ಅಜಾತ ಶತ್ರು, ಬ್ರಾಹ್ಮಣ ಸಹೃದಯಿ ಶ್ರೀ ಗಿರಿಧರ ಶಾಸ್ತ್ರೀ ಇನ್ನಿಲ್ಲ.

0
98

ಸಿರುಗುಪ್ಪ, ಮೇ-21: ದಿವಂಗತ ಕೋದಂಡರಾಮ ಶಾಸ್ತ್ರಿಗಳ ದ್ವಿತೀಯ ಪುತ್ರ ಗಿರಿಧರ ಶಾಸ್ತ್ರಿ ಮಂಗಳವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಅಕಾಲಿಕ ಮರಣ ಹೊಂದಿದ್ದಾರೆ.

ಅಜಾತಶತ್ರು, ಬ್ರಾಹ್ಮಣ ಸಹೃದಯಿ, ವೇದಾಂತ ಸಾಮ್ರಾಜ್ಯದ ಕಳಸ, ಸಂಸ್ಕೃತಿ ಸಂಘಟನಾ ಚತುರ, ವಾಕ್ ಶುದ್ಧಿ ವೇದಾಂತ ಪಂಡಿತ ರತ್ನ, ಸರ್ವರಿಗೂ ಹಿತವನ್ನೇ ಬಯಸುವ ಜನಾನುರಾಗಿ ಋತ್ವಿಕರು, ಇಂತಹ ಅಮೂಲ್ಯ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಸಮಾಜ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ನಷ್ಟವನ್ನು ಅನುಭವಿಸಿದೆ. ಶ್ರೀ ಗಿರಿಧರ್ ಶಾಸ್ತ್ರಿಯವರು ಕೇವಲ ಒಬ್ಬ ವ್ಯಕ್ತಿಯಲ್ಲ ಅವರು ಬ್ರಾಹ್ಮಣ ಸಮಾಜದ ವೇದಾಂತ ಸಂಸ್ಕೃತಿ ಶಕ್ತಿ ಯಾಗಿದ್ದರು. ಜನಾಭಿಮಾನದ ಪುರೋಹಿತರು ಸಹ ಆಗಿದ್ದರು.ಇಂತಹ ವ್ಯಕ್ತಿ ಇಂದು ಹರಿಪಾದ ಸೇರಿದ ವಿಷಯ ತಿಳಿದು ತುಂಬಾ ದುಃಖವಾಗಿದೆ ಎಂದು ಸಿರುಗುಪ್ಪ ತಾಲೂಕು ಬ್ರಾಹ್ಮಣ ಸಮಾಜದವರು ಸಂತಾಪ ಸೂಚಿಸಿದ್ದಾರೆ. ಶ್ರೀಯುತರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಹಾಗೂ ಶ್ರೀಯುತರ ಆತ್ಮಕ್ಕೆ ಶಾಂತಿ ನೀಡಲಿ ಆರ್ಯ ವೈಶ್ಯ ಸಮಾಜದವರು ತಿಳಿಸಿದ್ದಾರೆ. ಅನೇಕರು ಸಂತಾಪ ಸೂಚಿಸಿ ಅಂತಿಮ ದರ್ಶನ ಪಡೆದಿದ್ದಾರೆ.

ಪ್ರತಿಷ್ಠಿತ ಮನೆತನಗಳಲ್ಲಿ ಒಂದಾಗಿದ್ದ ಕೋದಂಡರಾಮ ಶಾಸ್ತ್ರಿಗಳವರ ಹೆಸರು ತಾಲೂಕಿನ ಮನೆಮನೆ ಮಾತಾಗಿತ್ತು. ಇವರ ದ್ವಿತೀಯ ಪುತ್ರ ಗಿರಿಧರ ಶಾಸ್ತ್ರಿ ಚಿಕ್ಕ ವಯಸ್ಸಿನಲ್ಲಿಯೇ ವೇದ ಹಾಗೂ ಉತ್ತಮ ಶಿಕ್ಷಣ ಪಡೆದು ಜೊತೆಗೆ ಕರಾಟೆ ಕಲೆಯನ್ನು ಕರಗತ ಮಾಡಿಕೊಂಡಿದ್ದರು.

ವೇದ ಪಾರಾಯಣ ಹೋಮ ಹವನ ಧಾರ್ಮಿಕ ಕಾರ್ಯಕ್ರಮಗಳು ಶೃಂಗೇರಿ ಮಠದ ಕಾರ್ಯಕ್ರಮಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ಶ್ರದ್ಧೆಯಿಂದ ಮಾಡುತ್ತಿದ್ದ ಇವರು ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದ ಇವರು ಮಂಗಳವಾರ ಬೆಳಿಗ್ಗೆ ಹಟಾತ್ ಮರಣ ಹೊಂದಿದ್ದಾರೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮತ್ತು ಪೂರ್ವ ಗಂಡು ಮಗನನ್ನು ಅಗಲಿದ್ದು ಇವರ ಮರಣ ವಾರ್ತೆಯು ನಗರದ ಅನೇಕರಲ್ಲಿ ದಿಗ್ಭ್ರಮೆ ಮೂಡಿಸಿದೆ. ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ದೇವಸ್ಥಾನದ ಅರ್ಚಕರಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಮಂಗಳವಾರ ಸಂಜೆ ಮೃತ ದೇಹವನ್ನು ಸಿರುಗುಪ್ಪಕ್ಕೆ ತರಲಾಗುತ್ತಿದ್ದು ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ ಬುಧವಾರ ಬೆಳಗ್ಗೆ ವಿಧಿ ವಿಧಾನಗಳಂತೆ ಬೆಳಗಿನ ಜಾವ ಅಂತ್ಯಕ್ರಿಯೆಗಳನ್ನು ನಡೆಸಲಾಗುವುದೆಂದು ಅಣ್ಣ ಶಶಿಧರ ಶಾಸ್ತ್ರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here