ಲಸ್ಟರ್ ನ ಕೋವಿಡ್ ಪಾಸಿಟಿವ್ ಟ್ರಿಯೇಜ್ ಗಾಗಿ ತಾಲೂಕಿನ ಉದ್ಭವ ಮೊಬೈಲ್ ಮೆಡಿಕಲ್ ಯುನಿಟ್ ನ್ನು ನಿಯೋಜಿಸಲಾಗಿದ್ದು,

ವಡ್ಡು, ತಾಳೂರು, ಬಸಾಪುರ, ಕುರೇಕುಪ್ಪ ಗ್ರಾಮಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಟ್ರಿಯೇಜ್ (ಚಿಕಿತ್ಸಾ ಸರದಿ ನಿರ್ಧಾರ) ಮಾಡಲು ಆರ್.ಆರ್.ಟಿ ತಂಡ ಬೇಟಿ ನೀಡಿ ಆರೋಗ್ಯ ವಿಚಾರಣೆ ಮಾಡಲಾಯಿತು.

ಸಂದರ್ಭದಲ್ಲಿ ಮಾತನಾಡಿದ ಅವರು ಇಂದು ಮೂರು ಗ್ರಾಮದಲ್ಲಿ ಬೇಟಿ ನೀಡಿ ಎಂಟು ಪಾಸಿಟಿವ್ ಪ್ರಕರಣಗಳ ಆರೋಗ್ಯ ವಿಚಾರಣೆ ಮಾಡಲಾಗಿದೆ, ಯಾರಿಗೂ ಗಂಭೀರ ಸಮಸ್ಯೆ ಇಲ್ಲ ಸೌಮ್ಯ ಸ್ವರೂಪದ ಲಕ್ಷಣಗಳು ಇವೆ ಕೆಲವರಿಗೆ ಅತಿ ಸಾಮಾನ್ಯ ಲಕ್ಷಣಗಳು ಇವೆ, ಪಾಸಿಟಿವ್ ಇರುವ ಕುಟುಂಬದ ಇತರರಿಗೆ ರೋಗ ಹರಡದಂತೆ ವಹಿಸಬೇಕಾದ ಕ್ರಮಗಳ ಮಾಹಿತಿ ನೀಡಿ, ಆರೋಗ್ಯದ ಕಾಳಜಿ ವಹಿಸುವಂತೆ ತಿಳುವಳಿಕೆ ನೀಡಲಾಗಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಉದ್ಭವ ಮೊಬೈಲ್ ಮೆಡಿಕಲ್ ಯುನಿಟ್ ನ ಡಾ.ಬಸವರಾಜ್, ಶುಶ್ರೂಷಣಾಧಿಕಾರಿ ರೋಜಾ, ಫಾರ್ಮಸಿ ಅಧಿಕಾರಿ ಚೈತ್ರ, ಕಿರಣ್, ಆಶಾ ಕಾರ್ಯಕರ್ತೆ ಯಲ್ಲಮ್ಮ, ಭಾರತಿ,ಲಕ್ಷ್ಮಿ, ಸುಮಂಗಳ, ವಿಜಯಲಕ್ಷ್ಮಿ, ಮಾಳಮ್ಮ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here