ಜೋಗಾ ನಾಯಕನ ಕೋಟೆ ಕಂಡಿರಾ..?

0
298

ಸಂಡೂರು: ತಾಲ್ಲೂಕಿನ ಹಳೇ ಜೋಗಿಕಲ್ಲಿನ ಕಲ್ಲು ಬೆಟ್ಟದ ಮೇಲಿರುವ ಪಾಳೆಗಾರ ಜೋಗಾ ನಾಯಕನ ಕೋಟೆಯನ್ನು ಇನ್ನೂ ನೋಡದೇ ಇರುವವರು ಸಾಧ್ಯವಾದಷ್ಟೂ ಬೇಗ ಭೇಟಿ ನೀಡುವುದು ಒಳ್ಳೆಯದು.

ಕೋಟೆಯು ಸೂಕ್ತ ರಕ್ಷಣೆ, ಪೋಷಣೆ ಇಲ್ಲದೆ ಶಿಥಿಲಾವಸ್ಥೆ ತಲುಪಿದೆ. ಕೆಲವು ದಿನಗಳಲ್ಲಿ ಅಲ್ಲಿ ಕೋಟೆ ಇತ್ತು ಎಂದು ಹೇಳುವ ದಿನಗಳು ಹತ್ತಿರ ಬಂದಿವೆ.

ಎಲ್ಲಿದೆ?: ಸಂಡೂರಿನಿಂದ ಸುಮಾರು 18 ಕಿ.ಮೀ ದೂರದಲ್ಲಿ ಸಂಡೂರು–ಕೂಡ್ಲಿಗಿ ರಾಜ್ಯ ಹೆದ್ದಾರಿಯಲ್ಲಿರುವ ಹೊಸ ಜೋಗಿಕಲ್ಲಿನಿಂದ ಅರ್ಧ ಕಿ.ಮೀ ಎಡಕ್ಕೆ ಸಾಗಿದರೆ ಹಳೇ ಜೋಗಿಕಲ್ಲು ಗ್ರಾಮ
ಕಾಣಿಸುತ್ತದೆ. ಈ ಗ್ರಾಮದ ನೆತ್ತಿಯ ಮೇಲಿನ ಕಲ್ಲು ಬೆಟ್ಟದ ಮೇಲಿರುವುದೇ ಜೋಗಾ ನಾಯಕನ ಕೋಟೆ.

ಕೆಲ ಶತಮಾನಗಳ ಹಿಂದೆ ಜೋಗಾ ನಾಯಕ ಪಾಳೆಗಾರನಾಗಿ ಇಲ್ಲಿ ಆಡಳಿತ ನಡೆಸಿದ್ದನೆಂಬುದು ಐತಿಹ್ಯ. ಬೆಟ್ಟದ ಮೇಲಿನ ಕೋಟೆ ಸಾಲು, ಬುರುಜುಗಳು ಇಲ್ಲಿನ ಪಾಳೆಗಾರನ ಆಳ್ವಿಕೆಯನ್ನು ಸಾಕ್ಷೀಕರಿಸುತ್ತವೆ. ಆದರೆ, ಪಾಳೆಗಾರ ಜೋಗಾ ನಾಯಕನ ಇತಿಹಾಸ, ಕಾಲ, ವಂಶಸ್ಥರ ಕುರಿತು ಗ್ರಾಮದ ಜನತೆಗೆ ಮಾಹಿತಿ ಇಲ್ಲ. ಈ ಪಾಳೆಗಾರನ ಆಳ್ವಿಕೆ, ಕಾಲ, ವಂಶಸ್ಥರ ಬಗ್ಗೆ ಇತಿಹಾಸಕಾರರು ಬೆಳಕು ಚೆಲ್ಲುವ ಅಗತ್ಯವಿದೆ.

ದೇವತಾ ಮೂರ್ತಿಗಳ ತಾಣ:
ಬೆಟ್ಟದ ಮೇಲೆ ಈಶ್ವರ, ಬಸವಣ್ಣ, ಉಗ್ರ ನರಸಿಂಹ, ಬೇಡರ ಕಣ್ಣಪ್ಪ, ವಾಲ್ಮೀಕಿ ಮಹರ್ಷಿ, ನವಗ್ರಹ, ಆಂಜನೇಯ, ರಾಮ ಲಕ್ಷ್ಮಣ, ಸೀತೆ, ಗಣೇಶ, ರಾಘ
ವೇಂದ್ರ ಸ್ವಾಮಿ, ವಿಷ್ಣು, ನಾಗದೇವತೆ,
ಸಾರೆದುರುಗಮ್ಮ ದೇವತಾ ಮೂರ್ತಿಗಳಿವೆ.

ಅವೆಲ್ಲವೂ, ಹಿರೆಕೆರೆಯಾಗಿನ ಹಳ್ಳಿಯ ಮಾನಪ್ಪಾಚಾರಿ ಅವರು ಗ್ರಾಮಸ್ಥರ ಹಾಗೂ ಸಾರೆ ದುರುಗಮ್ಮ ಭಕ್ತರೊಬ್ಬರ ಸಹಕಾರದೊಂದಿಗೆ ಕೆಲ ವರ್ಷಗಳ ಹಿಂದೆ ಪ್ರತಿಷ್ಠಾಪಿಸಲಾಗಿದೆ. ಇಲ್ಲಿರುವ ಹೊಂಡದಲ್ಲಿ ವರ್ಷಪೂರ್ತಿ ನೀರು ಸಂಗ್ರಹವಾಗಿರುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಇಲ್ಲಿ ದಸರಾ ಹಬ್ಬದ ಅಮವಾಸ್ಯೆ ದಿನ ಬೆಟ್ಟದ ಮೇಲಿಂದ ಸಾರೆ ದುರುಗಮ್ಮ ದೇವಿಯನ್ನು ಕೆಳಗೆ ತಂದು ಗ್ರಾಮಸ್ಥರು ಮೆರವಣಿಗೆ ಮಾಡಿ ಮತ್ತೆ ಬೆಟ್ಟದ ಮೇಲೆ ಪ್ರತಿಷ್ಠಾಪಿಸುವುದು ವಾಡಿಕೆ. ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಯಂದು ಸುತ್ತಲಿನ ಭಕ್ತರು ಬೆಟ್ಟಕ್ಕೆ ಬಂದು ಪೂಜೆ ಸಲ್ಲಿಸಿ ತೆರಳುತ್ತಾರೆ.

ವರದಿ:-
ವಿ.ಎಂ.ನಾಗಭೂಷಣ

LEAVE A REPLY

Please enter your comment!
Please enter your name here