ಚೋರನೂರು ಪೊಲೀಸರ ಕಾರ್ಯಾಚರಣೆ ಪಡಿತರ ಅಕ್ಕಿ ಅಕ್ರಮ ಸಾಗಾಣಿಕೆ ಮಾಡುವ ಆರೋಪಿತರ ಬಂಧನ

0
1811

ಸಂಡೂರು :ಸೆ: 27:- ತಾಲೂಕಿನ ಚೋರನೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಿರೇನಹಳ್ಳಿ, ಗ್ರಾಮದ ಹೊರ ವಲಯದಲ್ಲಿರುವ ಕಂಬಾರ ಮಟ್ಟಿ ಹತ್ತಿರ ಪಡಿತರ ಅಕ್ಕಿಯನ್ನು ಅಕ್ರಮ ಸಾಗಾಣಿಕೆ ಮಾಡುತ್ತಿರುವ ಆರೋಪಿತರನ್ನು ಪತ್ತೆಗಾಗಿ ಶ್ರೀ ಹಾಲೇಶ್‌ ಸಿಪಿಐ ಸಂಡೂರು ವೃತ್ತರವರ ಮಾರ್ಗದರ್ಶನದಲ್ಲಿ ಶ್ರೀ ಕಿರಣ್ ಕುಮಾರ ಪಿಎಸ್‌ಐ ಚೋರನೂರು ನೇತೃತ್ವದಲ್ಲಿ, ಸಿಬ್ಬಂದಿಗಳಾದ ಶ್ರೀ ವೀರೇಶ್‌ ಎಎಸ್‌ಐ ಚೋರನೂರು ಠಾಣೆ, ಶ್ರೀ ಸಿ.ಚಿದಾನಂದ ಸಿಹೆಚ್.ಸಿ 303, ಶ್ರೀ ರುದ್ರಪ್ಪ ಸಿಹೆಚ್ ಸಿ 538, ಶ್ರೀ ಲೋಕೇಶ್ ಸಿಹೆಚ್ ಸಿ 357, ಶ್ರೀ ಶರಣಪ್ಪ ಸಿಪಿಸಿ 728, ಶ್ರೀ ನಾಗರಾಜ್ ಸಿಪಿಸಿ 1190, ಶ್ರೀ ಕೊಟ್ರೇಶ್ ಸಣ್ಣಪ್ಪಳ ಸಿಪಿಸಿ 334 ಹಾಗೂ ಚೋರನೂರು ಠಾಣಾ ಜೀಪ್ ಚಾಲಕ ಶ್ರೀ ರೇವಣಸಿದ್ದಪ್ಪ ಎಹೆಚ್.ಸಿ 93 ರವರು ದಿನಾಂಕ: 27/09/2022 ರಂದು ಬೆಳಿಗ್ಗೆ- 6:30 ಗಂಟೆಗೆ ದಾಳಿ ಮಾಡಿ


1) ಐಶರ್ ಪ್ರೊ 3015 ವಾಹನಕ್ಕೆ ನೊಂದಣಿ ಸಂಖ್ಯೆ ಬರೆದಿರುವುದಿಲ್ಲ…ಇದರ ENGINE NO- E426CDNF399222 CHASSIS NO- MC2H3JRCONF210324
2) ಅಶೋಕ್ ಲೈಲ್ಯಾಂಡ್ ಕಂಪನಿಯ ಥಂಡರ್ ದೋಸ್ತ್ ಎಲ್.ಎಸ್ ವಾಹನ ಇದರ ನೊಂದಣಿ ಸಂಖ್ಯೆ ಕೆಎ-35 ಸಿ 9010 ಹಾಗೂ ಆರೋಪಿತರಾದ

1) ಕೊರವರ ಅಜ್ಜಯ್ಯ ತಂದೆ ಹನುಮಂತಪ್ಪ, 39 ವರ್ಷ, ಲಾರಿ ಚಾಲಕ ಕೆಲಸ, ವಾಸ 9 ನೇ ವಾರ್ಡ್ ರಾಜಾಜಿ ನಗರ, ಉಜ್ಜಿನಿ ಶಾಲೆ ಹತ್ತಿರ ಹೊಸಪೇಟೆ ಪಟ್ಟಣ,ವಿಜಯನಗರ ಜಿಲ್ಲೆ…
2) ಕೊರವರ ದುರುಗಪ್ಪ ತಂದೆ ಹನುಮಂತಪ್ಪ, 42 ವರ್ಷ, ಚಾಲಕ ಕೆಲಸ, ವಾಸ 9 ನೇ ವಾರ್ಡ್, ರಾಜಾಜಿನಗರ, ಉಜ್ಜಿನಿ ಶಾಲೆ ಹತ್ತಿರ ಹೊಸಪೇಟೆ ಪಟ್ಟಣ, ವಿಜಯನಗರ ಜಿಲ್ಲೆ…

ರವರನ್ನು ವಶಕ್ಕೆ ಪಡೆದುಕೊಂಡು ನಂತರ 16,360 ಕೆಜಿ ಅಕ್ರಮ ಪಡಿತರ ಅಕ್ಕಿಗಳನ್ನು ಸಾಗಾಣಿಕೆ ಮಾಡುತ್ತಿದ್ದ, ಒಟ್ಟು 363 ಚೀಲಗಳನ್ನು ಒಟ್ಟು 3,49,613/- ರೂಗಳ ಮೌಲ್ಯದ ಅಕ್ಕಿಗಳನ್ನು ವಶಪಡಿಸಿಕೊಂಡು, ಚೋರನೂರು ಠಾಣೆ ಗುನ್ನೆ ನಂಬರ್ 84/2022 ಕಲಂ 3, 6 (ಎ) ಮತ್ತು 7 ಇಸಿ ಯಾಕ್ಟ್‌ 1955 ಹಾಗೂ ಕಲಂ 3, 4, 12, 18, 19 ರ ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣ ಆದೇಶ 2016 ಮತ್ತು ಕಲಂ 3(2)(1) , 4, 6, 8 ಕರ್ನಾಟಕ ಅಗತ್ಯ ವಸ್ತುಗಳ (ಲೆಕ್ಕಪತ್ರ ನಿರ್ವಹಣೆ ದಾಸ್ತಾನು ಮತ್ತು ಬೆಲೆ ಪ್ರಕಟಣೆ) ಯಾಕ್ಟ್ – 1981 ಪ್ರಕರಣ ದಾಖಲಾಗಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here