ಸೀರೆಯು ಸಾಂಪ್ರದಾಯಿಕ ರೂಪದೊಂದಿಗೆ ಆಧುನಿಕತೆಯನ್ನು ಮೈಗೂಡಿಸಿಕೊಳ್ಳುವತ್ತಾ ದಾಪುಗಾಲು ಹಾಕುತ್ತಿದೆ; ರೇಖಾ ಪ್ರಕಾಶ್

0
82

ಹೊಸಪೇಟೆ :ಭಾರತೀಯ ನಾರಿಯ ವಿಶಿಷ್ಟ, ವಿಶೇಷ ಸಾಂಪ್ರದಾಯಿಕ ಉಡುಗೆ ಸೀರೆಯು ನಾರಿಯ ಮೆರುಗನ್ನು ಮತ್ತಷ್ಟು ಹೆಚ್ಚಸಿ ಪೂಜನೀಯ ಭಾವ ಮೂಡಿಸುವುದು ಎಂದು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ರೇಖಾ ಪ್ರಕಾಶ್ ಹೇಳಿದರು.

ಕೆಎಲ್ ಎಸ್ ಟೆಕ್ಸಟೈಲ್, ರಾಜಮಹಲ್ ಬಳ್ಳಾರಿ, ಇನ್ನಿತರ ಸಂಸ್ಥೆಗಳ ಸಹಪ್ರಯೋಜಕತ್ವದೊಂದಿಗೆ ಹೊಸಪೇಟೆ ಇನ್ನರ್ ವೀಲ್ ಕ್ಲಬ್ ವತಿಯಿಂದ ರೋಟರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ “ಮಿಸ್ ಸ್ಯಾರಿ ಹೊಸಪೇಟೆ’ ಪ್ಯಾಷನ್ ಶೋಗೆ ಚಾಲನೆ ನೀಡಿ ಮಾತನಾಡಿ, ಸೀರೆಯು ಸಾಂಪ್ರದಾಯಿಕ ರೂಪದೊಂದಿಗೆ ಆಧುನಿಕತೆಯನ್ನು ಮೈಗೂಡಿಸಿಕೊಳ್ಳುವತ್ತಾ ದಾಪುಗಾಲು ಹಾಕುತ್ತಿದೆ, ಅದರಲ್ಲೂ ಯುವತಿಯರನ್ನು ಹೆಚ್ಚು ಹೆಚ್ಚು ಆಕರ್ಷಿಸುತ್ತಿದ್ದು ದೇಶದ ಈ ಸಾಂಪ್ರದಾಯಿಕ ಉಡುಗೆಯೂ ವಿದೇಶಿಯರಲ್ಲಿಯೂ ಮೋಡಿ ಮಾಡಿದ್ದು ತನ್ನ ಸಾಂಪ್ರದಾಯದೊಂದಿಗೆ ನವೀನ ವಿನ್ಯಾಸವನ್ನು ಪಡೆಯುತ್ತಿದೆ .
ಫ್ಯಾಷನ್ ಶೋ ನಲ್ಲಿ ಶಾಲಾ,ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಮಹಿಳೆಯರು ಭಾಗಿಯಾಗಿರುವುದು ಸಂತಸ ತಂದಿದೆ ಎಂದರು.

ಉದ್ಯಮಿ ನೀತಾ ಪಾಟೀಲ್ ತಿರಂಗಾ ಬಣ್ಣದ ಸೀರೆಯೊಂದಿಗೆ ಹೆಜ್ಜೆ ಹಾಕಿದರೆ ಚಂಚಲ್ ಸೋನಿಯವರು ಆಧುನಿಕ ವೀರನಾರಿಯಂತೆಸೀರೆ ಜತೆ ಸೈನ್ಯದ ಜಾಕೆಟ್ ಅನ್ನು ಸಮೀಕರಿಸಿ ದೇಶದ ಭಾವುಟದೊಂದಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಸುಮಾರು ೩೫ ಜನ ಸ್ಪರ್ಧಿಗಳು ಭಾಗಿಯಾಗಿದ್ದರು.

ವಿಜೇತರು:- ಶ್ರೀಕರಿ ಕಾಲೇಜಿನ ದೀಕ್ಷಾ ‘ಮಿಸ್ ಸ್ಯಾರಿ ಹೊಸಪೇಟೆ’ ಕಿರೀಟ ಮೂಡಿಗೇರಿಸಿಕೊಂಡರು, ಶೀತಲ್ ಎರಡನೇಯವರಾಗಿ ಹಾಗೂ ತನಿಷ್ಕ್ ಸೋನಿ ಸಮಾಧಾನಕರ ಬಹುಮಾನ ಪಡೆದರು. ವಿಜೇತರಿಗೆ ಕಿರೀಟ, ನೆನಪಿನ ಕಾಣಿಕೆ ಬಹುಮಾನ ನೀಡಿ ಸನ್ಮಾನಿಸಲಾಯಿತು.
ಶ್ರೀಕರಿ ಫ್ಯಾಷನ್ ಡಿಸೈನ್ ಕಾಲೇಜಿನ ಉಪನ್ಯಾಸಕಿ ಅನಿತಾ, ಸಮಾಜ ಸೇವಕಿ ಪ್ರಿಯಾಂಕ ಜೈನ್, ಇನ್ನರ್ ವೀಲ್ ಸದಸ್ಯರಾದ ಸುಮಿತಾ ಮೂರಾರ್ಕ, ವೆಂಕಟಲಕ್ಷ್ಮಿ ತೀರ್ಪುಗಾರರಾಗಿದ್ದರು.
ಸಂಸ್ಥೆಯ ಕಾರ್ಯದರ್ಶಿ ವೈ. ಅಶ್ವಿನಿ, ಜಿಲ್ಲಾ ಛೇರ್ಮನ್ ಡಾ.ಮಾಧವಿದೇವಿ, ಜಿಲ್ಲಾ ಕಾರ್ಯದರ್ಶಿ ಜಯಶ್ರೀ ರಾಜಗೋಪಾಲ್, ಸದಸ್ಯರಾದ ನೈಮಿಷಾ, ಉಮಾ ಲೋಕೇಶ್, ಮಣಿ ವಿಷ್ಣು, ವಿದ್ಯಾ ಸಿಂಧಗಿ, ಸುಜಾತ ಪತ್ತಿಕೊಂಡ, ಆರತಿ ರಾಜಾಪುರ್, ಶುಭಾಂಗಿ ಗೊಗ್ಗ, ಅನ್ನಪೂರ್ಣ ಸದಾಶಿವ, ವಿಜಯ ಅಗ್ನಿಹೋತ್ರಿ ಇತರರು ಪಾಲ್ಗೊಂಡಿದ್ದರು.

ವರದಿ:-ಪಿ.ವಿ.ಕಾವ್ಯ

LEAVE A REPLY

Please enter your comment!
Please enter your name here