ಬಿಜೆಪಿ ಚುನಾವಣೆಯಲ್ಲಿ ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ವಚನಭ್ರಷ್ಟವಾಗಿದೆ; ಮಾಜಿ ಸಂಸದ ಉಗ್ರಪ್ಪ

0
83

ಕುರುಗೋಡು.ಜು:23:-ಚುನಾವಣೆಯಲ್ಲಿ ಮೋದಿಯವರು ಜನತೆಗೆ ಕೊಟ್ಟಮಾತಿನಂತೆ ನಡೆದುಕೊಳ್ಳದೆ ವಚನಭಷ್ಟವಾಗಿದೆ. ಆದರೆ ರಾಜ್ಯದ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಜನತೆಗೆ ಕೊಟ್ಟಮಾತಿನಂತೆ ವಚನಪಾಲನೆ ಮಾಡಿದೆ. ಇಂಥಹ ಕಾಂಗ್ರೆಸ್‌ಪಕ್ಷವನ್ನು ಮುಂಬರುವ ಚುನಾವಣೆಯಲ್ಲಿ ಬೆಂಬಲಿಸ ಬೇಕೆಂದು ಬಳ್ಳಾರಿಯ ಮಾಜಿ ಸಂಸದ ವಿ.ಉಗ್ರಪ್ಪ ಬಿಜೆಪಿ ವಿರುದ್ದ ಕಿಡಿಕಾರಿದರು.

ಅವರು ಪಟ್ಟಣದ ಶಾಸಕರ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಪ್ರಧಾನಮಂತ್ರಿ ನರೆಂದ್ರ ಮೋದಿಯವರು ಅಧಿಕಾರಕ್ಕೆ ಬಂದಮೇಲೆ ದೇಶವನ್ನು ಸಾಲದ ಕೂಪಕ್ಕೆ ತಳ್ಳಿದ್ದಾರೆ. ಯುವಕರಿಗೆ ನಿರುದ್ಯೋಗ, ಬಡತನ, ಹಸಿವು, ಬೆಲೆಏರಿಕೆಯನ್ನು ಹೆಚ್ಚುಮಾಡಿ ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಇದೇನಾ ಮೋದಿಯವರು ಅಚ್ಚೇದಿನ್ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ಜನತೆಗೆ ಕೊಟ್ಟಮಾತಿನಂತೆ ಅನ್ನಭಾಗ್ಯ, ಮಹಿಳೆಯರಿಗೆ ಉಚಿತ ಬಸ್‌ಪ್ರಯಾಣ, ಗೃಲಹಕ್ಷಿಯೋಜನೆ ಸೇರಿದಂತೆ ಇತರೆ 5 ಯೋಜನೆಗಳನ್ನು ಜಾರಿಗೆ ತರುವಲ್ಲಿ ಮುಂದಾಗಿದ್ದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆದರೆ ದೇಶದ ಪ್ರಧಾನಮಂತ್ರಿ ನರೇಂದ್ರಮೋದಿಯವರು ದೇಶದ ಅಭಿವೃದ್ದಿಕಡೆ ಗಮನಹರಿಸದೇ ಬರೀ ಸುಳ್ಳು ಭರವಸೆನೀಡುತ್ತಾ ದೇಶ-ವಿದೇಶಗಳನ್ನು ಸುತ್ತುತ್ತಿದ್ದಾರೆ, ಕೇಂದ್ರದ ಉಗ್ರಾಣದಲ್ಲಿ ಬಡವರಿಗೆಹಂಚುವ ಅಕ್ಕಿಯನ್ನು ಇಟ್ಟುಕೊಂಡು, ರಾಜ್ಯಕ್ಕೆ ಅಕ್ಕಿಯನ್ನು ನೀಡಲಾಗುವುದಿಲ್ಲ ಎಂದು ಹೇಳಿದ ಮೋದಿಯವರು, ಬಡವರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎಂದು ಲೇವಡಿಮಾಡಿದರು.

ಈ ಭಾಗದಲ್ಲಿ ರೈತರ ಜೀವನಾಡಿಯಾಗಿರುವ ತುಂಗಭದ್ರ ಜಲಾಶಯದಿಂದ ರೈತರಿಗೆ ಸಮರ್ಪಕವಾಗಿ ನೀರು ಪೂರೈಸುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಆದ್ದರಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ವಚನಭಷ್ಟ ಬಿಜೆಪಿಗೆ ತಕ್ಕಪಾಠಕಲಿಸಿ, ವಚನಪಾಲನೆ ಮಾಡುವ ಕಾಂಗ್ರೆಸ್ ಪಕ್ಷದವನ್ನು ಬೆಂಬಲಿಸಬೇಕೆಂದು ಮನವಿಮಾಡಿದರು.

ಈ ಸಂದರ್ಭದಲ್ಲಿ ಕುರುಗೋಡು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಬಂಗಿಮಲ್ಲಯ್ಯ, ಮುಖಂಡ ರಘುರಾಮಕೃಷ್ಣ, ವಕ್ತಾರ ಚಾನಾಳು ಚೆನ್ನಬಸವರಾಜ್, ಸುರೇಶರೆಡ್ಡಿ, ಟಿ.ಸಿದ್ದಪ್ಪ, ಪಕ್ಷದ ಕುರುಗೋಡು ಪುರಸಭೆಯ ಸದಸ್ಯರು, ವಿವಿದ ಗ್ರಾಮಗಳ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

LEAVE A REPLY

Please enter your comment!
Please enter your name here