ವೈದ್ಯಕೀಯ ವಲಯದಲ್ಲಿ ಕನ್ನಡ ಬಳಸಿ

0
62

ಬಳ್ಳಾರಿ,ಜೂ.29: ಬಳ್ಳಾರಿ ಜಿಲ್ಲಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರ ಸಮಿತಿ ಸಭೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ನಡೆಯಿತು.
ಸಭೆಯ ನಂತರ ಎಲ್ಲಾ ಸದಸ್ಯರು ವೈದ್ಯಕೀಯ ವಲಯದಲ್ಲಿ ಕನ್ನಡ ಬಳಕೆ ಅಭಿಯಾನ ಮಾಡಬೇಕೆಂದು ಜಿಲ್ಲಾಶಸ್ತ್ರಚಿಕಿತ್ಸಕರಿಗೆ ಮನವಿ ಪತ್ರ ಸಲ್ಲಿಸಿದರು.
ವೈದ್ಯಕೀಯ ವಲಯದ ಸಿಬ್ಬಂದಿಗಳು ಕನ್ನಡ ಬಲ್ಲವರಾದರೆ ವೈದ್ಯರು ಮತ್ತು ರೋಗಿಗಳ ನಡುವೆ ಸಂವಹನ ಸುಲಭವಾಗುತ್ತದೆ. ವೈದ್ಯಕೀಯ ಶಿಕ್ಷಣಕ್ಕಾಗಿ ರಾಜ್ಯಕ್ಕೆ ಬಂದ ಹೊರ ರಾಜ್ಯ/ಹೊರ ದೇಶದವರು ಶಿಕ್ಷಣವನ್ನು ಪಡೆದ ನಂತರ ಇಲ್ಲಿಯೇ ನೆಲೆ ನಿಲ್ಲುವವರು ಹಾಗೂ ಉಳಿದವರು ಕೂಡ ಕಡ್ಡಾಯವಾಗಿ ಕನ್ನಡ ಕಲೆಯುಂತಾಗಬೇಕು. ವೈದ್ಯಕೀಯ ಶಿಕ್ಷಣ ಪಡೆದು ಇಲ್ಲಿಯೇ ಬದುಕು ರೂಪಿಸಿಕೊಂಡವರು ಸುಮಾರು ವರ್ಷಗಳ ಕಾಲ ಕರ್ನಾಟಕದಲ್ಲಿಯೇ ವಾಸಿಸುತ್ತಾರೆ. ಅವರು ಕನಿಷ್ಠ ಪಕ್ಷ ರೋಗಿಯೊಂದಿಗೆ ಸಂವಹನಕ್ಕಾಗಿಯಾದರೂ ಓದಲು, ಬರೆಯಲು ಮತ್ತು ಮಾತನಾಡಲು ಕನ್ನಡ ಕಲಿತು, ನಮ್ಮ ಭಾಷೆಯಲ್ಲಿಯೇ ಸೇವೆ ಸಲ್ಲಿಸಲಿ ಎಂದು ಅವರು ಮನವಿ ಮಾಡಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ್ ಕೆ.ರಂಗಣ್ಣನವರ, ಸದಸ್ಯರಾದ ಕೆ.ಪುಷ್ಪಲತಾ, ಅಣ್ಣಾಜಿ ಕೃಷ್ಣಾರೆಡ್ಡಿ, ಕೆ.ಜಗದೀಶ್, ಚಂದ್ರಶೇಖರ್ ಆಚಾರ್, ಕೆ.ಹೊನ್ನೂರಸ್ವಾಮಿ, ಚಾಂದಭಾಷ, ರಮೇಶ್ ಗೌಡ ಪಾಟೀಲ್, ನಿಷ್ಠಿ ರುದ್ರಪ್ಪ, ಜಿ.ಗಿರೀಶ್ ಕಾರ್ನಾಡ್ ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here