ಕುಷ್ಠರೋಗವನ್ನು ಇತಿಹಾಸವಾಗಿಸಲು ಸರ್ವರೂ ಕೈ ಜೋಡಿಸಿ; ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ

0
344

ಸಂಡೂರು: ಜ:30: ಕುಷ್ಠರೋಗವನ್ನು ಇತಿಹಾಸವಾಗಿಸಲು ಸರ್ವರೂ ಕೈಜೋಡಿಸಿ; ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಅವರು ಹೇಳಿದರು.ತಾಲೂಕಿನ ವಡ್ಡು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಕುಷ್ಠರೋಗ ದಿನಾಚರಣೆ ಹಾಗೂ ಹುತಾತ್ಮರ ದಿನಾಚರಣೆ ಅಂಗವಾಗಿ ಅವರು ಮಾತನಾಡಿದರು,

ಮಹಾತ್ಮಾ ಗಾಂಧಿಯವರು ಕಂಡ ಕನಸು “ಕುಷ್ಠರೋಗ ಮುಕ್ತ ದೇಶ” ರೂಪಿಸುವ ಅಂತಿಮ ಹಂತದಲ್ಲಿ ನಾವಿದ್ದೇವೆ, ಈಗಾಗಲೇ ಕುಷ್ಠರೋಗಿಗಳ ಸಂಖ್ಯೆ ಕಡಿಮೆ ಇದ್ದರೂ ನಿರ್ಮೂಲನಾ ಹಂತ ತಲುಪಲು ಇನ್ನಷ್ಟು ಶ್ರಮ ಪಡಬೇಕಿದೆ, ಜನವರಿ 30 ರಿಂದ ಫೆಬ್ರವರಿ 13 ರ ವರೆಗೆ ಎಲ್ಲಾ ಕಡೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸಲಾಗುತ್ತಿದೆ, ತಿಳಿ ಬಿಳಿ ತಾಮ್ರ ವರ್ಣದ, ಮತ್ತು ಸ್ಪರ್ಶ ಜ್ಞಾನವಿಲ್ಲದ ಯಾವುದೇ ಮಚ್ಚೆಗಳು ಇದ್ದಲ್ಲಿ, ಕಣ್ಣು ರೆಪ್ಪೆ ಮುಚ್ವಲು ಸಾಧ್ಯವಿಲ್ಲದೇ ಇದ್ದರೆ, ಕೈಕಾಲುಗಳು ಜೋಮು ಹಿಡಿಯುತ್ತಿದ್ದರೆ, ಅಲ್ನಾರ್ ನರಗಳು ಗಡಸುತನ ಹೊಂದಿದ್ದರೆ, ಬಹಳ ದಿನಗಳಿಂದ ವಾಸಿಯಾಗದ ಗಾಯಗಳು ಇದ್ದರೆ ಇವು ಕುಷ್ಠರೋಗದ ಲಕ್ಷಗಳು ಆಗಿರಬಹುದು, ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಬಂದು ಪರೀಕ್ಷೆ ಮಾಡಿಸುವುದು, ದೃಡಪಟ್ಟರೆ 6 ತಿಂಗಳಿಂದ 1 ವರ್ಷದ ಪೂರ್ಣ ಚಿಕಿತ್ಸೆ ನೀಡಿ ಗುಣಪಡಿಸ ಬಹುದು, ಕುಷ್ಠರೋಗ ಮುಕ್ತ ರಾಷ್ಟ್ರ ಮಾಡಲು ಸರ್ವರೂ ಕೈ ಜೋಡಿಸಬೇಕೆಂದು ಅವರು ತಿಳಿಸಿದರು,

ಕಾರ್ಯಕ್ರಮದ ಪ್ರಥಮದಲ್ಲಿ ಮಹಾತ್ಮಾ ಗಾಂಧಿಯವರು ಪುಣ್ಯ ಸ್ಮರಣೆಯನ್ನು ನೆನೆಯುತ್ತ ಹುತಾತ್ಮರ ದಿನಾಚರಣೆ ಅಂಗವಾಗಿ ಎರಡು ನಿಮಿಷಗಳ ಕಾಲ ಮೌನ ಆಚರಿಸಲಾಯಿತು, ನಂತರ ಕುಷ್ಠರೋಗಕ್ಕೆ ಅಂಟಿಕೊಂಡಿರುವ ಕಳಂಕ ಹಾಗೂ ತಾರತಮ್ಯ ಹೊಗಲಾಡಿಸಿ ಅವರ ಆತ್ಮ ಗೌರವಕ್ಕೆ ಧಕ್ಕೆ ತರದೇ ನಡೆದು ಕೊಳ್ಳುವ ಕುರಿತು ಪ್ರತಿಜ್ಞೆ ಕೈಗೊಳ್ಳಲಾಯಿತು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಹನುಮಂತಪ್ಪ, ದೇವಣ್ಣ, ಕಾರ್ಯದರ್ಶಿ ಜುಬೇರ್ ಅಹಮದ್, ಮುಖಂಡರಾದ ಧನುಂಜಯ್, ಕೊಮಾರಪ್ಪ, ಶಾಂತಮ್ಮ,ಶಿದ್ದಮ್ಮ,ಫಾತಿಮಾ,ಉಮೇಶ, ಆಪ್ತ ಸಮಾಲೋಚಕರಾದ ಪ್ರಶಾಂತ್ ಕುಮಾರ್, ಮಾರೇಶ್, ಶ್ರೀರಾಮುಲು, ಮಾರೇಶ್, ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ, ಆಶಾ ಕಾರ್ಯಕರ್ತೆಯರಾದ ಲಕ್ಷ್ಮೀ, ಶಿವಲೀಲ, ಸಾವಿತ್ರಿ,ಭಾರತಿ, ಮಂಜುಳಾ, ಹಾಗೂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಇತರರು ಉಪಸ್ಥಿತರಿದ್ದರು,

LEAVE A REPLY

Please enter your comment!
Please enter your name here