ಮೋಲಾರ್ ಪ್ರಗ್ನೇನ್ಸಿ: ಕುರವಳ್ಳಿ ವೈದ್ಯಕೀಯ ತಂಡಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಶ್ಲಾಘನೆ

0
47

ಬಳ್ಳಾರಿ,ಡಿ.26:ಪ್ರತಿ ಸಾವಿರ ಗರ್ಭಿಣಿಯರಲ್ಲಿ 6-8 ಮಹಿಳೆಯರಲ್ಲಿ ಕಂಡುಬರುವ ಗರ್ಭಿಣಿಯ ಜೀವಕ್ಕೆ ಅಪಾಯ ತರುವ ಮೋಲಾರ್ ಪ್ರಗ್ನೇನ್ಸಿಯು (ಗರ್ಭಿಣಿ ಅವಧಿಯಲ್ಲಿ ಗರ್ಭಕೋಶದಲ್ಲಿ ಮಗುವಿನೊಂದಿಗೆ ದ್ರಾಕ್ಷಿ ಹಣ್ಣಿನ ಗೊಂಚಲು ರೀತಿ ಗಡ್ಡೆ ಬೆಳೆಯುವುದು) ಅಪಾಯಕಾರಿಯಾಗಿದೆ. ಇದನ್ನು ಸ್ಕಾö್ಯನಿಂಗ್ ಮೂಲಕ ಗುರುತಿಸಿ, ಖಚಿತ ಪಟ್ಟಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೈ ರಮೇಶ್ ಬಾಬು ಅವರು ತಿಳಿಸಿದ್ದಾರೆ.

ಇತ್ತೀಚಿಗೆ ಸಿರುಗುಪ್ಪ ತಾಲ್ಲೂಕಿನ ಕುರವಳ್ಳಿ ಗ್ರಾಮದ ಗರ್ಭಿಣಿ ಮಹಿಳೆಯ ಸ್ಕಾö್ಯನಿಂಗ್ ಮಾಡಿದಾಗ ಈ ಮೋಲಾರ್ ಪ್ರಗ್ನೇನ್ಸಿಯು ಇರುವುದು ಖಚಿತವಾಗಿತ್ತು, ಇದರಿಂದ ವಿಚಲಿತರಾದ ಮಹಿಳೆ ಖಾಸಗಿ ಆಸ್ಪತ್ರೆಯ ಮೊರೆ ಹೋಗಲು ಚಿಂತಿಸಿದ್ದರು, ಅಲ್ಲಿ ಈ ಚಿಕಿತ್ಸೆಗೆ ನಿರಾಕರಿಸಿದ ಕಾರಣ, ಅವರನ್ನು ಮತ್ತೇ ಮನಃ ಹೊಲಿಸುವ ಜೊತೆಗೆ ದೈರ್ಯ ತುಂಬಿ ಅವರ ನಿಗಾವಣೆಗೆ ತೆರಳಿದ್ದ ಆಶಾ ಕಾರ್ಯಕರ್ತೆ ಶ್ರೀದೇವಿ ಅವರು, ಗರ್ಭಿಣಿಯನ್ನು ಸಿರುಗುಪ್ಪ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಹೆರಿಗೆ ತಜ್ಞ ಡಾ.ಪ್ರಶಾಂತ ಅವರ ಮೇಲುಸ್ತುವಾರಿಯಲ್ಲಿ ವಿಶೇಷ ಕಾಳಜಿಯಿಂದ ಆಂಬ್ಯುಲೆನ್ಸ್ ಮೂಲಕ ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಶಸ್ತçಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರ ಮಾರ್ಗದರ್ಶನದಲ್ಲಿ ಪ್ರಸೂತಿ ತಜ್ಞ ಡಾ.ಅಶ್ರಪ್ ಅಲಿ, ಡಾ.ವೀಣಾ, ಅರವಳಿಕೆ ತಜ್ಞ ಡಾ.ಅಬ್ದುಲ್ ಗಫೂರ್ ಹಾಗೂ ಸಿಬ್ಬಂದಿಯವರ ನೇತೃತ್ವದಲ್ಲಿ ಚಿಕಿತ್ಸೆ ಕೈಗೊಂಡಿದ್ದು, ಈಗ ಅವರು ಆರೋಗ್ಯವಾಗಿದ್ದಾರೆ, ಈ ಯಶಸ್ಸಿಗೆ ಕಾರಣರಾದ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ ಜಿಲ್ಲಾ ಆರೋಗ್ಯಾಧಿಕಾರಿಗಳು.

ಕಾರಣಗಳು:
ಗರ್ಭ ಧರಿಸುವ ಅವಧಿಯಲ್ಲಿ ಕ್ರೋಮೊಸೊಮ್ಗಳ ಸರಿಯಾದ ಮಿಲನವಾಗದಿದ್ದಲ್ಲಿ ಅಥವಾ ಚಿಕ್ಕ ವಯಸ್ಸಿನಲ್ಲಿ ಅಥವಾ 40 ವರ್ಷ ವಯಸ್ಸಿನ ನಂತರ ಗರ್ಭಿಣಿಯಾದರೆ ಈ ರೀತಿಯ ಗರ್ಭವಾಗುವ ಸಾಧ್ಯತೆ ಇರುತ್ತದೆ.

ಲಕ್ಷಣ:
ಗರ್ಭಿಣಿಯಾದ ಎರಡರಿಂದ ಮೂರು ತಿಂಗಳ ಅವಧಿಯಲ್ಲಿ ತೆಳುಬಿಳುಪಾದ ರೀತಿಯಲ್ಲಿ ದ್ರಾಕ್ಷಿ ಹಣ್ಣಿನಗೊಂಚಲಿನ ರೀತಿಯಲ್ಲಿ ರಕ್ತಸ್ರಾವವಾಗುವುದು ಕಂಡು ಬರುತ್ತದೆ ಮತ್ತು ಭ್ರೂಣದ ಚಲನೆ, ಹೃದಯ ಬಡಿತ ಕಂಡುಬರುವುದಿಲ್ಲ. ಅಧಿಕ ರಕ್ತದೊತ್ತಡ ಇರುವಿಕೆ, ನಿರೀಕ್ಷೆಗಿಂತ ದೊಡ್ಡದಾದ ಗರ್ಭಕೋಶ ಲಕ್ಷಣಗಳಾಗಿವೆ.

ಗುರುತಿಸುವಿಕೆ:
ವೈದ್ಯರ ಸೂಚನೆಯಂತೆ ಸ್ಕಾö್ಯನಿಂಗ್ ಮಾಡಿಸಬೇಕು. ಒಂದುವೇಳೆ ಖಚಿತಪಟ್ಟಲ್ಲಿ ವೈದ್ಯರ ಸೂಚನೆಯಂತೆ ಚಿಕಿತ್ಸೆ ಹಾಗೂ ಹೆರಿಗೆ ಮಾಡಿಸುವುದು.

ನಿರ್ಲಕ್ಷಿಸಿದರೆ:
ಮೋಲಾರ್ ಪ್ರೆಗ್ನೆನ್ಸಿಯನ್ನು ನಿರ್ಲಕ್ಷಿಸಿದರೆ, ಸತತ ರಕ್ತಸ್ರಾವವಾಗುವುದರಿಂದ ಗರ್ಭಿಣಿಯು ರಕ್ತಹೀನತೆಗೆ ಒಳಗಾಗುವಳು, ಗಡ್ಡೆಯು ಕ್ಯಾನ್ಸರ್ ರೂಪ ಪಡೆಯುವುದು. ಮರಣ ಸಹ ಸಂಭವಿಸಬಹುದು.

ಪರಿಹಾರ:
ಸಕಾಲದಲ್ಲಿ ಹೆರಿಗೆ ಮಾಡಿಸಿ 15 ದಿನದಿಂದ 3 ತಿಂಗಳ ವರೆಗೆ ವೈದ್ಯರ ನಿಗಾವಣೆಯಲ್ಲಿ ಚಿಕಿತ್ಸೆ ಪಡೆಯಬೇಕು ಮತ್ತು ಒಂದು ವರ್ಷದವರೆಗೆ ಪುನಃ ಗರ್ಭವತಿಯಾಗಬಾರದು.
ಇದೇ ಸಂದರ್ಭದಲ್ಲಿ ಸಿರುಗುಪ್ಪ ಕುರವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಧ್ಯಾಶ್ರೀ ಅವರು, ತಾಯಿಯ ಜೀವ ಉಳಿಸಿದ ಅನನ್ಯ ಕಾರ್ಯ ಮಾಡಿದ್ದಾರೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ ರಮೇಶಬಾಬು ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here