ಬಂಡ್ರಿ ಕೆಪಿಎಸ್ ಶಾಲೆಯಲ್ಲಿ ೬೬ ನೇ ಕರ್ನಾಟಕ ರಾಜ್ಯೋತ್ಸವ:

0
160

ಸಂಡೂರು,ನ.೧: ಕೋವಿಡ್ ಹಿನ್ನೆಲೆಯಲ್ಲಿ ೬೬ ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಡೂರು ತಾಲೂಕಿನ ಚೋರನೂರು ಹೋಬಳಿಯ ಬಂಡ್ರಿ ಗ್ರಾಮದಲ್ಲಿ ಅತ್ಯಂತ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕೆಪಿಎಸ್ ಶಾಲಾ ಮೈದಾನದಲ್ಲಿ ಸೋಮವಾರ (ನ.೧) ರಾಜ್ಯೋತ್ಸವ ಸಮಾರಂಭ ಆಯೋಜಿಸಲಾಗಿತ್ತು.

ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾದ ಎಂಡಿ.ನಾಗೇಶ್ ಮತ್ತು ಕೆಪಿಎಸ್ ಹೈಸ್ಕೂಲ್ ಹಾಗು ಕಾಲೇಜ್ ಪರವಾಗಿ ಪ್ರಾಂಶುಪಾಲರಾದ ಕೃಷ್ಣನಾಯ್ಕ್ ಅವರು‌ ರಾಷ್ಟ್ರ ಧ್ವಜಾರೊಃಣವನ್ನು ನೆರವೇರಿಸಿದರು.

ತಾಯಿ ಭುವನೇಶ್ವರಿದೇವಿಗೆ ಪೂಜೆ ಸಲ್ಲಿಸಿ ಗೌರವ ವಂದನೆ ಸ್ವೀಕರಿಸಿದ ಬಳಿಕ
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಣ ಪ್ರೇಮಿ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ನಾಗರಾಜ್ ಅವರು ಮಾತನಾಡುತ್ತಾ…

ಅಖಂಡ ಕರ್ನಾಟಕದ ನಿರ್ಮಾಣದ ಕನಸು ನನಸು ಮಾಡಲು ಶ್ರಮಿಸಿದ ನಮ್ಮ ಹಿರಿಯರ ಆಶಯದಂತೆ ಸಮಗ್ರ ಕರ್ನಾಟಕವನ್ನು ಪ್ರಗತಿಪರ ರಾಜ್ಯವನ್ನಾಗಿ ಕಟ್ಟಲು ಎಲ್ಲರೂ ಕೈ ಜೋಡಿಸೋಣ. ಕನ್ನಡ ನಾಡು-ನುಡಿ; ನೆಲ-ಜಲ ಸಂರಕ್ಷಣೆಗೆ ನಾವುಗಳೆಲ್ಲರೂ ಸದಾ ಬದ್ಧವಾಗಿರೋಣ, ನಾವೆಲ್ಲರೂ ಒಂದಾಗಿ ಕನ್ನಡದ ತೇರನ್ನು ಮುನ್ನಡೆಸೋಣ; ಕರ್ನಾಟಕವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸೋಣ ಎಂದು ಆಶಿಸುತ್ತಾ

ಕನ್ನಡ ಭಾಷಿಕ ಪ್ರದೇಶಗಳು ಒಂದಾಗಿ ಅಖಂಡ ಕರ್ನಾಟಕ ರಚನೆಯಾಗಬೇಕೆಂಬ ಕನಸು ನನಸಾಗಿ ಇಂದಿಗೆ 65 ವರ್ಷಗಳು ಪೂರ್ಣಗೊಂಡಿದ್ದು, ನಾವೆಲ್ಲರೂ 66ನೇ ರಾಜ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸುತ್ತಿರುವುದು ಕರ್ನಾಟಕದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ದಿನವಾಗಿದೆ ಎಂದು ಹೇಳುತ್ತಾ ಕನ್ನಡ ಬಗ್ಗೆ ಕನ್ನಡ ನಾಡಿನ ಇತಿಹಾಸದಲ್ಲಿ ಅಚ್ಚಳಿಯದೇ ಇರುವ ವಿಷಯಗಳ ಮಕ್ಕಳ ಮತ್ತು ನೆರೆದವರ ಮನಮುಟ್ಟುವಂತೆ ಸವಿಸ್ತಾರವಾಗಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಕೃಷ್ಣನಾಯ್ಕ್ ಮುಖ್ಯಗುರುಗಳಾದ ಎಂಡಿ.ನಾಗೇಶ್, ಬಸವರಾಜ್ ಕಂಕ್ರಿ, ಕರ್ನಾಟಕ ಪತ್ರಕರ್ತರ ಸಂಘದ ಸಂಡೂರು ತಾಲೂಕು ಅಧ್ಯಕ್ಷರು ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಗೋಪಾಲ್, ರೈತ ಸಂಘದ ಹನುಮಂತಪ್ಪ, ಬಸವರಾಜ್,ಶಿಕ್ಷಕರಾದ ರಾಜು, ತಿಪ್ಪೇಸ್ವಾಮಿ, ಯಶವಂತ್, ಮಹಾಂತೇಶ್ ಮತ್ತು ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here