ತಾಕತ್ ಇದ್ದರೆ ಶ್ರೀ ರಾಮುಲು ಬಹಿರಂಗ ಚರ್ಚೆಗೆ ಬರಲಿ ಕಾಂಗ್ರೆಸ್ ಮುಖಂಡ ಡಾಕ್ಟಾರ್ ಬಿ.ಯೋಗೀಶ್ ಬಾಬು

0
647

ವರದಿ:-ನಂದೀಶ್ ನಾಯಕ

ಚಿತ್ರದುರ್ಗ 03:ಮೇ:-ಅತ್ಯಂತ ಹಿಂದುಳಿದ ಕ್ಷೇತ್ರ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಮೊಳಕಾಲ್ಮೂರುನಿಂದ ಆಯ್ಕೆಯಾದ ದಿನದಿಂದಲೂ ಜನಸಾಮಾನ್ಯರ ಕೈಗೆ ಸಿಗದೆ ಹೈವೇಯಲ್ಲಿ ಕೆಲವರ ಸಂಪರ್ಕಕ್ಕೆ ಸೀಮಿತವಾಗುವ ಮೂಲಕ ಸಚಿವ ಎಂಬ ಅಪಖ್ಯಾತಿಗೆ ಒಳಗಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಡಾಕ್ಟರ್ ಯೋಗೇಶ್ ಬಾಬು ಆರೋಪಿಸಿದರು.

ತಾಲೂಕಿನ ಹಾನಗಲ್ಲದಲ್ಲಿ ಸೋಮವಾರ ಮಾತನಾಡಿದ ಅವರು ಮೊಳಕಾಲ್ಮೂರು ಕ್ಷೇತ್ರದ ಹಿಂದುಳಿಯಲು ಕಾಂಗ್ರೆಸ್ ಕಾರಣ ಎಂದು ಹೇಳಿಕೆ ನೀಡಿದ್ದಾರೆ ಆರೋಪ ಮಾಡಿರುವ ಶ್ರೀರಾಮುಲು ಎಷ್ಟು ಬಾರಿ ಕ್ಷೇತ್ರಕ್ಕೆ ಭೇಟಿ ಮಾಡಿದ್ದಾರೆ ಮತ್ತು ಕಚೇರಿಗೆ ಬಂದಿದ್ದಾರೆ ಎಂಬುದನ್ನು ಹೇಳಬೇಕೆಂದು ಹೇಳಿದರು ಕ್ಷೇತ್ರದ 38 ಗ್ರಾಮ ಪಂಚಾಯತಿ ಹೆಸರುಗಳು ಅವರಿಗೆ ಸರಿಯಾಗಿ ಗೊತ್ತಿಲ್ಲ ಹಾನ್ಗಲ್ ಪಕ್ಕದ ಹಳೆ ಕೆರೆ ಬೊಮ್ಮಲಿಂಗನಹಳ್ಳಿ ಕ್ಷೇತ್ರದ ಕೆಲವು ಹೆಸರುಗಳು ಅವರಿಗೆ ತಿಳಿದಿಲ್ಲ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭಿವೃದ್ಧಿ ಮಾಡಿಲ್ಲ ಎಂಬ ಆರೋಪ ಮಾಡುವ ಮೊದಲು ಅಲ್ಲಿನ ಕಾಂಗ್ರೆಸ್ ಶಾಸಕರು ಒಬ್ಬರನ್ನು ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಪಕ್ಷಾಂತರ ಮಾಡಿಕೊಂಡು ಟಿಕೆಟ್ ನೀಡುವಾಗ ಅಭಿವೃದ್ಧಿ ವಿಷಯವನ್ನು ಪರಿಗಣಿಸಲಿಲ್ಲವೇ ಎಂಬುದಕ್ಕೆ ಉತ್ತರಿಸಲು ಎಂದರು ಹೋದ ಕಡೆಯಲ್ಲ ತುಂಗಭದ್ರ ನೀರು ಕುಡಿಯುವ ನೀರಿನ ಯೋಜನೆ, ಮುದ್ರಾ ಯೋಜನೆಯಲ್ಲಿ ಕೆರೆ ತುಂಬಿಸುವ ಯೋಜನೆಗಳು ಮಿನಿ ವಿಧಾನಸೌಧ ಸಾಧನೆ ಎಂದು ಶ್ರೀರಾಮುಲು ಹೇಳಿಕೊಳ್ಳುತ್ತಾರೆ ಇವು ಕಾಂಗ್ರೆಸ್ನ ಸಿದ್ದರಾಮಯ್ಯ ಸರ್ಕಾರದಲ್ಲಿ ಮಾಡಿದ ಯೋಜನೆಗಳು ಆ ಸರ್ಕಾರದಲ್ಲಿ ಕಾಮಗಾರಿ ಮಾಡೋದಕ್ಕೆ ಮುಂದಾಗಿದ್ದಕ್ಕೆ ದಾಖಲೆಗಳು ಇವೆ ಎಂದು ಸಾಬೀತು ಮಾಡಲು ಸಿದ್ಧ

ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ಸರ್ಕಾರವಿದೆ ಎಂಬ ಆರೋಪವಿದೆ ಮೊಳಕಾಲ್ಮೂರು ಇದಕ್ಕೆ ಹೊರತಾಗಿಲ್ಲ ಕಮಿಷನ್ ಆಸೆಗಾಗಿ ಕಾಮಗಾರಿಗಳು ಎಲ್ಲಿ ಮಂಜೂರಾಗಿದೆ ಎಂದು ಲೇವಡಿ ಮಾಡಿದರು ಕ್ಷೇತ್ರಕ್ಕೆ ಬಾರದ ಶ್ರೀರಾಮುಲು ಅವರನ್ನು ಕಾಣಲು ಬಳ್ಳಾರಿಗೆ ಜನಸಾಮಾನ್ಯರು ಹೋದರೆ ಗೇಟ್ನಲ್ಲಿ ನಿಲ್ಲಿಸಿ ಕಾಯಿಸಿ ವಾಪಸ್ ಕಳಿಸಲಾಗಿದೆ ನಾಯಕನಹಟ್ಟಿ ಪಟ್ಟಣ ಪಂಚಾಯತಿ ಚುನಾವಣೆ ಬಿಜೆಪಿ ಸ್ಥಿತಿಯ ಕನ್ನಡಿಯಾಗಿದೆ ಬರಲಿರುವ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು

ಶ್ರೀರಾಮುಲು ಮುಂದಿನ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧೆ ಮಾಡಲು ಜನರು ಒಂದು ಸಾರಿ ಮಾಡಿರುವ ತಪ್ಪನ್ನು ಮತ್ತೊಮ್ಮೆ ಮಾಡದೆ ತಕ್ಕ ಪಾಠ ಕಲಿಸಲಿದ್ದಾರೆ ಕ್ಷೇತ್ರ ಕಾಂಗ್ರೆಸ್ ನಲ್ಲಿ ಯಾವುದೇ ಗೊಂದಲವಿಲ್ಲ ನಮ್ಮ ಮುಂದಿರುವ ಸಂಘಟನೆ ಮಾತ್ರ ಟಿಕೆಟ್ ವಿಚಾರ ಹೈ ಕಮಾಂಡ್ ಗೆ ಬಿಟ್ಟಿದ್ದು ಎಂದು ಹೇಳಿದರು

ಈ ಸಂದರ್ಭದಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟೇಲ್ ಜಿ.ಪಾಪನಾಯಕ ರಾಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಲ್ಲಿಕಾರ್ಜುನ್ ಕುಂಡಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಬಸಪ್ಪ ಜಗದೀಶ್ ಶರತ್ ಪರಮೇಶ್ ತುಮಕೂರ್ಲಹಳ್ಳಿ ಭಕ್ತಪ್ರಹ್ಲಾದ ಮುಂತಾದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here