ಸಂಡೂರು ತಾಲೂಕಿನಲ್ಲಿ ಪ್ರಚಾರಕ್ಕೆ ಸೀಮಿತವಾದ ಉದ್ಯೋಗ ಖಾತ್ರಿ ಯೋಜನೆ; ಕಾರ್ಮಿಕರು ಗುಳೇ ಹೋಗುವುದನ್ನು ತಡೆಯದ ಗ್ರಾಪಂ,ತಾಪಂ.

0
379

ಸಂಡೂರು:ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಇಡೀ ದೇಶದಲ್ಲಿ ಹೆಚ್ಚು ಮಾನವ ದಿನಗಳನ್ನು ಸೃಷ್ಟಿಸಿದ್ದರು ಜನರು ಗುಳೇ ಹೋಗುವುದು ತಪ್ಪಿಲ್ಲ.

ಸಂಡೂರು ತಾಲೂಕಿನ 26 ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆ ಸಮರ್ಪಕವಾಗಿ ಜಾರಿಯಾಗದೆ ಗ್ರಾಮ ಪಂಚಾಯತಿ ಮತ್ತು ತಾಲೂಕು ಪಂಚಾಯಿತಿ /ಜಿಲ್ಲಾ ಪಂಚಾಯಿತಿ ಸದಸ್ಯರುಗಳು ಹಾಗೂ ಅವರ ಸಂಬಂದಿಗಳ ಮತ್ತು ಕೆಲ ಕಂಟ್ರಾಕ್ಟೇರ್ ಗಳ ಪಾಲಾಗಿವೆ. ಕೂಲಿ ಕಾರ್ಮಿಕರು ಕೆಲಸ ಹುಡುಕಿಕೊಂಡು ಮಲೆನಾಡು(ಕಾಪಿ ಎಸ್ಟೇಟ್) ಇನ್ನಿತರ ಪ್ರದೇಶದ ಜಿಲ್ಲೆಗಳಿಗೆ ಗುಳೇ ಹೋಗುವುದನ್ನು ತಪ್ಪಿಸಲು ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆ ಅನುಷ್ಠಾನಕ್ಕೆ ತಂದರು, ನರೇಗಾ ಯೋಜನೆ ಗುಳೇ ಹೋಗುವುದನ್ನು ತಪ್ಪಿಸಲು ವಿಫಲವಾಗಿವೆ.

ನರೇಗಾ ಯೋಜನೆಯಲ್ಲಿ ವಾರ್ಷಿಕ 100 ದಿನಗಳು ಮಾತ್ರ ಉದ್ಯೋಗ ನೀಡಲು ಅವಕಾಶವಿತ್ತು. ಅ ನೂರು ದಿನಗಳ ಕೆಲಸವನ್ನಾದರು ಸ್ಥಳೀಯ ಜಾಬ್ ಕಾರ್ಡ್ ಹೊಂದಿರಿವ ಕೂಲಿ ಕಾರ್ಮಿಕರಿಗೆ ಸರಿಯಾಗಿ ನೀಡದೇ ಇರುವುದು ತಾಲೂಕು ಮತ್ತು ಗ್ರಾ.ಪಂ. ಆಡಳಿತದ ವೈಫಲ್ಯಗಳು ಎದ್ದು ಕಾಣುತ್ತಿವೆ.

ಬರದ ಹಿನ್ನೆಲೆಯಲ್ಲಿ ಅದನ್ನು 150 ದಿನಗಳಿಗೆ ಹೆಚ್ಚಿಸಲಾಗಿದ್ದು ಒಬ್ಬರಿಗೆ ದಿನವೊಂದಕ್ಕೆ 309 ರೂಪಾಯಿ ಕೂಲಿ ನೀಡುತ್ತಿದ್ದರು.ಜನರು ಗುಳೇ ಹೋಗುವುದು ಸಾಮಾನ್ಯವಾಗಿದೆ.

ಸಂಡೂರು ತಾಲೂಕಿನ ಚೋರನೂರು ಹೋಬಳಿ ವ್ಯಾಪ್ತಿಯಲ್ಲಿ ಬರುವ ಬಂಡ್ರಿ. ನಿಡುಗುರ್ತಿ.ಹೆಚ್.ಕೆ.ಹಳ್ಳಿ. ಕಾಳಿಂಗೇರಿ. ಚೋರನೂರು. ಬೊಮ್ಮಗಟ್ಟ. ಗೊಲ್ಲಲಿಂಗಮ್ಮನಹಳ್ಳಿ.ಸೊವೇನಹಳ್ಳಿ. ಗ್ರಾಮ ಪಂಚಾಯಿತಿಗಳ ಜೊತೆಗೆ ಇನ್ನು ಕೆಲ ಪಂಚಾಯ್ತಿಗಳ ಕೂಲಿ ಕಾರ್ಮಿಕರು ಒಂದೊಂದು ಹಳ್ಳಿಯಿಂದ ಕನಿಷ್ಠ ಐದಾರು ಲಾರಿಗಳಲ್ಲಿ ಕುಟುಂಬ ಸಮೇತ ದಸರಾ/ ದೀಪಾವಳಿ ಹಬ್ಬ ಮುಗಿಸಿಕೊಂಡು ಗುಳೆ ಹೋಗಿದ್ದಾರೆ ಮತ್ತು ಇನ್ನು ಹೋಗುತ್ತಿದ್ದಾರೆ,ಇದೆಲ್ಲವನ್ನೂ ಕಣ್ಣಾರೆ ಕಂಡರೂ ಸಹ ಅಧಿಕಾರಿಗಳು,ಗ್ರಾಪಂ ಸದಸ್ಯರು, ಜನಪ್ರತಿನಿಧಿಗಳು, ಏನೂ ಗೊತ್ತಿಲ್ಲದ ರೀತಿಯಲ್ಲಿ ಕಣ್ಣಾರೆ ಕಂಡು ಕಾಣದವರಂತೆ ಸ್ಥಳೀಯ ಗ್ರಾ.ಪಂ.ಪಿಡಿಒ ಗಳು ಸುಮ್ಮನಿರುವುದರ ಮರ್ಮ ಏನೆಂಬುದು ಗೊತ್ತಾಗುತ್ತಿಲ್ಲ.

ಪ್ರತಿ ವರ್ಷ ಅಕ್ಟೋಬರ್ ನಿಂದ ಆರಂಭಗೊಂಡು ನವೆಂಬರ್ ಮಾಹೆವರೆಗೂ ಮಕ್ಕಳ ಸಮೇತ ಗುಳೇ ಹೋಗುವುದು ಸರ್ವೆ ಸಾಮಾನ್ಯವಾಗಿದೆ, ಮತ್ತೆ ಅವರು ಹಿಂತಿರುಗಿ ಬರುವುದು ಮಾರ್ಚ್ ಅಥವಾ ಏಪ್ರಿಲ್ ತಿಂಗಳಿಗೆ, ಅಲ್ಲಿವರೆಗೆ ಹಳ್ಳಿಗಳಲ್ಲಿ ಜನರೇ ಇಲ್ಲದೆ ನೀರವ ಮೌನ,ಎಲ್ಲೋ ಅಲ್ಲಲ್ಲಿ ಮನೆಗೊಬ್ಬರಂತೆ ವಯೋವೃದ್ದರನ್ನು ಮಾತ್ರ ಮನೆ ನೋಡಿಕೊಳ್ಳಲು ಬಿಟ್ಟು ಹೋಗಿರುತ್ತಾರೆ.

ನರೇಗಾ ಹಣ ನೀಡುವಲ್ಲಿ ತಾರತಮ್ಯ ಮತ್ತು ವಿಳಂಬ:

ನರೇಗಾ ಯೋಜನೆಯ ಅಡಿಯಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಕನಿಷ್ಠ 15 ದಿನಗಳು ಆದರೂ ಅವರ ಖಾತೆಗೆ ಕೂಲಿ ಪಾವತಿಯಾಗಲು ಸಮಯ ಹಿಡಿಯುತ್ತದೆ. ಆದರೆ ಕಾಪಿ ಸೀಮೆಗಳಲ್ಲಿ ಖಾಸಗಿ ವ್ಯಕ್ತಿಗಳ ಅಧೀನದಲ್ಲಿ ಕೆಲಸ ಮಾಡುವ ವ್ಯವಸ್ಥೆಯಲ್ಲಿ ಪ್ರತಿದಿನ ಇಲ್ಲವೇ ಒಂದು ವಾರಕ್ಕೊಮ್ಮೆಯಾದರು ಕೂಲಿ ಪಾವತಿಯಾಗುತ್ತದೆಯಂತೆ ಇದರಿಂದ ನಮ್ಮ ಜೀವನ ಸುಗಮ ಎಂಬುವುದು ಕಾರ್ಮಿಕರ ಆಶಯ..

ಪ್ರತಿ ದಿನವೂ ಕೂಲಿ:

ಕೂಲಿಗಾಗಿ ಅನ್ಯ ಜಿಲ್ಲೆಗೆ ತೆರಳುವ ಕಾರ್ಮಿಕರಿಗೆ ಸಾವಿರ ಮತ್ತು ಲಕ್ಷಾಂತರ ರೂ.ಗಳ ಮುಂಗಡದ ಹಣದ ಜೊತೆಗೆ ಪ್ರತಿ ದಿನವೂ 250 ರೂ ಗಳಿಂದ 300 ರೂ ಗಳ ವರೆಗೆ ಕೂಲಿ ಸಿಗುತ್ತದೆ.ಅಲ್ಲದೆ ಕಾರ್ಮಿಕರನ್ನು ಪೂರೈಕೆ ಮಾಡುವ ಸ್ಥಳೀಯ ಮಧ್ಯವರ್ತಿಗಳು ಕೂಡ ಈಗ ಎಲ್ಲೆಡೆ ಹುಟ್ಟಿಕೊಂಡಿದ್ದಾರೆ. ಪ್ರತಿ ವರ್ಷ ಕೆಲಸದ ಖಾತ್ರಿ ಜೊತೆಗೆ ಮೌಖಿಕ ಒಪ್ಪಂದವು ಆಗಿರುವ ಸಾಧ್ಯತೆಗಳು ತಳ್ಳಿಹಾಕುವಂತಿಲ್ಲ..

ಕೂಲಿ ಕಾರ್ಮಿಕರಿಕರಿಗೆ ಭದ್ರತೆ ಇಲ್ಲ:

ದೂರದ ಮಲೆನಾಡು ಕಾಪಿ ಸೀಮೆಗಳಿಗೆ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ದಿನವಿಡಿ ಅವರುಗಳು ಮಾಡಿದ ಕೆಲಸಕ್ಕೆ ತಕ್ಕಂತೆ ಕೂಲಿ ಸಿಗುತ್ತದೆ ವಿನಹ ಅವರುಗಳಿಗೆ ಭದ್ರತೆ ಇರುವುದಿಲ್ಲ.ನರೇಗಾ ಯೋಜನೆಯಡಿಲ್ಲಿ ಕೆಲಸ ಮಾಡುವಾಗ ಏನಾದರೂ ಸಣ್ಣ ಪುಟ್ಟ ತೊಂದರೆಗಳಾದರೆ ನರೇಗಾ ನಿಯಮಾನುಸಾರ ಸರ್ಕಾರ ಪರಿಹಾರವನ್ನು ನೀಡಿ ಚಿಕಿತ್ಸೆಯನ್ನು ಕೊಡಿಸುತ್ತದೆ ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾಗಿದ್ದ ಗ್ರಾ.ಪಂ.ಪಿಡಿಓ ಗಳು ಬೇಜವಾಬ್ದಾರಿತನದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ

ಅಧಿಕಾರಿಗಳ ವಿಫಲ ಯತ್ನ :

ಪ್ರತಿ ವರ್ಷ ಜನ ಗುಳೇ ಹೋಗುವ ವೇಳೆ ಆಯಾ ವ್ಯಾಪ್ತಿಯಲ್ಲಿ ಅಧಿಕಾರಿಗಳು ಜನರ ಮನವೊಲಿಸುವ ಪ್ರಯತ್ನಗಳು ನಡೆಯುತ್ತಿಲ್ಲ .

ನರೇಗಾದಡಿ ನೀಡುವ ಕೂಲಿಯು ಕಾರ್ಮಿಕರಿಗೆ ಸಾಕಾಗದೆ, ಖಾಸಗಿ ವಲಯದಲ್ಲಿ ಹೆಚ್ಚಿನ ಕೂಲಿಯ ಜೊತೆಗೆ ಅವರಿಗೆ ಅಲ್ಲಿ ಸಿಗುವ ಸವಲತ್ತುಗಳಿಗೆ ಮರುಳಾಗಿ ಗುಳೇ ಹೋಗುವುದು ಅನಿವಾರ್ಯತೆ ಕೂಡ ಕಂಡುಬರುತ್ತದೆ. ಇದರಿಂದ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯು ಆಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.. ಸಂಬಂಧಪಟ್ಟ ಜಿಲ್ಲಾ/ತಾಲೂಕು/ಗ್ರಾಮ ಪಂಚಾಯಿತಿ ಅಧಿಕಾರಿಗಳು ಪ್ರತಿಯೊಂದು ಹಳ್ಳಿಗಳಲ್ಲಿ ಸದ್ಯ ಎಷ್ಟು ಜನ ಕೂಲಿ ಕಾರ್ಮಿಕರು ಗುಳೆ ಹೋಗಿದ್ದಾರೆ. ಅದರಲ್ಲಿ ಶಾಲಾ ಕಾಲೇಜ್ ವಿದ್ಯಾರ್ಥಿಗಳು ಎಷ್ಟು ಕೂಲಿ ಕಾರ್ಮಿಕರು ಎಷ್ಟು ಎಂದು ಮನೆ ಮನೆಗಳಿಗೆ ಸರ್ವೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

LEAVE A REPLY

Please enter your comment!
Please enter your name here