ಕನಕ, ಓಬವ್ವ ಜಯಂತಿ ಪೂರ್ವ ಭಾವಿ ಸಭೆ: ಸಮುದಾಯದ ಸಹಾಯ, ಸಹಕಾರದೊಂದಿಗೆ ದಾರ್ಶನಿಕರ ಜಯಂತಿಗಳ ಆರ್ಥಪೂರ್ಣ ಆಚರಣೆಗೆ ತಾಲೂಕಾಡಳಿತ ಬದ್ದ- ತಹಶಿಲ್ದಾರ ವಿ.ಕಾರ್ತೀಕ.

0
271

ಹಗರಿಬೊಮ್ಮನಹಳ್ಳಿ, ನ,7 ದಾರ್ಶನಿಕರ ಜಯಂತಿ ಆಚರಣೆಗೆ ಆಯಾ ಸಮುದಾಯಗಳ ನೆರವು, ಸಹಾಯ, ಸಹಕಾರ ಅಗತ್ಯವಿದೆ.‌ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇನ್ನೂ ಮುಂದೆ ತಾಲೂಕಿನಲ್ಲಿ ಎಲ್ಲ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುವುದೆಂದು ತಹಶಿಲ್ದಾರ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆಯ ಅಧ್ಯಕ್ಷರಾದವಿ.ಕಾರ್ತೀಕ ಆಶಯ ವ್ಯಕ್ತಪಡಿಸಿದ್ದಾರೆ.

ಸೋಮವಾರ ಹಗರಿಬೊಮ್ಮನಹಳ್ಳಿ ತಾಪಂ ಮಹಾತ್ಮಗಾಂಧಿ ಸಭಾಂಗಣದಲ್ಲಿ ತಾಲೂಕಾಡಳಿತ ಆಯೋಜಿಸಿದ್ದ ಭಕ್ತ ಕನಕದಾಸರು ಹಾಗೂ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣಾ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ, ನಾನು ತಾಲೂಕಿಗೆ ಹೊಸಬ, ಈ ಹಿಂದೆ ಇಲ್ಲಿ ಜಯಂತಿಗಳನ್ನು ಯಾವ ರೀತಿಯಲ್ಲಿ ಆಚರಣೆ ಮಾಡಿದ ಬಗ್ಗೆ ಮಾಹಿತಿ ಪಡೆದುಕೊಂಡು ಜಯಂತಿಗಳನ್ನು ಯಶಸ್ವಿಗೊಳಿಸಲಾಗುವುದೆಂದರು.

ಕುರುಬರ ಸಂಘದ ಮಾಜಿ ತಾಲೂಕಾಧ್ಯಕ್ಷ ಕೆ.ಮೈಲಾರಪ್ಪ ಮಾತನಾಡಿ, ರಾಜ್ಯದಲ್ಲಿ ನಮ್ಮ ಸಮುದಾಯ ದಿಂದ ಎಸ್ಟಿ ಮೀಸಲಾತಿಗೆ ಆಗ್ರಹಿಸಿ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಕನಕ ಜಯಂತಿ ದಿವಸ ಮೀಸಲಾತಿಗೆ ಆಗ್ರಹಿಸಿ ತಾಲೂಕಾಡಳಿತಕ್ಕೆ ಮನವಿ ಅರ್ಪಿಸುವ ಮೂಲಕ ಕನಕ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಣೆ ಮಾಡಲು ತಾಲೂಕ ಕುರುಬರ ಸಮಿತಿ ನಿರ್ಧರಿಸಿದೆ ಎಂದರು.

ಹತ್ತು ದಿನಗಳ ಮುಂಚಿತವಾಗಿಯೇ ಪೂರ್ವಭಾವಿ ಸಭೆಯನ್ನು ಕರೆಯಬೇಕು. ಮೂರು ದಿನ ಇದ್ದಾಗ ಸಭೆ ನಡೆದರೆ ಅನಾನುಕೂಲವೇ ಹೆಚ್ಚು ಎಂದು ಮೈಲಾರಪ್ಪ ಆಕ್ಷೇಪ ವ್ಯಕ್ತಪಡಿಸಿದರು. ಇನ್ನೂ ಮುಂದೆ ಹತ್ತು ದಿನ ಮುಂಚೆಯೇ ಪೂರ್ವಭಾವಿ ಸಭೆ ಕರೆಯಲು ಈ ಸಭೆಯಲ್ಲಿಯೇ ಸಭಾ ನಡುವಳಿಕೆ ಮಾಡುವುದಾಗಿ ತಹಶಿಲ್ದಾರ ಉತ್ತರಿಸಿದರು.

ತಾಪಂ ಇಓ ಪರಮೇಶ್ವರಪ್ಪ, ಕಾಂಗ್ರೆಸ್ ಮುಖಂಡ ಎಂ.ಕೊಟ್ರೇಶ, ಪತ್ರಕರ್ತ ಹುಳ್ಳಿಪ್ರಕಾಶ, ಚಲವಾದಿ ನೌಕರರ ಸಂಘದ ಸಿ.ಶಿವಮೂರ್ತಿ ಕನಕದಾಸರು, ಒನಕೆ ಒಬ್ಬವರ ಇತಿಹಾಸದ ಕುರಿತು ಸಭೆಯಲ್ಲಿ ಮಾತನಾಡಿದರು

ತಹಶಿಲ್ದಾರ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ವಿ.ಕಾರ್ತಿಕ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ತಾಪಂ ಇಓ ಪರಮೇಶ್ವರಪ್ಪ, ಸಿಪಿಐ ಟಿ.ಮಂಜಣ್ಣ, ಪಿಎಸ್ಐ ಸರಳಾ, ಕಸಾಪ ಅಧ್ಯಕ್ಷ ಹುಲಿಮನಿ ಗೂಳೇಪ್ಪ, ಬಿಜೆಪಿ ಮುಖಂಡರಾದ ಕಿನ್ನಾಳಸುಭಾಶ, ಕಾಂಗ್ರೆಸ್ ಮುಖಂಡರಾದ ಮುಟುಗನಹಳ್ಳಿ ಕೊಟ್ರೇಶ, ಕುರುಬರ ಸಂಘದ ಪ್ರಮುಖರಾದ ವರದಾಪುರ ಕುಮಾರ, ಚೌಟಗಿ ಉಮೇಶ, ಮೊರನಾಳ ಗುರುಸಿದ್ದಪ್ಪ, ಚಲುವಾದಿ ನೌಕರರ ಸಂಘದ ಅಧ್ಯಕ್ಷ ಶಿವಮೂರ್ತಿ ಸೇರಿದಂತೆ ಹಲವು ಮುಖಂಡರುಗಳು, ವಿವಿಧ ಇಲಾಖೆಗಳ ಸಹಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ಶಿಕ್ಷಣ ಇಲಾಖೆಯ ಮುಸ್ತಾಕ್ ಆಹ್ಮದ್ ಸ್ವಾಗತಿಸಿದರು. ಕಂದಾಯ ಇಲಾಖೆಯ ಡಿ.ಗೋಪಾಲಶೆಟ್ಟಿ ವಂದಿಸಿದರು.

  • ಹುಳ್ಳಿಪ್ರಕಾಶ, ಹಿರಿಯ ಪತ್ರಕರ್ತರು.

LEAVE A REPLY

Please enter your comment!
Please enter your name here