ಸಾಯಿ ಜ್ಞಾನಪೀಠಾ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ

0
317

ಕುರುಗೋಡು:ಫೆ,26: ಪಟ್ಟಣದ ಸಮೀಪದ ಏಳುಬೆಂಚಿ ಗ್ರಾಮದ ಹೊರ ವಲಯದಲ್ಲಿರುವ ಸಾಯಿ ಜ್ಞಾನಪೀಠಾ ಆಂಗ್ಲ ಮಾಧ್ಯಮ ಶಾಲಾ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶಾಲಾ ಪ್ರಾಂಗಣದಲ್ಲಿ ವಾರ್ಷಿಕೋತ್ಸವ ಸಮಾರಂಭ ಶನಿವಾರ ಸಂಜೆ ಸಂಭ್ರಮದಿಂದ ನಡೆಯಿತು.

ಶ್ರೀ ಷ.ಬ್ರ ಅಭಿನವ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ, ದಿವ್ಯ ಸಾನಿಧ್ಯ ವಹಿಸಿ ಆಶೀರ್ವಾಚನ ನೀಡಿದ ಶ್ರೀಗಳು, ವಿದ್ಯೆ ಅಂದ್ರೆ ಬರಿ ಪುಸ್ತಕದ ವಿದ್ಯೆ ಮಾತ್ರ ವಿದ್ಯೆ ಅಂತ ತಿಳಿದುಕೊಳ್ಳಬಾರದು, ಮನೋರಂಜನೆಯ ನೃತ್ಯ ಕಲೆ ಕೂಡ ಒಂದು ವಿದ್ಯೆ ಭಾಗವಾಗಿದೆ. ಯಾರಿಂದಾನು ಕಿತ್ತಿಕೊಳ್ಳಕ್ಕಾಗದ ವಸ್ತು ಯಾವುದಾರೂ ಇದ್ರೆ ಅದು ವಿದ್ಯೆ ಮಾತ್ರ, ವಿದ್ಯೆ ಕಲಿಯುವುದಕ್ಕೆ ವಿವಿಧ ನಗರಗಳಿಗೆ ತೆರಳುತ್ತಾರೆ, ಸಾಯಿ ಜ್ಞಾನಪೀಠ ಶಾಲೆಯವರು ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳಸಿ ದಿಲ್ಲಿವರೆಗೂ ಹೆಸರು ವಾಸಿಯಾಗಿದ್ದರೆ ಎಂದು ಶ್ರೀಗಳು ಶಿಕ್ಷಣ ಸಂಸ್ಥೆಯ ಬಗ್ಗೆ ಕೊಂಡಾಡಿದರು.

ಶ್ರೀ ಕರುಣಾಮೂರ್ತಿ ಸ್ವಾಮಿಗಳು ಮಾತನಾಡಿ ಈ ಜಗತ್ತಿನೊಳಗ ಎಲ್ಲಾ ದಾನಗಳು ಒಂದು ದಿನ ಸವಿತದ, ಹಳಿದುಹೋಗ್ತದ, ಮತ್ತು ಕಣ್ಮರೆಯಾಗ್ತದ, ಹಳಿಯ ದಾನ ಯವುದಾದರೆ ಇದ್ರೆ ಅದು ವಿದ್ಯೆ ಎಂದು ಹೇಳಿದರು.

ಸಾಯಿ ಜ್ಞಾನಪೀಠಾ ಆಂಗ್ಲ ಮಾಧ್ಯಮ ಶಾಲಾ ಸಂಸ್ಥಾಪಕ ಡಿ. ಶಂಕರ್ ದಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಗುವಿನ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಅಕ್ಷರ ಜ್ಞಾನದ ಜತೆಗೆ ಇತರೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವುದು. ಭಾಷೆ, ಮಾತಿನ ಬೆಳವಣಿಗೆಗೆ ಒತ್ತು ನೀಡುವುದು. ವಾಕ್ ತರಬೇತಿ ಮತ್ತು ಓದುವ ಕೌಶಲ್ಯ ಬೆಳೆಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.

ನಂತರ ಮಕ್ಕಳಿಂದ ಜರುಗಿದ ಸಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆದವು.

ಈ ವೇದಿಕೆಯಲ್ಲಿ ಶ್ರೀ ಷ.ಬ್ರ ಅಭಿನವ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹರಿಗಿನದೋಣಿ, ಶ್ರೀ ಕರುಣಾಮೂರ್ತಿ ಸ್ವಾಮಿಗಳು ಏಳುಬೆಂಚಿ, ಸಾಯಿ ಜ್ಞಾನಪೀಠಾ ಆಂಗ್ಲ ಮಾಧ್ಯಮ ಶಾಲಾ ಸಂಸ್ಥಾಪಕ ಡಿ. ಶಂಕರ್ ದಾಸ್, ಸಾಯಿ ಜ್ಞಾನಪೀಠ ಶಾಲಾ ನಿರ್ದೇಶಕರು ಕೆ.ಅಂಬಣ್ಣ, ಶಿವಕುಮಾರ್ ಸ್ವಾಮಿಗಳು, ಗ್ರಾ.ಪಂ ಅಧ್ಯಕ್ಷೆ ಡಿ.ರೇಣುಕಮ್ಮ ಹೇಮಚಂದ್ರ ದಾಸ್, ಸದಸ್ಯೆ ಯಮನಮ್ಮ ಹನುಮಂತಪ್ಪ, ಎನ್.ಚಂದ್ರಪ್ಪ, ವಸಿಗೇರಪ್ಪ, ತಿಪ್ಪೇಸ್ವಾಮಿ, ಎನ್.ಪರಶುರಾಮ, ಮಧಿನ್, ಜಾಕೀರ್, ಭಾಷಾ, ಕೆ.ವಸಿಗೇರಪ್ಪ, ಕೆ.ಅಂಜಿನಿ, ಕೆ.ಮಂಜುನಾಥ, ಕೆ.ವಿರುಪಾಕ್ಷಿ, ಕೆ.ಹೊನ್ನೂರಸ್ವಾಮಿ ಇತರರು ಇದ್ದರು.

ವರದಿ:-ವೀರೇಶ್. ವಿ

LEAVE A REPLY

Please enter your comment!
Please enter your name here