ಹಗರಿಬೊಮ್ಮನಹಳ್ಳಿ ತಾಲೂಕ ವಿಶ್ವಕರ್ಮ ಸಮಾಜದ ತಾಲೂಕಾಧ್ಯಕ್ಷರಾಗಿ ಯುವ ಮುಂದಾಳು ಬಡಿಗೆರ್ ಬಸವರಾಜ ಅವಿರೋಧ ಆಯ್ಕೆ.

0
233

ಹಗರಿಬೊಮ್ಮನಹಳ್ಳಿ,ಅ,03:-
ಹಗರಿಬೊಮ್ಮನಹಳ್ಳಿ ಪಟ್ಟಣದ ಕ್ರಿಯಾಶೀಲ ಯುವ ಮುಂದಾಳು ಬಡಿಗೆರ ಬಸವರಾಜ ಅವರು ತಾಲೂಕ ವಿಶ್ವಕರ್ಮ ಸಮಾಜದ ನೂತನ ತಾಲೂಕಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಭಾನುವಾರ ಪಟ್ಟಣದ ರಾಮನಗರದ ಎರಡನೇ ವಾರ್ಡ್ ನಲ್ಲಿರುವ ವಿಶ್ವಕರ್ಮ ಸಮುದಾಯ ಭವನದಲ್ಲಿ ನಿರ್ಗಮಿತ ಅಧ್ಯಕ್ಷ ಲಕ್ಷ್ಮಣಚಾರ್ ಅಧ್ಯಕ್ಷತೆಯಲ್ಲಿ ಜರುಗಿದ ಸಮಾಜದ ಮಹಾಜನ ಸಭೆಯಲ್ಲಿ ಮುಂದಿನ ಮೂರು ವರ್ಷದ ಅವಧಿಗೆ ಅಧ್ಯಕ್ಷ ಸಹಿತ, ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಪುರಸಭೆ ವ್ಯಾಪ್ತಿ ಸೇರಿದ್ದಂತೆ ತಾಲೂಕಿನ ಪ್ರತಿ ಗ್ರಾಮೊಂಚಾಯ್ತಿ ವ್ಯಾಪ್ತಿಯನ್ನು ಪ್ರತಿನಿಧಿಸುವಂತೆ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ಇದೇ ವೇಳೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾದ ಬಳಿಕ ಮಾತನಾಡಿದ ಬಡಿಗೆರ ಬಸವರಾಜ, ಇಡೀ ತಾಲೂಕ ಸಮುದಾಯ ನನ್ನ ಮೇಲೆ ವಿಶ್ವಾಸವಿಟ್ಟು ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕೆ ನಾನು ಮತ್ತು ನನ್ನ ಕುಟುಂಬ ಸರ್ವಕಾಲಕ್ಕೂ ಸಮುದಾಯಕ್ಕೆ ಋಣಿ ಆಗಿರುತ್ತೆ. ಸಮುದಾಯವನ್ನು ಪ್ರಬಲವಾಗಿ ಹಾಗೂ ಸಂಘಟನಾತ್ಮಾಕವಾಗಿ ಕಟ್ಟುವ ಮೂಲಕ ಸಮುದಾಯ ನನ್ನ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆಂದರು.

ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾಕಷ್ಟು ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಆರ್ಹ ಫಲಾನುಭವಿಗಳನ್ನು ಹುಡುಕಿ ನಮ್ಮ ಸಮುದಾಯದ ಪ್ರತಿ ಮನೆಗೂ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕಾರ್ಯವನ್ನು ಅತ್ಯಂತ ಪ್ರಮಾಣಿಕವಾಗಿ ಮಾಡುತ್ತೇನೆ. ದಿನದ ಯಾವುದೇ ಸಮಯದಲ್ಲೂ ಸಮುದಾಯದ ಕೆಲಸ,ಕಾರ್ಯಗಳನ್ನು ಮಾಡಲು ನಾನು ಸಿದ್ದನಿರುತ್ತೇನೆಂದು ಬಸವರಾಜ ಸಮುದಾಯಕ್ಕೆ ಭರವಸೆ ಕೊಟ್ಟರು.

ಇದೇವೇಳೆ ಸಮುದಾಯದ ಹಿರಿಯರಾದ ಸಿಎಸ್.ಸಿದ್ದರಾಜ್ ಗೌರವ ಅಧ್ಯಕ್ಷರಾಗಿ, ಕೆ.ಕುಮಾರ ಆಚಾರ್ ಕಾರ್ಯದರ್ಶಿ ಆಗಿ, ಬಿಜಿ ಬಡಿಗೆರ್ ಖಜಾಂಚಿ ಆಗಿ, ಧನಂಜಯ ಸಹಕಾರ್ಯದರ್ಶಿ, ಕೆ.ಮಂಜುನಾಥ, ಈರಣ್ಣ ಕಮ್ಮಾರ್ ಮರಬ್ಬಿಹಾಳು, ಕೊಟ್ರೇಶ್ ಹನಸಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು. ಹದಿನೆಂಟು ಜನ ಕಾರ್ಯಕಾರಿ ಸದಸ್ಯರಾಗಿ ಆಯ್ಕೆಮಾಡಲಾಯ್ತು.

ಮಾಜಿ ಉಪಾಧ್ಯಕ್ಷ ನಾಗಪ್ಪ.ತಾಲ್ಲೂಕು ನೌಕರರ ಸಂಘದ ಅಧ್ಯಕ್ಷರಾದ ಮೌನೇಶ್ ನಿವೃತ್ತ ಶಿಕ್ಷಕರು .ಮತ್ತು ಸಿದ್ದಪ್ಪ ಬಡಿಗೇರ ಹಾಗೂ ಇನ್ನಿತರ ಅನೇಕ ಸಮಾಜದ ಮುಖಂಡರು ಮಹಾಜನ ಸಭೆಯಲ್ಲಿ ಭಾಗವಹಿಸಿದ್ದರು.

ಹುಳ್ಳಿಪ್ರಕಾಶ
ಸಂಪಾದಕರು
ಬಳ್ಳಾರಿ ಸುನಾಮಿಪತ್ರಿಕೆ
9448234961

LEAVE A REPLY

Please enter your comment!
Please enter your name here