ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ನಮ್ಮ ಭಾರತ ಸಂವಿಧಾನ

0
118

ಕೊಟ್ಟೂರು: ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತಕ್ಕಿದೆ ಆದರೆ ಈ ಪ್ರಜಾಪ್ರಭುತ್ವ ಮೂಲ ಆದರೆ ಈ ದೇಶದ ಸಂವಿಧಾನ ಈ ಸಂವಿಧಾನ ರಚನೆಯಾಗಿ ಅಂಗೀಕಾರಗೊಂಡ ದಿನವೇ ರಾಷ್ಟ್ರೀಯ ಸಂವಿಧಾನ ದಿನ lಎಂದು ನವಂಬರ್ 26ರಂದು ಈ ದಿನ ರಾಷ್ಟ್ರೀಯ ಸಂವಿಧಾನ ದಿನಾಚರಣೆ ಎಂದು ಆಚರಣೆ ಮಾಡುತ್ತೇವೆ ಎಂದು ಬಿ ಮರಿಸ್ವಾಮಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಬೆಳಗ್ಗೆ 11:30 ಕ್ಕೆ ಭಾರತ ಸಂವಿಧಾನ ಅರ್ಪಣೆಗೊಂಡ ಅಂಗವಾಗಿ ರಾಷ್ಟ್ರೀಯ ಸಂವಿಧಾನ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು ಡಾ. ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂ ಮಾಲೆ ಹಾಕುವ ಮೂಲಕ ರಾಷ್ಟ್ರೀಯ ಸಂವಿಧಾನ ದಿನಾಚರಣೆಯನ್ನು ಆಚರಣೆ ಮಾಡಲಾಯಿತು ನಂತರ ಮಾತನಾಡಿದ ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ಬಿ. ಮರಿಸ್ವಾಮಿ.

ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠ ಸಂವಿಧಾನ ಇರುವುದು ನಮ್ಮ ಭಾರತ ದೇಶದಲ್ಲಿ ಮಾತ್ರ ಈ ಪ್ರಜಾಪ್ರಭುತ್ವ ಮೂಲಧಾರವೇ ಈ ದೇಶದ ಸಂವಿಧಾನ ಭಾರತ ದೇಶದ ಇತಿಹಾಸದಲ್ಲಿ 1949 ನವೆಂಬರ್ 26 ಪ್ರಮುಖವಾದ ದಿನ ಕಾರಣ ನಮ್ಮ ದೇಶಕ್ಕೆ ಸಂವಿಧಾನವನ್ನು ಅಳವಡಿಸಿಕೊಂಡ ದಿನ ಇದು . ಈ ದೇಶ ಈ ಮೂಲದ ಪ್ರಜಾಪ್ರಭುತ್ವ ಸರ್ವರಿಗೂ ಸಮಾನತ ನೀಡಿದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರನ್ನು ಸ್ಮರಿಸಿಕೊಳ್ಳಲೇಬೇಕು.

ಈ ಸಂವಿಧಾನ ರಚನೆ ಮಾಡುವುದಕ್ಕೆ ಏಳು ಸದಸ್ಯರು ಉಳ್ಳ ಕರಡು ಸಮಿತಿಯನ್ನು ರಚನೆ ಮಾಡಲಾಯಿತು. ಈ ಸಮಿತಿಯ ಅಧ್ಯಕ್ಷತೆಯು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರಿಗೆ ನೀಡುತ್ತಾರೆ ಸಂವಿಧಾನ ರಚನೆ ಮಾಡಲು ಸುಮಾರು ಎರಡು ವರ್ಷ 11 ತಿಂಗಳುಗಳ 17 ದಿನಗಳ ಕಾಲ ಪರಿಶ್ರಮದ ಫಲವಾಗಿ ವಿಶ್ವದಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನ ರಚನೆ ಆಯ್ತು ಸಂವಿಧಾನ ಸಂಪೂರ್ಣಗೊಂಡ ದಿನವೇ 1949 ನವೆಂಬರ್ 26ರಂದು ಇಡೀ ದೇಶಕ್ಕೆ ಅನ್ವಯವಾಗುವ ಸಂವಿಧಾನವನ್ನು ರಚನೆ ಮಾಡಲಾಯಿತು. ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು ಅರ್ಥವೂ ಬಂದಿತು. ಈ ನೆನಪಿಗಾಗಿಯೇ ನವೆಂಬರ್ 26ರಂದು ರಾಷ್ಟ್ರೀಯ ಸಂವಿಧಾನ ದಿನವಾಗಿ ಆಚರಣೆ ಮಾಡಲಾಗುತ್ತದೆ ಎಂದು ಹೇಳಿದರು.

ನಂತರ ಮಾತನಾಡಿದ ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ತಗ್ಗಿನಕೇರಿ ಕೊಟ್ರೇಶ್ ಮಾತನಾಡಿ ಭಾರತ ದೇಶಕ್ಕೆ ಅಂಬೇಡ್ಕರ್ ಅವರ ಕೊಡುಗೆ ಅನನ್ಯ 1949 ನವೆಂಬರ್ 26ರಂದು ಸಂವಿಧಾನವನ್ನು ಅಂಗೀಕರಿಸಲಾಗಿತ್ತಷ್ಟೇ. 1950ರ ಜನವರಿ 26ರಂದು ದೇಶಾದ್ಯಂತ ಜಾರಿಗೆ ಆಯ್ತು ಈ ಸಂಪೂರ್ಣ ಸಂವಿಧಾನವನ್ನು ಅಂಬೇಡ್ಕರ್ ಬರವಣಿಗೆ ಮೂಲಕ್ಕೆ ನೀಡಿದ್ದಾರೆ ಪ್ರತಿಯೊಬ್ಬರು ಸಂವಿಧಾನವನ್ನು ಓದಿಕೊಂಡು ಸರ್ವರಿಗೂ ಸಮಾನತೆ ಹಕ್ಕು ನೀಡಿದ ಮಹಾನ್ ಪುರುಷ ಅಂಬೇಡ್ಕರ್ ಅವರ ಸಿದ್ಧಾಂತ ಚಿಂತನೆಗಳು ಈಗಿನ ಮಕ್ಕಳಿಗೆ ತಿಳಿಸಬೇಕಾಗಿದೆ ಎಂದು ಹೇಳಿದರು. ಈ ದಿನ ಪ್ರತಿಯೊಂದು ಶಾಲೆಯಲ್ಲಿ ಸಂವಿಧಾನದ ಮೂಲ ಪೀಠಿಕೆಯನ್ನು ಬೋಧಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ತಗ್ಗಿನಕೇರಿ ಕೊಟ್ರೇಶ್ ಜಿಲ್ಲಾ ಸಂಚಾಲಕರಾದ ಬಿ ಮರಿಸ್ವಾಮಿ ಡಿ ಎಸ್ ತಾಲೂಕು ಅಧ್ಯಕ್ಷರಾದ ಟಿ ಹನುಮಂತಪ್ಪ ಮೈಲಪ್ಪ ಬದ್ದಿ ದುರ್ಗೇಶ್, ವೀರ ವೀರಭದ್ರಪ್ಪ ಕೆ ಶಿವರಾಜ್ ಬಿ ಮಂಜುನಾಥ್, ಎಲ್ ವಿಷ್ಣು ಟಿ ಸುರೇಶ್, ಪರಶುರಾಮ್, ಜಿ. ಕೊಟ್ರೇಶ್, ಟಿ ಕೃಷ್ಣಮೂರ್ತಿ ಗೋಪಿ, ಸಚಿನ ಬಿ. ಹುಲಿಗೇಶ್, ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here