ಉಜ್ಜಿಯಿನಿ ಶ್ರೀಗಳಿಂದ ಮತದಾನ, ಪ್ರತಿಯೊಬ್ಬ ಮತ ಭಾಂದವ ಮತದಾನ ಮಾಡಬೇಕಿದೆ-ಶ್ರೀಗಳು ಕರೆ

0
263

ವಿಜಯನಗರ ಜಿಲ್ಲೆ ಕೂಡ್ಲಿಗಿ: ತಾಲೂಕಿನ ಶ್ರೀಕ್ಷೇತ್ರ ಉಜ್ಜನಿ ಗ್ರ‍ಾಮದಲ್ಲಿ, ಮೇ10ರಂದು ಮತದಾನ ಕೇಂದ್ರದಲ್ಲಿ ಶ್ರೀ1008 ಜಗದ್ಗುರು. ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು, ಗ್ರಾಮದ ಶ್ರೀ ಮರುಳಾಸಿದ್ದೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ. ನಿರ್ಮಿಸಲಾಗಿರುವ ಮತ ಕೇಂದ್ರ ಮತಗಟ್ಟೆ ಸಂಖ್ಯೆ 238ರಲ್ಲಿ, ತಮ್ಮ ಮತದಾನದ ಹಕ್ಕನ್ನು ನಿಯಮಾನುಸಾರ ಚಲಾಯಿಸಿದರು.

ಅವರು ಈ ಸಂದರ್ಭದಲ್ಲಿ ಮಾತನಾಡಿ ಮತದಾನ ಪ್ರಜಾತಂತ್ರ ವ್ಯವಸ್ಥೆಯ ಮಹಾ ಹಬ್ಬವಾಗಿದೆ. ಮತ ಭಾಂದವರು ನಿಗದಿತ ದಾಖಲುಗಳ ಸಮೇತ, ನಿಗದಿತ ಸಮಯದೊಳಗೆ ಸ್ವಯಂ ಪ್ರೇರಿತರಾಗಿ ಮತ ಚಲಾಯಿಸಬೇಕಿದೆ. ಮತದಾನ ಸರ್ವ ಮತ ಭಾಂದವರ ಆಧ್ಯ ಕರ್ಥವ್ಯವಾಗಿದ್ದು, ಸಾಮಾಜಿಕ ಕಳಕಳಿಯುಳ್ಳ ಯೋಗ್ಯ ವ್ಯಕ್ತಿಗೆ ಮತ ನೀಡಬೇಕಿದೆ. ಮತದಾನ ಅತ್ಯಂತ ಶ್ರೇಷ್ಠ ದಾನ ವಾಗಿದೆ, ಅದನ್ನು ಯೋಗ್ಯ ವ್ಯಕ್ತಿಗೆ ಕೊಡಬೇಕಿದೆ. ಕಣದಲ್ಲಿರುವ ಯಾವ ಅಭ್ಯರ್ಥಿಯ ಆಯ್ಕೆ ಇಚ್ಚಿಸದೇ ಇದಲ್ಲಿ. ಕೊನೆಯ ಬಟನ್ ಒತ್ತುವ ಮೂಲಕ ನಿಮ್ಮ ಸ್ವ ಇಚ್ಚೆಯನ್ನು ವ್ಯಕ್ತಪಡಿಸಲು ಅವಕಾಶ ಇರುತ್ತದೆ. ಕಾರಣ ಎಲ್ಲಾ ಮತ ಭಾಂದವರು ಮತದಾನದಲ್ಲಿ ಪಾಲ್ಗೊಳ್ಳುವುದು ಅವರ ಹಕ್ಕಾಗಿದ್ದು, ತಮ್ಮ ಹಕ್ಕನ್ನು ಖಡ್ಡಾಯವಾಗಿ ಚಲಾಯಿಸಬೇಕಿದೆ ಎಂದರು.

ಇದು ನಿಷ್ಠಾವಂತ ಸಮಾಜ ಸೇವಕನನ್ನು ಆರಿಸಿಕೊಳ್ಳಲು ಅವಕಾಶವಾಗಿದ್ದು, ಮತ ದಾನದಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನ ಗೌರವಿಸಬೇಕಿದೆ ಎಂದು ಸ್ವಾಮೀಜಿ ಕರೆ ನೀಡಿದರು.

ವರದಿ:-ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here