ಸ್ವಚ್ಚತೆಗೆ ಮೊದಲು ಆದ್ಯತೆ ನೀಡಿ ಪ.ಪಂ: ಮುಖ್ಯಾಧಿಕಾರಿ ನಸರುಲ್ಲಾ.ಎ.

0
183

ಕೊಟ್ಟೂರು: ಸ್ವಚ್ಚತೆ ಎಲ್ಲಿ ಇರುತ್ತೋ ಅಲ್ಲಿ ಶಾಂತಿ, ನೆಮ್ಮದಿ ಹಾಗೂ ಉತ್ತಮ ಆರೋಗ್ಯ ಇರುತ್ತದೆ. ಆದುದರಿಂದ ಪ್ರತಿಯೊಬ್ಬರು ಸ್ವಚ್ಚತೆಗೆ ಮೊದಲು ಆದ್ಯತೆ ನೀಡಬೇಕು ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ನಸರುಲ್ಲಾ. ಎ ಹೇಳಿದರು.

ಪಟ್ಟಣದ ವಿದ್ಯಾನಗರ ಪಾರ್ಕ್ ನಲ್ಲಿ ನಮ್ಮ ಚಿತ್ತ ಸ್ವಚ್ಛತೆ ಕಡೆ ಕಾರ್ಯಕ್ರಮ ಬಗ್ಗೆ ಉದ್ದೇಶಿಸಿ ಮಾತನಾಡಿದರು ಪಟ್ಟಣ ಪಂಚಾಯ್ತಿ ವತಿಯಿಂದ ಆಯೋಜಿಸಲಾದ ಸ್ವಚ್ಛತೆಯತ್ತ ನಮ್ಮ ಚಿತ್ತ ಕಾರ್ಯಕ್ರದಲ್ಲಿ ಅವರು ಮಾತನಾಡಿದರು.

ಸುಂದರ ಪಟ್ಟಣ ನಿರ್ಮಾಣಕ್ಕೆ ಸ್ವಚ್ಚತೆ ಅತೀ ಅವಶ್ಯಕ. ಪಟ್ಟಣದ ಪ್ರತಿ ಮನೆಯವರು ಅಡುಗೆ ಮನೆ ಕಸ, ಹಣ್ಣಿನ ಸಿಪ್ಪೆ, ಚಿಕನ್ ಮೂಳೆಗಳು, ಚಹಾ ಹಾಗೂ ಕಾಫಿ ಪುಡಿ, ಪೂಜಾ ನಂತರ ಉಳಿದ ಹೂ ಹಣ್ಣಿನ ಹೂವಿನ ಹಾರ ಮಣ್ಣಿನಲ್ಲಿ ಕೊಳೆಯುವ ವಸ್ತುಗಳು ಒಂದು ಕಡೆ ಹಾಗೂ ಪ್ಲಾಸ್ಟಿಕ್ ಕವರ, ಬಾಟಲಿ, ಡಬ್ಬಗಳು, ಹಾಲಿನ ಮೊಸರಿನ ಪಾಕೇಟ್ಗಳು, ಮಣ್ಣಿನಲ್ಲಿ ಕೊಳೆಯದ ಸಾಮಾನುಗಳು, ಒಡೆದ ಗಾಜಿನ ಬಾಟಲ್ಗಳು ಇವುಗಳನ್ನು ಬೇರ್ಪಡಿಸುವದರ ಜೊತೆಯಲ್ಲಿ ಒಣ ಕಸ ಹಾಗೂ ಹಸಿ ಕಸ ಬೇರ್ಪಡಿಸಿ ಸಹಕರಿಸಲು ಮನವಿ ಮಾಡಿದರು.

ಪಟ್ಟಣದ ವಿವಿಧ ಬಡಾವಣೆಯಲ್ಲಿ ಪಟ್ಟಣ ಪಂಚಾಯ್ತಿ ಕಾರ್ಮಿಕರು ಸ್ವಚ್ಚತೆ, ಹಮಿಕೊಂಡು ವಿವಿಧ ತರಹದ ಕಸವನ್ನು ಬೇರ್ಪಡಿಸುವ ಮೂಲಕ ಸ್ವಚ್ಚತೆಯತ್ತ ನಮ್ಮ ಚಿತ್ತ ಕಾರ್ಯಕ್ರಮದ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಚತೆ ಕುರಿತು ಅರಿವು ಮೂಡಿಸಿದರು.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯ್ತಿ ಸಿಬ್ಬಂದಿಗಳು ಇದ್ದರು.

ವರದಿ:ಶಿವರಾಜ್ ಕನ್ನಡಿಗ.

LEAVE A REPLY

Please enter your comment!
Please enter your name here