ದೋಷಪೂರಿತ ವರ್ಗಾವಣೆಯಿಂದಾಗಿ ಹಲವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ; KSPDOWD ರಾಜ್ಯಾಧ್ಯಕ್ಷ ರಾಜು ವಾರದ

0
130

ಬೆಂಗಳೂರು:ಆ:18:- ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘವು ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುವುತ್ತಿರುವ 6000 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪ್ರಾತಿನಿಧಿಕ ಸಂಸ್ಥೆಯಾಗಿದೆ. ತನ್ನ ಸದಸ್ಯರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ಇಲಾಖೆಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸುತ್ತಿದೆ. ಆದರೆ ತನ್ನ ಸದಸ್ಯರ ಕೆಲವು ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿದ್ದರೂ ಕೂಡ ಇದುವರೆಗೂ ನಮ್ಮ ಬೇಡಿಕೆಗಳಿಗೆ ಹಾಗೇ ಉಳಿದಿರವುದು ನಮ್ಮ ನೌಕರರ ಆತ್ಮಸ್ಥೈರ್ಯವನ್ನು ಕುಗ್ಗಿಸಿದೆ.

ಪ್ರಮುಖ ಬೇಡಿಕಗಳು:-

1) ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಲ್ಲಾ ಹುದ್ದೆಯನ್ನು ಗ್ರೂಪ್ B ದರ್ಜೆಗೆ ಉನ್ನತೀಕರಿಸುವ ಬೇಡಿಕೆ ಸತತ 12 ವರ್ಷಗಳಲ್ಲಿಂದ ಮನವಿ ಸಲ್ಲಿಸಿದ್ರು ಕ್ರಮ ಕೈಗೊಂಡಿಲ್ಲ ಹಾಗೆಯೇ ನಾಮಕಾವಸ್ತೆಗಾಗಿ 1500 ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಸೃಷ್ಟಿಸಿ ಯಾವುದೇ ರೀತಿಯಲ್ಲಿ C&R ಮಾಡದೆಯೇ ಹಾಗೂ ಸೂಕ್ತ ವರ್ಗಾವಣೆ ನಿಯಮಗಳನ್ನ ರೂಪಿಸದಯೇ ಪಿಡಿಒ ಹುದ್ದೆಯನ್ನ ರಾಜ್ಯ ವೃಂದವೆಂದು ಪರಿಗಣಿಸಿ, ತರಾತುರಿಯಲ್ಲಿ ವರ್ಗಾವಣೆ ಮಾಡಲಾಗಿದೆ,

√ಇದರಿಂದ 500+ ಪಿಡಿಒ ಅವರ ತಮ್ಮ ಕುಟುಂಬನ್ನು ದೂರ ದೂರದ ಜಿಲ್ಲೆಗೆ ಸಿಫ್ಟ್ ಮಾಡಬೇಕಾದ ಸಮಸ್ಯೆಯಲ್ಲಿ ಸಿಲುಕಿದ್ದಾರೆ.

√ವರ್ಗಾವಣೆ ಇತಿಹಾಸದಲ್ಲೇ “ಸಿ” ವೃಂದದ ಹುದ್ದೆಯೊಂದಕ್ಕೆ ಕೌನ್ಸಿಲಿಂಗ್ ಮಾಡದಯೇ ಬೃಹತ್ ವರ್ಗಾವಣೆ ಮಾಡಿರುವುದು ರಾಜ್ಯದಲ್ಲಿ ಇದೇ ಮೊದಲಾಗಿದೆ,

√ಇದರ ನೇರ ಮತ್ತು ಕೆಟ್ಟ ಪರಿಣಾಮ ನೌಕರರ ಮೇಲೆ ಬೀರಿದ್ದು, 100ಕ್ಕೂ ಹೆಚ್ಚು ನೌಕರರು ಪಿಡಿಒ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ,

√ಇದರ ಜೊತೆಗೆ ದೋಷಪೂರಿತ ವರ್ಗಾವಣೆಯಿಂದಾಗಿ ಹಲವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದಾರೆ,

√ನೌಕರರು ಯಾವುದೇ ಅರ್ಜಿಯನ್ನು ವರ್ಗಾವಣೆಗೆ ನೀಡದಿದ್ದರೂ ಹಾಸನದಿಂದ- ಬೆಳಗಾವಿಗೆ, ಮಂಗಳೂರಿನಿಂದ- ಕಲಬುರಗಿಗೆ,ಮಡಿಕೇರಿಯಿಂದ- ಚಾಮರಾಜನಗರಕ್ಕೆ,
ಬಿಜಾಪುರದಿಂದ-ಮೈಸೂರಿಗೆ, ದೂರ ದೂರದ ಜಿಲ್ಲೆಗೆ ವರ್ಗಾವಣೆ ಮಾಡಿರಿವುದರಿಂದ, ನಾವು ನೆಮ್ಮದಿಯಿಂದ ಕರ್ತವ್ಯವನ್ನು ನಿರ್ವಹಿಸಲು ಸಾಧ್ಯವೇ?

√ನಾವು ಸಂಸಾರವನ್ನು ಬಿಟ್ಟು ದೂರದ ಜಿಲ್ಲೆಗೆ ಹೋಗಿ ಬದುಕಲು ಸಾಧ್ಯವೇ?
ನಾವು ಮನುಷ್ಯರಲ್ಲವೇ, ಈ ವರ್ಗಾವಣೆಯಲ್ಲಿ ಮನ ಬಂದಂತೆ ಮಾಡಲಾಗಿದೆ ಎಂದು ಪಿಡಿಒ ಅವರ ದೂರೆತಿದ್ದು ನಮ್ಮ ಕುಟುಂಬವನ್ನ ಬೀದಿಗೆ ತಂದೆಂತೆಯಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ,

3) ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆ ಸೃಷ್ಟಿಯಾಗಿ ಹದಿಮೂರು ವರ್ಷಗಳು ಕಳೆದರೂ ಒಂದು ಕ್ರಮಬದ್ದ ಜೇಷ್ಠತಾ ಪಟ್ಟಿಯನ್ನು ತಯಾರಿಸಲು ಇದುವರೆಗೂ ಸಾಧ್ಯವಾಗಿಲ್ಲ. ನ್ಯಾಯಾಲಯದ ಪ್ರಕರಣಗಳನ್ನು ಬೇಕಾದಂತೆ ವ್ಯಾಖ್ಯಾನಿಸಿಕೊಂಡು ಕಳೆದ ನಾಲ್ಕು ವರ್ಷಗಳಿಂದ ಒಂದೇ ಒಂದು ಬಡ್ತಿಯನ್ನು ನೀಡದಿರುವುದು ನಮ್ಮ ವೃತ್ತಿಯ ಬಗ್ಗೆ ಬಹಳಷ್ಟು ಜಿಗುಪ್ಸೆಯನ್ನು ಮೂಡಿದೆ.

4) ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಅಪರಿಮಿತ ಒತ್ತಡಗಳು, ಅವೈಜ್ಞಾನಿಕ ಗುರಿನಿಗದಿ ಮಾಡುವುದು, ತುರ್ತು ಕಾಲಮಿತಿಯೊಳಗೆ ಪ್ರಗತಿ ಸಾಧಿಸಿ ಎನ್ನುವ ಆದೇಶಗಳಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬಹಳಷ್ಟು ನೊಂದು ಹೈರಾಣಾಗಿದ್ದಾರೆ. ನಾವು ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರೂ ದುರದ್ದೇಶದಿಂದ ಪಿಡಿಒ ಅವರನ್ನು ಅಮಾನತು, ವರ್ಗಾವಣೆಯಂತಹ ಶಿಕ್ಷೆಗಳನ್ನು ನೀಡಿ ಅವಮಾನಿಸಲಾಗುತ್ತಿದೆ.

ಈ ಮೇಲಿನ ವಿಷಯಗಳಿಗೆ ಸಬಂಧಿಸಿದಂತೆ ಹಲವಾರು ಬಾರಿ ಮನವಿಗಳನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಇದರಿಂದ ನಮ್ಮ ಸಮಸ್ಯೆಗಳನ್ನ ಪರಿಗಣಿಸಿ, ಸೂಕ್ತ ಪರಿಹಾರ ನೀಡದಿರವುದು ಬಹಳಷ್ಟು ನೋವುಂಟು ಆಗಿದೆ.

ಆದ್ದರಿಂದ ನಮ್ಮ ಬೆಡಿಕೆಗಳನ್ನು ಹಾಗೂ ಸಮಸ್ಯೆಗಳನ್ನು 15ದಿನದೊಳಗೆ ಬಗೆಹರಿಸದಿದ್ದರೆ ಹೋರಾಟದ ಹಾದಿಯನ್ನು ನಮ್ಮ ಸಂಘ ಹಿಡಿಯಬೇಕಾದೀತೆಂದು ಈ ಮೂಲಕ ಅಂತಿಮವಾಗಿ ಮನವಿ ಮಾಡುತ್ತೆವೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here