ಯಾರೇ..ನೀ..ಹಸಿರು ಬಣ್ಣದ ವಯ್ಯಾರಿ, ಹಳದಿ ಬಣ್ಣದ ಸೀರೆಯನ್ನುಟ್ಟ ನಾರಿ

0
108

ಯಾರೇ ? ನೀ ಯಾರೇ?
ತಳಕು ಬಳುಕಿನ ನಾರಿ //
ಹಸಿರು ಬಣ್ಣದ ವಯ್ಯಾರಿ //
ಹಳದಿ ಬಣ್ಣದ ಸೀರೆಯನ್ನುಟ್ಟು//
ಉಪ್ಪು, ಅಜವಾನ ಹೊದ್ದು ಕಾದ ಎಣ್ಣೆಯಲಿ ಈಜಾಡುತ್ತಿರುವಳು ನೀ ಯಾರೇ ?

ಪ್ರತಿ ಮನೆ ಮನೆಯಲ್ಲೂ , ಹಾದಿ-ಬೀದಿ ಹೋಟೆಲುಗಳಲ್ಲೂ ಬಾಣೆಲೆಯಲ್ಲಿ ನಿನ್ನಯ ಶೃಷ್ಠಿ //
ಘಮ್ ಎಂದು ವಾಸನೆ ಬೀರಿದ ಕಡೆ ಎಲ್ಲರು ಹಾಯಿಸುವರು ನಿನ್ನ ಕಡೆ ದೃಷ್ಟಿ //

ಬಯಸುವರೆಲ್ಲ ಊಟಕೆ ಬೇಕು ಉಪ್ಪಿನ ಕಾಯಿ…ಜೊತೆಗಿರಬೇಕು ಮೆಣಸಿನಕಾಯಿ //
ಅದೇನು ನಿನ್ನ ಲೀಲೆಯೋ ಮಹಾತಾಯಿ //

ಮದುವೆ ಮನೆಯಲ್ಲಿ.. ಊಟದ ಎಲೆಮೇಲೆ ನಿನ್ನ ಕಂಡೊಡನೆ ಜನ ನೀರು ಸುರಿಸುವರು ಬಾಯಲ್ಲಿ //
ಅದೇನು ಮೋಡಿ ಮಾಡಿದೆಯೋ ಅವರಲ್ಲಿ //

ಖಾರ ಮಂಡಕ್ಕಿಗೂ ನೀನೇ// ಗಿರ್ಮಿಟ್ ಮಂಡಕ್ಕಿಗೂ ನೀನೇ/
ಉಸಳಿ ಮಂಡಕ್ಕಿಗೂ ನೀನೇ //
ಎಲ್ಲದಕ್ಕೂ ಜೊತೆಗಿರಬೇಕು ನೀನೇ… ನೀನೇ //

ಮಿರ್ಚಿ ಭಜಿ ಎನ್ನುವರು ನಿನ್ನ //
ಮೆಣಸಿನ್ ಕಾಯಿ ಎಂದು ಕರೆಯುವರು ನಿನ್ನ //
ನಿನ್ನ ನೋಡಿದೊಡೆ ಗುಳುಂ ಎಂದು ಬಾಯಲ್ಲಿಟ್ಟು ಚಪ್ಪರಿಸುವರು ನಿನ್ನ //

ನಿನ್ನನು ಶೃಷ್ಠಿಸಿ… ಶೃಂಗರಿಸಿ… ಹೆಸರಿಟ್ಟ… ಆ ಶೃಷ್ಠಿ ಕರ್ತ ಮಹನೀಯ ಯಾರೇ ??😀

LEAVE A REPLY

Please enter your comment!
Please enter your name here