ಮೂಲಾ ನಕ್ಷತ್ರದಲ್ಲಿ ನೆರೆವೇರಿದ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ.ವಿಜ್ರಂಭಣೆಯಿಂದ ಜರುಗಿದ ಕೊಟ್ಟೂರೇಶ್ವರ ಮಹಾರಥೋತ್ಸವ

0
327

ಕೊಟ್ಟೂರು ಪಟ್ಟಣದಲ್ಲಿ ಗುರುವಾರ ಸಂಜೆ ಅಪಾರ ಸಂಖ್ಯೆಯಲ್ಲಿ ಭಕ್ತ ಸಮೂಹದ ನಡುವೆ ಶ್ರೀಗುರು ಕೊಟ್ಟೂರೇಶ್ವರ ರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು.

ಮಾಘ ಬಹಳುಯ ದಸಮಿಯ ಮೂಲ ನಕ್ಷತ್ರ ಕುಡಿದಾಗ ಕೊಟ್ಟೂರೇಶ್ವರರು ಜೀವಂತ ಸಮಾಧಿಯಾಗಿದ್ದರು ಆ ಸಂದರ್ಭದಲ್ಲಿ ಪ್ರತಿ ವರ್ಷವೂ ಸ್ವಾಮಿಯ ರಥೋತ್ಸವ ಜರುಗುವುದು ವಿಶೇಷ.

ಪಟ್ಟಣದ ಪರಿಶಿಷ್ಟ ಜಾತಿಯ ಸುಮಂಗಲೆಯರು ಆರತಿ ಬೆಳಗಿ ನೈವೇದ್ಯ ಸಮರ್ಪಿಸಿದ ನಂತರ ಸ್ವಾಮಿಯ ರಥೋತ್ಸವ ಜರಗುವುದು ಸನಾತನ ಕಾಲದಿಂದ ನಡೆದುಕೊಂಡ ಪದ್ಧತಿ ವಿಶೇಷವೂ ಆಗಿದೆ.

ಬೆಳಗ್ಗೆಯಿಂದಲೇ ಗುರು ಕೊಟ್ಟೂರೇಶ್ವರರಿಗೆ ವಿವಿಧ ಪೂಜೆಗಳು ನೆರವೇರಿಸಲಾಯಿತು ಆ ನಂತರ ವಿವಿಧ ಕಡೆಗಳಿಂದ ಲಕ್ಷಾಂತರ ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.

ಇಡೀ ದಿನ ದೇಗುಲದ ಪರಿಸರದಲ್ಲಿ ಜನ ಜಾತ್ರೆ ಇದ್ದು ಸರತಿ ಸಾಲಿನಲ್ಲಿ ತಡವತ್ತು ನಿಂತು ಭಕ್ತರು ದೇವರ ದರ್ಶನ ಪಡೆದರು.

ಕೊಟ್ಟೂರೇಶ್ವರ ದೇವಸ್ಥಾನ ದಿಂದ ಭಕ್ತರು ಕೊಟ್ಟೂರೇಶ್ವರ ಪಲ್ಲಕ್ಕಿಯನ್ನು ಹೊತ್ತು ದಲಿತ ಮಹಿಳೆಯ ಆರತಿ ಬೆಳಗುವುದರೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ನಂದಿ ದ್ವಜ ನಂದಿಕೋಲು ಕುಣಿತ ಸಮಳ ತಂಡಗಳು ಮೆರವಣಿಗೆಯಲ್ಲಿ ಸಾಗಿ ಮೆರಗು ಹೆಚ್ಚಿಸಿದರು. ರಥೋತ್ಸವಕ್ಕೆ ಸುತ್ತಲೂ ಭಕ್ತರು ಪ್ರದಕ್ಷಣೆ ಹಾಕಿದರು.

ಈ ವೇಳೆ ರಥಕ್ಕೆ ಎಣಿ ಜೋಡಿಸಿ ಕೊಟ್ಟೂರೇಶ್ವರ ಉತ್ಸವ ಮೂರ್ತಿಯನ್ನು ಅದರೊಳಗೆ ಪ್ರತಿಷ್ಠಾಪನೆ ಮಾಡಲಾಯಿತು. ಬಳಿಕ ನೆರೆದಿದ್ದ ಲಕ್ಷಾಂತರ ಭಕ್ತರ ನಡುವೆ ಅದ್ದೂರಿಯಾಗಿ ರಥವನ್ನು ಎಳೆಯಲಾಯಿತು
ಭಕ್ತರೂ ಬಾಳೆಹಣ್ಣು ತುರಿ ಭಕ್ತಿ ಸಮರ್ಪಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here