ವಿಜಯನಗರ ಜಿಲ್ಲೆಯ ಡಿಸಿ,ಎಸ್ಪಿ ವರ್ಗಾವಣೆಗೆ ವಿರೋಧ ಖಂಡಿಸಿ ವಿವಿಧ ಸಂಘಟನೆಯು ಮುಖಂಡರು ಉಪ ತಹಶೀಲ್ದಾರ್ ಗೆ ಮನವಿ.

0
164

ಕೊಟ್ಟೂರು: ನೂತನ ವಿಜಯನಗರ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ ಪಿ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಡಾ. ಅರುಣ್ ಕೆ ಅವರನ್ನು ಶುಕ್ರವಾರ ಒಂದೇ ಸಲ ವರ್ಗಾವಣೆಗೊಳಿಸಿ ದಿಡೀರನೆ ಆದೇಶ ಹೊರಡಿಸಿದ ರಾಜ್ಯ ಸರ್ಕಾರ ಈ ದಕ್ಷ ಅಧಿಕಾರಿಗಳ ವರ್ಗಾವಣೆ ಖಂಡಿಸಿ.

ಪಟ್ಟಣದ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಉಪ ಧ್ಯಕ್ಷರು ಎನ್. ಭರ್ಮಣ್ಣ ಮತ್ತು ಡಿಎಸ್ಎಸ್ ಸಂಚಾಲಕರಾದ ತೆಗ್ಗಿನಕೇರಿ ಕೊಟ್ರೇಶ್ ಇವರ ನೇತೃತ್ವದಲ್ಲಿ ಡಿಸಿ, ಎಸ್ಪಿ ವರ್ಗಾವಣೆ ಖಂಡಿಸಿ ಶುಕ್ರವಾರ ಬೆಳಗ್ಗೆ 11:30 ಕ್ಕೆ ಉಪ ತಹಶೀಲ್ದಾರರಾದ ನಾಗರಾಜ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು ಮನವಿ ಪತ್ರವನ್ನು ಸಲ್ಲಿಸಿದ ನಂತರ ಸುದ್ದಿಗಾರರನ್ನು ಮಾತನಾಡಿದ ರೈತ ಸಂಘದ ಅಧ್ಯಕ್ಷರಾದ ಎನ್. ಭರಣ್ಣ ಮಾತನಾಡಿದರು.

ಇಬ್ಬರು ಅಧಿಕಾರಿಗಳು ತಮ್ಮ ಕಾರ್ಯ ಶೈಲಿ ಮೂಲಕ ಜನರ ಮನ ಗೆದ್ದಿದ್ದರೂ ಹೊಸ ಜಿಲ್ಲೆಯನ್ನು ಬಹಳ ವ್ಯವಸಿತವಾಗಿ ಕಟ್ಟಲು ಶ್ರಮಿಸಿದರು ಹೊಸ ಜಿಲ್ಲೆಯ ಆಡಳಿತದ ಚುಕ್ಕಾಣಿ ಕಾನೂನು ಸುವ್ಯವಸ್ಥೆ ದಕ್ಷ ಅಧಿಕಾರಿಗಳ ಕೈಗೆ ಕೊಟ್ಟಿದ್ದಕ್ಕೆ ಜನ ರಾಜ್ಯ ಸರ್ಕಾರವನ್ನು ಮುಕ್ತವಾಗಿ ಕೊಂಡಾಡಿದ್ದರು. ಆದರೆ ಏಕೈಕಿ ಅವರ ವರ್ಗಾಣದಿಂದ ರಾಜ್ಯ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಈ ವರ್ಗಾವಣೆ ಹಿಂದೆ ಪ್ರಭಾವಿ ಸಚಿವರೊಬ್ಬರ ಕೈವಾಡ ಆರೋಪ ಕೇಳಿ ಬರುತ್ತಿದೆ ಹೊಸಪೇಟೆಯಲ್ಲಿ ಹಿಂದಿನಿಂದಲೂ ಕಾನೂನು ಬಾಹಿರ ಚಟುವಟಿಕೆಗಳು ನಡಿತಿದ್ದವು ಶಾಸಕರ ಸಚಿವರ ಒತ್ತಡಕ್ಕೆ ಅಧಿಕಾರಿಗಳು ಮಣಿಯುತಿದ್ದರು ಎಂಬ ಆರೋಪಗಳಿವೆ ಆದರೆ ಅನಿರುದ್ಧ ಶ್ರಾವಣ ರವರು ಡಿಸಿ ಆದ ನಂತರ ಇದಕ್ಕೆಲ್ಲ ಕಡಿವಾಣ ಹಾಕಿದರು ಹಸ್ತಕ್ಷೇಪಕ್ಕೆ ಅವಕಾಶ ಕೊಡುತ್ತಿರಲಿಲ್ಲ ಇದು ಜಿಲ್ಲೆಯ ಪ್ರಭಾವಿ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿತ್ತು. ಎಂದು ಹೇಳಿದರು

ನಂತರ ಡಿಎಸ್ಎಸ್ ಸಂಚಾಲಕರಾದ ತೆಗ್ಗಿನಕೇರಿ ಕೊಟ್ರೇಶ್ ರವರು ಮಾತನಾಡಿ ಇನ್ನು ಡಾಕ್ಟರ್ ಅರುಣ್ ಕೆ ರವರ ಜಿಲ್ಲೆ ಎಸ್ಪಿ ಆದನಂತರ ಜೂಜು ,ಮಟ್ಕಾ ,ವೇಷವಾಟಿಕೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲ ಬ್ರೇಕ್ ಹಾಕಿದರು ತಮ್ಮ ಇಲಾಖೆಯ ಸಿಬ್ಬಂದಿ ವಿರುದ್ಧ ದೂರು ಬಂದ ತಕ್ಷಣವೇ ಅವರನ್ನು ಅಮಾನತ್ತುಗೊಳಿಸಿ ಕ್ರಮ ಕೈಗೊಂಡಿದ್ದರು. ಇಲಾಖೆಯಲ್ಲಿ ದೊಡ್ಡ ಮಟ್ಟದಲ್ಲಿ ಶಿಸ್ತು ಮೂಡಿತ್ತು ಇಲಾಖೆಯಲ್ಲಿ ಅನೇಕ ವರ್ಷಗಳಿಂದ ಒಂದೇ ಕಡೆ ಬೇರೂರಿದ್ಧರನ್ನು ಎತ್ತಂಗಡಿ ಮಾಡಿದರು ಕಾನೂನು ಮೀರಿದವರ ವಿರುದ್ಧ ಮುಲಾಜ್ ಇಲ್ಲದೆ ಕ್ರಮ ಜರುಗಿಸುತ್ತಿದ್ದರು.
ಯಾರಾದರೂ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತ ವಿರುದ್ಧ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಒಡ್ಡಿದ ಆರೋಪ ಕುರಿತು ದೂರ ಬಂದ ತಕ್ಷಣವೇ ಯಾರೇ ಆಗಲಿ ಜಾತಿ ನಿಂದನೆ ಕೊಲೆ ಪ್ರಕರಣ ದಾಖಲಿಸುತ್ತಿದ್ದರು ವಿಜಯನಗರ ಜಿಲ್ಲೆಯ ಸಿಂಗಂ ಎಂದು ಹೆಸರು ಹೊಂದಿದ್ದರು. ಇಂತ ದಕ್ಷ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿರುವುದನ್ನು ಜನಸಾಮಾನ್ಯರು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

“ಡಿಸಿ ,ಎಸ್ಪಿ ಅತ್ಯಂತ ದಕ್ಷಯದಿಂದ ಕೆಲಸ ಮಾಡುತ್ತಿದ್ದರು ಪ್ರತಿಯೊಂದು ಸ್ಪಂದಿಸುತ್ತಿದ್ದರು ಇವರ ವರ್ಗಾವಣೆ ಮಾಡಿರುವುದು ಖಂಡನಿಯ ಸರ್ಕಾರವು ಕೂಡಲೇ ಈ ವರ್ಗಾವಣೆಯನ್ನು ಹಿಂಪಡೆದು ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ”.

-ತೆಗ್ಗಿನಕೇರಿ ಕೊಟ್ರೇಶ್
ಡಿಎಸ್ಎಸ್ ಜಿಲ್ಲಾ ಸಂಚಾಲಕರು ಕೊಟ್ಟೂರು.

LEAVE A REPLY

Please enter your comment!
Please enter your name here