ಉಭಯ ಶಾಸಕರಲ್ಲಿ ಒಬ್ಬರಿಗೆ ಮುಖ್ಯ ಮಂತ್ರಿ ಸ್ಥಾನ ನೀಡಿ

0
255

ಕುರುಗೋಡು ಕಾಂಗ್ರೇಸ್ ಪಕ್ಷಕ್ಕೆ ನಿಚ್ಚಿತ ಬಹುಮತ ದೊರೆತ ಹಿನ್ನೆಲೆಯಲ್ಲಿ 34 ಜನ ವೀರಶೈವ ಲಿಂಗಾಯಿತ ಸಮಾಜದ ಪ್ರಮುಖ ಜನ ಪ್ರತಿನಿಧಿಗಳು ಯಾಗಿದು, ಅದರಲ್ಲಿ ಬಾಲ್ಕಿ ಕೇತ್ರದ ಈಶ್ವರ ಖಂಡ್ರೆ ಮತ್ತು ಬಬಲೇಶ್ವರ ಕ್ಷೇತ್ರದ ಎಂ.ಬಿ, ಪಾಟೇಲ್ ಇಬ್ಬರಲ್ಲಿ ಯಾರಿಗಾದರು ಮುಖ್ಯ ಮಂತ್ರಿ ಸ್ಥಾನ ನೀಡಬೇಕೆಂದು ಎಮ್ಮಿಗನೂರು ಗ್ರಾಮದ ವೀರಶೈವ ಲಿಂಗಾಯಿತ ಯವ ಮುಖಂಡ ಹಾಗೂ ಕರ್ನಾಟಕ ಪದವಿಧರ ವೇದಿಕೆ ರಾಜ್ಯ ಸಂಚಾಲಕ ಶಿವನೇಗೌಡ್ರು ರಾಮಪ್ಪ ಓತ್ತಾಯಿಸಿದ್ದಾರೆ.

ಈ ಕುರಿತು ಸಮೀಪದ ಎಮ್ಮಿಗನೂರು ಗ್ರಾಮದಲ್ಲಿ ಮಂಗಳವಾರ ಪತ್ರಿಕಾ ಮದ್ಯಮದೊಂದಿಗೆ ಮಾತನಾಡಿ, ಪ್ರಸುತ್ತ ವಿಧಾನ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿದ್ದು, ಅದರಲ್ಲಿ ವೀರಶೈವ ಲಿಂಗಾಯಿತ ಸಮಾಜದ ಶಾಸಕರು ಪಕ್ಷಕ್ಕಾಗಿ ಶ್ರಮಿಸಿದ ಪ್ರಭಾವಿ ನಾಯಕರಾಗಿದ್ದು, ಹೈಕಮಾಂಡ್ ಪರಿಗಣನೆ ತೆಗೆದುಕೊಂಡು ಸಮಾಜದ ಉಭಯ ಶಾಸಕಯರಲ್ಲಿ ಒಬ್ಬರಿಗೆ ಉತ್ನತವಾದ ಮುಖ್ಯ ಮಂತ್ರಿ ನೀಡಿ ಉತ್ತರ ಕರ್ನಾಟಕಭಾಗದ ಜನರಿಗೆ ನ್ಯಾಯ ಒದಸಿಬೇಕೆಂದು ಆಗ್ರಹಿಸಿದರು
ವೀರಶೈವ ಲಿಂಗಾಯತ ಸಮಾಜ ಸೇರಿದಂತೆ ಅನೇಕ ಸಮಾಜದವರು ಪಕ್ಷಕ್ಕೆ ಮತದಾನ ಮಾಡುವ ಮೂಲಕ ಬಾರಿ ಬಹುಮತ ನೀಡಿದ್ದು, ಯಾವ ಸಮುದಾಯದಕ್ಕು ಅನ್ಯಾಯ ವಾಗದೇ ವೀರಶೈವ ಲಿಂಗಾಯುತ ಸಮುದಾಯದ ಶಾಸಕರಿಗೆ ಮುಖ್ಯ ಮಂತ್ರಿ ಸ್ಥಾನ ನೀಡುವುದರ ಜೋತೆಗೆ ಸಚಿವ ಸಂಪುಟಲ್ಲಿ ಉತ್ತಮ ಸ್ಥಾನ-ಮಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಈ ವೇಳೆ ಹಡಪದ ಗಾದಿಲಿಂಗಪ್ಪ, ಹುಗಾರ್ ಲೋಕೇಶ, ಜಡೇಶ, ಎಚ್ ಎಂ ಜಡೇಯ್ಯ. ಕೆ. ವೀರಯ್ಯ. ಗಂಟೆ ಜಡೇಶ. ಹನುಮನಗೌಡ. ಬಸವರಾಜ, ದೊಡ್ಡಬಸಪ್ಪ, ವಿರೇಶ, ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here