ಪಲ್ಸ್ ಪೋಲಿಯೋ ಲಸಿಕೆ ನೀಡಲು ಜಿಂದಾಲ್ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳಿಗೆ ತರಬೇತಿ.

0
708

ತೋರಣಗಲ್ಲು : ಫೆ : 25: ಫೆಬ್ರವರಿ 27 ಭಾನುವಾರ ಪಲ್ಸ್ ಪೋಲಿಯೊ ಕಾರ್ಯಕ್ರಮದ ನಿಮಿತ್ತ ಹಳ್ಳಿಗಳಲ್ಲಿ ಲಸಿಕೆ ನೀಡುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಜಿಂದಾಲ್ ಸಂಸ್ಥೆಯ ನಾಲ್ಕು ಟೌನ್‌ ಶಿಪ್ ಗಳಾದ ಎಸ್.ಜಿ ಕಾಲೋನಿ, ವಿದ್ಯಾನಗರ, ವಿ.ವಿ ನಗರ, ಮತ್ತು ಹೆಚ್.ಎಸ್ ಟಿ ಕಾಲೋನಿಗಳಲ್ಲಿ ಮಕ್ಕಳಿಗೆ ಲಸಿಕೆ ನೀಡಲು ಜಿಂದಾಲ್ ನ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಯಿತು,

ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ಜಾಗ್ರತೆ ವಹಿಸುವುದು, ನಿಗದಿಪಡಿಸಿದ ಎಲ್ಲಾ ಮನೆಗಳ ಬೇಟಿಯನ್ನು ಕಡ್ಡಾಯವಾಗಿ ಮಾಡಬೇಕು, ಬೇರೆ ಊರುಗಳಿಂದ ಬಂದಿದ್ದರೆ ಅಂತಹ ಎಲ್ಲಾ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ತಿಳಿಸಲಾಯಿತು,

ಈ ತರಬೇತಿಯಲ್ಲಿ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಗೋಪಾಲ್ ರಾವ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಕೀಲ್ ಅಹಮದ್, ನಿಜಾಮುದ್ದೀನ್, ಯರ್ರಿಸ್ವಾಮಿ, ಸತ್ಯಮ್ಮ, ನಾಗರತ್ನ,ಸೂಫಿ ಶರ್ಮಾ, ಬಸವರಾಜ, ಅಂಗನವಾಡಿ ಕಾರ್ಯಕರ್ತೆ ಅರುಣಾ, ಪ್ರೇಮಾ, ತಿಮ್ಮಕ್ಕ, ಆಶಾ ಕಾರ್ಯಕರ್ತೆ ಬಸಮ್ಮ, ಲಕ್ಷ್ಮಿ, ನೀಲಮ್ಮ, ಹನುಮಂತಮ್ಮ, ಮಾಂತಮ್ಮ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here