ಮೋಹನ್ ಕುಮಾರ್ ರ ಕ್ರೀಯಾಶೀಲ ಹವ್ಯಾಸ ಬಹಳ ಹೆಮ್ಮೆಯ ವಿಚಾರ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

0
758

ಬೆಂಗಳೂರು: ಫೆ 16, ದೇಶದ ಜನತೆಗೆ ಮತದಾನದ ಜಾಗೃತಿ ಮೂಡಿಸಲು ನವದೆಹಲಿಯಲ್ಲಿ ಮ್ಯಾರಥಾನ್ ಮಾಡಿದ ಬಳ್ಳಾರಿ ಜಿಲ್ಲೆಯ ಕಂಪ್ಲಿ ನಿವಾಸಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪ ನವರಿಗೆ ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಕು. ಶೋಭಾ ಕರಂದ್ಲಾಜೆ ರವರು ಪತ್ರದ ಬರೆದು ಅಭಿನಂದಿಸಿದ್ದಾರೆ

ಕೇಂದ್ರ ಸಚಿವೆ ಬರೆದ ಪತ್ರದಲ್ಲಿ ಮೋಹನ್ ಕುಮಾರ್ ದಾನಪ್ಪನವರು ವೃತ್ತಿಯಲ್ಲಿ ವಕೀಲರಾಗಿ ಬಹಳ ಕ್ರೀಯಾಶೀಲ ಹವ್ಯಾಸವನ್ನು ಹಮ್ಮಿಕೊಂಡಿರುವುದು ತುಂಬಾ ಹೆಮ್ಮೆಯ ವಿಚಾರ.
ಸಮಾಜದಲ್ಲಿ ಮತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವಲ್ಲಿ “ಮತದಾನ ನಮ್ಮ ಹಕ್ಕು, ಮತದಾನ ನಮ್ಮ ಕರ್ತವ್ಯ” ಎಂಬ ಶಿರ್ಷಿಕೆಯಡಿಯಲ್ಲಿ ಸತತ 3 ಮೂರು ಗಂಟೆಗಳ ಕಾಲ ರಾಷ್ಟ್ರಧ್ವಜ ಮತ್ತು ನಾಡ ಧ್ವಜ ಹಿಡಿದು ಮ್ಯಾರಾಥನ್ ಮಾಡುವ ಮುಖಾಂತರ ಜಾಗೃತಿ ಮೂಡಿಸುವ ಕೈಂಕರ್ಯಕ್ಕಾಗಿ ಅವರು ಅಭಿನಂದನಾರ್ಹರು.

ಅದರಲ್ಲೂ ನಮ್ಮೆಲ್ಲರ ನೆಚ್ಚಿನ ಪ್ರಧಾನಮಂತ್ರಿ ಶ್ರೀ ನರೇಂದ್ರ- ಮೋದಿಜೀಯವರ 72ನೇ ಜನ್ಮದಿನದಂದು ನವದೆಹಲಿಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ಅವರ ಸಮಾಜಮುಖಿ ಕಾರ್ಯಕ್ಕೆ ಇನ್ನಷ್ಟು ಪ್ರಾಮುಖ್ಯತೆ ಒದಗಿಸಿಕೊಟ್ಟಿದೆ.

ಮೋಹನ್ ಕುಮಾರ್‌ ದಾನಪ್ಪನವರ ಸಮಾಜಮುಖಿ ಕಾರ್ಯಕ್ರಮಗಳಿಗೆ ಮತ್ತು ಅವರಲ್ಲಿರುವ ಸಾಮಾಜಿಕ ಕಳಕಳಿಗೆ ಉತ್ತಮ ಜನಸ್ಪಂದನೆ ಸಿಗಲೆಂದು ಹಾಗೂ ಭವಿಷ್ಯದಲ್ಲಿ ಅವರಿಗೆ ಈ ನಿಟ್ಟಿನಲ್ಲಿ ಉತ್ತಮ ಮಾರ್ಗ ಸಿಗಲೆಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆರವರು ಪತ್ರ ಬರೆದು ಅಭಿನಂದಿಸಿ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here