ಎಂಎಂಎಲ್ ಕಂಪನಿಯ ಅದಿರು ಲಾರಿಗಳ ಹಾವಳಿ : ಕರ್ನಾಟಕ ರಾಜ್ಯ ಹಸಿರು ರೈತ ಸಂಘದಿಂದ ಧರಣಿ

0
39

ಸಂಡೂರು ತಾಲೂಕಿನ’ಕೃಷ್ಣಾನಗರ, ದೌಲತ್ ಪುರ ಗ್ರಾಮ ವ್ಯಾಪ್ತಿಯ ತಿಮ್ಮಪ್ಪನ ಗುಡಿ ಕಬ್ಬಿಣ ಅದಿರು ಗಣಿಯಿಂದ ಬಂಡಿ ಜಾಡು ಹಾಗೂ ಅಕ್ಕಪಕ್ಕದ ರೈತರ ಹೊಲಗಳಲ್ಲಿ ರಸ್ತೆ ನಿರ್ಮಿಸಿ ಅದಿರು ಸಾಗಣೆ ಮಾಡುತ್ತಿದ್ದಾರೆ. ಇದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ’ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಹಸಿರು ರೈತ ಸಂಘದ ನೇತೃತ್ವದಲ್ಲಿ ಕೃಷ್ಣಾನಗರ, ಭುಜಂಗನಗರ, ದೌಲತ್ ಪುರ ಹಾಗೂ ಸಂಡೂರಿನ ರೈತರು ಗುರುವಾರ ಭೂದ್ಯಾಮ್ಮನ ಗುಡಿ ಹತ್ತಿರ ಪ್ರತಿಭಟನೆ ನಡೆಸಿದರು.

ಮೊದಲು ತಿಮ್ಮಪ್ಪನ ಗಣಿಯಿಂದ ಕೇವಲ ಅದಿರು ತುಂಬಿದ ಲಾರಿಗಳನ್ನಷ್ಟೇ ಬಿಡಲಾಗುತ್ತಿತ್ತು. ಈಗ ಖಾಲಿ ಲಾರಿಗಳು ಕೂಡಾ ಇದೇ ಮಾರ್ಗದಲ್ಲಿ ಸಂಚರಿಸುತ್ತಿವೆ. ಬಂಡಿ ಜಾಡಿನಲ್ಲಿ, ರೈತರ ಜಾಗದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಲಾರಿಗಳು ಸಂಚರಿಸಿದರೂ ರೈತರಾದ ನಮ್ಮ ಸಂಕಷ್ಟ ಯಾರೂ ಕೇಳುತ್ತಿಲ್ಲ. ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಪ್ರತಿಭಟನಕಾರರು ಆರೋಪಿಸಿದರು.

ಜಮೀನುಗಳಿಗೆ ದೂಳು ಆವರಿಸಿ ಇಳುವರಿ ಕುಂಠಿತವಾಗುತ್ತಿದೆ, ಇಲ್ಲಿನ ಕೆಲ
ರೈತರಿಂದ ಭೂ ಪರಿವರ್ತನೆಯಾಗದ ಜಮೀನುಗಳನ್ನು ನಿಯಮ ಬಾಹಿರವಾಗಿ ಪಡೆದು ಲಾರಿಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಅಕ್ಕಪಕ್ಕದ ರೈತರ ಸಂಕಷ್ಟ ಹೇಳತೀರದು’ ಎಂದು ದೂರಿದರು.

ರೈತರ ಈ ಅನಿರ್ಧಿಷ್ಟ ಕಾಲ ನಡೆಯುವ ಧರಣಿ ತಾಲೂಕಿನ ಕೆ ಆರ್ ಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಬೆಂಬಲವನ್ನು ಸೂಚಿಸಿದ್ದು ಕಂಡುಬಂತು

ಈ ಸಂಧರ್ಭದಲ್ಲಿ ರೈತ ಸಂಘದ ಮುಖಂಡರಾದ ಶ್ರೀಪಾದ ಸ್ವಾಮಿ, ಧರ್ಮನಾಯಕ್, ರೈತರಾದ ಉದೇದಪ್ಪ, ಸಕ್ರಪ್ಪ, ತಿಮ್ಮಣ್ಣ, ಬಿಂಗಿ ಚಂದ್ರಪ್ಪ, ಬಂಡಿಗಾಲಿ ಹನುಮಂತಪ್ಪ, ಅಂತೆಪ್ಪ, ಗಾದಿಲಿಂಗಪ್ಪ, ಕೆ.ಹುಚ್ಚಪ್ಪ ಇದ್ದರು.

LEAVE A REPLY

Please enter your comment!
Please enter your name here