ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಅರಳಿ ಮಲ್ಲಪ್ಪ

0
18

ಸಂಡೂರು: ಮಾ: 12: ಹಿರಿಯ ವಕೀಲರ ಮಾರ್ಗದರ್ಶನದ ಅಡಿಯಲ್ಲಿ ವಕೀಲರ ಸಂಘವನ್ನು ಪ್ರಗತಿಯ ಪಥದಲ್ಲಿ ಸಾಗುವುದರ ಜೊತೆಗೆ ಅದಕ್ಕೆ ಬೇಕಾದ ಎಲ್ಲಾ ರೀತಿಯ ಮೂಲಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ನೂತನ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ವಕೀಲ ಅರಳಿಮಲ್ಲಪ್ಪ ತಿಳಿಸಿದರು.

ಅವರು ಪಟ್ಟಣದ ನ್ಯಾಯಾಲಯದ ಅವರಣದಲ್ಲಿಯ ವಕೀಲರ ಭವನದಲ್ಲಿ ನಡೆದ ವಕೀಲರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ವೆಂಕಟೇಶಲು ಅವರ ವಿರುದ್ದ 70 ಮತಗಳನ್ನು ಪಡೆದು ವಿಜೇತರಾಗಿ ಮಾತನಾಡಿ ವಕೀಲರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಸಂಘ ಕಾರ್ಯನಿರ್ವಹಿಸಲಿದ್ದು, ನನಗೆ ಅತಿ ವಿಶ್ವಾಸದಿಂದ ಆಯ್ಕೆಮಾಡಿದ ಎಲ್ಲಾ ವಕೀಲರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಲ್ಲದೆ ಹಿತವನ್ನು ಕಾಪಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಬಿ.ಎಸ್. ಮಂಜುನಾಥ ಅವರು ಮಾಹಿತಿ ನೀಡಿ ವಕೀಲರ ಸಂಘದ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಅರಳಿ ಮಲ್ಲಪ್ಪ 70 ಮತಗಳನ್ನು ಪಡೆದು ಆಯ್ಕೆಯಾದರೆ ಪ್ರತಿಸ್ಪರ್ಧಿ ವಂಕಟೇಶಲು 14 ಮತಗಳನ್ನು ಪಡೆದುಕೊಂಡರು, ಉಪಾಧ್ಯಕ್ಷರಾಗಿ ಕೆ.ಅರ್.ದಾದಾಪೀರ್ 35 ಮತಗಳನ್ನು ಪಡೆದು ಆಯ್ಕೆಯಾದರು, ಪ್ರತಿ ಸ್ಪರ್ಧಿಗಳಾದ ಮಂಜುನಾಥ ಗೌಡರ-1, ಎಸ್.ರಾಜಶೇಖರ 21, ಜಿ.ಕೆ.ರೇಖಾ 27 ಮತಗಳನ್ನು ಪಡೆದುಕೊಂಡರು, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಕುಮಾರಸ್ವಾಮಿ 49 ಮತಗಳನ್ನು ಪಡೆದು ಆಯ್ಕೆಯಾದರು ಪ್ರತಿಸ್ಪರ್ಧಿಗಳಾಗಿ ಬಣಕಾರು ಮಂಜುನಾಥ 34 ಮತಗಳನ್ನು ಪಡೆದರು

ಸಹಕಾರ್ಯದರ್ಶಿಯಾಗಿ ಪರಶುರಾಮ ಪೂಜಾರ್ 59 ಮತಗಳನ್ನು ಪಡೆದು ಆಯ್ಕೆಯಾದರೆ ಪ್ರತಿಸ್ಪರ್ಧಿ ಎಂ. ಮಹಮ್ಮದ್ ಮುನೀರ್ 25 ಮತಗಳನ್ನು ಪಡೆದು ಸೋತರು, ಖಜಾಂಚಿಯಾಗಿ ಅಂಜಿನಪ್ಪ ಸೋಮಲಾಪುರ 66 ಮತಗಳನ್ನು ಪಡೆದು ಆಯ್ಕೆಯಾದರೆ, ಪ್ರತಿಸ್ಪರ್ಧಿ ಮಹೇಶ್ ಹೆಗಡೆ 11, ಎಂ. ರೆಹಮತ್ 5, ಮತಗಳನ್ನು ಪಡೆದುಕೊಂಡರು ಎಂದು ಮಾಹಿತಿ ತಿಳಿಸಿದರು. ಸಹ ಚುನಾವಣಾಧಿಕಾರಿಯಾಗಿ ಶಶಿಕಾಂತ, ರಾಮಚಂದ್ರ, ಶೃತಿ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಗುಡೇಕೋಟೆ ನಾಗರಾಜ, ವಿಜಯಕುಮಾರ್, ಭಾಷಂ ವಿಜಯಕುಮಾರ್, ಟಿ.ಎಂ. ಶಿವಕುಮಾರ್, ವಿರೇಶಪ್ಪ, ಇತರ ಎಲ್ಲಾ ವಕೀಲರು ಉಪಸ್ಥಿತರಿದ್ದು ವಿಜೇತರಿಗೆ ಅಭಿನಂದಿಸಿದರು.

LEAVE A REPLY

Please enter your comment!
Please enter your name here